ನಿಮ್ಮ ಜಮೀನಿನ ಮ್ಯಾಪ್ mobileನಲ್ಲಿ ಡೌನ್ಲೋಡ್ ಮಾಡಿ

Written by Ramlinganna

Published on:

Download your land map : ರೈತರು ತಮ್ಮಬಳಿಯಿರುವ  ಮೊಬೈಲ್ ನಲ್ಲೇ ತಮ್ಮ ಜಮೀನಿನ ಮ್ಯಾಪ್ ನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.

ಹೌದು, ರೈತರು ಯಾರ ಸಹಾಯವೂ ಇಲ್ಲದೆ, ಅತೀ ಸುಲಭವಾಗಿ ತಮ್ಮ ಜಮೀನಿನ ಅಂದರೆ ತಮ್ಮೂರಿನ ಸುತ್ತಮುತ್ತಲಿರುವ ಜಮೀನಿನ ಮ್ಯಾಪನ್ನು ಡೌನ್ಲೋಡ್ ಮಾಡಿಕೊಳ್ಳಬಹುದು. ಈ ಮ್ಯಾಪ್ ಡೌನ್ಲೋಡ್ ಮಾಡಿಕೊಂಡರೆ ರೈತರಿಗೆ ಯಾವ ಯಾವ ಮಾಹಿತಿಗಳು ಸಿಗುತ್ತವೆ? ಡೌನ್ಲೋಡ್ ಮಾಡಿಕೊಳ್ಳುವುದು ಹೇಗೆ? ಎಂಬುದರ  ಸಂಪೂರ್ಣ ಮಾಹಿತಿ ಇಲ್ಲಿದೆ.

ರೈತರು ತಮ್ಮೂರಿನ ಸುತ್ತಮುತ್ತಲಿನ ಮ್ಯಾಪ್ ಪಡೆಯಲು ತಹಸೀಲ್ದಾರ್ ಕಚೇರಿ, ಕಂದಾಯ ಇಲಾಖೆ, ನಾಡಕಚೇರಿಗೆ ಹೋಗಬೇಕಿಲ್ಲ. ಅಲ್ಲಿ ತಾಸುಗಟ್ಟಲೇ ಕಾಯಬೇಕಿಲ್ಲ, ನಿಮ್ಮ ಬಳಿಯಿರುವ ಸ್ಮಾರ್ಟ್ ಫೋನ್ ನಲ್ಲೇ ನಿಮ್ಮೂರಿನ ಮ್ಯಾಪ್ ಡೌನ್ಲೋಡ್ ಮಾಡಿಕೊಳ್ಳಬಹುದು.

Download your land map ಜಮೀನಿನ ಮ್ಯಾಪ್ ಡೌನ್ಲೋಡ್ ಮಾಡಿಕೊಳ್ಳುವುದು ಹೇಗೆ

ರೈತರು ತಮ್ಮೂರಿನ ಜಮೀನಿನ ಮ್ಯಾಪ್ ಡೌನ್ಲೋಡ್ ಮಾಡಿಕೊಳ್ಳಲು ಈ

https://landrecords.karnataka.gov.in/service3/

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮಗೆ ಕಂದಾಯ ಇಲಾಖೆಯ Revenue Maps Online ಪೇಜ್ ತೆರೆದುಕೊಳ್ಳುತ್ತದೆ.  ಅಲ್ಲಿ ರೇವಿನ್ಯೂ ಮ್ಯಾಪ್ ಕೆಳಗಡೆ ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ ತಾಲೂಕು ಆಯ್ಕೆ ಮಾಡಿಕೊಳ್ಳಬೇಕು. ನಂತರ ಹೋಬಳಿ ಆಯ್ಕೆ ಮಾಡಿಕೊಳ್ಳಬೇಕು. ಇದಾದ ಮೇಲೆ Map Types ಎದುರುಗಡೆ  Cadastral Maps ಆಯ್ಕೆ ಮಾಡಿಕೊಳ್ಳಬೇಕು. ನಂತರ ನೀವು ಆಯ್ಕೆ ಮಾಡಿಕೊಂಡ ಹೋಬಳಿ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳ ಹೆಸರು ಕಾಣಿಸುತ್ತದೆ.

ಅಲ್ಲಿ ನಿಮ್ಮೂರಿನ ಎದುರುಗಡೆಯಿರುವ ಪಿಡಿಎಫ್ ಫೈಲ್ ಮೇಲೆ ಕ್ಲಿಕ್ ಮಾಡಿದರೆ ಸಾಕು,  ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ. ಅದೇ ನಿಮ್ಮೂರಿನ ಮ್ಯಾಪ್.

ಊರಿನ ಮ್ಯಾಪ್ ನಲ್ಲಿ ಯಾವ ಯಾವ ಮಾಹಿತಿ ಇರುತ್ತದೆ?

ಈ ಊರಿನ ಮ್ಯಾಪ್ ನಲ್ಲಿ ನಿಮ್ಮೂರಿನ ನೆರೆ ಹೊರೆಯ ಊರುಗಳು ಕಾಣಿಸುತ್ತವೆ. ಇದರೊಂದಿಗೆ ಆ ಊರುಗಳಿಗೆ ಹೋಗುವ ದಾರಿ ಹೇಗೆ ಹಾದು ಹೋಗಿದೆ ಎಂಬುದು ಕಾಣಿಸುತ್ತದೆ.

ಒಂದು ವೇಳೆ ನಿಮ್ಮೂರಿನ ಸುತಮುತ್ತಲು ಕೆರೆ, ಹಳ್ಳ ಕೊಳ್ಳಗಳುಇದ್ದರೆ ಅದನ್ನು ನೀಲಿ ಬಣ್ಣದಲ್ಲಿ ಗುರುತು ಮಾಡಲಾಗಿರುತ್ತದೆ. ಆ ಆಧಾರದ ಮೇಲೆ ಕೆರೆ ಹಾಗೂ ಹಳ್ಳಕೊಳ್ಳಗಳು ಹೇಗೆ ಹಾದು ಹೋಗುತ್ತದೆ? ಎಂಬ ಮಾಹಿತಿ ಸುಲಭವಾಗಿ ಸಿಗುತ್ತದೆ.

ಇದನ್ನೂ ಓದಿನಿಮ್ಮ ಯಾವ ಸರ್ವೆ ನಂಬರ್ ಮೇಲೆ ಎಷ್ಟು ಸಾಲವಿದೆ? ಮೊಬೈಲ್ ನಲ್ಲೇ ಚೆಕ್ ಮಾಡಿ

ಗ್ರಾಮದ ನಕ್ಷೆಯ ಎಡಗಡೆ ಯಾವ ಯಾವ ಮಾಹಿತಿಗಳಿಗೆ  ಯಾವ ಚಿಹ್ನೆಗಳಿಂದ ಗುರುತಿಸಬಹುದು ಎಂಬ ಪಟ್ಟಿ ಮಾಡಲಾಗಿರುತ್ತದೆ. ಆ ಆಧಾರದ ಮೇಲೆ ನೀವು ಬಯಸಿದ ಮಾಹಿತಿ ವೀಕ್ಷಿಸಬಹುದು.

ಗ್ರಾಮದ ಗಡಿ ರೇಖೆ, ನಿಮ್ಮ ಜಮೀನಿನ ಅಂದರೆ ನಿಮ್ಮೂರಿನ ಸುತ್ತಮುತ್ತಲಿರುವ ಜಮೀನುಗಳ ಸರ್ವೆ ನಂಬರ್ ಗಡಿ, ಹಿಸ್ಸಾ ನಂಬರ್ ಗಡಿ, ಸರ್ವೆ ನಂಬರ್ ಗಳು ತೋರಿಸಲಾಗಿರುತ್ತದೆ ಅದರ ಕೆಳಗಡೆ ನಿಮ್ಮ ಜಮೀನುಗಳಿಗೆ ಹೋಗುವ ಕಾಲುದಾರಿ, ಬಂಡಿದಾರಿ ಹಾಗೂ ಡಾಂಬಾರು ರಸ್ತೆಯಿದ್ದರೆ ಯಾವ ಜಮೀನುಗಳ ಮೂಲಕ ಹಾದು ಹೋಗುತ್ತಿದೆ ಎಂಬುದನ್ನು ಚೆಕ್ ಮಾಡಬಹುದು.

ನಿಮ್ಮೂರಿನ ಸುತ್ತಮುತ್ತಲೂ ಬೆಟ್ಟಗುಡ್ಡಗಳಿದ್ದರೆ ಹಸಿರು ಬಣ್ಣದಿಂದ ಗುರುತು ಮಾಡಲಾಗಿರುತ್ತದೆ. ಬೆಟ್ಟಗುಡ್ಡಗಳು ನಿಮ್ಮೂರಿನ ಸುತ್ತಮುತ್ತ ಯಾವ ಭಾಗದಲ್ಲಿದೆ ಎಂಬುದನ್ನು ಚೆಕ್ ಮಾಡಬಹುದು.

ನಿಮ್ಮೂರಿನಲ್ಲಿ ಹಳೆ ಬಾವಿಗಳು ಇದ್ದರೆ ಎಲ್ಲಿದ್ದವು?  ಹಾಳಾದ ಬಾವಿ ಇದ್ದರೂ ಎಲ್ಲಿತ್ತು? ದೇವಸ್ಥಾನದ ಎಲ್ಲಿದೆ?  ಕುರಚಲು ಗಿಡಗಳು, ಈಚಲು ಮರಗಳು ಇದ್ದರೆ ಎಲ್ಲೆಲ್ಲಿದ್ದವು? ಎಲ್ಲಿವೆ ಎಂಬುದನ್ನು ಸಹ ಚೆಕ್ ಮಾಡಬಹುದು.

Leave a Comment