ಆಧಾರ್ ನಂಬರ್ ಹಾಕಿ ಮೊಬೈಲ್ ನಲ್ಲಿ ರೈತರು FID ರೈತ ಕಾರ್ಡ್ ಸಂಖ್ಯೆ ಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ

Written by Ramlinganna

Updated on:

ರೈತರು ಮನೆಯಲ್ಲಿಯೇ ಕುಳಿತು ತಮ್ಮ ಬಳಿಯಿರುವ ಮೊಬೈಲ್ ನಲ್ಲಿ ಎಫ್ಐಡಿ ಸಂಖ್ಯೆಯನ್ನು ಪಡೆಯಬಹುದು. ಹೌದು, ರೈತರು ಯಾರ ಸಹಾಯವೂ ಇಲ್ಲದೆ ತಮ್ಮ ಬಳಿಯಿರುವ ಮೊಬೈಲ್ ನಲ್ಲಿ  ಮನೆಯಲ್ಲಿಯೇ ತಮ್ಮ ಎಫ್ಐಡಿ ಸಂಖ್ಯೆ ಚೆಕ್ ಮಾಡಿ ಬರೆದಿಟ್ಟುಕೊಳ್ಳಬಹುದು.

ಮೊಬೈಲ್ ನಲ್ಲಿ ಎಫ್ಐಡಿ ಸಂಖ್ಯೆ ಪಡೆಯುವುದು ಹೇಗೆ?

ರೈತರು ತಮ್ಮ ಎಫ್ಐಡಿ ಸಂಖ್ಯೆಯನ್ನು ಮೊಬೈಲ್ ನಲ್ಲಿ ಚೆಕ್ ಮಾಡಲು ಈ

https://fruitspmk.karnataka.gov.in/MISReport/GetDetailsByAadhaar.aspx

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಫ್ರೂಟ್ಸ್ ಪಿಎಂಕಿಸಾನ್ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ರೈತರು ತಮ್ಮ ಆಧಾರ್ ಕಾರ್ಡ್ ಹಾಕಬೇಕು. ಆಧಾರ್ ಕಾರ್ಡ್ ನಮೂದಿಸಿದ ನಂತರ Search ಮೇಲೆ ಕ್ಲಿಕ್ ಮಾಡಬೇಕು. ಆಗ ಫಾರ್ಮರ್ ಡಿಟೇಲ್ಸ್ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ Fruits ID ರೈತರ ಐಡಿ ನಂಬರ್ ಇರುತ್ತದೆ. ಇದು ಎಫ್ಐಡಿ ಯಿಂದ ಆರಂಭವಾಗುತ್ತದೆ. ಇದು ರೈತರಿಗೆ ಅತ್ಯಂತ ಮಹತ್ವದ್ದಾಗಿದೆ. ಇದರ ಮುಂದುಗಡೆ PMKID ಇರುತ್ತದೆ. ಇದು ಪಿಎಂ ಕಿಸಾನ್ ಐಡಿಯಾಗಿರುತ್ತದೆ. ಅದರ ಕೆಳಗಡೆ ರೈತರ ಹೆಸರು ಇರುತ್ತದೆ.

ಏನಿದು ಎಫ್ಐಡಿ? What is FID?

Farmer Registration and unified beneficiary information system (FRUITS) ಇದು ರೈತರ ಗುರುತಿನ ಕಾರ್ಡ್ ಆಗಿದೆ. ನೌಕರರಿಗೆ ಐಡಿ ಪ್ರೂಫ್ ಇದ್ದಂತೆ ರೈತರಿಗೆ ಐಡಿ ಪ್ರೂಫ್ ಆಗಿದೆ. ಆಧಾರ್ ಕಾರ್ಡ್, ರೇಶನ್ ಕಾರ್ಡ್, ಪ್ಯಾನ್ ಕಾರ್ಡ್ ನಂಬರ್ ಇದ್ದರೆ ಫ್ರೂಟ್ ಐಡಿ ಕಾರ್ಡಿಗೂ ನಂಬರ್ ಇರುತ್ತದೆ. ಒಂದುಸಲ ರೈತರು ಈ ಐಡಿ ಕಾರ್ಡ್ ಪಡೆದುಕೊಂಡರೆ ಸಾಕು ಜೀವನಪರ್ಯಂತ ಸರ್ಕಾರದ ಯೋಜನೆಗಳ ಸೌಲಭ್ಯ ಪಡೆಯಲು ಇದು ಅನುಕೂಲವಾಗುತ್ತದೆ.

ಹೌದು, ತೋಟಗಾರಿಕೆ, ಪಶುಸಂಗೋಪನೆ, ರೇಷ್ಮೆ, ಕೃಷಿ, ಮೀನುಗಾರಿಕೆ ಇಲಾಖೆಯ ವತಿಯಿಂದ ರೈತರು ಸಬ್ಸಿಡಿ ಪಡೆಯಲು ಎಫ್ಐಡಿ ಕಾರ್ಡ್ ಸಲ್ಲಿಸಬೇಕಾಗುತ್ತದೆ. ರೈತರ ಬಳಿ ಎಫ್ಐಡಿ ಕಾರ್ಡ್ ಇದ್ದರೆ ಮಾತ್ರ ಸರ್ಕಾರದ ಸಬ್ಸಿಡಿ ಪಡೆಯಲು ಅರ್ಹರಾಗಿರುತ್ತಾರೆ.

ಫ್ರೂಟ್ಸ್ ಐಡಿ ಎಲ್ಲಿ ಸಿಗುತ್ತದೆ?

ರೈತರು ಫ್ರೂಟ್ಸ್ ಐಡಿ ಪಡೆಯಲು ತಮ್ಮ ಹತ್ತಿರ ರೈತ ಸಂಪರ್ಕ ಕೇಂದ್ರದಲ್ಲಿ ಅರ್ಜಿ ಸಲ್ಲಿಸಿ ಪಡೆಯಬಹುದು. ಇದಕ್ಕಾಗಿ ಯಾವು ಶುಲ್ಕ ಪಾವತಿಸುವ ಅಗತ್ಯವಿಲ್ಲ. ಎಫ್ಐಡಿ ಕಾರ್ಡ್ ನಂಬರ್ ಉಚಿತವಾಗಿ ಪಡೆಯಬಹದು. ಇದಕ್ಕಾಗಿ ರೈತರು ತಮ್ಮ ಆಧಾರ್ ಕಾರ್ಡ್, ಜಮೀನಿನ ಪಹಣಿ, ಫೋಟೋ, ಬ್ಯಾಂಕ್ ಪಾಸ್ ಬುಕ್ ಝರಾಕ್ಸ್ ಪ್ರತಿ ಸಲ್ಲಿಸಬೇಕು.

ಒಂದು ವೇಳೆ  ನೀವು ಮೊಬೈಲ್ ನಲ್ಲಿ ಐಡಿ ಕಾರ್ಡ್ ಪಡೆಯಬೇಕಾದರೆ ಈ

https://fruits.karnataka.gov.in/OnlineUserLogin.aspx

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ತೆರೆದುಕೊಳ್ಳುವ ಪೇಜ್ ನಲ್ಲಿ ಸಿಟಿ ರೆಜಿಸ್ಟ್ರೇಶನ್ ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ರೈತರು ಆಧಾರ್ ಕಾರ್ಡ್ ನಲ್ಲಿರುವ ಹೆಸರು ನಮೂದಿಸಬೇಕು. ನಂತರ ಆಧಾರ್ ಕಾರ್ಡ್ ನಂಬರ್ ಹಾಕಬೇಕು. ಐ ಅಗ್ರಿ ಆಯ್ಕೆ ಮಾಡಿಕೊಂಡು ಸಬ್ಮಿಟ್ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮ್ಮ ಮೊಬೈಲ್ ನಂಬರ್ ಹಾಕಬೇಕು. ನಂತರ ನಿಮ್ಮ ಮೊಬೈಲಿಗೆ ಓಟಿಪಿ ಬರುತ್ತದೆ. ಓಟಿಪಿ ನಮೂದಿಸಿದ ನಂತರ ಅಗತ್ಯ ಮಾಹಿತಿಗಳನ್ನು ಭರ್ತಿ ಮಾಡಿ ಎಫ್ಐಡಿಗೆ ಅರ್ಜಿ ಸಲ್ಲಿಸಬಹುದು.  ನಂತರ ನೀವು ಸ್ಟೇಟಸ್ ಚೆಕ್ ಮಾಡಿ ನಿಮ್ಮ ಎಫ್ಐಡಿ ಪಡೆದುಕೊಳ್ಳಬೇಕು.

ರೈತರ ಮಕ್ಕಳು ರೈತ ವಿದ್ಯಾನಿಧಿ ಯೋಜನೆಯಡೆ ಸ್ಕಾಲರಶಿಪ್ ಪಡೆಯಲು ಎಫ್ಐಡಿ ಕಡ್ಡಾಯವಾಗಿದೆ. ಹಾಗಾಗಿ ರೈತರು ಎಫ್ಐಡಿ ಪಡೆಯುವುದು ಮಹತ್ವದ್ದಾಗಿದೆ.

1 thought on “ಆಧಾರ್ ನಂಬರ್ ಹಾಕಿ ಮೊಬೈಲ್ ನಲ್ಲಿ ರೈತರು FID ರೈತ ಕಾರ್ಡ್ ಸಂಖ್ಯೆ ಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ”

Leave a Comment