Ration card ekyc mobile : ಪಡಿತರ ಕಾರ್ಡ್ ದಾರರಿಗೆ ಸಂತಸದ ಸುದ್ದಿ, ಈಗ ರೇಷನ್ ಕಾರ್ಡ್ ಹೊಂದಿರುವವರು ರೇಷನ್ ಅಂಗಡಿಗಳ ಮುಂದೆ ಸರತಿಯಲ್ಲಿ ನಿಲ್ಲಬೇಕಿಲ್ಲ, ಮನೆಯಲ್ಲಿಯೇ ಕುಳಿತು ಅಂದರೆ ತಮ್ಮ ಬಳಿಯಿರುವ ಮೊಬೈಲ್ ನಲ್ಲಿಯೇ ಇಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು. ಹೌದು, ಪಡಿತರ ಚೀಟಿದಾರರೇ ಅನ್ನಸೇವೆ ಆ್ಯಪ್ ಸಹಾಯದಿಂದ ಈಗ ಕೇವಲ ಒಂದೇ ನಿಮಿಷದಲ್ಲಿ ಇಲ್ಲಿ ನೀಡಲಾದ ಮಾಹಿತಿಯಂತೆ ಇಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು.
Ration card ekyc mobile ಅನ್ನಸೇವೆ ಆ್ಯಪ್ ಮೂಲಕ ಇಕೆವೈಸಿ ಮಾಡುವುದು ಹೇಗೆ ?
ಯಾರು ಇನ್ನೂವರೆಗೆ ಇಕೆವೈಸಿ ಮಾಡಿಸಿಲ್ಲವೋ ಅಂತಹವರು ಅನ್ನ ಸೇವೆ ಮೊಬೈಲ್ ಅಪ್ಲಿಕೇಶನ್ ಮೂಲಕ ಖುದ್ದಾಗಿ ಇಕೆವೈಸಿ ಮಾಡಿಸಬಹುದು. ಈ
https://play.google.com/store/apps/details?id=in.gov.karnataka.ahara.annaseva&hl=en_IN&pli=1
ಲಿಂಕ್ ಮೇಲೆ ಕ್ಲಿಕ್ ಮಾಡಿ ಅನ್ನಸೇವೆ ಆ್ಯಪ್ ತಮ್ಮ ಮೊಬೈಲ್ ನಲ್ಲಿ ಇನಸ್ಟಾಲ್ ಮಾಡಿಕೊಳ್ಳಬಹುದು. ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿದ ಅನ್ನಸೇವೆ ಯಾಪ್ ತೆರೆದುಕೊಳ್ಳುತ್ತದೆ. ಅಲ್ಲಿ ನೀವು Install ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮ್ಮ ಮೊಬೈಲ್ ನಲ್ಲಿ ಅನ್ನ ಸೇವೆ ಆ್ಯಪ್ ಡೌನ್ಲೋಡ್ ಆಗುತ್ತದೆ. ತದನಂತರ ಆ್ಯಪ್ ಓಪನ್ ಮಾಡಬೇಕು. ಮೊದಲು ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ ರೇಷನ್ ಕಾರ್ಡ್ ನಂಬರ್ ನಮೂದಿಸಬೇಕು. ಇದಾದ ನಂತರ ಮೊಬೈಲ್ ನಂಬರ್ ಹಾಕಬೇಕು. ನಂತರ ನಿಮ್ಮ ಮೊಬೈಲಿಗೆ ಓಟಿಪಿ ರುತ್ತದೆ. ಆ ಓಟಿಪಿ ಹಾಕಿದರೆ ಕುಟುಂಬ ಸದಸ್ಯರ ಪಟ್ಟಿ ತೆರೆದುಕೊಳ್ಳುತ್ತದೆ. ಆ ಬಳಿಕ ಯಾರ ಇಕೆವೈಸಿ ಬಾಕಿ ಇದೆಯೋ ಅವರ ಹೆಸರಿ ಮೇಲೆ ಕ್ಲಿಕ್ ಮಾಡಿ ಸಹಾಯಕ ಯಾಪ್ ಗಳ ನೆರವಿನಿಂದ ಪ್ರಕ್ರಿಯೆ ಪೂರ್ಮಗೊಳ್ಳುವುದು.
ನಂತರ ಅಲ್ಲಿ ಕೇಳಲಾದ ಮಾಹಿತಿಗಳನ್ನು ಭರ್ತಿ ಮಾಡಿ ಮೊಬೈಲ್ ನಲ್ಲೇ ಇಕೆವೈಸಿ ಮಾಡಿಕೊಳ್ಳಬೇಕು.
ಒಂದು ವರ್ಷದ ಮೊದಲು ಇಕೆವೈಸಿ ಪ್ರಕ್ರಿಯೆ ಮಾಡಿಸಿದ್ದ ಫಲಾನುಭವಿಗಳೂ ಮತ್ತೊಮ್ಮೆ ಕಡ್ಡಾಯವಾಗೆ ಇಕೆವೈಸಿ ಮಾಡಿಸಬೇಕೆಂದು ಇಲಾಖೆ ತಿಳಿಸಿದ್ದು, ಅಕ್ಟೋಬರ್ 20 ರೊಳಗೆ ಎಲ್ಲಾ ಅರ್ಹರು ಇಕೆವೈಸಿ ಮಾಡಿಸಿಕೊಳ್ಳಬೇಕು ಎಂದು ಸೂಚಿಸಿದೆ.
ಇದನ್ನೂ ಓದಿ SSLC ಪರೀಕ್ಷೆಯಲ್ಲಿ ಯಾವ ಪಾಠದಿಂದ ಯಾವ ಪ್ರಶ್ನೆ ಕೇಳಲಾಗುತ್ತದೆ? ಇಲ್ಲಿದೆ ಮಾಹಿತಿ
ಅನ್ನ ಸೇವೆ ಮೊಬೈಲ್ ಅಪ್ಲಿಕೇಶನ್ ಮೂಲಕ ಫಲಾನುಭವಿಗಳು ಯುಐಡಿಎಐ ಫೇಸ್ ಅಥಂಟಿಕೇಶನ್ ಬಳಸಿಕೊಂಡು ಸ್ವಯಂ ಇ-ಕೆವೈಸಿ ಪೂರ್ಣಗೊಳಿಸಬಹುದು. ಇಲಾಖೆಯ ಆಹಾರ ನಿರೀಕ್ಷಕರು ಹಾಗೂ ನ್ಯಾಯಬೆಲೆ ಅಂಗಡಿಗಳ ಮೂಲಕವೂ ಇ ಕೆವೈಸಿ ಮಾಡಲು ಸೌಲಭ್ಯವನ್ನು ಒದಗಿಸಲಾಗಿದೆ. ರಾಜ್ಯದಲ್ಲಿ ಇವರೆಗೂ ಒಟ್ಟು 3,82,362 ಫಲಾನುಭವಿಗಳು ಒಂದು ಬಾರಿಯೂ ಇಕೆವೈಸಿ ಮಾಡಿರುವುದಿಲ್ಲ. ಇ ಕೆವೈಸಿ ಮಾಡಿಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಇಕೆವೈಸಿ ಪ್ರಕ್ರಿಯೆ ನವೆಂಬರ್ 10 ರವರೆಗೆ ಕಾಲಾವಕಾಶ
ಕರ್ನಾಟಕದಲ್ಲಿ ಕೆವೈಸಿ ಆಗುವುದು ಬಾಕಿಯಿರುವ ಹಿನ್ನೆಲೆಯಲ್ಲಿ ಪಡಿತರ ಇಕೆವೈಸಿ ದೃಢೀಕರಿಸುವ ಕೊನೆಯ ದಿನಾಂಕವನ್ನು ನವೆಂಬರ್ 10 ರವರೆಗೆ ವಿಸ್ತರಿಸಿ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಆದೇಶ ಹೊರಡಿಸಿದೆ.
ಫಲಾನುಭವಿಗಳು ನ್ಯಾಯಬೆಲೆ ಅಂಗಡಿಗೆ ತೆರಳಿ ಅಥವಾ ತಾವೇ ಅನ್ನಸೇವೆ ಆ್ಯಪ್ ಮೂಲಕ ಇಕೆವೈಸಿ ಮಾಡಿಸಬಹುದು. ಅಲ್ಲದೆ ಕೆಲಸಕ್ಕೆಂದು ಹೊರ ರಾಜ್ಯಗಳಲ್ಲಿರುವ ಪಡಿತರದಾರರ ಅನುಕೂಲಕ್ಕಾಗಿ ಅನ್ನಸೇವೆ ಆ್ಯಪ್ ಸೇವೆಯನ್ನು ದೇಶಾದ್ಯಂತ ಲಭ್ಯಗೊಳಿಸಲಾಗಿದೆ.
ಪಡಿತರ ಚೀಟಿ ಫಲಾನುಭವಿಗಳು ಇಕೆವೈಸಿ ದೃಢೀಕರಿಸುವ ದಿನಾಂಕವನ್ನು ನವೆಂಬರ್ 10 ರವರೆಗೆ ವಿಸ್ತರಿಸಲಾಗಿದೆ. ಈ ಮೊದಲು ಇಕೆವೈಸಿ ದೃಢೀಕರಿಸಲು ಅಕ್ಟೋಬರ್ 20 ಕೊನೆಯ ದಿನಾಂಕವಾಗಿತ್ತು. ಈಗ ನವೆಂಬರ್ 10 ರವರೆಗೆ ವಿಸ್ತರಿಸಲಾಗಿದೆ.
ರೇಷನ್ ಕಾರ್ಡ್ ನಂಬರ್ ಮತ್ತು ಲಿಂಕ್ ಮಾಡಿರುವ ಮೊಬೈಲ್ ನಂಬರ್ ಇದ್ದರೆ ಸಾಕು, ಇತರೆ ಯಾವುದೇ ದಾಖಲಾತಿಗಳು ಬೇಕಿಲ್ಲ,
ರಾಜ್ಯದಲ್ಲಿ ಒಂದು ವರ್ಷದ ಹಿಂದೆ ಇಕೆವೈಸಿ ಮಾಡಿಸಿದ ಫಲಾನುಭವಿಗಳ ಜತೆಗೆ ಇದುವರೆಗೆ ಒಂದು ಬಾರಿಯೂ ಇಕೆವೈಸಿ ಮಾಡಿಸದ 3,82,362 ಹಾಗೂ ಐದು ವರ್ಷ ಮೇಲ್ಪಟ್ಟು ಇಕೆವೈಸಿ ಮಾಡಿಸಿದ 5427396 ಫಲಾನುಭವಿಗಳು ಇನ್ನೂ ಇಕೆವೈಸಿ ದೃಢೀಕರಿಸಬೇಕಿದೆ. ಹೀಗಾಗಿ ಇಕೆವೈಸಿ ದಿನಾಕಂವನ್ನು ವಿಸ್ತರಿಸಲಾಗಿದೆ.





