ಅಂಗನವಾಡಿ ಕಾರ್ಯಕರ್ತೆ ಸಹಾಯಕಿಯರ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

Written by Ramlinganna

Published on:

Anganwadi workers helpers jobs : ಅಂಗನವಾಡಿ ಕಾರ್ಯಕರ್ತೆ ಸಹಾಯಕಿಯರ ಹುದ್ದೆಗಳ ಭರ್ತಿಗೆ ಆಫ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಹೌದು, ಕಲಬುರಗಿ ಜಿಲ್ಲೆಯಲ್ಲಿ 2026-27ನೇ ಸಾಲಿನಲ್ಲಿ ಖಾಲಿಯಿರುವ 105 ಅಂಗನವಾಡಿ ಕಾರ್ಯಕರ್ತೆ ಹಾಗೂ ಅಂಗನವಾಡಿ 390 ಹುದ್ದೆಗಳು  ಸಹಾಯಕಿಯರ ಗೌರವಧನ ಸೇವೆ ಸಲ್ಲಿಸಲು 19 ರಿಂದ 35 ವರ್ಷದೊಳಗಿನ ಅರ್ಹ ಸ್ಥಳೀಯ ಮಹಿಳಾ ಹಾಗೂ ಲಿಂಗತ್ವ ಅಲ್ಪ ಸಂಖ್ಯಾತರು  ಅರ್ಜಿ ಸಲ್ಲಿಸಬಹುದು. ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಆಫ್‌ಲೈನ ಮೂಲಕ ಅರ್ಜಿ ಆಹ್ವಾನಿಸಲಾಗಿದೆ ಎಂದು ಕಲಬುರಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.

ಅರ್ಹತೆ:- ವಿಕಲಚೇತನರಿಗೆ 10 ವಯೋಮಿತಿ ಸಡಿಲಿಕೆ ಇರುತ್ತದೆ (ಕಾರ್ಯಕರ್ತೆ ಹುದ್ದೆಗೆ ಮಾತ್ರ( ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ಪಿ.ಯು.ಸಿ. ತೇರ್ಗಡೆ ಹೊಂದಿರಬೇಕು.

ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಖಾಲಿಯಿರುವ ಹುದ್ದೆಗಳ ವಿವರ ಇಂತಿದೆ. ಅಫಜಲಪೂರ: 08 ಅಂಗನವಾಡಿ ಕಾರ್ಯಕರ್ತೆಯರ ಹಾಗೂ 40 ಅಂಗನವಾಡಿ ಸಹಾಯಕಿಯರ ಹುದ್ದೆಗಳು. ಆಳಂದ: 27 ಅಂಗನವಾಡಿ ಕಾರ್ಯಕರ್ತೆಯರ ಹಾಗೂ 77 ಅಂಗನವಾಡಿ ಸಹಾಯಕಿಯರ ಹುದ್ದೆಗಳು. ಚಿಂಚೋಳಿ: 09 ಅಂಗನವಾಡಿ ಕಾರ್ಯಕರ್ತೆಯರ ಹಾಗೂ 47 ಅಂಗನವಾಡಿ ಸಹಾಯಕಿಯರ ಹುದ್ದೆಗಳು. ಚಿತ್ತಾಪೂರ: 05 ಅಂಗನವಾಡಿ ಕಾರ್ಯಕರ್ತೆಯರ ಹಾಗೂ 39 ಅಂಗನವಾಡಿ ಸಹಾಯಕಿಯರ ಹುದ್ದೆಗಳು. ಕಲಬುರಗಿ (ಗ್ರಾಮೀಣ): 14 ಅಂಗನವಾಡಿ ಕಾರ್ಯಕರ್ತೆಯರ ಹಾಗೂ 66 ಅಂಗನವಾಡಿ ಸಹಾಯಕಿಯರ ಹುದ್ದೆಗಳು. ಕಲಬುರಗಿ (ನಗರ): 12 ಅಂಗನವಾಡಿ ಸಹಾಯಕಿಯರ ಹುದ್ದೆಗಳು. ಜೇವರ್ಗಿ: 21 ಅಂಗನವಾಡಿ ಕಾರ್ಯಕರ್ತೆಯರ ಹಾಗೂ 37 ಅಂಗನವಾಡಿ ಸಹಾಯಕಿಯರ ಹುದ್ದೆಗಳು. ಸೇಡಂ: 05 ಅಂಗನವಾಡಿ ಕಾರ್ಯಕರ್ತೆಯರ ಹಾಗೂ 24 ಅಂಗನವಾಡಿ ಸಹಾಯಕಿಯರ ಹುದ್ದೆಗಳು. ಶಹಾಬಾದ: 16 ಅಂಗನವಾಡಿ ಕಾರ್ಯಕರ್ತೆಯರ ಹಾಗೂ 48 ಅಂಗನವಾಡಿ ಸಹಾಯಕಿಯರ ಹುದ್ದೆಗಳು ಇವೆ.

ಅರ್ಜಿ ಸಲ್ಲಿಸಲಿಚ್ಛಿಸುವ ಅರ್ಹ ಮಹಿಳಾ ಅಭ್ಯರ್ಥಿಗಳ ವಯೋಮಿತಿ 19 ರಿಂದ 35 ವರ್ಷದೊಳಗಿರಬೇಕು. ವಿಕಲಚೇತನರಿಗೆ 10 ವರ್ಷಗಳ ವಯೋಮಿತಿ ಸಡಿಲಿಕೆ (ಕಾರ್ಯಕರ್ತೆ ಹುದ್ದೆಗೆ ಮಾತ್ರ) ಇರುತ್ತದೆ. ಅಂಗನವಾಡಿ ಕಾರ್ಯಕರ್ತೆಯರ ಹುದ್ದೆಗೆ ಅಭ್ಯರ್ಥಿಗಳು ಕನಿಷ್ಠ ವಿದ್ಯಾರ್ಹತೆ ಪಿ.ಯು.ಸಿ. ತೇರ್ಗಡೆ ಹೊಂದಿರಬೇಕು. ಅಂಗನವಾಡಿ ಸಹಾಯಕಿ ಹುದ್ದೆಗೆ ಅಭ್ಯರ್ಥಿಗಳು ಕನಿಷ್ಠ ವಿದ್ಯಾರ್ಹತೆ ಎಸ್.ಎಸ್.ಎಲ್.ಸಿ. ಅಥವಾ ತತ್ಸಮಾನ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು.

ಅರ್ಹ ಮಹಿಳಾ ಅಭ್ಯರ್ಥಿಗಳು ಆಫ್‌ಲೈನ್ ಮೂಲಕ 2026ರ ಜುಲೈ 01 ರಿಂದ ಜುಲೈ 31ರೊಳಗಾಗಿ ಕಡ್ಡಾಯವಾಗಿ ಸೀಲು ಬಂದ ಲಕೋಟೆಯೊಂದಿಗೆ ನಿಗದಿತ ನಮೂನೆಯಲ್ಲಿ ಅಗತ್ಯ ದಾಖಲಾತಿಗಳಾದ ತಹಸೀಲ್ದಾರರಿಂದ ಪಡೆದ 3 ವರ್ಷದ ಒಳಗಿನ ವಾಸಸ್ಥಳ ದೃಢೀಕರಣ, ಆಧಾರ ಕಾರ್ಡ್, ರೇಶನ್ ಕಾರ್ಡ್, ಮತದಾನದ ಗುರುತಿನ ಚೀಟಿ ಇತರೆ ದಾಖಲಾತಿಗಳೊಂದಿಗೆ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಾರ್ಯಾಲಯದಲ್ಲಿ ಅರ್ಜಿ ಸಲ್ಲಿಸಿ ಸ್ವೀಕೃತಿ ಪಡೆಯಬಹುದುದಾಗಿದೆ.

ಮತ್ತಿತರ ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಬಹುದು.

Anganwadi workers helpers jobs ಸಹಾಯಕಿ ಹುದ್ದೆಗಳ ಭರ್ತಿಗೆ ಅರ್ಜಿ  ಆಹ್ವಾನ 

ಕಲಬುರಗಿ ನಗರ ವ್ಯಾಪ್ತಿಯ 2026-27 ನೇ ಸಾಲಿನಲ್ಲಿ ಖಾಲಿಯಿರುವ 12 ಅಂಗನವಾಡಿ ಸಹಾಯಕಿ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಆಫ್ ಲೈನ್ ಮೂಲಕ 2026ರ ಜುಲೈ 01 ರಿಂದ ಕೊನೆಯ ದಿನಾಂಕ ಜುಲೈ 31 ರೊಳಗಾಗಿ ಅರ್ಜಿ ಸಲ್ಲಿಸಲು ನಿಗದಿತಗೊಳಿಸಲಾಗಿದೆ ಎಂದು ಕಲಬುರಗಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ತಿಳಿಸಿದ್ದಾರೆ.

 ಅಂಗನವಾಡಿ ಸಹಾಯಕಿಯರ ಖಾಲಿಯಿರುವ ಹುದ್ದೆಗಳ ವಿವರ ಇಂತಿದೆ.

ಶೇಖರೋಜಾ ಆಶ್ರಯ ಕಾಲೋನಿ-03: ವಾರ್ಡ ಸಂ.07, ಅಹಮದ ನಗರ-01: ವಾರ್ಡ ಸಂ.16, ಜೋಷಿವಾಡಾ ವಾರ್ಡ ಸಂ.23, ಗಂಗಾ ನಗರ-02  ವಾರ್ಡ ಸಂ.26, ಸಂತ್ರಾಸ್ ವಾಡಿ-01 ವಾರ್ಡ ಸಂ.28, ಕಮಲಮುಜರತ ಕಾಲೋನಿ-01 ವಾರ್ಡ ಸಂ.29,  ಇತರೆ ಗಾಜಿಪೂರ-01 ವಾರ್ಡ ಸಂ.38, ವಿಜಯನಗರ-02 ವಾರ್ಡ ಸಂ.39, ಪರಿಶಿಷ್ಟ ಜಾತಿ, ಜಿಲಾನಾಬಾದ -01 ವಾರ್ಡ ಸಂ.40 ಹಾಗೂ ಪೊಲೀಸ್ ಕಾಲನಿ-01 ವಾರ್ಡ ಸಂ.46 ಇತರೆ.

ಇದನ್ನೂ ಓದಿ ಬೆಳೆ ವಿಮೆ ಅರ್ಜಿ ಆಹ್ವಾನ ಯಾವ ಬೆಳೆಗೆ ಎಷ್ಟು ಜಮೆ? ಮಾಹಿತಿ ಇಲ್ಲಿದೆ

ಅರ್ಜಿ ಸಲ್ಲಿಸಲು ಇಚ್ಛಿಸುವ ಅರ್ಹ ಮಹಿಳಾ ಅಭ್ಯರ್ಥಿಗಳ ವಯೋಮಿತಿ 19 ರಿಂದ 35 ವರ್ಷದೊಳಗಿರಬೇಕು. ಅಂಗನವಾಡಿ ಸಹಾಯಕಿ ಹುದ್ದೆಯ ಅಭ್ಯರ್ಥಿಗಳು ಕನಿಷ್ಠ ವಿದ್ಯಾರ್ಹತೆ ಎಸ್.ಎಸ್.ಎಲ್.ಸಿ ತೆರ್ಗಡೆ ಹೊಂದಿರಬೇಕು. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕಡ್ಡಾಯವಾಗಿ ಸೀಲು ಬಂದ ಲಕೋಟೆಯೊಂದಿಗೆ ನಿಗದಿತ ಸಮೂನೆಯಲ್ಲಿ ಅಗತ್ಯ ದಾಖಲಾತಿಗಳೊಂದಿಗೆ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಾರ್ಯಾಲಯದಲಿ ಸಲ್ಲಿಸಿ ಸ್ವೀಕೃತಿ ಪಡೆಯಬಹುದಾಗಿದೆ.

ಮತ್ತಿತ್ತರ ಹೆಚ್ಚಿನ ಮಾಹಿತಿಗಾಗಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಛೇರಿ,ಕಲಬುರಗಿ ನಗರ,ನಂ:1-9, ಖುಬಾ ಪ್ಲಾಟ್, ಎಚ್ ಸಿಜಿ ಕ್ಯಾನ್ಸರ್ ಆಸ್ಪತ್ರೆ ಎದುರುಗಡೆ,ಲಾಹೋಟಿ ಪೆಟ್ರೋಲ್ ಪಂಪ್ ಹತ್ತಿರ,ಕಲಬುರಗಿ-585102 ಗೆ ಕಛೇರಿ ವೇಳೆಯಲ್ಲಿ ಈ ವಿಳಾಸವನ್ನು ಸಂಪರ್ಕಿಸಲು ಕೋರಲಾಗಿದೆ.

Leave a Comment