ಪಡಿತರ ರೇಷನ್ ಪಡೆಯಲು ಮೊಬೈಲ್ ನಲ್ಲೇ ಕೆವೈಸಿ ಮಾಡಿ ಇಲ್ಲಿದೆ ಮಾಹಿತಿ

Written by Ramlinganna

Published on:

Annaseve App released : ಅನ್ನಭಾಗ್ಯ ಯೋಜನೆ ಅಡಿಯಲ್ಲಿ ರೇಷನ್ ಪಡೆಯುತ್ತಿರುವ ಬಿಪಿಎಲ್ ಎಪಿಎಲ್ ಕಾರ್ಡ್ ಹೊಂದಿರುವ ಫಲಾನುಭವಿಗಳಿಗೆ ಗುಡ್ ನ್ಯೂಸ್ ಇಲ್ಲಿದೆ.

ಫಲಾನುಭವಿಗಳ ಅನುಕೂಲಕ್ಕಾಗಿ ರಾಜ್ಯ ಸರ್ಕಾರವು ಈಗ ಅನ್ನಸೇವೆ ಎಂಬ ಆ್ಯಪ್ ನ್ನು ಬಿಡುಗಡೆ ಮಾಡಿದೆ.  ಆ್ಯಪ್

ಅನ್ನಭಾಗ್ಯ ಸೇರಿದಂತೆ ವಿವಿಧ ಸಾರ್ವಜನಿಕ ವಿತರಣಾ ಯೋಜನೆಗಳ ಫಲಾನುಭವಿಗಳು ಸ್ವತಃ ಇಕೆವೈಸಿ ಮಾಡಿಕೊಳ್ಳಲು ಅವಕಾಶ ಕಲ್ಪಿಸುವ ಅನ್ನ ಸೇವೆ ಮೊಬೈಲ್ ಆ್ಯಪ್ ರಾಜ್ಯಾದ್ಯಂತ ಲಭ್ಯವಾಗಲಿದೆ.

ರಾಷ್ಟ್ರೀಯ ಮಾಹಿತಿ ಕೇಂದ್ರ ಹಾಗೂ ಇ ಆಡಳಿತ ಇಲಾಖೆ ಸಹಯೋಗದಲ್ಲಿ ಅಭಿವೃದ್ಧಿ ಪಡಿಸಲಾದ ಈ ಮೊಬೈಲ್ ಆ್ಯಪ್ ಅನ್ನು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವ ರಿಜ್ವಾನ್ ಅರ್ಷದ್ ಅಕ್ಟೋಬರ್ 1 ರಂದು ಬಿಡುಗಡೆ ಮಾಡಿದ್ದು, ಮೊದಲ ಹಂತದಲ್ಲಿ ಬೆಂಗಳೂರು ನಗರ,  ಬೆಂಗಳೂರು ಗ್ರಾಮಾಂತರ, ಉಡುಪಿ, ಉತ್ತರ ಕನ್ನಡ, ಬಳ್ಳಾರಿ, ಬೀದರ್ ಮತ್ತು ಕೊಪ್ಪಳ ಸೇರಿದಂತೆ ಎಂಟು ಜಿಲ್ಲೆಗಳಿಗೆ ಪ್ರಾಯೋಗಿಕವಾಗಿ ಆ್ಯಪ್ ಬಳಕೆಗೆ ಲಭ್ಯವಿತ್ತು. ಈಗ ಉಳಿದ ಜಿಲ್ಲೆಗಳ ಫಲಾನುಭವಿಗಳೂ ಸಹ ಈ ಯಾಪ್  ಡೌನ್ಲೋಡ್ ಮಾಡಿಕೊಂಡು ಇಕೆವೈಸಿ ಪೂರ್ಣಗೊಳಿಸಬಹುದು.

ಫಲಾನುಭವಿಗಳು ಗೂಗಲ್ ಪ್ಲೇ ಸ್ಟೋರ್ ನಿಂದ ಅನ್ನ ಸೇವೆ ಆ್ಯಪ್ ಡೌನ್ಲೋಡ್ ಮಾಡಿಕೊಂಡು ಯುಐಡಿಎಐ ಮುಖಚರ್ಯೆ ದೃಢೀಕರಿಸುವ ಮೂಲಕ ಇಕೆವೈಸಿ ಪೂರ್ಣಗೊಳಿಸಬಹುದು ಎಂದು ಆಹಾರ ಇಲಾಖೆ ತಿಳಿಸಿದೆ.

Annaseve App released ಅನ್ನಸೇವೆ ಯಾಪ್ ಆನ್ಲೈನ್ ನಲ್ಲಿ ಇಕೆವೈಸಿ ಮಾಡುವುದು ಹೇಗೆ

ಅನ್ನಸೇವೆ ಆ್ಯಪ್ ಮೊಬೈಲ್ ನಲ್ಲಿ ಇನಸ್ಟಾಲ್ ಮಾಡಲು ಈ

https://play.google.com/store/apps/details?id=in.gov.karnataka.ahara.annaseva&hl=en_IN&pli=1

ಲಿಂಕ್ ಮೇಲ ಕ್ಲಿಕ್ ಮಾಡಬೇಕು ಆಗ ನಿಮಗೆ ಅನ್ನಸೇವೆ ಯಾಪ್ ಕಾಣಿಸುತ್ತದೆ. ಅಲ್ಲಿ ನೀವು Install ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮ್ಮ ಮೊಬೈಲ್ ನಲ್ಲಿ ಅನ್ನ ಸೇವೆ ಆ್ಯಪ್ ಡೌನ್ಲೋಡ್ ಆಗುತ್ತದೆ. ತದನಂತರ ಆ್ಯಪ್ ಓಪನ್ ಮಾಡಬೇಕು. ಮೊದಲು ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ ರೇಷನ್ ಕಾರ್ಡ್ ನಂಬರ್ ನಮೂದಿಸಬೇಕು. ಇದಾದ ನಂತರ ಮೊಬೈಲ್ ನಂಬರ್ ಹಾಕಬೇಕು. ನಂತರ ನಿಮ್ಮ ಮೊಬೈಲಿಗೆ ಓಟಿಪಿ ರುತ್ತದೆ. ಆ ಓಟಿಪಿ ಹಾಕಿದರೆ ಕುಟುಂಬ ಸದಸ್ಯರ ಪಟ್ಟಿ ತೆರೆದುಕೊಳ್ಳುತ್ತದೆ. ಆ ಬಳಿಕ ಯಾರ ಇಕೆವೈಸಿ ಬಾಕಿ ಇದೆಯೋ ಅವರ ಹೆಸರಿ ಮೇಲೆ ಕ್ಲಿಕ್ ಮಾಡಿ ಸಹಾಯಕ ಯಾಪ್ ಗಳ ನೆರವಿನಿಂದ ಪ್ರಕ್ರಿಯೆ ಪೂರ್ಮಗೊಳ್ಳುವುದು.

ನಂತರ ಅಲ್ಲಿ ಕೇಳಲಾದ ಮಾಹಿತಿಗಳನ್ನು ಭರ್ತಿ ಮಾಡಿ ಮೊಬೈಲ್ ನಲ್ಲೇ ಇಕೆವೈಸಿ ಮಾಡಿಕೊಳ್ಳಬೇಕು.

ಒಂದು ವರ್ಷದ ಮೊದಲು ಇಕೆವೈಸಿ ಪ್ರಕ್ರಿಯೆ ಮಾಡಿಸಿದ್ದ ಫಲಾನುಭವಿಗಳೂ ಮತ್ತೊಮ್ಮೆ ಕಡ್ಡಾಯವಾಗೆ ಇಕೆವೈಸಿ ಮಾಡಿಸಬೇಕೆಂದು ಇಲಾಖೆ ತಿಳಿಸಿದ್ದು, ಅಕ್ಟೋಬರ್ 20 ರೊಳಗೆ ಎಲ್ಲಾ ಅರ್ಹರು ಇಕೆವೈಸಿ ಮಾಡಿಸಿಕೊಳ್ಳಬೇಕು ಎಂದು ಸೂಚಿಸಿದೆ.

ಇದನ್ನೂ ಓದಿ ರೈತ ಬಾಂದವರೇ ಕೂಡಲೇ ಈ ಕೆಲಸ ಮಾಡಿ ಪಿಎಂ ಕಿಸಾನ್ ಹಣ ಜಮೆಯಾಗುತ್ತದೆ

ಅನ್ನ ಸೇವೆ ಮೊಬೈಲ್ ಅಪ್ಲಿಕೇಶನ್ ಮೂಲಕ ಫಲಾನುಭವಿಗಳು ಯುಐಡಿಎಐ ಫೇಸ್ ಅಥಂಟಿಕೇಶನ್ ಬಳಸಿಕೊಂಡು ಸ್ವಯಂ ಇ-ಕೆವೈಸಿ ಪೂರ್ಣಗೊಳಿಸಬಹುದು. ಇಲಾಖೆಯ ಆಹಾರ ನಿರೀಕ್ಷಕರು ಹಾಗೂ ನ್ಯಾಯಬೆಲೆ ಅಂಗಡಿಗಳ ಮೂಲಕವೂ ಇ ಕೆವೈಸಿ ಮಾಡಲು ಸೌಲಭ್ಯವನ್ನು ಒದಗಿಸಲಾಗಿದೆ. ರಾಜ್ಯದಲ್ಲಿ ಇವರೆಗೂ ಒಟ್ಟು 3,82,362 ಫಲಾನುಭವಿಗಳು ಒಂದು ಬಾರಿಯೂ ಇಕೆವೈಸಿ ಮಾಡಿರುವುದಿಲ್ಲ. ಇ ಕೆವೈಸಿ ಮಾಡಿಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ರೇಷನ್ ಕಾರ್ಡ್ ನಂಬರ್ ಮತ್ತು ಲಿಂಕ್ ಮಾಡಿರುವ ಮೊಬೈಲ್ ನಂಬರ್ ಇದ್ದರೆ ಸಾಕು, ಇತರೆ ಯಾವುದೇ ದಾಖಲಾತಿಗಳು ಬೇಕಿಲ್ಲ,

ರೇಷನ್ ಕಾರ್ಡ್ ಪಟ್ಟಿಯಲ್ಲಿ ನಿಮ್ಮ ಹೆಸರು ಚೆಕ್ ಮಾಡಿ

ರೇಶನ್ ಕಾರ್ಡ್ ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೋ ಇಲ್ಲವೋ ಎಂಬುದನ್ನು ಸಹ ನೀವು ಚೆಕ್ ಮಾಡಿಕೊಳ್ಳಬಹುದು.

Leave a Comment