ಉಚಿತವಾಗಿ 500 ಮೀನು ಮರಿ ವಿತರಣೆ ಬೈಕ್, ನಾಲ್ಕು ಚಕ್ರ ವಾಹನ ಖರೀದಿಗೆ ಸಬ್ಸಿಡಿ

Written by Ramlinganna

Published on:

free fish bike subsidy : ಮೀನುಗಾರಿಕೆ ಇಲಾಖೆಯ ವತಿಯಿಂದ 2026-27ನೇ ಸಾಲಿಗೆ ಒಳನಾಡು ಮೀನುಗಾರಿಕೆ ಅಭಿವೃದ್ಧಿಗೆ ಸಹಾಯ ಯೋಜನೆಯಡಿ ಕೃಷಿ, ಬಾವಿ ಹೊಂಡಗಳನ್ನು ಹೊಂದಿದ ಕೃಷಿಕರಿಗೆ ಉಚಿತವಾಗಿ 500 ಬಿತ್ತನೆ ಮೀನು ಮರಿಗಳನ್ನು ನೀಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 11 ಕೊನೆಯ ದಿನವಾಗಿದೆ.

ಹೆಚ್ಚಿನ ಮಾಹಿತಿಗಾಗಿ ಮೀನುಗಾರಿಕೆ ಸಹಾಯಕ ನಿರ್ದೇಶಕರು ಗದಗ (ಮೊಬೈಲ್ ಸಂಖ್ಯೆ 8073649362) ಹಾಗೂ ಮೀನುಗಾರಿಕೆ ಸಹಾಯಕ ನಿರ್ದೇಶಕರು ಮುಂಡರಗಿ ಮೊಬೈಲ್ ಸಂಖ್ಯೆ 8095792530 ಅವರನ್ನು ಕಚೇರಿಗೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

free fish bike subsidy  ಮೀನುಗಾರಿಕೆ ಇಲಾಖೆಯಿಂದ ದ್ವಿ ಚಕ್ರ, ನಾಲ್ಕು ಚಕ್ರ ವಾಹನ ಖರೀದಿಗೆ ಸಬ್ಸಿಡಿ ನೀಡಲು ಅರ್ಜಿ ಆಹ್ವಾನ

ಯಾದಗಿರಿ: ಜಿಲ್ಲೆಯ ಮೀನುಗಾರಿಕೆ ಇಲಾಖೆ ವತಿಯಿಂದ 2026-27ನೇ ಸಾಲಿನ ಜಿಲ್ಲಾ ವಲಯ ಯೋಜನೆಯಡಿ ವಿವಿಧ ಯೋಜನೆಗಳ ಸೌಲಭ್ಯ ಹಾಗೂ ಸಹಾಯಧನಕ್ಕಾಗಿ ಅರ್ಹ ಫಲಾನುಭವಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಉಚಿತ ಸಲಕರಣೆ ಕಿಟ್‌ ಗಳು: ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪ ಯೋಜನೆಯಡಿ ಉಚಿತ ಸಲಕರಣೆ ಕಿಟ್‌ಗಳ ವಿತರಣೆ. ಮತ್‌ಸ್ಯವಾಹಿನಿ ಯೋಜನೆ: ಮೀನು ಮಾರಾಟಕ್ಕಾಗಿ ದ್ವಿಚಕ್ರ ವಾಹನ ಮತ್ತು ಐಸ್ ಬಾಕ್ಸ್ ಖರೀದಿ ಹಾಗೂ ನಾಲ್ಕು ಚಕ್ರ ವಾಹನ ಖರೀದಿಗೆ ಸಹಾಯಧನ. ಸಮಗ್ರ ಮೀನುಗಾರಿಕೆ ಅಭಿವೃದ್ಧಿ ಕಾರ್ಯಕ್ರಮ: ಮೀನುಗಾರಿಕೆ ಸಲಕರಣೆ ಕಿಟ್‌ಗಳ ವಿತರಣೆ ಮತ್ತು ಮೀನು ಮರಿ ಖರೀದಿಗೆ ಸಹಾಯಧನ. ಇತರ ಸೌಲಭ್ಯಗಳು: ಕೆರೆ ಅಂಚಿನಲ್ಲಿ ಮೀನು ಕೃಷಿ ಕೊಳ ನಿರ್ಮಾಣಕ್ಕೆ ಸಹಾಯಧನ, ಗ್ರಾಮ ಪಂಚಾಯಿತಿ ಕೆರೆಗಳಿಗೆ ಉಚಿತ ಮೀನುಮರಿ ದಾಸ್ತಾನು ಹಾಗೂ ಸೀಗಡಿ ಕೃಷಿ ಕೈಗೊಳ್ಳಲು ಸಹಾಯಧನ ನೀಡಲಾಗುವುದು. ಆಸಕ್ತರು ಆನ್‌ಲೈನ್ ವೆಬ್‌ಸೈಟ್

 https://yadgir.nic.in 

ಮೂಲಕ ‌ ದಿನಾಂಕ: 19-09-2026 ರೊಳಗಾಗಿ ಅರ್ಜಿ ಸಲ್ಲಿಸಬೇಕು.

ಸಂಪರ್ಕಿಸಬೇಕಾದ ಕಚೇರಿಗಳು (ಕಚೇರಿ ವೇಳೆಯಲ್ಲಿ) ಮೀನುಗಾರಿಕೆ ಉಪ ನಿರ್ದೇಶಕರ ಕಚೇರಿ ಕೋಣೆ ಸಂಖ್ಯೆ: ಸಿ-15, ಮೊದಲನೇ ಮಹಡಿ, ಜಿಲ್ಲಾಡಳಿತ ಭವನ, ಯಾದಗಿರಿ (ದೂರವಾಣಿ ಸಂಖ್ಯೆ: 08473-253753). ಮೀನುಗಾರಿಕೆ ಸಹಾಯಕ ನಿರ್ದೇಶಕರ ಕಚೇರಿ: ಕೋಣೆ ಸಂಖ್ಯೆ: ಸಿ-14, ಮೊದಲನೇ ಮಹಡಿ, ಜಿಲ್ಲಾಡಳಿತ ಭವನ, ಯಾದಗಿರಿ. ಮೀನುಗಾರಿಕೆ ಸಹಾಯಕ ನಿರ್ದೇಶಕರ ಕಚೇರಿ: ಲಕ್ಷ್ಮೀನಗರ, ಶಹಾಪುರ, ಮೀನುಗಾರಿಕೆ ಸಹಾಯಕ ನಿರ್ದೇಶಕರ ಕಚೇರಿ: ತಹಸೀಲ್‌ ರೋಡ್, ಲಕ್ಷ್ಮೀ ಗುಡಿ ಹತ್ತಿರ, ಸುರಪುರ.

ಇದನ್ನೂ ಓದಿ ಬೆಳೆ ಹಾನಿ ಪರಿಹಾರ ಎಕರೆಗೆ ಎಷ್ಟು ಜಮೆಯಾಗಲಿದೆ? ಇಲ್ಲಿದೆ ಮಾಹಿತಿ

ಹೆಚ್ಚಿನ ಮಾಹಿತಿಗಾಗಿ ಸಂಬಂಧಪಟ್ಟ ತಾಲೂಕು ಮೀನುಗಾರಿಕೆ ಸಹಾಯಕ ನಿರ್ದೇಶಕರನ್ನು ಸಂಪರ್ಕಿಸಲು ಮೀನುಗಾರಿಕೆ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರೇಷನ್ ಕಾರ್ಡ್ ಪಡಿತರದಾರರು ಕೂಡಲೇ ಇಕೆವೈಸಿ ಮಾಡಿಸಿ ನಿಮ್ಮ ರೇಶನ್ ಕಾರ್ಡ್ ಇಲ್ಲೇ ಚೆಕ್ ಮಾಡಿ

ರಾಜ್ಯದಲ್ಲಿರುವ ಬಿಪಿಎಲ್ ಹಾಗೂ ಎಪಿಎಲ್ ಪಡಿತರ ಕಾರ್ಡ್ ಹೊಂದಿರುವ ಎಲ್ಲರೂ ಕೆವೈಸಿ ಮಾಡಿಸಬೇಕು. ಐದು ವರ್ಷದ ಹಿಂದೆ ಕೆವೈಸಿ ಮಾಡಿರುವ ಸುಮಾರು 2.59 ಕೋಟಿ ಪಡಿತರ ಚೀಟಿಗಳಿದ್ದು ಸೆಪ್ಟೆಂಬರ್ 30 ರೊಳಗೆ ಕೆವೈಸಿ ಮಾಡಲು ಗಡವು ನೀಡಲಾಗಿದೆ. ಉಳಿದವರು ಸಹ ಕಡ್ಡಾಯವಾಗಿ ಕೆವೈಸಿ ಮಾಡಿಸಬೇಕು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ರಿಜ್ವಾನ್ ಆರ್ಷದ್ ತಿಳಿಸಿದರು.

ಅವರು ಉಡುಪಿಯ ಜಿಲ್ಲಾ ಕ್ರೀಡಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,  ರಾಷ್ಟ್ರೀಯ ಆಙಾರ ಭದ್ರತಾ  ಯೋಜನೆಯಡಿ ಕೇಂದ್ರ ಸರ್ಕಾರ 4.01 ಕೋಟಿ ಜನರಿಗೆ ಮಾತ್ರ ಪಡಿತರ ಅನುಮತಿ ನೀಡಿದೆ. ಹೀಗಾಗಿ ಬಾಕಿ ಉಳಿದ ಸುಮಾರು 50 ಲಕ್ಷ ಜನರನ್ನು ಪಡಿತರ ವ್ಯಾಪ್ತಿಗೆ ತರಲು ಕೇಂದ್ರ  ಸರ್ಕಾರದ ಜತೆ ಮಾತುಕತೆ ನಡೆಸಲಾಗುವುದು. ರಾಜ್ಯದ ಏಳು ಕೋಟಿ ಜನಸಂಖ್ಯೆಯಲ್ಲಿ 4.50 ಕೋಟಿ ಜನರು ಮಾನದಂಡಂತೆ ಆಹಾರ ಭದ್ರತೆ ಹೊಂದಲು ಅರ್ಹರಿದ್ದಾರೆ.

Leave a Comment