E swathu document download : ಗ್ರಾಮ ಠಾಣಾ ವ್ಯಾಪ್ತಿಯಲ್ಲಿ ದಾಖಲೆ ಇರುವ ಹಾಗೂ ದಾಖಲೆಯಿಲ್ಲದ ಆಸ್ತಿಗಳಿಗೆ ಇ-ಸ್ವತ್ತು ನೀಡಲು ಸರ್ಕಾರ ನಿರ್ಧರಿಸಿದೆ.
ಹೌದು, ನವೆಂಬರ್ 2 ರಿಂದ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ. ಖಂಡ್ರೆ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ರಾಮೀಣ ಅಸ್ತಿ ಮಾಲಿಕರ ಬಹು ದಿನಗಳ ಸಮಸ್ಯೆ ಪರಿಹರಿಸಲು, ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾತ್ ರಾಜ್ ( ಗ್ರಾಮ ಪಂಚಾಯತಿಗಳ ತೆರಿಗೆ, ದರ ಮತ್ತು ಶುಲ್ಕಗಳು) ನಿಯಮಗಳಿಗೆ ತಿದ್ದುಪಡಿ ಮಾಡಿ, ಅಧಇಸೂಚನೆ ಹೊರಡಿಸಲಾಗಿದ್ದು, ಇ ಸ್ವತ್ತು 2 ತಂತ್ರಾಂಶದಲ್ಲೂ ಕೆಲವು ಮಾರ್ಪಾಡು ಮಾಡಲಾಗಿದೆ ಎಂದು ವಿವರಿಸಿದರು.
ಗ್ರಾಮ ಠಾಣ ವ್ಯಾಪ್ತಿಯಲ್ಲಿ ತಲೆಮಾರುಗಳಿಂದ ವಾಸಿಸುತ್ತಿರುವ ಅಂದಾಜು 25-30 ಲಕ್ಷ ನಿವಾಸಿಗಳಿಗೆ ಇದರಿಂದ ಅನುಕೂಲವಾಗಲಿದೆ. ದಾಖಲೆಗಳು ಲಭ್ಯವಿಲ್ಲದ ಗ್ರಾಮಠಾಣಾ ಆಸ್ತಿಗಳಿಗೆ ನೋದಾಯಿತ ದಾಖಲೆಗಳಿಂದ ವಿನಾಯಿತಿ ನೀಡಲಾಗಿದ್ದು, 2025 ಏಪ್ರೀಲ್ 7 ರ ಪೂರ್ವದ ವಿದ್ಯುತ್ ಬಿಲ್ ಆಧಾರದ ಮೇಲೆ ಹಾಗೂ ಸ್ಥಳ ಪರಿಶೀಲನೆ ಮಾಡಿ ಇ ಸ್ವತ್ತು ನೀಡಲಾಗುವುದು ಎಂದರು.
ಈ ರೀತಿ ದಾಖಲೆ ಇಲ್ಲದವರಿಗ ಇ ಸ್ವತ್ತು ನೀಡುವಾಗ ನ್ಯಾಯಾಲಯದಲ್ಲಿ ವ್ಯಾಜ್ಯ ಏನಾದರೂ ಇದ್ದರೆ, ಭಾಗಕ್ಕಾಗಿ ತಗಾದೆ ಇದ್ದರೆ, ಅಥವಾ ಅರ್ಜಿ ಸಲ್ಲಿಸಿದವರು ಮೂಲ ಮಾಲಿಕರಲ್ಲದಿದ್ದಲ್ಲಿ ಅಥವಾ ಇನ್ನಾವುದೇ ಸಿಂಧುವಾದ ಕಾರಣವಿದ್ದಲ್ಲಿ ಮುಂದಿನ ದಿನಗಳಲ್ಲಿ ಕಾನೂನು ತೊಡಗು ಎದುರಾಗದಂತೆ ಸ್ವತ್ತಿನ ಮಾಲಿಕರಿಂದ ಪ್ರಮಾಣ ಪತ್ರ ಪಡೆದು ಅವರು ಸಲ್ಲಿಸಿರುವ ಮಾಹಿತಿ ತಪ್ಪಾಗಿದ್ದಲ್ಲಿ ಇ ಸ್ವತ್ತು ಪ್ರಮಾಣ ಪತ್ರ ರದ್ದು ಮಾಡಬಹುದು ಎಂದು ಮುಚ್ಚಳಿಕೆ ಬರೆಸಿಕೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.
ನಮೂನೆ 11 ಬಿ ಪಡೆಯುವ ವಿಧಾನವನ್ನು ಸರಳೀಕರಣಗೊಳಿಸಿ ಗ್ರಾಮೀಣ ಭಾಗದ ಜನರು ಯಾವುದೇ ನೋಂದಾಯಿತ ಪತ್ರ ಇಲ್ಲದೆ ತಮ್ಮ ಕೃಷಿ ಜಮೀನಿನಲ್ಲಿ ವಾಸ ಅಥವಾ ಕೃಷಿ ಉಪಯೋಗಕ್ಕೆ ನಿರ್ಮಿಸಿರುವ ಅರಣ್ಯ ಭಾಗದಲ್ಲಿ ವಾಸವಾಗಿರುವವರು ಅರಣ್ಯ ಹಕ್ಕು ಕಾಯಿದೆಯಂತೆ ಹಕ್ಕು ಪತ್ರ ಪಡೆದಿದ್ದಲ್ಲಿ ಅಂತಹ ಆಸ್ತಿಗಳಿಗೆ ನಮೂನೆ ಪಡೆಯಲು ಈ ತಿದ್ದುಪಡಿ ನಿಯಮದಲ್ಲಿ ಅವಕಾಶ ನೀಡಲಾಗಿದೆ ಎಂದರು.
E swathu document download ಇ ಖಾತಾ ಡೌನ್ಲೋಡ್ ಮಾಡುವುದು ಹೇಗೆ ?
ಇ ಖಾತಾ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಲು ಈ
https://eswathu.karnataka.gov.in/
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮಗೆ ಇ ಖಾತಾ ಇ ಖಾತಾ ಡೌನ್ಲೋಡ್ ಆಯ್ಕೆಗಳು ಕಾಣಿಸುತ್ತವೆ. ಅಲ್ಲಿ ನೀವು ಇ ಖಾತಾ ಡೌನ್ಲೋಡ್ ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ಜಿಲ್ಲೆ ತಾಲೂಕು ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ ಗ್ರಾಮ ಪಂಚಾಯತಿ ಆಯ್ಕೆ ಮಾಡಿಕೊಳ್ಳಬೇಕು. ನಿಮ್ಮ ನಿಮ್ಮ ಊರು ಆಯ್ಕೆ ಮಾಡಿಕೊಳ್ಳಬೇಕು. ಆಗ ಆ ಊರಿನಲ್ಲಿ ಇ ಸ್ವತ್ತು ದಾಖಲೆಯಾದವರ ಹೆಸರು ಕಾಣಿಸುತ್ತದೆ. ನಿಮ್ಮ ಹೆಸರು ಯಾವ ಅಕ್ಷರದಿಂದ ಆರಂಭವಾಗುತ್ತದೆಯೋ ಹೆಸರಿನ ಮೊದಲ ಅಕ್ಷರದ ಮೇಲೆ ಕ್ಲಿಕ್ ಮಾಡಬೇಕು. ಆಗ ಅವರ ಪಟ್ಟಿ ಕಾಣಿಸುತ್ತದೆ. ಡೌನ್ಲೋಡ್ ಕೆಳಗಡೆ ಇರುವ ನಿಮ್ಮ ಹೆಸರಿನ ಮುಂದುಗಡೆ Draft Ekhata ಮೇಲೆ ಕ್ಲಿಕ್ ಮಾಡಬೇಕು, ಆಗ ಇ ಖಾತಾ ಡೌನ್ಲೋಡ್ ಆಗುತ್ತದೆ.
ಇದನ್ನೂ ಓದಿ ಬರ ಪರಿಹಾರ ಜಮೆಗೆ ಯಾವ ಯಾವ ಷರತ್ತುಗಳಿವೆ ? ಇಲ್ಲಿದೆ ಮಾಹಿತಿ
ದಾಖಲೆಗಳು ಲಭ್ಯವಿಲ್ಲದ ಗ್ರಾಮಠಾಣಾ ಆಸ್ತಿಗಳಿಗೆ ನೋಂದಾಯಿತ ದಾಖಲೆಗಳಿಂದ ವಿನಾಯಿತಿ ನೀಡಲಾಗಿದ್ದು, 2025 ರ ಏಪ್ರೀಲ್ 7 ರ ಪೂರ್ವದ ವಿದ್ಯುತ್ ಬಿಲ್ ಆಧಾರದ ಮೇಲೆ ಹಾಗೂ ಸ್ಥಳ ಪರಿಶೀಲನೆ ಮಾಡಿ ಇ ಸ್ವತ್ತು ನೀಡಲಾಗುವುದು ಎಂದರು.
ಬಿ ಖಾತಾ ವಿಧಾನ ಸರಳೀಕರಣ
ನಮೂನೆ 11 ಬಿ ಪಡೆಯುವ ವಿಧಾನ ಸರಳೀಕರಣಗೊಳಿಸಲಾಗಿದೆ. ಕೃಷಿ ಭೂಮಿಯಲ್ಲಿ ವಸತಿ ಯೋಜನೆ ಅಡಿ ಸೃಜನೆಯಾಗಿರುವ ಕಟ್ಟಡಗಳಿಗೆ ಮತ್ತು ಪಾರಂಪರಿಕವಾಗಿ ಅರಣ್ಯವಾಸಿಗಳು, ಅರಣ್ಯ ಹಕ್ಕು ಕಾಯ್ದೆಯಂತೆ ಹಕ್ಕುಪತ್ರ ಪಡೆದಿದ್ದಲ್ಲಿ ಅಂಥ ಆಸ್ತಿಗಳಿಗೆ ನಮೂನೆ ಪಡೆಯಲು ತಿದ್ದುಪಡಿ ನಿಯಮದಲ್ಲಿ ಅವಕಾಶ ನೀಡಲಾಗಿದೆ ಎಂದು ಈಶ್ವರ ಖಂಡ್ರೆ ತಿಳಿಸಿದರು.
ಹಿತ್ತಲು ಮನೆಯಂಗಳ ಸೇರಿ ಒಟ್ಟು 4 ಸಾವಿರದ ಚದರ ಅಡಿಯೊಳಗಿನ ನಿವೇಶನ, ಆಸ್ತಿಗಳಿಗೆ ಮಾತರ್ ಇದು ಅನ್ವಯವಾಗಲಿದೆ ಎಂದು ತಿಳಿಸಿದರು.





