ಯಾವ ಸರ್ವೆ ನಂಬರ್ ಮೇಲೆ ಎಷ್ಟು ಸಾಲವಿದೆ?

Written by Ramlinganna

Updated on:

how much crop loan taken ರೈತರು ತಮ್ಮ ಜಮೀನಿನ ಮೇಲೆ ಎಷ್ಟು ಸಾಲವಿದೆ? ಸಾಲ ಮರುಪಾವತಿಸಿದ್ದರೂ ಜಮೀನಿನ ಮೇಲೆ ಸಾಲ ತೋರಿಸುತ್ತಿದೆಯೇ? ಒಂದೇ ನಿಮಿಷದಲ್ಲಿ ಚೆಕ್ ಮಾಡಬಹುದು.

ಹೌದು, ರೈತರು ಜಮೀನಿನ ಮೇಲೆ ಸಾಲವಿದೆಯೋ ಇಲ್ಲವೋ ಎಂಬುದನ್ನುಚೆಕ್ ಮಾಡಲು ಎಲ್ಲಿಯೂ ಹೋಗಬೇಕಿಲ್ಲ, ಮನೆಯಲ್ಲಿಯೇ ಕುಳಿತು, ಕೇವಲ ಒಂದೇ ನಿಮಿಷದಲ್ಲಿ ಚೆಕ್ ಮಾಡಬಹುದು. ಅದು ಹೇಗೆ ಅಂದುಕೊಂಡಿದ್ದೀರಾ.. ಇಲ್ಲಿದೆ ನೋಡಿ ಸುಲಭ ವಿಧಾನ.

how much crop loan taken ರೈತರ ಜಮೀನಿನ ಮೇಲೆ ಸಾಲವಿುದೆಯೋ? ಇಲ್ಲವೋ  ಹೇಗೆ ಚೆಕ್ ಮಾಡಬೇಕು?

ರೈತರು ತಮ್ಮ ಜಮೀನಿನ ಮೇಲಿರುವ ಸಾಲವನ್ನು ಮರುಪಾವತಿಸಿದ್ದರೂ ಇದನ್ನೂ ತೋರಿಸುತ್ತಿದೆಯೇ ಎಂಬುದನ್ನು ಚೆಕ್ ಮಾಡಲು ಈ

https://landrecords.karnataka.gov.in/Service2/

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.  ಆಗ ಕಂದದಾಯ ಇಲಾಖೆಯ ಭೂಮಿ ಆನ್ಲೈನ್ ಲ್ಯಾಂಡ್ ರಿಕಾರ್ಡ್ಸ್  ಪೇಜ್ ತೆರೆದುಕೊಳ್ಳುತ್ತದೆ.  ಅಲ್ಲಿ ರೈತರು ಜಿಲ್ಲೆ ಆಯ್ಕೆ ಮಾಡಿಕೊಳ್ಳಬೇಕು. ನಂತರ ತಾಲೂಕು ಆಯ್ಕೆ ಮಾಡಿಕೊಳ್ಳಬೇಕು. ಇದಾದನಂತರ ಹೋಬಳಿ ಆಯ್ಕೆ ಮಾಡಿಕೊಳ್ಳಬೇಕು. ನಂತರ ಗ್ರಾಮ ಆಯ್ಕೆ ಮಾಡಿಕೊಂಡು ನಿಮ್ಮ ಯಾವ ಸರ್ವೆ ನಂಬರ್ ಮೇಲೆ ಸಾಲವಿದೆ ಎಂಬುದನ್ನು ಚೆಕ್ ಮಾಡಬೇಕೆಂದುಕೊಂಡಿದ್ದೀರೋ ಆ ಸರ್ವೆ ನಂಬರ್ ಹಾಕಬೇಕು. ನಂತರ ಗೋ ಮೋಲೆ ಕ್ಲಿಕ್ ಮಾಡಬೇಕಾಗುತ್ತದೆ. ಇದಾದನಂತರ ಸರ್ನೋಕ್ ನಲ್ಲಿ ಸ್ಟಾರ್, ಹಾಗೂ ಹಿಸ್ಸಾ ನಂಬರ್ ನಲ್ಲಿ ಸ್ಟಾರ್ ಆಯ್ಕೆ ಮಾಡಿಕೊಳ್ಳಬೇಕು. ಇದಾದ ಮೇಲೆ  ಪಿರಿಯಡ್ ಮೇಲೆ ರೈತರು  2022-2023 ಆಯ್ಕೆ ಮಾಡಿಕೊಳ್ಳಬೇಕು. ಇಯರ್ ನಲ್ಲಿ  2022-2023 ಆಯ್ಕೆ ಮಾಡಿಕೊಳ್ಳಬೇಕು. ನಂತರ Fetch details ಮೇಲೆ ಕ್ಲಿಕ್ ಮಾಡಬೇಕು.

ಇದನ್ನೂ ಓದಿ : ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೇ? ಇಲ್ಲೇ ಚೆಕ್ ಮಾಡಿ

ಆಗ ನೀವು ನಮೂದಿಸಿದ ಸರ್ವೆ ನಂಬರಿನಲ್ಲಿ ಯಾವ ಯಾವ ರೈತರು ಬರುತ್ತಾರೆ. ಅ ಜಮೀನಿನ ಮಾಲಿಕರ ಹೆಸರುಹಾಗೂ ಅವರ ಹೆಸರಿಗೆ ಎಷ್ಟು ಎಕರೆ ಜಮೀನಿದೆ ಹಾಗೂ ಅವರ ಜಮೀನಿನ ಖಾತಾ ನಂಬರ್ ಕಾಣಿಸುತ್ತದ. ಅದರ ಮುಂದುಗಡೆ ಕಾಣಿಸುವ View ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ.

ಅಲ್ಲಿ ಸರ್ವೆ ನಂಬರ್ ಹಾಗೂ  ಆ ಸರ್ವೆ ನಂಬರ್ ಅಡಿಯಲ್ಲಿ ಒಟ್ಟು ಎಷ್ಟು ಎಕರೆ ಜಮೀನಿದೆ? ಎಂಬ ಮಾಹಿತಿಯೊಂದಿಗೆ ಜಮೀನು ಸ್ವಾಧೀನದಾರ ಹೆಸರು ಹಾಗೂ ತಂದೆಯ ಹೆಸರು ಮತ್ತು ಅವರ ಹೆಸರಿಗಿರುವ ಜಮೀನು ಮತ್ತು ಖಾತಾ ನಂಬರ್ ನೊಂದಿಗೆ ಅವರ ಹೆಸರಿಗೆ ಜಮೀನು ಯಾವಾಗ ವರ್ಗಾವಣೆಯಾಗಿದೆ ಎಂಬ ಮಾಹಿತಿ ಕಾಣಿಸುತ್ತದೆ. ಅದರ ಮುಂದುಗಡೆ ಜಮೀನಿನ ಮಾಲಿಕರು  ಯಾವ ಬ್ಯಾಂಕಿನಿಂದ ಎಷ್ಟು ಸಾಲ ಪಡೆದಿದ್ದಾರೆ ಹಾಗೂ ಯಾವಾಗಾ ಸಾಲ ಪಡೆದಿದ್ದಾರೆ ಎಂಬ ಮಾಹಿತಿ ಕಾಣಿಸುತ್ತದೆ.

ನೀವು ಒಂದು ವೇಳೆ ಸಾಲ ಮರುಪಾವತಿಸಿದ್ದರೂ ಇನ್ನೂಜಮೀನಿನ ಪಹಣಿಯಲ್ಲಿ ಸಾಲ ತೋರಿಸುತ್ತಿದ್ದರೆ, ಕೂಡಲೇ ನೀವು ಯಾವ ಬ್ಯಾಂಕಿನಿಂದ ಸಾಲ ಪಡೆದಿದ್ದೀರೋ ಆ ಬ್ಯಾಂಕಿಗೆ ಹೋಗಿ ಈ ಕುರಿತು ಬ್ಯಾಂಕ್ ಮ್ಯಾನೇಜರ್ ಗೆ ತಿಳಿಸಬೇಕು. ಆಗ ಬ್ಯಾಂಕಿನ ಮ್ಯಾನೇಜರ್  ಪಹಣಿಯಲ್ಲಿ ಕಾಣಿಸುವ ಸಾಲ ತೆಗೆದುಹಾಕುತ್ತಾರೆ.

ಇದನ್ನೂ ಓದಿ : ನೀವು ನಿಂತಿರುವ ಜಮೀನು ಯಾರ ಹೆಸರಿಗಿದೆ? ಸರ್ವೆ ನಂಬರ್ ಏನಿದೆ? ಮೊಬೈಲ್ ನಲ್ಲೇ ಚೆಕ್ ಮಾಡಿ

ನೀವು ಮುಂಗಾರು ಹಂಗಾಮಿಗೆ ಯಾವ ಯಾವ ಬೆಳೆ ಹಾಕಿದ್ದೀರೆ ಎಂಬ ಮಾಹಿತಿಯೂ ಲಭ್ಯವಾಗಿರುತ್ತದೆ. ರೈತರು ತಮ್ಮ ಪಹಣಿಯಲ್ಲಿ ಸಾಲ ಮರುಪಾವತಿಸಿದ್ದರೂ ತೋರಿಸುತ್ತಿದ್ದರೆ ಅದನ್ನು ಸರಿಪಡಿಸಬೇಕು. ಇಲ್ಲದಿದ್ದರೆ ಮುಂದೆ ನಿಮಗೆ ಬೆಳೆಸಾಲ ಸಿಗುವುದು ಕಷ್ಟವಾಗುತ್ತದೆ. ಜಮೀನು ಮಾರಾಟ ಮಾಡುವಾಗಲೂ ಸಮಸ್ಯೆಯಾಗುತ್ತದೆ.

Leave a Comment