About us

ಜನಜಾಗರಣ (janajagran) ಎಂದರೇನು?

ಜನಜಾಗರಣವು ಜನಸಾಮಾನ್ಯರಿಗೆ ಮಾಹಿತಿ ನೀಡುವ ಕನ್ನಡ ಬ್ಲಾಗಿಂಗ್ ವೆಬ್ಸೈಟ್ ಆಗಿದೆ. ಇಲ್ಲಿ ರೈತರಿಗೆ, ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ ವಿವಿಧ ವಿಷಯಗಳ  ಬಗ್ಗೆ ಮಾಹಿತಿ ನೀಡಲಾಗುತ್ತಿದೆ.  ನಮ್ಮ ಸೈಟ್ ಕರ್ನಾಟಕದ ಟಾಪ್ 10 ಕನ್ನಡ ಬ್ಲಾಗಿಂಗ್ ಗಳಲ್ಲಿ ಒಂದಾಗಿದೆ.  ತೋಟಗಾರಿಕೆ, ಪಶುಸಂಗೋಪನೆ, ಕೃಷಿ, ಸರ್ಕಾರದ ಯೋಜನೆಗಳು, ಕ್ರೀಡೆ, ಶಿಕ್ಷಣ, ಉದ್ಯೋಗ ಸೇರಿದಂತೆ ಇನ್ನಿತರ ಮಾಹಿತಿಗಳನ್ನು ಸಂಗ್ರಹಿಸಿ ಓದುಗರಿಗೆ ನೀಡುವ ಕೆಲಸ ಮಾಡುತ್ತಿದ್ದೇನೆ.  ಇದರಲ್ಲಿ ವಿಷಯ ತಜ್ಞರೊಂದಿಗೆ ಚರ್ಚಿಸಿ, ಮಾಹಿತಿಗಳನ್ನು ಸಂಗ್ರಹಿಸಿ ಓದುಗರ ಆಸಕ್ತಿಗನುಸಾರವಾಗಿ ವಿವಿಧ ವಿಷಯಗಳ ಬಗ್ಗೆ ಬರೆಯುತ್ತಿದ್ದೇನೆ.

ನನ್ನ ಬಗ್ಗೆ (Myself)

ನನ್ನ ಹೆಸರು ರಾಮಲಿಂಗಣ್ಣ(Ramlinganna), ನನ್ನನ್ನು ನನ್ನಸ್ನೇಹತರು, ಬಂಧುಬಳಗದವರು Ramling Ramling Rathod, Ramling chinna Rathod ರಾಮಣ್ಣ ಹೀಗೆ ವಿವಿಧ ಹೆಸರುಗಳಿಂದ ಕರೆಯುತ್ತಾರೆ.

Ramlinganna
Ramling chinna Rathod Photo

ನಾನು ಕರ್ನಾಟಕ ರಾಜ್ಯದ ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಇಟಕಾಲ್ ತಾಂಡಾದ ನಿವಾಸಿ. ನನ್ನ ಪ್ರಾಥಮಿಕ ಶಿಕ್ಷಣ ಬೋರಬಂಡಾದಲ್ಲಿ ಮುಗಿಯಿತು. ಹಿರಿಯ ಪ್ರಾಥಮಿಕ ಶಾಲೆ, ಪ್ರೌಢಶಾಲೆ, ಕಾಲೇಜು ಗುರುಮಿಟ್ಕಲ್ ನಲ್ಲಿ ಪೂರೈಸಿದೆ. ಇದಾದನಂತರ ಪದವಿ ಸೇಡಂ ನಗರದಲ್ಲಿ, ಬಿ.ಇಡಿ, ಬಳ್ಳಾರಿಯಲ್ಲಿ ಹಾಗೂ ಎಂ.ಎ ಸ್ನಾತಕೋತ್ತರ ಪದವಿ ಹೈದ್ರಾಬಾದಿನ ಉಸ್ಮಾನಿಯ ವಿಶ್ವವಿದ್ಯಾಲಯದಲ್ಲಿ ಮುಗಿಸಿದೆ.

ನಾನೇಕೆ‌ ಪಿಎಸ್ಐ ಆಗಲಿಲ್ಲ. ಐಎಎಸ್ ಕನಸು ನನಸೇಕೆ ಆಗಲಿಲ್ಲ?

ಪಿಯುಸಿ, ಡಿಗ್ರಿ ಓದುತ್ತಿರುವಾಗ ಓದಿನೊಂದಿಗೆ ಕ್ರೀಡೆಯಲ್ಲಿಯೂ ಹೆಸರಿತ್ತು. ರನ್ನಿಂಗ್, ಲಾಂಗ್ ಜಂಪ್, ಹೈ ಜಂಪ್, ಶಾಟ್ ಪುಟ್,ಈ ಕ್ರೀಡೆಗಳಲ್ಲಿ ಐದು ವರ್ಷ ನಾನೇ ಫಸ್ಟ್. ಎಲ್ಲರೂ ನನ್ನನ್ನು‌ ಚಾಂಪಿಯನ್ ಎಂದು ಕರೆಯುತ್ತಿದ್ದರು. ಈಗಲೂ ನನ್ನ ಕಾಲೇಜು ಸ್ನೆಹಿತರು ಹಲೋ ಚಾಂಪಿಯನ್‌ ಎಂದೇ ಕರೆಯುತ್ತಾರೆ. ಆಗ ಪಿಎಸ್.ಐ ಆಗಬೇಕೆಂಬ ಕನಸಿತ್ತು. ಆದರೆ ನನ್ನ ದುರಾದೃಷ್ಟ ನನಗೆ ಕಲರ್ ಬ್ಲೈಂಡ್ ನೆಸ್‌, ಹಾಗಾಗಿ ಪಿಎಸ್.ಐ ಸೆಲೆಕ್ಟ್ ಆಗಲಿಲ್ಲ. ನಂತರ ಬಿ.ಇಡಿ ಓದಿದೆ. ನಾನು‌ ಓದಿನಲ್ಲೂ ಬೆಸ್ಟ್ ಆಗಿದ್ದರಿಂದ‌ ಹಾಗೂ ಜನರಲ್‌ ನಾಲೆಡ್ಜ್ ಉತ್ತಮವಾಗಿದ್ದರಿಂದ ನನ್ನ ಗುರುಗಳು ಐಎಎಸ್‌ ತರಬೇತಿ ಪಡೆಯಬೇಕೆಂದು‌ ಸಲಹೆ‌ ನೀಡಿದ್ದರು. ಹಾಗಾಗಿ ಐಎಎಸ್ ಕೋಚಿಂಗ್ ಪಡೆಯಲು‌‌ ಹೈದ್ರಾಬಾದ್ ಹೋದೆ. ಕೋಚಿಂಗ್‌ ಇಂಗ್ಲಿಷ್‌ ನಲ್ಲಿತ್ತು. ಸರಿಯಾಗಿ ಅರ್ಥವಾಗುತ್ತಿರಲಿಲ್ಲ. ಕೋಚಿಂಗ್ ಬಿಟ್ಟೆ.ಬೇರೆ ಏನಾದರು‌ ಕೆಲಸ ಮಾಡಬೇಕೆಂದು ನಿರ್ಧರಿಸಿದ್ದರಿಂದ ಐಎಎಸ್ ಕನಸು ನನಸಾಗಲಿಲ್ಲ.

ನನ್ನ ಮೊದಲ‌ ಜಾಬ್

ಹೈದ್ರಾಬಾದಿನಲ್ಲಿರುವ ಸರ್ಕಾರಿ ಕನ್ಯಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2003 ರಿಂದ 2005 ರವರೆಗೆ ಶಿಕ್ಷಕನಾಗಿ ಕೆಲಸ ಮಾಡಿದೆ. ನಂತರ 2005ರಲ್ಲಿ ಕನ್ನಡಪ್ರಭ ದಿನಪತ್ರಿಕೆಯಲ್ಲಿ ಕೆಲಸಕ್ಕೆ ಅರ್ಜಿ ಹಾಕಿದೆ.. ನಾನು. ಬಿ.ಎ, ಬಿ.ಇಡಿ ಓದಿದರೂ ನನ್ನ ಅರ್ಜಿ ಎರಡು ಸಲ ತಿರಸ್ಕೃತವಾಗಿತ್ತು. ಏಕೆಂದರೆ ಆಗ ದಿನಪತ್ರಿಕೆಗಳಲ್ಲಿ ಕೆಲಸ ಮಾಡಲು ಜರ್ನಲಿಸಂ ಕಡ್ಡಾಯವಾಗಿತ್ತು. ಆದರೂ ರುದ್ರಪ್ಪ ಸರ್ ಹಾಗೂ ಸುಧಾ ಹೆಗಡೆ ಮೇಡಂರವರ ಒತ್ತಾಯದ ಮೇರೆಗೆ ನನಗೆ ಕನ್ನಡಪ್ರಭದಲ್ಲಿ ಸೇವೆ ಸಲ್ಲಿಸಲು ಅವಕಾಶ ದೊರೆಯಿತು. ಆರಂಭದಲ್ಲಿ ನನಗೇನು ಆಸಕ್ತಿಯಿರಲಿಲ್ಲ, ರುದ್ರಪ್ಪ ಹಾಗೂ ಸುಧಾ ಹೆಗಡೆ ಮೇಡಂರವರು ಸದಾ ಸ್ಪೂರ್ತಿ ನೀಡುತ್ತಿದ್ದರು. ಅವರ ಸಲಹೆ, ಮಾರ್ಗದರ್ಶನ, ಸ್ಪೂರ್ತಿಯಿಂದಾಗಿ ಕನ್ನಡಪ್ರಭದಲ್ಲಿ ಕೆಲಸ ಮುಂದುವರೆಸಿದೆ. ನಂತರ ರವಿ ಹೆಗಡೆ ಸರ್ ಹಾಗೂ ಹೆಚ್.ಆರ್.ರಂಗನಾಥ ಸರ್ ಜೋಡಿಗೆ ಮರಳಾಗಿ ಕನ್ನಡಪ್ರಭದಲ್ಲೇ ಕೆಲಸ ಮಾಡಲು ನಿರ್ಧರಿಸಿದೆ.  ಅಲ್ಲಿ ಪೇಜಿನೇಟರ್,  ಆರ್ಟಿಸ್ಟ್, ಉಪ ಸಂಪಾದಕ ನಂತರ ಕಲಬುರಗಿಯಲ್ಲಿವರ್ಗಾವಣೆಯಾದ ನಂತರ ಹಿರಿಯ ಉಪಸಂಪಾದಕನಾಗಿ ಒಟ್ಟು 17 ವರ್ಷ ಕೆಲಸ ಮಾಡಿದೆ.

ಜಾಬ್  ಬಿಡಲು ನಾನೇಕೆ ನಿರ್ಧರಿಸಿದೆ?

2020 ರಲ್ಲಿ ವ್ಯಾಪಕವಾಗಿ ಹರಡಿದ್ದ ಕೊರೋನಾದಿಂದಾಗಿ ಎಲ್ಲರಂತೆ ನನಗೂ ಆರ್ಥಿಕ ಸಮಸ್ಯೆ ಎದುರಾಯಿತು. ಎಲ್ಲರಂತೆ ನನಗೂ ವೇತನ ಕಡಿತವಾಗಿದ್ದರಿಂದ ಮಾಡಿದ್ದ ಸಾಲ ತೀರಿಸಲಾಗದೆ ಸಂಕಷ್ಟಕ್ಕೊಳಗಾದೆ. ಆಗ ಮನೆಯಿಂದಲೇ ಕೆಲಸವಿದ್ದರೂ ಸಹ  ಸುಮಾರು ಒಂದು ವರ್ಷ ಆರ್ಥಿಕ ಸಂಕಷ್ಟದಿಂದ ಮನನೊಂದೆ ಕೆಲಸಕ್ಕೆ ರಾಜೀನಾಮೆ ನೀಡಿ ಹುಟ್ಟೂರಿಗೆ ಹೋಗಲು ನಿರ್ಧರಿಸಿದ್ದೆ. ಇಡೀ ರಾತ್ರಿ ನಿದ್ದೆಯಿಲ್ಲದೆ ಪತ್ನಿಗೆ ಮುಖ ತೋರಿಸದೆ ಕೊರಗುತ್ತಿದ್ದೆ. ಆಗಾಗ ಕಣ್ಣೀರು ಹಾಕುತ್ತಿರುವುದನ್ನು ಗಮನಿಸಿದ  ನನ್ನ ಪತ್ನಿ ಸುನಿತಾ ನನಗೆ ಬೆಂಬಲವಾಗಿ ನಿಂತರು. ಬದುಕಲಿಕ್ಕೆ ಬೇಕಾದಷ್ಟು ದಾರಿಯಿದೆ. ನೀನೆಕೆ ಕೊರಗುತ್ತಿೀಯಾ?  ಕೆಲಸ ಬಿಟ್ಟು ಊರಿಗೆ ಹೋಗುವುದು ಪರಿಹಾರವಲ್ಲ,  ಕೆಲಸ ಮಾಡಿ ಬದುಕಬಹುದು. ನಿನ್ನಲ್ಲಿ ಬರವಣಿಗೆಯ ಕಲೆಯಿದೆ. ಕಂಪ್ಯೂಟರ್ ಬಲ್ಲವರಾಗಿದ್ದೀರಿ,  ತಾಂತ್ರಿಕ ಜ್ಞಾನವಿದೆ. ಇದನ್ನು ಸದುಪಯೋಗಪಡೆದುಕೊಂಡು ನೀವು ಸ್ವತಃ ಬ್ಲಾಗ್ ಆರಂಭಿಸಿ ಎಂದು ಸಲಹೆ ನೀಡಿದ್ದಲ್ಲದೆ ಕೆಲಸ ಆರಂಭಿಸಲು ಹುರಿದುಂಬಿಸಿದರು.

janajagran.com website ಯಾವಾಗ ಆರಂಭಿಸಿದೆ?

ಜನಜಾಗರಣ ವೆಬ್ಸೈಟ್ ಮಾಡಲು ನಿರ್ಧರಿಸಿದ ಮರುದಿನವೇ  ಯೂ ಟುಬ್ ಗಳಲ್ಲಿ  ವೆಬ್ಸೈಟ್ ಆರಂಭಿಸುವ ಕುರಿತು ವೀಡಿಯೋಗಳನ್ನು ಹುಡುಕಿದೆವು. ನಮಲ್ಲಿದ್ದ ಅಲ್ಪಜ್ಞಾನ ಹಾಗೂ ಯೂಟೂಬರ್ ಗಳನ್ನು ನಂಬಿ ವೆಬ್ಸೈಟ್ ಖರೀದಿಸಲು ಮುಂದಾದೆ. 2021 ರ ಫೆಬ್ರವರಿ 11 ರಂದು  ನನ್ನ ಮಗಳ ಹುಟ್ಟುಹಬ್ದದಂದೇ ಡೊಮೇನ್ ಮತ್ತು ಹೋಸ್ಟಿಂಗ್ ಖರೀದಿಸಿದೆ.  ಬ್ಲಾಗಿಂಗ್ ನಲ್ಲಿ ನನಗೆ ಅಷ್ಟೇನು ವಿಶ್ವಾಸವಿರಲಿಲ್ಲ. ನಂತರ ನನ್ನ ಪತ್ನಿ ನನ್ನೆ ಬೆಂಬಲಕ್ಕೆ ನಿಂತರು. ನನ್ನ ವೆಬ್ಸೈಟ್ ಡೌನ್ ಆದಾಗ ಧೈರ್ಯ ತುಂಬಿ ವೆಬ್ಸೇಟ್ ಟ್ರಾಫಿಕ್ ಹೆಚ್ಚಾದಾಗ ಪ್ರೋತ್ಸಾಹ ನೀಡತೊಡಗಿದರು.  ನಂತರ ದೇವರ ಆಶೀರ್ವಾದದಂದ ಗೂಗಲ್ಗೂ ಆ್ಯಡ್ ಸೆನ್ಸ್ ಅಪ್ರೂವಲ್ ಸಿಕ್ಕೇಬಿಡ್ತು.  ಓದುಗರ ಸ್ಪಂದನೆಯಿಂದಾಗಿ ಈಗ ಜನಜಾಗರಣ ಬ್ಲಾಗಿಗ್ ವೆಬ್ಸೈಟ್ ಟಾಪ್ ಟೆನ್ ವೆಬ್ಸೈಟ್ ಗಳಲ್ಲಿ ಒಂದಾಗಿದೆ.

ಈಗ ಜನಜಾಗರಣ ವೆಬ್ಸೈಟ್ ಮಾಲಿಕನಾಗಿದ್ದಕ್ಕೆ ಹೆಮ್ಮೆ ಎನಿಸುತ್ತಿದೆ. ಓದುಗರ ಪ್ರೀತಿ,  ವಿಶ್ವಾಸ, ದಿನದಿಂದ ದಿನಕ್ಕೆ ಬರುತ್ತಿರುವ ಪ್ರತಿಕ್ರಿಯೆಗಳಿಂದ ಸ್ಪೂರ್ತಿ ಸಿಗುತ್ತಿದೆ.

ನನ್ನ ಕುಟುಂಬದ ಬಗ್ಗೆ ಅಲ್ಪ ಮಾಹಿತಿ

Ramling
Ramlinganna Photo

ನಾನು 1977 ರ ಜೂನ್ 1 ರಂದು ಇಟಕಾಲ್ ತಾಂಡಾದಲ್ಲಿ ಜನಿಸಿದೆ. ತಂದೆ ಕೇಶ್ಯಾ ನಾಯಕ, ತಾಯಿ ಕಿಷ್ಟಿಬಾಯಿ, ನನ್ನ ಹಿರಿಯ ಸಹೋದರ ಶೇಣ್ಯಾನಾಯಕ, ಕಿರಿಯ ಸಹೋದರ ವೀರೇಂದ್ರ ನಾಯಕ, ನೆಹರು ನಾಯಕ. ತಂಗಿ ಕವಿತಾ. ಪತ್ನಿ: ಸುನಿತಾ. ಮಕ್ಕಳು:  ಭಾಗ್ಯಶ್ರೀ ಹಾಗೂ ಆರುಷಿ.

ಜನಜಾಗರಣ ವೆಬ್ಸೈಟ್ ನೀಡುತ್ತಿರುವ ಮಾಹಿತಿಗಳನ್ನು ಕರ್ನಾಟಕ ರಾಜ್ಯದ ಮೂಲೆ ಮುಲೆಗಳಿಂದ ಉತ್ತಮ ಪ್ರತಿಕ್ರಿಯೆ ಬರುತ್ತಿದೆ. ನಾನು ಬರೆಯುತ್ತಿರುವ ಲೇಖನಗಳಿಗೆ ಕರೆ ಮಾಡಿ ಧನ್ಯವಾದ ಹೇಳುತ್ತಿದ್ದಾರೆ. ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಇದೇ ರೀತಿ ನೀವು ರೈತರಿಗೆ ಉತ್ತಮ ಮಾಹಿತಿಗಳನ್ನು ಕೊಡಬೇಕೆಂದು ಸಲಹೆ ನೀಡುತ್ತಿದ್ದಾರೆ. ಓದುಗರ ಸಹಕಾರ ಸದಾ ಇರಲೆಂದು ಭಾವಿಸುತ್ತಾ ಜನಜಾಗರಣ ವೆಬ್ಸೈಟ್ ನಲ್ಲಿ ಇನ್ನೂ ಉತ್ತಮ ಲೇಖನಗಳನ್ನು ನೀಡುತ್ತೇನೆ.

ಈಗ ಕನ್ನಡದಲ್ಲಿ ಜನಜಾಗರಣ ವೆಬ್ಸೈಟ್ ಆರಂಭಿಸಿದಂತೆ ತೆಲುಗಿನಲ್ಲಿಯೂ ಕೆಲವು ಲೇಖನಗಳನ್ನು ಬರೆಯಲು ಆರಂಭಿಸಿದ್ದೆ. ಅದಕ್ಕೂ ಉತ್ತಮ ಪ್ರತಿಕ್ರಿಯೆ ಬಂದಿದ್ದರಿಂದ ಅತೀ ಶೀಘ್ರದಲ್ಲಿ ತೆಲಗು ಹಾಗೂ ಹಿಂದಿಯಲ್ಲಿ ಬ್ಲಾಗಿಂಗ್ ಆರಂಭಿಸಲು ನಿರ್ಧರಿಸಿದ್ದೇನೆ. ನಿಮ್ಮ ಸಲಹೆ, ಮಾರ್ಗದರ್ಶನ ಸದಾ ಸಿಗುತ್ತದೆ ಎಂದು ನಂಬಿರುವೆ.

janajagran.com  is a professional blogging platform where you can read a lot of articles related to Agriculture, Government Schemes, Animal Husbandry, Horticulture, Education and Sports etc. from experienced writers.

Mail: janajagaran15@gmail.com

Contact No: 9731491393, 6361863386