Mini udyoga mela here : ಕಲಬುರಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ಇದೇ ಅಕ್ಟೋಬರ್ 18 ರಂದು ಬೆಳಗ್ಗೆ 10.30 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಕಲಬುರಗಿ ಸರ್ಕಾರಿ ಐಟಿಐ ಕಾಲೇಜು ಹಿಂದುಗಡೆಯಿರುವ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಮಿನಿ ಉದ್ಯೋಗ ಮೇಳವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕಲಬುರಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
ಲಾಹೋಟಿ ಮೋಟಾರ್ಸ್ ದಲ್ಲಿ ಟ್ರೈನಿ ಟೆಕ್ ಟೆಕ್ನಿಶಿಯನ್ ಹುದ್ದೆಗೆ ಐಟಿಐ (ಎಮ್.ಎಮ್.ವಿ, ಡಿಎಮ್.ವಿ, ಎಲೆಕ್ಟ್ರಿಶಿಯನ್ ) ಪಾಸಾಗಿರಬೇಕು. ವಯೋಮಿತಿ 18 ರಿಂದ 35 ವಯೋಮಾನದೊಳಗಿರಬೇಕು. ಸುಪರ್ ವೈಸರ್, ಸರ್ವಿಸ್ ಅಡವೈಸರ್ ಹುದ್ದೆಗೆ ಡಿಪ್ಲೋಮಾ (ಮೆಕ್ಯಾನಿಕಲ್ ಅಟೋಮೊಬೈಲ್ , ಎಲೆಕ್ಟ್ರಿಕಲ್ ಇಂಜಿನಿಯರಿಂಗ್) ಪಾಸಾಗಿರಬೇಕು. ವಯೋಮಿತಿ 22 ರುಂದ 40 ವಯೋಮಾನದೊಳಗಿರಬೇಕು. ಸೇಲ್ಸ್ ಸರ್ವೀಸ್, ಬಾಡಿಶಾಪ್ ಇನ್ಸುರೆನ್ಸ್, ಫೈನಾನ್ಸ್, ಅಕೌಂಟ್ಸ್ ಹುದ್ದೆಗಳಿಗೆ ಬಿಎ, ಬಿಕಾಂ, ಬಿಎಸ್ಸಿ, ಬಿಬಿಎಮ್, ಯಾವುದೇ ಪದವಿ ಪಾಸಾಗಿರಬೇಕು. ವಯೋಮಿತಿ18 ರಿಂದ 35 ವಯೋಮಾನದೊಳಗಿರಬೇಕು. ಸೇಲ್ಸ್ ಸರ್ವಿಸ್ ಬಾಡಿಶಾಪ್ಹುದ್ದೆಗೆ ಬಿಎ, ಬಿಕಾಂ, ಬಿಎಸ್.ಸಿ, ಬಿಬಿಎ, ಬಿಬಿಎಮ್, ಯಾವುದೇ ಪದವಿ ಪಾಸಾಗಿರಬೇಕು ವಯೋಮಿತಿ 18 ರಿಂದ 40 ವಯೋಮಾನದೊಳಗಿರಬೇಕು.
ಸಗ್ರಹ ಮೈಕ್ರೋ ಫೈನಾನ್ಸ್ ದಲ್ಲಿ ಫೀಲ್ಡ್ ಆಫೀಸರ್ ಮತ್ತು ಲೋನ್ ಆಫೀಸರ್ ಹುದ್ದೆಗಳಿಗೆ ಎಸ್.ಎಸ್.ಎಲ್.ಸಿ, ಪಿಯುಸಿ, ಐಟಿಐ, ಡಿಪ್ಲೋಮಾ, ಯಾವುದೇ ಪದವಿ ಪಾಸಾಗಿರಬೇಕು. ವಯೋಮಿತಿ 18 ರಿಂದ 32 ವಯೋಮಾನದೊಳಗಿರಬೇಕು. ಯುನೈಟೆಡ್ ಆಸ್ಪತ್ರೆಯಲ್ಲಿ ನರ್ಸಿಂಗ್, ಸ್ಟಾಪ್ ಕ್ಯಾಜುವಲ್ಟಿ, ಐಸಿಯು, ಎಚ್.ಡಿ.ಯು ಹುದ್ದೆಗೆ ಜಿ.ಎನ್.ಎಮ್ ಬಿಎಸ್.ಸಿ ಪಾಸಾಗಿರಬೇಕು. ವಯೋಮಿತಿ 18 ರಿಂದ 25 ವಯೋಮಾನದೊಳಗಿರಬೇಕು.
ಇದನ್ನೂ ಓದಿ : ಆಧಾರ್ ನಂಬರ್ ಹಾಕಿ FID ಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ
ಆಸಕ್ತಿಯುಳ್ಳ ಅಭ್ಯರ್ಥಿಗಳು ತಮ್ಮ ಎಲ್ಲಾ ಅಂಕಪಟ್ಟಿಗಳ ಝರಾಕ್ಸ್, ರೆಸ್ಯೂಮ್ , ಭಾವಚಿತ್ರಗಳು ಹಾಗೂಆಧಾರ್ ಕಾರ್ಡ್ ದಾಖಲೆಗಳೊಂದಿಗೆ ಮೇಲ್ಕಂಡ ದಿನದಂದು ನಡೆಯುವ ಮಿನಿ ಉದ್ಯೋಗಮೇಳದಲ್ಲಿ ಭಾಗವಹಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯನ್ನು ಹಾಗೂ ಕಚೇರಿ ದೂರವಾಣಿ ಸಂಖ್ಯೆ 08472 274846, ಮೊಬೈಲ್ ಸಂಖ್ಯೆ 9620095270 ಗಳಿಗೆ ಸಂಪರ್ಕಿಸಲು ಕೋರಲಾಗಿದೆ.
Mini udyoga mela here ಅಕ್ಟೋಬರ್ 20 ರಂದು ಬೆಂಗಳೂರಿನಲ್ಲಿಬೃಹತ್ ಉದ್ಯೋಗ ಮೇಳ
ಭಾರತ ಸರ್ಕಾರದ ವಿದ್ಯಾನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಮಂತ್ರಾಯಲಯದ ಅಧೀನದಲ್ಲಿ ಬರುವ ಸ್ವಾಯತ್ತ ವೈಜ್ಞಾನಿಕ ಸಂಸ್ಥೆಯಾದ ರಾಷ್ಟ್ರೀಯ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಂಸ್ಥೆ ವತಿಯಿಂದ ಇದೇ ಅಕ್ಟೋಬರ್ 20 ರಂದು ಕೆ.ಎಲ್.ಇ ಸಂಸ್ಥೆಯಎಸ್. ನಿಜಲಿಂಗಪ್ಪ ಮಹಾವಿದ್ಯಾಲಯ #1040, 28ನೇ ಕ್ರಾಸ್ ರಸ್ತೆ, 2ನೇ ಬ್ಲಾಕ್, ರಾಜಾಜಿನಗರ, ಬೆಂಗಳೂರು – 10 ಇಲ್ಲಿ ಬೃಹತ್ ಉದ್ಯೋಗ ಮೇಳವನ್ನುಆಯೋಜಿಸಲಾಗಿದೆ ಎಂದು ಕಲಬುರಗಿ ಜಿಲ್ಲಾ ಕೌಶಲ್ಯ ಮಿಷನ್ ನ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿಗಳು ತಿಳಿಸಿದ್ದಾರೆ.
ರಾಜ್ಯದ ಎಲ್ಲಾ ವಲಯಗಳಿಂದ ಸುಮಾರು100 ಕ್ಕೂಹೆಚ್ಚಿನ ಪ್ರತಿಷ್ಠಿತ ಬೃಹತ್ / ಮಧ್ಯಮ/ ಸಣ್ಣ ಉದ್ಯೋಗದಾತರ ಸಂಸ್ಥೆಗಳು ಭಾಗವಹಿಸುವ ನಿರೀಕ್ಷೆ ಇದ್ದು, ಉದ್ಯೋಗ ಮೇಳದಲ್ಲಿ ಭಾಗವಹಿಸಲಿಚ್ಚಿಸುವ ಉದ್ಯೋಗಾಕಾಂಕ್ಷಿ/ ಉದ್ಯೋಗದಾತರು, ಜಿಲ್ಲೆಯ ಯುವ ಜನರು https://jobfair.calicut.niclit.in
ವೆಬ್ಸೈಟ್ ಗೆ ಭೇಟಿ ನೀಡಿ ತಮ್ಮ ಸ್ವ- ವಿವರಗಳ್ನು ಉಚಿತವಾಗಿ ನೋಂದಣಿ ಮಾಡಿಸಿಕೊಂಡು ಮೇಲ್ಕಂಡ ದಿನದಂದು ನಡೆಯುವ ಉದ್ಯೋಗ ಮೇಳದಲ್ಲಿ ಭಾಗವಹಿಸಬಹುದು.
ಈ ಉದ್ಯೋಗ ಮೇಳವು ಭಾರತ ಸರ್ಕಾರದ ವಿದ್ಯನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಮಂತ್ರಾಲಯದ ಅಧೀನದಲ್ಲಿ ಬರುವ ಸ್ವಾಯತ್ತ ವೈಜ್ಞಾನಿಕ ಸಂಸ್ಥೆಯಾದ ರಾಷ್ಟ್ರೀಯ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಂಸ್ಥೆ ಯು ಭಾರತ ಸರ್ಕಾರದ ಕಾರ್ಮಿಕ ಮತ್ತು ಉದ್ಯೋಗ ಮಂತ್ರಾಲಯದ ನ್ಯಾಶನಲ್ ಕೆರಿಯರ್ ಸರ್ವಿಸ್ ಕರ್ನಾಟಕ ಸರ್ಕಾರದ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ ಹಾಗೂ ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮದ ಇವುಗಳ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.