Vanshavali (ವಂಶಾವಳಿ) ಪ್ರಮಾಣ ಪತ್ರಕ್ಕೆ ಇಲ್ಲಿ ಅರ್ಜಿ ಸಲ್ಲಿಸಿ

Written by By: janajagran

Published on:

Vanshavali ಅಥವಾ ವಂಶವೃಕ್ಷ , ವಾಸಸ್ಥಳ ಪ್ರಮಾಣ ಪತ್ರವನ್ನು ಮನೆಯಲ್ಲಿಯೇ ಕುಳಿತು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ವಂಶಾವಳಿ ಪ್ರಮಾಣ ಪತ್ರ ಪಡೆದುಕೊಳ್ಳಬಹುದು. ಅದು ಹೇಗೆ ಅಂದು ಕೊಂಡಿದ್ದೀರಾ…. ಇಲ್ಲಿದೆ ಸಂಪೂರ್ಣ ಮಾಹಿತಿ

ಸರ್ಕಾರವು  ಪ್ರಮಾಣ ಪತ್ರಗಳನ್ನು ಪಡೆಯಲು ಸರಳೀಕರಣಗೊಳಿಸಿ, ಕಾಗದರಹಿತ ವ್ಯವಸ್ಥೆಯನ್ನು ಜಾರಿಗೆ ತರುವುದಕ್ಕಾಗಿ ಆನ್ಲೈನ್ ವ್ಯವಸ್ಥೆ ಜಾರಿಗೊಳಿಸಿದೆ. ಆನ್ಲೈನ್ ನಲ್ಲಿಯೇ ನೆಟ್ ಬ್ಯಾಂಕಿಂಗ್ ಮೂಲಕ ಪ್ರಮಾಣ ಪತ್ರಗಳಿಗೆ ನಿಗದಿಪಡಿಸಿದ ಶುಲ್ಕ ಪಾವತಿ ನಿರ್ಧಷ್ಟ ಅವಧಿಯಲ್ಲಿ ಪ್ರಮಾಣ ಪತ್ರ ಪಡೆಯಬಹುದು.

Vanshavali ಪ್ರಮಾಣ ಪತ್ರಕ್ಕೆ ಬೇಕಾಗುವ ದಾಖಲೆಗಳು

ವಂಶಾವಳಿಯಲ್ಲಿ ಕುಟುಂಬದ ಸದಸ್ಯ ಎಷ್ಟುಜನರ ಹೆಸರು ಸೇರಿಸುತ್ತೀರೋ ಅವರೆಲ್ಲರ ಆಧಾರ್ ಕಾರ್ಡ್, ಪಡಿತರ ಚೀಟಿ, ವಂಶಾವೃಕ್ಕಾಗಿ 20 ರೂಪಾಯಿಯ ಇ-ಸ್ಟ್ಯಾಂಪ್ ಪೇಪರ್ ನಲ್ಲಿ ಕುಟುಂಬದ ಎಲ್ಲಾ ಸದಸ್ಯರ ಹೆಸರು ಬರೆದು ನೋಟರಿ ಮಾಡಿಸಿಕೊಳ್ಳಬೇಕು.  ಎಲ್ಲಾ ದಾಖಲೆಗಳನ್ನು ಸ್ಕ್ಯಾನ್ ಮಾಡಿಕೊಳ್ಳಬೇಕು. ಸ್ಕ್ಯಾನ್ ಮಾಡಿದ ಫೈಲ್ ಗಳ ಸೈಜ್ 2 ಎಂಬಿಗಿಂತ ಕಡಿಮೆಯಿರಬೇಕು.

Vanshavali ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸುವುದು ಹೇಗೆ?

ಮನೆಯಲ್ಲಿಯೇ ವಂಶಾವಳಿ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸಬಯಸುವವರು

https://nadakacheri.karnataka.gov.in/ajsk

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ನಾಡ ಕಚೇರಿಯ ವೆಬ್ಸ್ಟೈಟ್ ಓಪನ್ ಆಗುತ್ತದೆ. ಅಲ್ಲಿ ಆನ್ಲೈನ್ ಅಪ್ಲಿಕೇಷನ್ ಮೇಲೆ ಕ್ಲಿಕ್ ಮಾಡಬೇಕು. ಅಪ್ಲೈ ಆನ್ಲೈನ್ ಮೇಲೆ ಕ್ಲಿಕ್ ಮಾಡಬೇಕು. ನಂತರ ನಿಮ್ಮ ಮೊಬೈಲ್ ನಂಬರ್ ನಮೂದಿಸಿದ ನಂತರ ಒಟಿಪಿ ಬರುತ್ತದೆ. ಅದನ್ನು ನಮೂದಿಸಿ ಪ್ರೊಸೀಡ್ ಮೇಲೆ ಕ್ಲಿಕ್ ಮಾಡಬೇಕು.

ಆಗ ನ್ಯೂ ರೆಕ್ವೆಸ್ಟ್ ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ಅದರ ಕೆಳಗಡೆ ಅಟೆಸ್ಟೇಷನ್ ಆಫ್ ಫ್ಯಾಮಿಲಿ ಟ್ರಿ ಮೇಲೆ ಕ್ಲಿಕ್ ಮಾಡಬೇಕು. ಆಗ ಕುಟುಂಬ ವಂಶವೃಕ್ಷ ದೃಢೀಕರಣ ಪೇಜ್ ಓಪನ್ ಆಗುತ್ತದೆ.ಇಲ್ಲಿ ನೀವು ಅರ್ಜಿಯನ್ನು ಕನ್ನಡ ಅಥವಾ ಇಂಗ್ಲೀಷ್ ನಲ್ಲಿ ಭರ್ತಿ ಮಾಡಬಹುದು. ಅರ್ಜಿಯಲ್ಲಿ ಜಿಲ್ಲೆ, ತಾಲೂಕು, ಹೋಬಳಿ, ಊರು, ಅರ್ಜಿದಾರರ ಹೆಸರು, ತಂದೆ ತಾಯಿಯ ಹೆಸರು, ವಿಳಾಸ, ಮೊ1ಬೈಲ್ ನಂಬರ್, ಮನೆ ಸದಸ್ಯರ ಹೆಸರು, ಯಾವ ಉದ್ದೇಶಕ್ಕಾಗಿ ಅರ್ಜಿ ಸಲ್ಲಿಸುತ್ತಿರುವ ಕುರಿತು, ಸೇರಿದಂತೆ ಇನ್ನಿತರ ಮಾಹಿತಿಗಳನ್ನು ಭರ್ತಿ ಮಾಡಬೇಕು.

ಸ್ಕ್ಯಾನ್ ಮಾಡಿದ ಎಲ್ಲಾ ದಖಲೆಗಳನ್ನು ಒಂದೊಂದಾಗಿ ಅಪ್ಲೋಡ್ ಮಾಡಬೇಕು. ನಂತರ ನಿಮ್ಮ ಪಾಸ್ಪೋರ್ಟ್ ಸೈಜ್ ಫೋಟೊ ಸಹ ಅಪ್ಲೋಡ್ ಮಾಡಬೇಕು. ನಂತರ ಸೇವ್ ಮಾಡಬೇಕು. ಆಗ ಅಕ್ನಲಾಜ್ ನಂಬರ್ ಕ್ರಿಯೇಟ್ ಆಗುತ್ತದೆ. ಈ ನಂಬರ್ ಸಹಾಯದ ಅರ್ಜಿಯ ಸ್ಟೇಟಸ್ ನೋಡಬಹುದು.ನಿಮ್ಮ ಮೊಬೈಲ್ ನಂಬರಿಗೆ ಮೆಸೆಜ್ ಸಹ ಬರುತ್ತದೆ. ಈ ಅಕ್ನಲಾಜ್ ಮೆಂಟ್ ಪ್ರಿಂಟ್ ಸಹ ತೆಗೆದುಕೊಳ್ಳಬಹುದು.ನಂತರ ಈ ಸೈನ್ ಗಾಗಿ ಫೇಲ್ಡ್ ಟ್ರಾನ್ಸಸೆಕ್ಷನ್ ಮೇಲೆ ಕ್ಲಿಕ್ ಮಾಡಬೇಕು.

ಇದನ್ನೂ ಓದಿ : ಬರಗಾಲ ಪರಿಹಾರ ಯಾರಿಗೆ ಜಮೆ? ಯಾರಿಗೆ ಜಮೆಯಾಗಲ್ಲ? ಇಲ್ಲಿದೆ ಮಾಹಿತಿ

ಅಲ್ಲಿ ಈ ಸೈನ್ ದ ಅಪ್ಲಿಕೇಷನ್ ಮೇಲೆ ಕ್ಲಿಕ್ ಮಾಡಬೇಕು ಆಗ ಷೋ ಸ್ಟೇಟಸ್ ಮೇಲೆ ಕ್ಲಿಕ್ ಮಾಡಬೇಕು.. ಆಧಾರ್ ನಂಬರ್  ಹಾಕಿದ ನಂತರ ಓಟಿಪಿ ಬರುತ್ತದೆ. ಓಟಿಪಿ ನಮೂದಿಬೇಕು. ನಂತರ ಮತ್ತೇ ಫೇಲ್ಡ್ ಟ್ರಾನ್ಸೆಕ್ಷನ್ ಮೇಲೆ ಕ್ಲಿಕ್ ಮಾಡಿ ಆನ್ಲೈನ್ ಪೇಮೆಂಟ್ ಮೇಲೆ ಕ್ಲಿಕ್ ಮಾಡಬೇಕು. ನಂತರ ಅಕ್ನಾಲಾಜ್ಮೆಂಟ್ ಆರ್ ಡಿ ಸಂಖ್ಯೆ ಹಾಕಿ ಶೋ ಸ್ಟೇಟಸ್ ಮೇಲೆ ಕ್ಲಿಕ್ ಮಾಡಬೇಕು. ಸರ್ಕಾರದ ಶುಲ್ಕ 25 ರೂಪಾಯಿ ಪಾವತಿಸಬೇಕು.  ಅರ್ಜಿ ಸಲ್ಲಿಸಿದ ನಂತರ ವಂಶಾವೃಕ್ಷ ಪ್ರಮಾಣ ಪತ್ರ ಪಡೆಯಬಹಬುದು.

ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಕೆ ಪೂರ್ಣಗೊಂಡನಂತರ ವಂಶಾವಳಿ ಅರ್ಜಿಯನ್ನು ಗ್ರಾಮಲೇಖಪಾಲಕರಿಗೆ ನಂತರ ಕಂದಾಯ ನಿರೀಕ್ಷಕರಿಗೆ ಸಲ್ಲಿಸಲಾಗುತ್ತದೆ. ಅರ್ಜಿ ಪರಿಶೀಲಿಸಿದ ನಂತರ ಅವರು ಉಪ ತಹಸೀಲ್ದಾರರಿಗೆ ಸಲ್ಲಿಸುತ್ತಾರೆ. ಎಲ್ಲಾ ಹಂತಗಳು ಪೂರ್ಣಗೊಂಡನಂತರ 7 ದಿನಗಳೊಳಗೆ ಅರ್ಜಿ ಪಡೆಯಬಹುದು.

Leave a Comment