ಈ ಜಿಲ್ಲೆಯ ರೈತರಿಗೆ ಬರ ಪರಿಹಾರ 42 ಕೋಟಿ ರೂಪಾಯಿ ಬಿಡುಗಡೆ

Written by Ramlinganna

Published on:

Baraparihara 42 crore released : ಬರಗಾಲದಿಂದ ತತ್ತರಿಸಿರುವ ರೈತರಿಗೆ ಬರ ಪರಿಹಾರ ಮೊದಲ ಕಂತಿನ ಹಣ ಬಿಡುಗಡೆಯಾಗಿದೆ.

ಹೌದು, 1 . 69 ಲಕ್ಷ ರೈತರಿಗೆ 42.49 ಕೋಟಿ ರೂಪಾಯಿ ಬಿಡುಗಡೆಯಾಗಿದೆ.ನಿಮ್ಮ ಖಾತೆಗೆ ಜಮೆಯಾಗಿದೆಯೋ ಇಲ್ಲವೋ ಹಾಗೂ ಎಷ್ಟು ಹಣ ಜಮೆಯಾಗಿದೆ ಎಂಬುದರ ಮಾಹಿತಿ ಇಲ್ಲಿದೆ.

ಪ್ರಸಕ್ತ 2026-27ನೇ ಸಾಲಿನ ಬರ ಪರಿಹಾರ (ಇನ್ಪುಟ್ ಸಬ್ಸಿಡಿ) ವಿತರಣೆಯ 1,69,989 ರೈತರಿಗೆ 42,49,72,500  ರೂಪಾಯಿ ಮೊತ್ತವನ್ನು 22-11-2026 ರಂದು ಡಿಬಿಟಿ ಮೂಲಕ ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಜಮೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಇಕ್ರಂ ಶರೀಫ್ ತಿಳಿಸಿದ್ದಾರೆ.

ಬರ ಪರಿಹಾರ (ಇನ್ಫುಟ್ ಸಬ್ಸಿಡಿ) ವಿತರಣೆಯ ಮೊದಲನೇ ಹಂತದ ಹಸಿರು ಪಟ್ಟಿಯಲ್ಲಿ ಅರ್ಹತೆ ಪಡೆದ ರೈತರ ಪಟ್ಟಿಯಲ್ಲಿ ಎಲ್ಲಾ ಸಂಬಂಧಪಟ್ಟ ತಹಶೀಲ್ದಾರರಿಂದ ಪರಿಶೀಲನೆಗೊಳಪಡಿಸಿ ಅರ್ಹ ರೈತರಿಗೆ ಮೊದಲನೇ ಹಂತದಲ್ಲಿ ತಲಾ 2500 ರೂಪಾಯಿಗಳಂತೆ ಬರ ಪರಿಹಾರ ಮೊತ್ತವನ್ನು ಜಮೆ ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು.

ಇದೀಗ ಸರ್ಕಾರ ಅನುಮೋದನೆ  ನೀಡಿದ್ದರಿಂದ ಹಣವನ್ನು ರೈತರ ಬ್ಯಾಂಕ್ ಕಾತೆಗೆ ಜಮೆ ಮಾಡಲಾಗಿದೆ. ಇನ್ನೂ ಮೊದಲನೇ ಹಂತದಲ್ಲಿ ಪರಿಹಾರ ವಿತರಣೆಗೆ ಬಾಕಿ ಉಳಿದಿರುವ ಇತರೆ ಅರ್ಹ ರೈತರ ಮಾಹಿತಿಯನ್ನು ಎರಡನೇ ಹಂತದಲ್ಲಿ ಪರಿಹಾರ ವಿತರಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇನ್ನೂಯಾರಿಗೆ ಜಮೆಯಾಗಿಲ್ಲವೋ ಅಹ ರೈತರಿಗೆ ಅಗತ್ಯ ಪರಿಶೀಲನೆ ಹಾಗೂ ಸರ್ಕಾರದ ಅನುಮೋದನೆಯ ನಂತರ ಶೀಘ್ರದಲ್ಲಿಯೇ ಬರ ಪರಿಹಾರ ಮೊತ್ತವನ್ನು ಜಮೆ ಮಾಡಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Baraparihara 42 crore released  ಬರ ಪರಿಹಾರ ಹಣ ಜಮೆಯ ಸ್ಟೇಟಸ್ ಚೆಕ್ ಮಾಡುವುದು ಹೇಗೆ ?

ಬರ ಪರಿಹಾರ ಜಮೆಯಾಗಿದೆಯೇ ಎಷ್ಟು ಹಣ ಜಮೆಯಾಗಿದೆ ಎಂಬುದನ್ನು ಚೆಕ್ ಮಾಡಲು ಈ

https://parihara.karnataka.gov.in/service92/

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮಗೆ BHOOMI ONLINE PARIHARA INPUT SUBSIDY PAYMENT DETAILS ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನೀವು ವರ್ಷ ಆಯ್ಕೆ ಮಾಡಿ ಎಂಬುದರಲ್ಲಿ 2026-27 ಆಯ್ಕೆಮಾಡಿಕೊಳ್ಳಬೇಕು. ನಂತರ ಋತು ವಿನಲ್ಲಿ kharif ಆಯ್ಕೆ ಮಾಡಿಕೊಳ್ಳಬೇಕು. ಇದಾದ ನಂತರ ವಿಪತ್ತು ಆಯ್ಕೆ ಮಾಡಿಯಲ್ಲಿ  Drought ಆಯ್ಕೆ ಮಾಡಿಕೊಳ್ಳಬೇಕು. ಇದಾದ ನಂತರ Get Data / ಹುಡುಕು ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ನಿಮಗೆ Aadhaar Number ಆಧಾರ್ ಸಂಖ್ಯೆ, Farmer ID ರೈತರ ಗುರುತಿನ ಸಂಖ್ಯೆ (FID), Mobile Number / ಮೊಬೈಲ್ ಸಂಖ್ಯೆ, Survey Number /ಸರ್ವೆ ನಂಬರ್  ಆಯ್ಕೆಗಳು ಕಾಣಿಸುತ್ತವೆ.

ಇದನ್ನೂ ಓದಿ : ಗಂಗಾ ಕಲ್ಯಾಣ ಯೋಜನೆ ಬೋರ್ವೆಲ್ ಕೊರೆಯಲು 3.50 ಲಕ್ಷ ರೂಪಾಯಿ ಸಬ್ಸಿಡಿ

ಅದರಲ್ಲಿ ನೀವು ಮೊಬೈಲ್ ಸಂಖ್ಯೆ ಮೇಲೆ ಕ್ಲಿಕ್ ಮಾಡಬೇಕು. ನಂತರ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನೀವು ಮೊಬೈಲ್ ನಂಬರ್ ನಮೂದಿಸಬೇಕು ನಂತರ Fetch / ಪಡೆಯಿರಿ. ನಂತರ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ.

ಹಣ ಸಂದಾಯದ ವಿವರಗಳು Payment Details

ಕ್ರಮ ಸಂಖ್ಯೆ, ಜಿಲ್ಲೆಯ ಹೆಸರು, ಬ್ಯಾಂಕಿನ ಹೆಸರು, ಮೊತ್ತ, ಖಾತೆದಾರನ ಹೆಸರು, ಬ್ಯಾಂಕ್ ಅಕೌಂಟ್ ನಂಬರ್, ಹಣ ಸಂದಾಯದ ಸ್ಥಿತಿ, ಸಂದಾಯವಾದ ದಿನಾಂಕ, ಸಂದಾಯ ವಿಪತ್ತಿನ ರೀತಿ, ಸಂದಾಯ ಕಾಲ ವರ್ಷ ಎಲ್ಲವೂ ಮಾಹಿತಿ ಇರುತ್ತದೆ. ಇನ್ನೂ ಜಮೆಯಾಗಿಲ್ಲವಾದರೆ ಅಲ್ಲಿ No Data Found ಎಂಬ ಮಾಹಿತಿ ಕಾಣಿಸುತ್ತದೆ.

ಪರಿಹಾರ ನಮೂದಿಸಿದ ವಿವರಗಳು

ಅಲ್ಲಿ ಕ್ರಮ ಸಂಖ್ಯೆ, ಆಧಾರ್ ನಂಬರ್ ಕೊನೆಯ ನಾಲ್ಕು ನಂಬರ್ ಗಳು, ಜಿಲ್ಲೆ, ತಾಲೂಕು, ಮುಧೋ ನಿಮ್ಮ ಊರು ಕಾಣಿಸುತ್ತದೆ.ಇದಾದ ನಂತರ ನಿಮ್ಮ ಸರ್ವೆ ನಂಬರ್ ಕಾಣಿಸುತ್ತದೆ. ಇದಾದ ನಂತರ ನೀವು ಯಾವ ಬೆಳೆ ಹಾಕಿದ್ದೀರಿ ಎಂಬ ಮಾಹಿತಿ ಕಾಣಿಸುತ್ತದೆ. ಎಷ್ಟು ಎಕೆ ಜಮೀನು ಇದೆ ಎಂಬ ಮಾಹಿತಿ ಕಾಣಿಸುತ್ತದೆ.

Leave a Comment