Nati koli mari vitarane : ಉಚಿತವಾಗಿ ನಾಟಿ ಕೋಳಿ ಮರಿಗಳನ್ನು ವಿತರಿಸಲು ವಿವಿಧ ಜಿಲ್ಲೆಗಳ ರೈತ ಮಹಿಳೆಯರಿಂದ ಅರ್ಜಿ ಆಹ್ವಾನಿಸಲಾಗಿದೆ.
ಹೌದು, ಕರ್ನಾಟಕ ಸಹಕಾರ ಕುಕ್ಕುಟ ಮಹಾ ಮಂಡಳ ನಿ. ಹಾಗೂ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ವತಿಯಿಂದ 2026-27ನೇ ಸಾಲಿಗೆ ಗ್ರಾಮೀಣ ಭಾಗದ ರೈತ ಮಹಿಳೆಯರಿಗೆ ಐದು ವಾರದ ದೇಶಿ / ನಾಟಿ ಕೋಳಿ ಮರಿಗಳನ್ನು ಉಚಿತವಾಗಿ ವಿತರಿಸುವ ಯೋಜನಾ ಕಾರ್ಯಕ್ರಮವನ್ನು ಜಾರಿಗೊಳಿಸಲಾಗುತ್ತಿದೆ.
ಹಾಸನ ಜಿಲ್ಲೆಯ ಆಲೂರು ತಾಲೂಕಿಗೆ ಒಟ್ಟು 106 ರೈತ ಮಹಿಳಾ ಫಲಾನುಭವಿಗಳಿಗೆ ಗುರಿ ನಿಗದಿಯಾಗಿದೆ. (ಸಾಮಾನ್ಯ ವರ್ಗ 47, ಪರಿಶಿಷ್ಟ ಜಾತಿ 18, ಪರಿಶಿಷ್ಟ ಪಂಗಡ 7, ಹಿಂದುಳಿದ ವರ್ಗ 34. ಆಲೂರು ತಾಲೂಕಿನ ಆಸಕ್ತ ಮತ್ತು ಅರ್ಹ ರೈತ ಮಹಿಳಾ ಅರ್ಜಿದಾರರು ತಾಲೂಕಿನ ಮುಖ್ಯ ಪಶು ವೈದ್ಯಾಧಿಕಾರಿಗಳು (ಆಡಳಿತ) ಪಶು ಆಸ್ಪತ್ರೆ, ಆಲೂರು ಇವರ ಕಚೇರಿಯಿಂದ ಅಕ್ಟೇಬರ್ 24 ರಿಂದ ನಿಗದಿತ ಅರ್ಜಿ ನಮೂನೆಯನ್ನು ಪಡೆದು, ಭರ್ತಿ ಮಾಡಿದ ಅರ್ಜಿಯೊಂದಿಗೆ ಅವಶ್ಯಕ ದಾಖಲಾತಿಗಳನ್ನು ಲಗತ್ತಿಸಿ ನವೆಂಬರ್ 8 ರ ಸಂಜೆ 5 ಗಂಟೆಯೊಳಗೆ ಮುಖ್ಯ ಪಶುವೈದ್ಯಾಧಿಕಾರಿಗಳು (ಆಡಳಿತ) ಪಶು ಆಸ್ಪತ್ರೆ, ಆಲೂರು ಇವರ ಕಚೇರಿಗೆ ಸಲ್ಲಿಸಬೇಕು.
ಕೋಳಿ ಮರಿ ವಿತರಣೆಗೆ ಉಡುಪಿ ಜಿಲ್ಲೆಯಿಂದರೂ ಅರ್ಜಿ ಆಹ್ವಾನ
ಕರ್ನಾಟಕ ಸಹಕಾರ ಕುಕ್ಕುಟ ಮಹಾಂಡಳ ವತಿಯಿಂದ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯು ಉಡುಪಿಯ ತಾಲೂಕಿಗೆ ಒಳಪಟ್ಟಂತೆ ಗುರಿ ನಿಗದಿಪಡಿಸಿದ್ದು, ಪ್ರಸಕ್ತ ಸಾಲಿನಲ್ಲಿ ಉಡುಪಿ ತಾಲೂಕಿನ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ, ಹಿಂದುಲಿದ ವರ್ಗ, ಸಾಮಾನ್ಯ ವರ್ಗದ ಅರ್ಹ ಗ್ರಾಮೀಣ ರೈತ ಮಹಿಳೆಯರಿಗೆ 5 ವಾರದ ದೇಶಿ ನಾಟಿ ಕೋಳಿ ಮರಿಗಳನ್ನು ವಿತರಿಸಿ, ಅವರ ಆದಾಯ ಹೆಚ್ಚಿಸುವ ಯೋಜನೆಗೆ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತ ರೈತ ಮಹಿಳೆಯರು ಅರ್ಜಿ ಸಲ್ಲಿಸಲು ಇದೇ ಅಕ್ಟೋಬರ್ 31 ಕೊನೆಯ ದಿನಾಂಕವಾಗಿದೆ. ಮಾಹಿತಿಗೆ ಸಮೀಪದ ಪಶುವೈದ್ಯ ಸಂಸ್ಥೆ ಅಥವಾ ಉಡುಪಿ ತಾಲೂಕು ಪಶು ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿಗಳನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
Nati koli mari vitarane ಉಚಿತ ಕೋಳಿ ಮರಿ ಪಡೆಯಲು ಅರ್ಜಿ ಆಹ್ವಾನ
ಕರ್ನಾಟಕ ಸಹಕಾರ ಕುಕ್ಕುಟ ಮಹಾಮಂಡಳಿ ನಿಯಮಿತ ಬೆಳಗಾವಿ ವತಿಯಿಂದ 2026-27ನೇ ಸಾಲಿನ ಯೋಜನಾ ಕಾರ್ಯಕ್ರಮದ ಗ್ರಾಮೀಣದ ರೈತರ ಮಹಿಳೆಯರಿಗೆ ಐದು ವಾರದ ದೇಶಿ ನಾಟಿ ಕೋಳಿ ಮರಿಗಳನ್ನು ಉಚಿತವಾಗಿ ವಿತರಿಸುವ ಕಾರ್ಯಕ್ರಮವಿರುತ್ತದೆ.
ಈ ಉಚಿತ ಕೋಳಿ ಮರಿಗಳ ವಿತರಣಾ ಕಾರ್ಯಕ್ರಮಕ್ಕೆ ಮುದ್ದೇಬಿಹಾಳ ತಾಲೂಕನ್ನು ಆಯ್ಕೆ ಮಾಡಲಾಗಿದೆ. ಈ ಮಾರ್ಗಸೂಚಿಯ ಪ್ರಕಾರ ಮುದ್ದೇಬಿಹಾಳ ತಾಲೂಕಿಗೆ 99 ಗ್ರಾಮೀಣ ರೈತ ಮಹಿಳಾ ಫಲಾನುಭವಿಗಳನ್ನು ಆಯ್ಕೆ ಮಾಡಬೇಕಾಗಿರುತ್ತದೆ. ಪ್ರತಿ ಫಲಾನುಭವಿಗೆ ಐದು ವಾರದ 20 ಕೋಳಿ ಮರಿಗಳನ್ನು ವಿತರಿಸಾಗುತ್ತದೆ. ಕೋಳಿ ಮರಿ ಪಡೆಯಲು ಇಚ್ಚಿಸುವವರು ಅಕ್ಟೋಬರ್ 31 ರೊಳಗೆ ಅರ್ಜಿ ಸಲ್ಲಿಸಬೇಕು ಎಂದು ಪಶು ಇಲಾಖೆ ಮುದ್ದೇಬಿಹಾಳದ ವೈದ್ಯಾಧಿಕಾರಿ ಶಿವಾನಂದ ಮೇಟಿ, ಪಶು ವೈದ್ಯರಾದ ಸುರೇಶ ವೈ. ಭಜಂತ್ರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಮುದ್ದೇಬಿಹಾಳ ತಾಲೂಕು ಕಚೇರಿಗೆ ಅಥವಾ ತಮ್ಮ ಹತ್ತಿರದ ಪಶು ವೈದ್ಯಕೀಯ ಸಂಸ್ಥೆಗೆ ಭೇಟಿ ನೀಡಲು ತಿಳಿಸಿದ್ದಾರೆ.
ರೈತ ಮಹಿಳೆಯರಿಗೆ ಪ್ರಶಸ್ತಿ ನೀಡಲು ಅರ್ಜಿ ಆಹ್ವಾನ
ಬಾಗಲಕೋಟೆ ತೋಟೆಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ 2026-27ನೇ ಸಾಲಿನ ತೋಟಗಾರಿಕಾ ಮೇಳವನ್ನು ಡಿಸೆಂಬರ್ 23 ರಿಂದ 25 ರವರೆಗೆ ಹವಾಮಾನ ವೈಪರೀತ್ಯದಲ್ಲಿ ಸುಸ್ಥಿರ ತೋಟಗಾರಿಕೆ ಎಂಬ ಧ್ಯೇಯದೊಂದಿಗೆ ವಿಶ್ವವಿದ್ಯಾಲಯದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ತೋಟಗಾರಿಕೆ ಮೇಳದಲ್ಲಿ ತೋಟಗಾರಿಕೆ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದ ಕೃಷಿಕರಿಗೆ ವಿಶ್ವವಿದ್ಯಾಲಯದ ವತಿಯಿಂದ ಪ್ರತಿಯೊಂದು ಜಿಲ್ಲೆಗೆ ಒಬ್ಬ ಶ್ರೇಷ್ಠ ತೋಟಗಾರಿಕೆ ರೈತ ಅಥವಾ ರೈತ ಮಹಿಳೆಯನ್ನು ಆಯ್ಕೆ ಮಾಡಿ ಪ್ರಶಸ್ತಿ ನೀಡಿ ಸನ್ಮಾನಿಸಲಾಗುವುದು.
ಇದನ್ನೂ ಓದಿ SSLC ಮಾಡಲ್ ಪೇಪರ್ ಉತ್ತರ ಸಹಿತ ಬಿಡುಗಡೆ ಇಲ್ಲಿ ಹೀಗೆ ಡೌನ್ಲೋಡ್ ಮಾಡಿ
ಆದ್ದರಿಂದ ಈ ಪ್ರಶಸ್ತಿಗಾಗಿ ಹಾವೇರಿ ಜಿಲ್ಲೆಯ ರೈತರು ಅಥವಾ ರೈತ ಮಹಿಳೆಯರು ಅರ್ಜಿ ನಮ್ಮೂನೆಯನ್ನು (ಅನುಬಂಧ-1) ದಾನವೀರ ಸಿರಸಂಗಿ ಶ್ರೀ ಲಿಂಗರಾಜ ದೇಸಾಯಿ ತೋಟಗಾರಿಕಾ ಅಭಿಯಾಂತ್ರಿಕ ಮತ್ತು ಆಹಾರ ತಂತ್ರಜ್ಞಾನ ಮಹಾವಿದ್ಯಾಲಯ, ದೇವಿಹೊಸೂರು ಕಚೇರಿಯಲ್ಲಿ ಅಥವಾ ತೋಟಗಾರಿಕ ವಿವಿಯ ವೆಬ್ಸೈಟ್ ಮೂಲಕ ಪಡೆದುಕೊಂಡು ಭರ್ತಿ ಮಾಡಿ ಅರ್ಜಿಗಳನ್ನು ನವೆಂಬರ್ 3 ರೊಳಗೆ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಮೊ. 9480696396, 9740603949 ಗೆ ಸಂಪರ್ಕಿಸಬಹುದು.





