ಮತದಾರರ ಹೊಸ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೇ ಇಲ್ಲೇ ಚೆಕ್ ಮಾಡಿ

Written by Ramlinganna

Published on:

Voter new list check : ಅಂತಿಮ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರಿದೆಯೋ ಇಲ್ಲವೋ ಎಂಬುದನ್ನು ಈಗ ಮೊಬೈಲ್ ನಲ್ಲೇ ಚೆಕ್ ಮಾಡಬಹುದು.

ತಮಗೆಲ್ಲಾ ಗೊತ್ತಿದ್ದ ಕಳದೆ ಐದು ನಾಲ್ಕು ತಿಂಗಳ ಹಿಂದೆ ಮತದಾರರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್.ಐ.ಆರ್) ಪ್ರಕ್ರಿಯೆ ಅಕ್ಟೋಬರ್ 22 ರಂದು ಅಂತ್ಯಗೊಂಡಿದ್ದು ಮಂಗಳವಾರ ಅಂತಿಮ ಮತದಾರರ ಪಟ್ಟಿ ಪ್ರಕಟವಾಗಿದೆ. ಎಸ್.ಐ.ಆರ್ ವೇಳೆ ಪ್ರಕಟಿಸಿದ್ದ ಕರಡು ಮತದಾರರ ಪಟ್ಟಿ ಸಂಬಂಧ ಸಲ್ಲಿಕೆಯಾಗಿದ್ದ ಆಕ್ಷೇಪಣೆ, ನೋಟಿಸ್ ವಿಲೇವಾರಿ ಅಕ್ಟೋಬರ್ 22 ರಂದು ಪೂರ್ಣಗೊಂಡಿದೆ.

ಈಗ ಅಂತಿಮ ಮತಾದರರ ಪಟ್ಟಿ ಪ್ರಕಟವಾಗಿದೆ. ಹಾಗಾಗಿ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರಿದೆಯೋ ಇಲ್ಲವೋ ಎಂಬುದನ್ನು ಮೊಬೈಲ್ ನಲ್ಲೇ ಚೆಕ್ ಮಾಡಬಹುದು.

Voter new list check ಮತದಾರರ ಪಟ್ಟಿಯಲ್ಲಿ ಹೆಸರು ಚೆಕ್ ಮಾಡುವುದು ಹೇಗೆ ?

ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರಿರುವದನ್ನು ಚೆಕ್ ಮಾಡಲು ಈ

https://ceo.karnataka.gov.in/

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಚುನಾವಣಾ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನೀವು FINAL ELECTORAL ROLL SIR 2026 ಎಂಬ ಮಾಹಿತಿ ಕಾಣಿಸುತ್ತದೆ. ಅದರ ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ಕರ್ನಾಟಕ ರಾಜ್ಯ ಆಯ್ಕೆಯಾಗಿರುತ್ತದೆ. ಅಧರ ಎದುರುಗಡೆ ವರ್ಷ 2026 ಕಾಣಿಸುತ್ತದೆ. ಅದರ ಎದುರುಗಡೆ SIR FINALROLL 2026 ಕಾಣಿಸುತ್ತದೆ. ನಂತರ ನಿಮ್ಮ ಜಿಲ್ಲೆ ಆಯ್ಕೆ ಮಾಡಿಕೊಳ್ಳಬೇಕು. ನಂತರ Assembly Constituency ಕೆಳಗಡೆ ನಿಮ್ಮ ತಾಲೂಕು ಆಯ್ಕೆ ಮಾಡಿಕೊಳ್ಳಬೇಕು. ಆಗ ಚುನಾವಣಾ ಬೂತ್ ಗಳ ಪಟ್ಟಿ ಕಾಣಿಸುತ್ತದೆ. ಅಲ್ಲಿ ನೀವು ಯಾವ ಊರಿಗೆ ಸಂಬಂಧಿಸಿದ್ದೀರೋ ಆ ಬೂತ್ ಆಯ್ಕೆ ಮಾಡಿಕೊಳ್ಳಬೇಕು. ಅಲ್ಲಿ ಮುಂದಿನ ಪೇಜ್ ಮೇಲೆ ಕ್ಲಿಕ್ ಮಾಡುತ್ತಾ ಹೋಗಬೇಕು.

ನಿಮ್ಮ ಊರಿನ ಬೂತ್ ಆಯ್ಕೆ ಮಾಡಿಕೊಳ್ಳಬೇಕು. ನಂತರ ಅಲ್ಲಿ ಕಾಣುವ ಕ್ಯಾಪ್ಚ್ಯಾ ಕೋಡ್ ಬರೆಯಬೇಕು. ನಂತರ ನೀವು ಭಾಷೆ ಆಯ್ಕೆ ಮಾಡಿಕೊಳ್ಳಬಹುದು. ನಂತರ ನೀವು Download Selected PDFs ಮೇಲೆ ಕ್ಲಿಕ್ ಮಾಡಬೇಕು.ಆಗ ನೀವು ಆಯ್ಕೆ ಮಾಡಿದ ಬೂತ್ ನಲ್ಲಿ ಯಾರ ಯಾರ ಹೆಸರಿದೆ ಎಂಬ ಪಟ್ಟಿ ಡೌನ್ಲೋಡ್ ಆಗುತ್ತದೆ.

ಅಲ್ಲಿ ಎಷ್ಟು ಮತದಾರರಿದ್ದಾರೆ. ಪುರುಷರೆಷ್ಟಿದ್ದಾರೆ ಮಹಿಳೆಯರು ಎಷ್ಟಿದ್ದಾರೆ ಎಂಬ ಮಾಹಿತಿ ಕಾಣಿಸುತ್ತದೆ. ಪೋಲಿಂಗ್ ಸ್ಟೇಷನ್ ಫೋಟೋ ಕಾಣಿಸುತ್ತದೆ. ಅದರ ಕೆಳಗಡೆ ಮ್ಯಾಪ್ ಕಾಣಿಸುತ್ತದೆ. ಅದರ ಕೆಳಗಡೆ ಅಕ್ಟೋಬರ್ 1 ರಂತೆ ಮತದಾರರ ಹೆಸರು, ತಂದೆಯ ಹೆಸರು ವಯಸ್ಸು ಕಾಣಿಸುತ್ತದೆ. ಫೋಟೋ ಸಹ ಕಾಣಿಸುತ್ತದೆ. ಹೀಗೆ ನೀವು ನಿಮ್ಮ ಹೆಸರಿದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಿಕೊಳ್ಳಬಹುದು.

ಇದನ್ನೂ ಓದಿ ಪಿಎಂ ಕಿಸಾನ್ ಹಣ ಈ ಪಟ್ಟಿಯಲ್ಲಿರುವ ರೈತರಿಗೆ ಅಕ್ಟೋಬರ್ 30 ರಂದು ಜಮೆ

ಮತದಾರರು ಈಗಲೇ ತಮ್ಮ ಹೆಸರುಗಳನ್ನು ಪರಿಶೀಲಿಸಿಕೊಳ್ಳಬೇಕು. ಚುನಾವಣೆ ಸಂದರ್ಭದಲ್ಲಿ ಚೆಕ್ ಮಾಡುವುದರಿಂದ ಉಪಯೋಗವಿಲ್ಲ. ಈಗ ಚೆಕ್ ಮಾಡಿದ್ದರೆ ಮುಂದೆ ನೀವು ಮತ ಹಾಕುವ ಹಕ್ಕು ಕಳೆದುಕೊಳ್ಳುವ ಸಾಧ್ಯತೆಯಿದೆ. ಹಾಗಾಗಿ ನಿಮ್ಮ ಕುಟುಂಬದಲ್ಲಿ ಯಾರ ಯಾರ ಹೆಸರಿದೆ ಎಂಬುದನ್ನು ಇಲ್ಲೆ ಚೇಕ್ ಮಾಡಿಕೊಳ್ಳಬಹುದು. ಏಕೆಂದರೆ ತಿದ್ದುಪಡಿ ಮಾಡುವುದಾಗಲಿ ಅಂದರೆ ಹೆಸರು ಸ್ಪೆಲಿಂಗ್ ಮಿಸ್ಟೇಕ್ ಆಗಿದ್ದರೆ ವಯಸ್ಸು ಅಥವಾ ತಂದೆ ಪತಿಯ ಹೆಸರು ತಪ್ಪಾಗಿದ್ದರೆ ಸರಿ ಮಾಡಿಕೊಳ್ಳಬಹುದು.

ಮುಂದೆ ಸರ್ಕಾರದ ಸೌಲಭ್ಯ ಪಡೆಯಲು  ಗುರುತಿನ ಚೀಟಿ ಕೇಳುವಾಗ ಹೆಸರು ವ್ಯತ್ಸಾಸವಿದ್ದರೆ ನೀವು ಸರ್ಕಾರದ ಸೌಲಭ್ಯ ಕಳೆದುಕೊಳ್ಳುವ ಸಾಧ್ಯತೆಯಿರುತ್ತದೆ. ನಿಮ್ಮ ಹೆಸರು, ವಯಸ್ಸು, ತಂದೆಯ ಹೆಸರು ಫೋಟೋ ಸೇರಿದಂತೆ ಇನ್ನಿತರ ಮಾಹಿತಿಯನ್ನು ಈಗಲೇ ಪರಿಶೀಲಿಸಿಕೊಳ್ಳಬಹುದು. ಇದೊಂದು ಉಪಯುಕ್ತವಾದ ಮಾಹಿತಿಯಾಗಿದ್ದರಿಂದ ಈಗಲೇ ಚೆಕ್ ಮಾಡಬಹುದು.

Leave a Comment