Belehani parihara estu jame : ಬೆಳೆ ಹಾನಿ ಪರಿಹಾರ ಹೇಗೆ ನಿರ್ಧರಿಸುತ್ತಾರೆ ಎಕರೆಗೆ ಎಷ್ಟು ಬೆಳೆ ಹಾನಿ ಪರಿಹಾರ ಜಮೆ ಮಾಡಲಾಗುತ್ತದೆ. ಕಳೆದ ವರ್ಷದಂತೆ ಈ ವರ್ಷವೂ ಅದೇ ನಿಯಮದಂತೆ ಹಣ ಜಮೆ ಮಾಡಲಾಗುವುದೇ ಅಥವಾ ಹೆಚ್ಚಿನ ಹಣ ಜಮೆ ಮಾಡಲಾಗುವದೇ ಎಂಬುದರ ಮಾಹಿತಿ ಇಲ್ಲಿದೆ.
ಕರ್ನಾಟಕದಲ್ಲಿ ಮಳೆ ಮತ್ತು ಪ್ರವಾಹದಿಂದ ಹಾನಿಗೊಳಗಾದ ಬೆಳೆಗಳಿಗೆ ರಾಜ್ಯ ಸರ್ಕಾರವು ಎನ್.ಡಿ.ಆರ್.ಎಫ್ ಹಾಗೂ ಹೆಚ್ಚುವರಿ ಪರಿಹಾರವನ್ನು ಸೇರಿಸಿ ಪ್ರತಿ ಹೆಕ್ಟೇರಿಗೆ ಪರಿಹಾರ ಜಮೆ ಮಾಡಲಾಗುತ್ತದೆ.
ಎಕರೆಗೆ ಪರಿಹಾರವನ್ನು ಲೆಕ್ಕ ಹಾಕುವುದಾದರೆ 1 ಹೆಕ್ಟೇರಿಗೆ ಸುಮಾರು 2.47 ಎಕರೆ ಜಮೀನಿರುತ್ತದೆ.
Belehani parihara estu jame ಹೆಕ್ಟೇರಿಗೆಷ್ಟು ಬೆಳೆ ಹಾನಿ ಪರಿಹಾರ ಜಮೆ
ಕಳೆದ ಸಲ ಬೆಳೆ ಹಾನಿಯಾದರೆ ರೈತರಿಗೆ ಹೆಕ್ಟೇರಿಗೆನ ಲೆಕ್ಕ ಪ್ರಕಾರ ಹಣ ಜಮೆ ಮಾಡಲಾಗಿತ್ತು. ಹೌದು, ಒಣ ಬೇಸಾಯ ಬೆಳೆಗಳಿಗೆ ಪ್ರತಿ ಹೆಕ್ಟೇರಿಗೆ ಒಟ್ಟು 17000 ರೂಪಾಯಿ ಅಂದರೆ ಎಕರೆಗೆ 6880 ರೂಪಾಯಿ ಜಮೆಯಾಗಿತ್ತು..
ನೀರಾವರಿ ಬೆಳೆಗಳಿಗೆ ಪ್ರತಿ ಹೆಕ್ಟೇರಿಗೆ ಒಟ್ಟು 31000 ರೂಪಾಯಿ ಅಂದರೆ ಎಕರೆಗೆ ಸುಮಾರು 12500 ರೂಪಾಯಿ ಜಮೆಯಾಗಿತ್ತು.
ಅದೇ ರೀತಿ ಬಹುವಾರ್ಷಿಕ ಬೆಳೆಗಳು ಪ್ರತಿ ಹೆಕ್ಟೇರಿಗೆ ಒಟ್ಟು 31000 ರೂಪಾಯಿ ಅಂದರೆ ಎಕರೆಗೆ ಸುಮಾರು 12500 ರೂಪಾಯಿ ಜಮೆ ಮಾಡಲಾಗಿತ್ತು.
ಆದರೆ ಈ ವರ್ಷ ಬರಗಾಲ ಘೋಷಣೆ ಮಾಡಿದೆ. ರಾಜ್ಯದ 101 ತಾಲೂಕುಗಳನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಣೆ ಮಾಡಿದೆ. ಅದರಲ್ಲಿ ಇನ್ನೂ ಕೆಲವು ತಾಲೂಕುಗಳು ಸೇರ್ಪಡೆಯಾಗಿಲ್ಲವೆಂದು ರೈತರು ಹೋರಾಟ ನಡೆಸುತ್ತಿದ್ದಾರೆ. ವಿಶೇಷವಾಗಿ ಕಲಬುರಗಿ ಜಿಲ್ಲೆಯ 7 ಜಿಲ್ಲೆಗಳೂ ಬರಗಾಲ ಪೀಡಿತ ತಾಲೂಕೆಂದು ಘೋಷಿಸಬೇಕೆಂದು ಆಗ್ರಹಿಸಿದ್ದಾರೆ. ಅತೀ ಶೀಘ್ರದಲ್ಲಿ ಈ ಜಿಲ್ಲೆಯ ತಾಲೂಕುಗಳನ್ನು ಬರಗಾಲ ಪ್ರದೇಶವೆಂದು ಘೋಷಣೆ ಮಾಡುವ ಸಾಧ್ಯತೆಯಿದೆ.
ಬರಗಾಲ ಪರಿಹಾರ ಸ್ಟೇಟಸ್ ಚೆಕ್ ಮಾಡುವುದು ಹೇಗೆ ?
ಬರಗಾಲ ಪರಿಹಾರ ಕಳೆದ 2025 ರ ಸಾಲಿನಲ್ಲಿ ಎಷ್ಟು ಜಮೆಯಾಗಿದೆ ಎಂಬುದನ್ನು ಚೆಕ್ ಮಾಡಲು ಈ
ನಿಮಗೆಷ್ಟು ಬೆಳೆ ಹಾನಿ ಜಮೆಯಾಗಿದೆ ಇಲ್ಲಿ ಚೆಕ್ ಮಾಡಿ
ಬೆಳೆ ಹಾನಿ ಪರಿಹಾರ ಸ್ಟೇಟಸ್ ಚೆಕ್ ಮಾಡಲು ಈ
https://parihara.karnataka.gov.in/PariharaPayment/
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ನಂತರ ಪರಿಹಾರ ಪೆಜ್ ತೆರೆದುಕೊಳ್ಳುತ್ತದೆ. ಅಲ್ಲಿ ಪರಿಹಾರ ಹಣ ಸಂದಾಯ ವರದಿ ಕೆಳಗಡೆ Select Calamity Type ನಲ್ಲಿ Flood, ಆಯ್ಕೆ ಮಾಡಿಕೊಳ್ಳಬೇಕು. ನಂತರ Select Year ನಲ್ಲಿ 2025-26 ಆಯ್ಕೆ ಮಾಡಿಕೊಳ್ಳಬೇಕು. ನಂತರ ಆಧಾರ್ ಕಾರ್ಡ್ ನಮೂದಿಸಬೇಕು ಇದಾದ ನಂತರ ಅಲ್ಲಿ ಕಾಣುವ ಕ್ಯಾಪ್ಚ್ಯಾ ಕೋಡ್ ಹಾಕಬೇಕು. ನಂತರ ವಿವರಗಳ್ನು ಪಡೆಯಲು ಮೇಲೆ ಕ್ಲಿಕ್ ಮಾಡಬೇಕು.ನಂತರ ತೆರೆದುಕೊಳ್ಳುವ ಪೇಜ್ ನಲ್ಲಿ ಅಲ್ಲಿ ಕೇಳಲಾದ ಮಾಹಿತಿ ಭರ್ತಿ ಮಾಡಿ ಸ್ಟೇಟಸ್ ತಿಳಿದುಕೊಳ್ಳಬೇಕು.
ಬೆಳೆ ಹಾನಿ ಪರಿಹಾರ ಜಮೆಯಾಗಬೇಕಾದರೆ ಏನು ಮಾಡಬೇಕು
ಬೆಳೆ ಹಾನಿ ಪರಿಹಾರ ಹಣ ಜಮೆಯಾಗಬೇಕಾದರೆ ರೈತರ ಬೆಳೆ ಸಮೀಕ್ಷೆಯಾಗಿರಬೇಕು. ಹೌದು, ನೀವು ನಿಮ್ಮ ಜಮೀನಿನಲ್ಲಿ ಯಾವ ಬೆಳೆ ಹಾಕಿದ್ದೀರಿ ಎಂಬುದರ ಮಾಹಿತಿ ಬೆಳೆ ಸಮೀಕ್ಷೆ ಯಾಪ್ ನಲ್ಲಿ ನಮೂದಾಗಿರಬೇಕು. ಒಂದು ವೇಳೆ ಬೆಳೆ ಸಮೀಕ್ಷೆಯಾಗದಿದ್ದರೆ ಬೆಳೆ ಹಾನಿ ಪರಿಹಾರ ಜಮೆಯಾಗುವ ಸಾಧ್ಯತೆ ಕಡಿಮೆ ಇದೆ.
ಇದನ್ನೂ ಓದಿ ರೈತರೇ ನಿಮ್ಮ ಜಮೀನಿನ ಮುಟೇಶನ್ ಹೀಗೆ ಚೆಕ್ ಮಾಡಿ
ಒಂದು ವೇಳೆ ನೀವು ಬೆಳೆ ವಿಮೆ ಮಾಡಿಸದಿದ್ದರೆ ಕೂಡಲೇ ಬೆಳೆ ವಿಮೆ ಮಾಡಿಸಿಕೊಳ್ಳಿ, ಕೆಲವು ಬೆಳೆಗಳಿಗೆ ಆಗಸ್ಟ್ 31 ರೊಳಗೆ ಬೆಳೆ ವಿಮೆ ಮಾಡಿಸಲು ಅವಕಾಶ ನೀಡಲಾಗಿದೆ. ಇನ್ನೂ ಎರಡೇ ದಿನ ಉಳಿದಿದೆ. ಹಾಗಾಗಿ ರೈತರು ಬೆಳೆ ವಿಮೆ ಮಾಡಿಸಿ ವಿಮಾ ಸೌಲಭ್ಯವನ್ನು ಪಡೆದುಕೊಳ್ಳಬಹುದು.





