ಇಂದು ಜಮೆಯಾಯಿತು ಬರ ಪರಿಹಾರ ಮೊದಲ ಕಂತಿನ 2500 ರೂಪಾಯಿ

Written by Ramlinganna

Published on:

Bara parihara credited today : ಬರಗಾಲ ಪರಿಹಾರದ ಮೊದಲ ಕಂತಿನ 2500 ಇಂದು ರೈತರ ಖಾತೆಗೆ ಜಮೆಯಾಯಿತು. ಹೌದು,  ಇಂದು ಕಲಬುರಗಿ ಜಿಲ್ಲೆಯ ರೈತರ ಖಾತೆಗೆ ಬರ ಪರಿಹಾರ ಮೊದಲ ಕಂತಿನ ಹಣ ಜಮೆಯಾಗಿದೆ. ಇನ್ನೊಂದು ಕಂತಿನ ಹಣ 2500 ರೂಪಾಯಿ ಡಿಸೆಂಬರ್ 1 ರೊಳಗಾಗಿ ರೈತರ ಖಾತೆಗೆ ಜಮೆಯಾಗಲಿದೆ.

ನಿಮ್ಮ ಖಾತೆಗೆ ಬರ ಪರಿಹಾರ ಹಣ ಮೊದಲ ಕಂತಿನ 2500 ರೂಪಾಯಿ ಜಮೆಯಾಯಿತೋ ಇಲ್ಲವೋ ಎಂಬುದನ್ನು ಈಗ ಮೊಬೈಲ್ ನಲ್ಲೇ ಚೆಕ್ ಮಾಡಬಹುದು. ಅದು ಹೇಗೆ ಅಂದುಕೊಂಡಿದ್ದೀರಾ.. ಇಲ್ಲಿದೆ ನೋಡಿ ಮಾಹಿತಿ.

Bara parihara credited today  ಸ್ಟೇಟಸ್ ಚೆಕ್ ಮಾಡುವುದು ಹೇಗೆ ?

ಬರ ಪರಿಹಾರ ಜಮೆಯಾಗಿದೆಯೇ ಎಷ್ಟು ಹಣ ಜಮೆಯಾಗಿದೆ ಎಂಬುದನ್ನು ಚೆಕ್ ಮಾಡಲು ಈ

https://parihara.karnataka.gov.in/service92/

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮಗೆ BHOOMI ONLINE PARIHARA INPUT SUBSIDY PAYMENT DETAILS ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನೀವು ವರ್ಷ ಆಯ್ಕೆ ಮಾಡಿ ಎಂಬುದರಲ್ಲಿ 2026-27 ಆಯ್ಕೆಮಾಡಿಕೊಳ್ಳಬೇಕು. ನಂತರ ಋತು ವಿನಲ್ಲಿ kharif ಆಯ್ಕೆ ಮಾಡಿಕೊಳ್ಳಬೇಕು. ಇದಾದ ನಂತರ ವಿಪತ್ತು ಆಯ್ಕೆ ಮಾಡಿಯಲ್ಲಿ  Drought ಆಯ್ಕೆ ಮಾಡಿಕೊಳ್ಳಬೇಕು. ಇದಾದ ನಂತರ Get Data / ಹುಡುಕು ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ನಿಮಗೆ Aadhaar Number ಆಧಾರ್ ಸಂಖ್ಯೆ, Farmer ID ರೈತರ ಗುರುತಿನ ಸಂಖ್ಯೆ (FID), Mobile Number / ಮೊಬೈಲ್ ಸಂಖ್ಯೆ, Survey Number /ಸರ್ವೆ ನಂಬರ್  ಆಯ್ಕೆಗಳು ಕಾಣಿಸುತ್ತವೆ. ಅದರಲ್ಲಿ ನೀವು ಮೊಬೈಲ್ ಸಂಖ್ಯೆ ಮೇಲೆ ಕ್ಲಿಕ್ ಮಾಡಬೇಕು. ನಂತರ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನೀವು ಮೊಬೈಲ್ ನಂಬರ್ ನಮೂದಿಸಬೇಕು ನಂತರ Fetch / ಪಡೆಯಿರಿ. ನಂತರ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ.

Bara parihara payment status  ಹಣ ಸಂದಾಯದ ವಿವರಗಳು Payment Details

ಕ್ರಮ ಸಂಖ್ಯೆ, ಜಿಲ್ಲೆಯ ಹೆಸರು, ಬ್ಯಾಂಕಿನ ಹೆಸರು, ಮೊತ್ತ, ಖಾತೆದಾರನ ಹೆಸರು, ಬ್ಯಾಂಕ್ ಅಕೌಂಟ್ ನಂಬರ್, ಹಣ ಸಂದಾಯದ ಸ್ಥಿತಿ, ಸಂದಾಯವಾದ ದಿನಾಂಕ, ಸಂದಾಯ ವಿಪತ್ತಿನ ರೀತಿ, ಸಂದಾಯ ಕಾಲ ವರ್ಷ ಎಲ್ಲವೂ ಮಾಹಿತಿ ಇರುತ್ತದೆ. ಇನ್ನೂ ಜಮೆಯಾಗಿಲ್ಲವಾದರೆ ಅಲ್ಲಿ No Data Found ಎಂಬ ಮಾಹಿತಿ ಕಾಣಿಸುತ್ತದೆ.

ಪರಿಹಾರ ನಮೂದಿಸಿದ ವಿವರಗಳು

ಅಲ್ಲಿ ಕ್ರಮ ಸಂಖ್ಯೆ, ಆಧಾರ್ ನಂಬರ್ ಕೊನೆಯ ನಾಲ್ಕು ನಂಬರ್ ಗಳು, ಜಿಲ್ಲೆ, ತಾಲೂಕು, ಮುಧೋ ನಿಮ್ಮ ಊರು ಕಾಣಿಸುತ್ತದೆ.ಇದಾದ ನಂತರ ನಿಮ್ಮ ಸರ್ವೆ ನಂಬರ್ ಕಾಣಿಸುತ್ತದೆ. ಇದಾದ ನಂತರ ನೀವು ಯಾವ ಬೆಳೆ ಹಾಕಿದ್ದೀರಿ ಎಂಬ ಮಾಹಿತಿ ಕಾಣಿಸುತ್ತದೆ. ಎಷ್ಟು ಎಕೆ ಜಮೀನು ಇದೆ ಎಂಬ ಮಾಹಿತಿ ಕಾಣಿಸುತ್ತದೆ.

ಡಿಸೆಂಬರ್ 1 ರೊಳಗಾಗಿ 5 ಸಾವಿರ ರೂಪಾಯಿ ಜಮೆ

ಬರಪೀಡಿತ ಪ್ರದೇಶಗಳ ರೈತರ ಖಾತೆಗೆ ತಲಾ 5 ಸಾವಿರ ರೂಪಾಯಿ ಪರಿಹಾರದ ಎರಡೂ ಕಂತುಗಳನ್ನು ಡಿಸೆಂಬರ್ 1 ರೊಳಗಾಗಿ ರೈತರ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ತಿಳಿಸಿದರು.

ಇದನ್ನೂ ಓದಿ ಹಸು ಎಮ್ಮೆ ಸಾಕಾಣಿಕೆಗೆ 1 ಲಕ್ಷ 25 ಸಾವಿರ ಸಬ್ಸಿಡಿ ನೀಡಲು ಅರ್ಜಿ ಆಹ್ವಾನ

ವಿಕಾಸಸೌದದಲ್ಲಿ ಶುಕ್ರವಾರ ಜಿಲ್ಲಾಧಿಕಾರಿಗಳು, ಡಿಡಿಎಲ್ಆರ್ (ಭೂ ದಾಖಲೆಗಳ ಉಪ ನಿರ್ದೇಶಕರು) ಉಪ ವಿಭಾಗಾಧಿಕಾರಿ ಮತ್ತು ಕಂದಾಯ ಇಲಾಖೆ ಹಿರಿಯ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿ ಬಳಿಕ ಮಾತನಾಡಿದ ಅವರು, ಬರ ಪರಿಹಾರವನ್ನು ಎರಡು ಕಂತುಗಳಳಲ್ಲಿ ನೀಡಲು ಸರ್ಕಾರ ನಿರ್ಧರಿಸಿದೆ. ಡಿಸೆಂಬರ್ 1 ರೊಳಗೆ ಎರಡೂ ಕಂತಿನ ಒಟ್ಟು 5 ಸಾವಿರ ರೂಪಾಯಿ ಅನ್ನು ರೈತರ ಖಾತೆಗೆ ವರ್ಗಾಯಸಲಾಗುತ್ತದೆ.

 

Leave a Comment