SSLC Model paper released : ಎಸ್ಎಸ್ಎಸ್ಎಲ್ಸಿ ಓದುತ್ತಿರುವ ವಿದ್ಯಾರ್ಥಿಗಳಿಗಿಲ್ಲಿದೆ ಗುಡ್ ನ್ಯೂಸ್. ಹೌದು, ಎಸ್.ಎಸ್.ಎಲ್.ಸಿ ಓದುತ್ತಿರುವ ವಿದ್ಯಾರ್ಥಿಗಳಿಗಾಗಿ ಮಾದರಿ ಪ್ರಶ್ನೆ ಪತ್ರಿಕೆ ಹಾಗೂ ಉತ್ತರಗಳೊಂದಿಗೆ ಬಿಡುಗಡೆಯಾಗಿದೆ.
ವಿದ್ಯಾರ್ಥಿಗಳು ತಮ್ಮ ಮೊಬೈಲ್ ನಲ್ಲಿ ಮಾಡಲ್ ಪೇಪರ್ ಗಳನ್ನು ಡೌನ್ಲೋಡ್ ಮಾಡುವುದು ಹೇಗೆ ಎಂಬುದರ ಮಾಹಿತಿ ಇಲ್ಲಿದೆ.
SSLC Model paper released ಎಸ್.ಎಸ್ಎಲ್.ಸಿ ವಿದ್ಯಾರ್ಥಿಗಳು ಮಾಡಲ್ ಪೇಪರ್ ಡೌನ್ಲೋಡ್ ಮಾಡುವುದು ಹೇಗೆ ?
ಎಸ್.ಎಸ್.ಎಲ್.ಸಿ ಓದುತ್ತಿರುವ ವಿದ್ಯಾರ್ಥಿಗಳು ಮಾಡಲ್ ಪೇಪರ್ ಗಳನ್ನು ಡೌನ್ಲೋಡ್ ಮಾಡಲು ಈ
https://kseeb.karnataka.gov.in/KOSMIG/
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮಗೆ ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಸಂಬಂಧಿಸಿದ ಮಾಹಿತಿ ಪೇಜ್ ತೆರೆದುಕೊಳ್ಳುತ್ತದೆ.
2026-27 ರ ಎಸ್.ಎಸ್.ಎಲ್.ಸಿ ಪರೀಕ್ಷೆಯ ಮಾದರಿ ಪ್ರಶ್ನೆ ಪತ್ರಿಕೆಗಳು ಮತ್ತು ಮಾದರಿ ಉತ್ತರಗಳು ಎಂಬುದ ಮುಂದೆ Click Here ಕಾಣಿಸುತ್ತದೆ. ಅದರ ಮೇಲೆ ಕ್ಲಿಕ್ ಮಾಡಬೇಕು. ನಂತರ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ.
ಕನ್ನಡ, ತೆಲುಗು, ಹಿಂದಿ, ಮರಾಠಿ, ಸೆಕೆಂಡ್ ಲಾಗ್ವೆಂಜ್ ಕನ್ನಡ, ಇಂಗ್ಲೀಷ್, ಧರ್ಡ್ ಲಾಂಗ್ವೆಜ್ ನಲ್ಲಿರುವ ಭಾಷೆಗಳು ಕಾಣಿಸುತ್ತವೆ. ಅದರ ಕೆಳಗಡೆ ಕೋರ್ ಸಬ್ಜೆಕ್ಟ್ ಕಾಣಿಸುತ್ತದೆ. ಅಲ್ಲಿ ಸೈನ್ಸ್, ಸೋಷಿಯಲ್ ಸೈನ್, ಮ್ಯಾಥಾಮೆಟಿಕ್ಸ್ ಭಾಷೆಗಳು ಕಾಣಿಸುತ್ತವೆ. ಅಲ್ಲಿ ನೀವು ಯಾವ ಭಾಷೆಯ ಮಾದರಿ ಪತ್ರಿಕೆ ಡೌನ್ಲೋಡ್ ಮಾಡಬೇಕೆಂದುಕೊಂಡಿದ್ದೀರೋ ಅಲ್ಲಿ ಡೌನ್ಲೋಡ್ ಮಾಡಿಕೊಳ್ಳಬೇಕು.
ಇದನ್ನೂ ಓದಿ : ಮೊಬೈಲ್ ನಲ್ಲಿಯೇ ಜಮೀನಿನ ಪೋಡಿ ನಕ್ಷೆ ಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ
ಉದಾಹರಣೆಗೆ ನೀವು ಇಂಗ್ಲೀಷ್ ಮಾಧ್ಯಮದವರಾಗಿದ್ದರೆ ನಿಮ್ಮ ಕನ್ನಡ ಭಾಷೆ ದ್ವಿತೀಯ ಭಾಷೆಯಾಗಿದ್ದರೆ ಸೆಕೆಂಡ್ ಲಾಂಗ್ವೆಜ್ ಕೆಳಗಡೆಯಿರುವ ಕನ್ನಡ ಭಾಷೆಯ ನಾಲ್ಕು ಮಾದರಿ ಪೇಪರ್ ಗಳು ಕಾಣಿಸುತ್ತವೆ ಅಲ್ಲಿ ನೀವು ಡೌನ್ಲೋಡ್ ಮೇಲೆ ಕ್ಲಿಕ್ ಮಾಡಬೇಕು. ಕೇವಲ ಪ್ರಶ್ನೆಪತ್ರಿಕೆ ಡೌನ್ಲೋಡ್ ಆಗುತ್ತದೆ. ಅದೇ ರೀತಿ ನೀವು ಕೀ ಅನ್ಸರ್ ಕೆಳಗಡೆ ಇರುವ ಡೌನ್ಲೋಡ್ ಮೇಲೆ ಕ್ಲಿಕ್ ಮಾಡಿದರೆ ಸಾಕು ಆಗ ಉತ್ತರ ಸಹಿತ ಮಾದರಿ ಪ್ರಶ್ನೋತ್ತರಗಳ ಪತ್ರಿಕೆ ಡೌನ್ಲೋಡ್ ಆಗುತ್ತದೆ.. ಅಲ್ಲಿ ನಿಮಗೆ ವ್ಯಾಕರಣ ಭಾಗದ ಪ್ರಶ್ನೆಗಳು ಹಾಗೂ ಉತ್ತರ ಒಂದು ವಾಕ್ಯದಲ್ಲಿ ಉತ್ತರಿಸಿರಿ 12 ಪ್ರಶ್ನೆಗಳು ಹಾಗೂ ಉತ್ತರಗಳು, ಅದರೊಂದಿಗೆ ಮೂರು ನಾಲ್ಕು ವಾಕ್ಯದಲ್ಲಿ ಉತ್ತರಿಸಿ, ಸಂದರ್ಭ ಸಹಿತ ಸ್ವಾರಸ್ಯ ವಿವರಿಸಿರಿ, ಇದರೊಂದಿಗೆ ಎಂಟು ಹತ್ತು ವಾಕ್ಯದಲ್ಲಿ ಉತ್ತರಿಸಿ ಮತ್ತು ಭಾವಾರ್ಥ ಅಂದರೆ ಸಾರಾಂಶ ಸಹಿತ ಉತ್ತರ ಡೌನ್ಲೋಡ್ ಆಗುತ್ತದೆ. ಈ ಆಧಾರದ ಮೇಲೆ ನೀವು ಪರೀಕ್ಷೆಗೆ ಪ್ರಿಪೇರ್ ಆಗಿ ಹೆಚ್ಚು ಅಂಕ ಪಡೆಯಬಹುದು.
ಅಲಂಕಾರ, ಗಾದೆ ಮಾತು ಹಾಗೂ ಪ್ರಬಂಧಗಳ ವಿವರಣೆ ಅಂದರೆ ಯಾವ ಭಾಗಕ್ಕೆ ಎಷ್ಟು ಅಂಕಗಳು ಸಿಗುತ್ತವೆ ಎಂಬುದರ ಬಗ್ಗೆ ತಿಳಿಸಲಾಗಿರುತ್ತದೆ.
ನಿಮಗೆ ಬ್ಲೂ ಪ್ರಿಂಟ್ ಬೇಕಾ ? ಇಲ್ಲಿದೆ ಮಾಹಿತಿ
ಎಸ್.ಎಸ್ಎಲ್.ಸಿ ಆಂಗ್ಲಮಾಧ್ಯಮದ ಕನ್ನಡ ದ್ವಿತೀಯ ಭಾಷೆಯಾಗಿ ತೆಗೆದುಕೊಂಡ ವಿದ್ಯಾರ್ಥಿಗಳು ಬ್ಲೂ ಪ್ರಿಂಟ್ ಪಡೆಯಲು ಈ
https://kseeb.karnataka.gov.in/KOSMIG/
ಲಿಂಕ್ ಮೇಲೆ ಕ್ಲಿಕ್ ಮಾಡಿದ ನಂತರ ತೆರೆದುಕೊಳ್ಳುವ ಪೇಜ್ ನಲ್ಲಿ 2026-27ನೇ ಎಸ್.ಎಸ್.ಎಲ್.ಸಿ ಅಂತಿಮ ಪರೀಕ್ಷೆಯ ವಿಷಯವಾರು ನೀಲನಕಾಶೆ ಮುಂದುಗಡೆ Click here ಮೇಲೆ ಕ್ಲಿಕ್ ಮಾಡಬೇಕು. ಆಗ ಎಲ್ಲಾ ವಿಷಯಗಳ ಬ್ಲೂ ಪ್ರಿಂಟ್ ಅಲ್ಲಿ ಕಾಣಿಸುತ್ತದೆ. ನೀವು ಇಂಗ್ಲೀಷ್ ಮೀಡಿಯಂ ವಿದ್ಯಾರ್ಥಿಯಾಗಿದ್ದರೆ ಕ್ರಮ ಸಂಖ್ಯೆ 11 Second Language Kannada 33 K ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮಗೆ ಬ್ಲೂ ಪ್ರಿಂಟ್ ಓಪನ್ ಆಗುತ್ತದೆ. ಆ ಆಧಾರದ ಮೇಲೆ ನೀವು ಓದಿಕೊಳ್ಳಬಹುದು.





