SSLC ಪರೀಕ್ಷೆಯಲ್ಲಿ 100 ಕ್ಕೆ100 ಅಂಕ ಪಡೆದವರ ಉತ್ತರ ಪತ್ರಿಕೆ ಇಲ್ಲಿದೆ

Written by Ramlinganna

Published on:

Out of 100 marks answer paper : ಎಸ್.ಎಸ್.ಎಲ್.ಸಿ ಓದುತ್ತಿರುವ ವಿದ್ಯಾರ್ಥಿಗಳಿಗಿಲ್ಲಿದೆ ಗುಡ್ ನ್ಯೂಸ್. ಅದೇನಪಾ ಅಂದರೆ, ಎಸ್ಎಸ್ಎಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ನೂರಕ್ಕೆ ನೂರು ಅಂಕ ಪಡೆದವರ ಉತ್ತರ ಪತ್ರಿಕೆಗಳನ್ನು ಸಹ ಈಗ ಮೊಬೈಲ್ ನಲ್ಲೇ ನೋಡಬಹುದು. ಅದು ಹೇಗೆ ಅಂದುಕೊಂಡಿದ್ದೀರಾ ಇಲ್ಲಿದೆ ನೋಡಿ ಮಾಹಿತಿ.

ಎಸ್.ಎಸ್.ಎಲ್.ಸಿ ಪರೀಕ್ಷೆಗೆ ನಾಲ್ಕು ತಿಂಗಳು ಮಾತ್ರ ಬಾಕಿ ಉಳಿದಿದೆ. ಎಸ್.ಎಸ್ಎಲ್ಸಿ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳು ಈ ಹಿಂದೆ ವಿದ್ಯಾರ್ಥಿಗಳು 100 ಕ್ಕೆ ನೂರು ಅಂಕಗಳ ಪಡೆಯಲು ಹೇಗೆ ಬರೆದಿದ್ದಾರೆ. ಅಂಕಗಳು ಹೇಗೆ ದೊರೆಯಿವೆ ಎಂಬುದರ ಮಾಹಿತಿಯನ್ನು ಈಗ ಮೊಬೈಲ್ ನಲ್ಲಿ ಪಡೆಯಬಹುದು.

Out of 100 marks answer paper  100 ಕ್ಕೆ ನೂರು ಅಂಕಗಳನ್ನು ಪಡೆದ ಉತ್ತರ ಪತ್ರಿಕೆಗಳನ್ನು ಡೌನ್ಲಡ್ ಮಾಡುವುದು ಹೇಗೆ ?

ನೂರಕ್ಕೆ ನೂರು ಅಂಕಗಳನ್ನು ಪಡೆದ  ಉತ್ತರ ಪತ್ರಿಕೆಗಳನ್ನು ಡೌನ್ಲೋಡ್ ಮಾಡಲು ಈ

https://kseeb.karnataka.gov.in/KOSMIG/

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಎಸ್.ಎಸ್ಎಲ್ಸಿ ಪರೀಕ್ಷೆಗೆ ಸಂಬಂಧಿಸಿದ ಮಾಹಿತಿ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನಿಮಗೆ ಖಾಸಗಿ ಮತ್ತು ಪನರಾವರ್ತಿತ ಅಭ್ಯರ್ಥಿಗಳ ನೋಂದಣಿ ಎಸ್.ಎಸ್.ಎಲ್.ಸಿ ಪರೀಕ್ಷೆ 1, ಎಸ್.ಎಸ್.ಎಲ್ಸಿ ಪರೀಕ್ಷೆ 1ರ ಅಂತಿಮ ವೇಳಾಪಟ್ಟಿ, ಸುತ್ತೋಲೆಗಳು, ಎಸ್.ಎಸ್.ಎಲ್ಸಿ ಪರೀಕ್ಷೆಯ ಬ್ಲೂ ಪ್ರಿಂಟ್, ಮಾದರಿ ಪ್ರಶ್ನೆ ಪತ್ರಿಕೆ ಮಾದರಿ ಉತ್ತರಗಳು ಪಠ್ಯಪುಸ್ತಕ,ಶೇ. 100 ಅಂಕ ಪಡೆದ ಉತ್ತರ ಪತ್ರಿಕೆಗಳು 2025-26  ಪ್ರಶ್ನೆ ಪತ್ರಿಕೆ ಹಾಗೂ ಕೀ ಉತ್ತರಗಳು ಹೀಗೆ ವಿವಿಧ ಆಯ್ಕೆಗಳು ಕಾಣಿಸುತ್ತವೆ. ಅಲ್ಲಿ ನೀವು ಶೇ. 100 ಅಂಕ ಪಡೆದ ಉತ್ತರ ಪತ್ರಿಕೆಗಳು 2025-26 ಮುಂದಿರುವ click here ಮೇಲೆ  ಕ್ಲಿಕ್ ಮಾಡಬೇಕು.

ಅಥವಾ ಈ

https://kseab.karnataka.gov.in/591/centum-papers-2025-26/kn

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು

ಆಗ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನಿಮಗೆ ಫರ್ಸ್ಟ್ ಲಾಂಗ್ವೆಜ್ ಕನ್ನಡ ಇಂಗ್ಲೀಷ್  ಸೆಂಕೆಂಡ್ ಲಾಂಗ್ವೆಜ್ ಇಂಗ್ಲೀಷ್ ಕನ್ನಡ , ಥರ್ಡ್ ಲಾಂಗ್ವೆಜ್ ಹಿಂದಿ, ಮ್ಯಾಥಮೆಟಿಕ್ಸ್, ಸೈನ್ಸ್ ಹಾಗೂ ಸೊಷಿಯಲ್ ಹೀಗೆ ವಿವಿಧ ವಿಷಯಗಳು ಕಾಣಿಸುತ್ತದೆ. ನೀವು ಯಾವ ವಿಷಯ ಡೌನ್ಲೋಡ್ ಮಾಡಬೇಕೆಂದುಕೊಂಡಿದ್ದೀರೋ ಅದರ ಮುಂದಿರುವ  ವಿಷಯದ ಕೋಡ್ ಮೇಲೆ ಕ್ಲಿಕ್ ಮಾಡಬೇಕು. ಆಗ ನೂರಕ್ಕೆ ನೂರು ಅಂಕ ಪಡೆದ ಉತ್ತರ ಪತ್ರಿಕೆ ಕಾಣಿಸುತ್ತದೆ. ನಂತರ ಅದನ್ನು ಡೌನ್ಲೋಡ್ ಮಾಡಬಹುದು. ಡೌನ್ಲೋಡ್ ಮಾಡಿಕೊಂಡ ನಂತರ ನೀವು ಅವರು ಯಾವ ರೀತಿ ಉತ್ತರಗಳನ್ನು ಬರೆದಿದ್ದಾರೆ ಎಂಬುದನ್ನು ನೋಡಿಕೊಂಡು ನೀವು ಸಹಿತ ಹಾಗೆ ಬರೆದು 100ಕ್ಕೆ ನೂರು ಅಂಕಗಳನ್ನು ಪಡೆಯಬಹುದು.

ಎಸ್.ಎಸ್.ಎಲ್.ಸಿ ಪರೀಕ್ಷೆ ಯಾವಾಗ ಪ್ರಾರಂಭವಾಗುತ್ತದೆ ?

ಎಸ್.ಎಸ್.ಎಲ್. ಸಿ ಪರೀಕ್ಷೆ ಮಾರ್ಚ್ ತಿಂಗಳಿಂದ ಆರಂಭವಾಗಲಿದೆ.

ಹೌದು, ಮಾರ್ಚ್ 22 ರಿಂದ ಏಪ್ರೀಲ್ 6 ರವರೆಗೆ ಮೊದಲ ಹಂತದ ಎಸ್.ಎಸ್.ಎಲ್.ಸಿ ಪರೀಕ್ಷೆ ಆರಂಭವಾಗಲಿದೆ. ಎರಡನೇ ಹಂತದ ಪರೀಘೆ ಮೇ 24 ರಿಂದ ಮೇ 31 ರವರೆಗೆ ನಡೆಯಲಿದೆ.

ಇದನ್ನೂ ಓದಿ : ನಿಮ್ಮ ಜಮೀನಿನ ಮೇಲೆ ಬೆಳೆ ಸಾಲವಿದೆಯೇ ? ಮೊಬೈಲ್ ನಲ್ಲಿ ಹೀಗೆ ಚೆಕ್ ಮಾಡಿ

ಮಾರ್ಚ್ 22 ರಂದು ಪ್ರಥಮ ಭಾಷೆ (ಕನ್ನಡ, ತೆಲಗು, ಹಿಂದಿ, ಮರಾಠಿ, ತಮಿಳು, ಇಂಗ್ಲೀಷ್)

ಮಾರ್ಚ್ 25 ರಂದು ವಿಜ್ಞಾನ, ರಾಜ್ಯಶಾಸ್ತ್ರ, ಹಿಂದೂಸ್ತಾನಿ ಸಂಗೀತ ಮತತ್ ಕರ್ನಾಟಕ ಸಂಗೀತ)

ಮಾರ್ಚ್ 27 ರಂದು ದ್ವಿತೀಯ ಭಾಷೆ (ಇಂಗ್ಲೀಷ್ ಕನ್ನಡ)

ಮಾರ್ಚ್ 30 ರಂದು ಗಣಿತ ಸಮಾಜಶಾಸ್ತ್ರ,

ಏಪ್ರೀಲ್ 2 ರಂದು ತೃತೀಯ ಭಾಷೆ, ಹಿಂದಿ, ಕನ್ನಡ, ಉರ್ದು,

ಏಪ್ರೀಲ್ 3 ರಂದು ಜೆಟಿಎಸ್. ವಿಷಯಗಳು

ಏಪ್ರೀಲ್ 5 ರಂದು ಸಮಾಜ ವಿಜ್ಞಾ ಪರೀಕ್ಷೆ ನಡೆಯಲಿದೆ.

Leave a Comment