ಪತದಾರರ ಪಟ್ಟಿಯಲ್ಲಿ  ತಮ್ಮ ಹೆಸರು ಇದೆಯೋ ಇಲ್ಲವೋ ಎಂಬುದನ್ನು ಮೊಬೈಲ್ ನಲ್ಲೇ ಚೆಕ್ ಮಾಡಬಹುದು. ಮತದಾರರ ಪಟ್ಟಿಗೆ ಹೆಸರು ಸೇರಿಸಲು ಏಪ್ರೀಲ್ 11ರವರೆಗೆ ಕಾಲಾವಕಾಶವಿದೆ.

ಹೌದು, ಈಗ ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಮುಂದಿನ ತಿಂಗಳು 10 ರಂದು ನಡೆಯಲಿದೆ. ಈಗಾಗಲೇ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು ಅರ್ಜಿ ಸಲ್ಲಿಸಿದ್ದು, ನಿಮ್ಮ ಹೆಸರು ಪಟ್ಟಿಯಲ್ಲಿ ಸೇರ್ಪಡೆಯಾಗಿದೆಯೋ ಇಲ್ಲವೋ ಎಂಬುದನ್ನು ವೋಟರ್ ಲಿಸ್ಟ್ ನಲ್ಲಿ ಚೆಕ್ ಮಾಡಬಹುದು.

ಚುನಾವಣಾ ಆಯೋಗ ಈಗಾಗಲೇ ಮತದಾರ ರಪಟ್ಟಿಯನ್ನು ಸಿದ್ದಪಡಿಸಿದೆ. ಇದರೊಂದಿಗೆ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಸೇಪರ್ಡೆ ಮಾಡಲು ಇನ್ನೂ ಕಾಲವಕಾಶವಿದೆ. 18 ವರ್ಷ ಮೇಲ್ಪಟ್ಟ ಎಲ್ಲರೂ ಮತದಾನ ಮಾಡಲು ಅರ್ಹರಾಗಿರುವುದರಿಂದ ಹೊಸದಾಗಿ ಅರ್ಜಿ ಸಲ್ಲಿಸಿ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡಬಹುದು.

ಈಗಾಗಲೇ ಅರ್ಜಿ ಸಲ್ಲಿಸಿದ್ದರೆ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರಿರುವುದನ್ನು ಪರಿಶೀಲಿಸಬಹುದು. ಅದು ಹೇಗೆ ಅಂದುಕೊಂಡಿದ್ದೀರಾ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

ಮತದಾರರ ಪಟ್ಟಿಯಲ್ಲಿ ಹೆಸರಿರುವುದನ್ನು ಪರಿಶೀಲಿಸುವುದು ಹೇಗೆ?

ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರಿರುವುದನ್ನು ಚೆಕ್ ಮಾಡಲು ಈ

https://electoralsearch.in/

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಒಂದು ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನೀವು ನಿಮ್ಮ ಹೆಸರು ಬರೆಯಬೇಕು. ತಂದೆಯ ಹೆಸರು ಬರೆಯಬೇಕು. ನಂತರ ನಿಮ್ಮ ವಯಸ್ಸು ಹಾಕಬೇಕು. ನಿಮ್ಮ ಹುಟ್ಟಿದ ದಿನ, ತಿಂಗಳು ವರ್ಷ ನೆನಪಿದ್ದರೆ DoB ಆಯ್ಕೆ ಮಾಡಿಕೊಂಡು ನಿಮ್ಮ ಹುಟ್ಟಿದ ದಿನ, ತಿಂಗಳು ಹಾಗೂ ವರ್ಷ ಹಾಕಬೇಕು. ಲಿಂಗ ಆಯ್ಕೆ ಮಾಡಿಕೊಳ್ಳಬೇಕು.

ರಾಜ್ಯ ಜಿಲ್ಲೆ ಆಯ್ಕೆ ಮಾಡಿಕೊಳ್ಳಬೇಕು. ನಂತರ ವಿಧಾನಸಭಾ ಕ್ಷೇತ್ರ ನಿಮ್ಮ ತಾಲೂಕು ಆಯ್ಕೆ ಮಾಡಿಕೊಳ್ಳಬೇಕು. ನಂತರ ಅಲ್ಲಿ ಕಾಣುವ ಕೋಡ್ ಹಾಕಿ ಸರ್ಚ್ ಮೇಲೆ ಕ್ಲಿಕ್ ಮಾಡಬೇಕು. ಮಾಡಬೇಕು.ಆಗ ನಿಮ್ಮ ಹೆಸರು ಮತದಾರರ ಪಟ್ಟಿಯಲ್ಲಿದ್ದರೆ ಅಲ್ಲಿ ನಿಮ್ಮ ಚುನಾವಣಾ ಗುರುತಿನ ಸಂಖ್ಯೆ, ನಿಮ್ಮ ಹೆಸರು, ತಂದೆಯ ಹೆಸರು ಸೇರಿದಂತೆ ಇನ್ನಿತರ ಮಾಹಿತಿ ಕಾಣಿಸುತ್ತದೆ.

ಇದನ್ನೂ ಓದಿ : ನೀವು ನಿಂತಿರುವ ಜಮೀನು ಯಾರ ಹೆಸರಿಗಿದೆ? ಸರ್ವೆ ನಂಬರ್ ಏನಿದೆ? ಮೊಬೈಲ್ ನಲ್ಲೇ ಚೆಕ್ ಮಾಡಿ

ವೀವ್ ಡಿಟೇಲ್ಸ್ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಹೆಸರಿನೊಂದಿಗೆ ಚುನಾವಣಾ ಸಿರಿಯಲ್ ನಂಬರ್ ನೊಂದಿಗೆ ಇನ್ನಿತರ ಮಾಹಿತಿಕಾಣಿಸುತ್ತದೆ.

ಮತದಾರರ ಪಟ್ಟಿಗೆ ಹೆಸರು ಸೇರಿಸಲು ಏಪ್ರೀಲ್ 11 ರವರೆಗೆ ಅವಕಾಶ

ವಿಧಾನಸಭೆ ಚುನಾವಣೆಯಲ್ಲಿ ಮತ ಚಲಾಯಿಸಲು ಮತದಾರರ ಪಟ್ಟಿಗೆ ಏಪ್ರೀಲ್ 11 ರವರೆಗೆ ಹೆಸರು ಸೇರಿಸಲು ಚುನಾವಣಾ ಆಯೋಗ ಅವಕಾಶ ಕಲ್ಪಿಸಿದೆ.

ಮೇ 10 ರಂದು ವಿಧಾನಸಭೆ ಚುನಾವಣೆ ನಡೆಯಲಿದ್ದು, ಮತದಾರರ ಅಂತಿಮ ಪಟ್ಟಿಯೂ ಪ್ರಕಟಗೊಂಡಿದೆ. ಇದೇ ಮೊದಲ ಬಾರಿಗೆ ಏಪ್ರೀಲ್ 1 ರಂದು 10 ವರ್ಷ ತುಂಬುವ ಎಲ್ಲರಿಗೂ ಮತದಾನದ ಹಕ್ಕು ಕಲ್ಪಿಸಲಾಗಿದೆ.

ಬೂತ್ ಮಟ್ಟದಲ್ಲಿರುವ ಮತಗಟ್ಟೆ ಅಧಿಕಾರಿಯನ್ನು ಸಂಪರ್ಕಿಸಿ ಭೌತಿಕವಾಗಿಯೂ ಅರ್ಜಿ ಸಲ್ಲಿಸಬಹುದು. ರಾಷ್ಟ್ರೀಯ  ಮತದಾರರ ಸೇವಾ ಪೋರ್ಟಲ್ ಮೂಲಕ ಮತಪಟ್ಟಿಗೆ ಹೆಸರು ನೋಂದಾಯಿಸಿಕೊಳ್ಳಬಹುದು.ವೋಟರ್ ಹೆಲ್ಪ್ ಲೈನ್ಆ್ಯಪ್, 1950 ಟೋಲ್ ಫ್ರೀ ನಂಬರ್ ಮೂಲಕ ಹೆಸರು ಸೇರಿಸಬುಹುದು. ಹೊಸದಾಗಿ ಹೆಸರು ಸೇರಿಸಲು ನಮೂನೆ 6 ರಲ್ಲಿ ಅರ್ಜಿ ಸಲ್ಲಿಸಬೇಕು.

ಶಾಲಾ ಕಾಲೇಜಿನಲ್ಲಿ ನೀಡಿರುವ ಗುರುತಿನ ಚೀಟಿ, ಜನನ ಪ್ರಮಾಣ ಪತ್ರ, ವಿಳಾಸದ ಪುರಾವೆ ಝರಾಕ್ಸ್, ಪಡಿತರ ಚೀಟಿ, ಡ್ರೈವೆಲ್ ಲೈಸೆಂನ್ಸ್  ಪ್ರತಿಯನ್ನು ತಮ್ಮ ಭಾವಚಿತ್ರದೊಂದಿಗೆ ಸಲ್ಲಿಸಿ ಹೆಸರು ಸೇರ್ಪಡೆ ಮಾಡಬಹುದು.

Leave a Reply

Your email address will not be published. Required fields are marked *