Anganawadi jobs apply now : ಅಂಗನವಾಡಿ ಕಾರ್ಯಕರ್ತೆ ಸಹಾಯಕಿಯರ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ, ಹೌದು, ವಿವಿಧ ಜಿಲ್ಲೆಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಜಿಲ್ಲಾ ವ್ಯಾಪ್ತಿಯ ಶಿಶು ಅಭಿವೃದ್ಧಿ ಯೋಜನೆಗಳಲ್ಲಿ ಗೌರವ ಸೇವೆಯ ಆಧಾರದ ಮೇಲೆ ಖಾಲಿಯಿರುವ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಹುದ್ದೆಗಳ ನೇಮಕಾತಿಗಾಗಿ ಅರ್ಹ ಸ್ಥಳೀಯ ಮಹಿಳಾ ಅಭ್ಯರ್ಥಿಗಳಿಂದ ಮತ್ತು ಮಹಿಳಾ ಲಿಂಗತ್ವ ಅಲ್ಪಸಂಖ್ಯಾತರಿಂದ ನಿಗದಿತ ನಮೂನೆಯಲ್ಲಿ ಆಫ್ ಲೈನ್ ಅರ್ಜಿ ಆಹ್ವಾನಿಸಲಾಗಿದೆ.
ಅಂಗನವಾಡಿ ಕಾರ್ಯಕರ್ತೆ 26 ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ 19 ರಿಂದ 35 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ವಿಕಲಚೇತನ ಅಭ್ಯರ್ಥಿಗಳಿಗೆ ನಿಯಮಾನುಸಾರ 10 ವರ್ಷಗಳ ವಯೋಮಿತಿ ಸಡಿಲಿಕೆ ಇದೆ. ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ಅಭ್ಯರ್ಥಿಗಳು ಪಿಯುಸಿ ತೇರ್ಗಡೆ ಹೊಂದಿರಬೇಕು ಹಾಗೂ ಎಸ್ಎಸ್ಎಲ್ಸಿಯಲ್ಲಿ ಕನ್ನಡವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯನ್ನಾಗಿ ಓದಿರಬೇಕು. (ಇಸಿಸಿಇ ಡಿಪ್ಲೋಮಾ, ಜೆಒಸಿ, ಎನ್.ಟಿಟಿ ಕೋರ್ಸ್ ಅಥವಾ ನರ್ಸರಿ ತರಬೇತಿ ಪಡೆದವರಿಗೆ ಮೊದಲ ಆದ್ಯತೆ ಹಾಗೂ 5 ಅಂಕ ಬೋನಸ್ ಅಂಕ ಇರಲಿದೆ.)
ಅಂಗನವಾಡಿ ಸಹಾಯಕಿ ಹುದ್ದೆಗೆ ಎಸ್ಎಸ್ಎಲ್ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು ಮತ್ತು ಕನ್ನಡ ಭಾಷೆಯನ್ನು ಕಡ್ಡಾಯವಾಗಿ ಓದಿರಬೇಕು. ಅಭ್ಯರ್ಥಿಗಳು ಆಯಾ ಕಂದಾಯ ಗ್ರಾಮ ಅಥವಾ ನಗರ ಪ್ರದೇಶದ ಆಯಾ ಕಂದಾಯ ವಾರ್ಡ್ ನ ನಿವಾಸಿ ಆಗಿರಬೇಕು. ಮತ್ತು ತಹಶೀಲ್ದಾರ್, ಉಪ ತಹಶೀಲ್ದಾರ್ ಅವರಿಂದ ಪಡೆದ 3 ವರ್ಷದ ವಾಸಸ್ಥಳ ದೃಢೀಕರಣ ಪ್ರಮಾಣ ಪತ್ರ ಸಲ್ಲಿಸುವುದು ಕಡ್ಡಾಯ. ಆಸಿಡ್ ದಾಳಿಗೆ ತುತ್ತಾದವರು 5 ಅಂಕ ಇಲಾಖೆಯ ಸುಧಾರಣೆಯ ಸಂಸ್ಥೆಯ ನಿವಾಸಿಗಳು 10 ಅಂಕ, ವಿಧವೆಯರು (ರೈತರ ಪತ್ನಿಯರಿಗೆ ಪ್ರಥಮ ಆದ್ಯತೆ) ಯೋಜನಾ ನಿರಾಶ್ರಿತರಿಗೆ ನಿಯಮಾನುಸಾರ ಆದ್ಯತೆ ಮತ್ತು ಬೋನಸ್ ಅಂಕಗಳ ಸೌಲಭ್ಯ ಇರುತ್ತದೆ. ಅರ್ಜಿಯನ್ನು ಜೂನ್ 20 ರೊಳಗೆ ಸಲ್ಲಿಸಬೇಕು. ಅರ್ಹ ಅಭ್ಯರ್ಥಿಗಳ ತಾತ್ಕಾಲಿಕ ಪಟ್ಟಿಯನ್ನು ಜುಲೈ 10 ರಿಂದ 16 ರವರೆಗೆ ಪ್ರಕಟಿಸಲಾಗುವುದು. ಜುಲೈ 28 ಕ್ಕೆ ಅಂತಿಮ ಆಯ್ಕೆ ಪಟ್ಟಿ ಅನುಮೋದನೆಗೊಳ್ಳಲಿದೆ.
ಜುಲೈ 31 ಕ್ಕೆ ನೇಮಕಾತಿ ಆದೇಶ ನೀಡಲಾಗುವುದು. ಅರ್ಹ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಅಗತ್ಯವಿರುವ ಎಲ್ಲಾ ದಾಖಲಾತಿಗಳನ್ನು ಪತ್ರಾಂಕಿತ ಅಧಿಕಾರಿಗಳಿಂದ ದೃಢೀಕರಣ ಜೂನ್ 20 ರಂದು ಸಂಜೆ 5.30 ರ ಒಳಗೆ ಸಂಬಂಧಿಸಿದ ಶಿಶು ಅಭಿವೃದ್ಧಿ ಯೋಜನಾ ಕಚೇರಿಗೆ ಮುಚ್ಚಿದ ಲಕೋಟೆಯಲ್ಲಿ ತಲುಪಿಸಬೇಕು. ಹೆಚ್ಚಿನ ವಿವರಗಳಿಗೆ ಆಯಾ ತಾಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿಗೆ ಸಂಪರ್ಕಿಸಬೇಕು.
ಮೈಸೂರು ನಗರ ದೂರವಾಣಿ ಸಂಖ್ಯೆ 08212491962, ಮೈಸೂರು ಗ್ರಾಮಾಂತರ ದೂರವಾಣಿ ಸಂಖ್ಯೆ 08212567940, ಟಿ ನರಸೀಪುರ ದೂರವಾಣಿ ಸಂಖ್ಯೆ 08227261267, ಹುಣಸೂರು ದೂರವಾಣಿ ಸಂಖ್ಯೆ 08222252254, ಎಚ್.ಡಿ. ಕೋಟೆ ದೂರವಾಣಿ ಸಂಖ್ಯೆ 08228 255320, ನಂಜನಗೂಡು ದೂರವಾಣಿ ಸಂಖ್ಯೆ 08221 226168, ಬಿಳಿಗೆರೆ ದೂ. 08221 223147, ಪಿರಿಯಾಪಟ್ಟಣ ದೂ. 08223274742, ಕೆ.ಆರ್. ನಗರ ದೂರವಾಣಿ ಸಂಖ್ಯೆ 08223 262714 ಗೆ ಸಂಪರ್ಕಿಸಬಹುದು.
Anganawadi jobs apply now ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ಅರ್ಜಿ
ಹಾಸನ ಜಿಲ್ಲೆಯ ಹೊಳೆನರಸೀಪುರ ಶಿಶ ಅಭಿವೃದ್ಧಿ ಯೋಜನಾಧಿಕಾರಿಗಳ ವ್ಯಾಪ್ತಿಯಲ್ಲಿ 18 ಅಂಗನವಾಡಿ ಕಾರ್ಯಕರ್ತೆ ಹಾಗೂ 44 ಅಂಗನವಾಡಿ ಸಹಾಯಕಿಯರ ನೇಮಕಾತಿಗೆ ಅರ್ಜಿಗಳನ್ನು ಆಹ್ವಾನಿಸಿದ್ದು, ಆಸಕ್ತ ಸ್ಥಳೀಯ ಅಭ್ಯರ್ಥಿಗಳು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯಲ್ಲಿ ಅರ್ಜಿ ಗಳನ್ನು ಪಡೆದು ದಾಖಲಾತಿಗಳೊಂದಿಗೆ ಅರ್ಜಿಯನ್ನು ಸಲ್ಲಿಸಬಹುದು ಎಂದು ಹೊಳೆನರಸೀಪುರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ತಿಳಿಸಿದ್ದಾರೆ. ಜೂನ್ 20 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.
ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ಅರ್ಜಿ
ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಶಿಶು ಅಭಿವೃದ್ಧಿ ಯೋಜನೆಯಲ್ಲಿ ಖಾಲಿಯಿರುವ 3 ಅಂಗನವಾಡಿ ಕಾರ್ಯಕರ್ತೆ ಹಾಗೂ 31 ಸಹಾಯಕಿಯ ಗೌರವ ಸೇವೆಯ ಹುದ್ದೆಗಳಿಗೆ ನೇಮಕ ಮಾಡಲು ಅರ್ಹ ಮಹಿಳೆಯರು ಹಾಗೂ ಲಿಂಗತ್ವ ಅಲ್ಪಸಂಖ್ಯಾತ ಮಹಿಳೆಯರಿಂದ ಆಫ್ಲೈನ್ ಮೂಲಕ ಮೇ 25 ರಿಂದ ಜೂನ್ 30 ರವರೆಗೆ ಅರ್ಜಿ ಆಹ್ವಾನಿಸಿದೆ.
ಇದನ್ನೂ ಓದಿ ಈ ಮಹಿಳೆಯರಿಗೆ ಕೊನೆಗೂ ಜಮೆಯಾಯಿತು ಗೃಹಲಕ್ಷ್ಮೀ 30ನೇ ಕಂತಿನ ಹಣ
ಅರ್ಜಿ ಪಡೆಯಲು ಹಾಗೂ ಸಲ್ಲಿಸಲು ತಾಲೂಕಿನ ರೆಡ್ಡಿ ಕಲ್ಯಾಣ ಮಂಟಪ ರಸ್ತೆಯ ಕೃಷಿಕ ಸಮಾಜ ಕಟ್ಟಡ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿಯಲ್ಲಿ ಹಾಗೂ ಹೆಚ್ಚಿನ ಮಾಹಿತಿಗೆ 08151232215 ಹಾಗೂ 9740422335 ಯನ್ನು ಸಂಪರ್ಕಿಸಬಹುದು.





