ಕುರಿ ಮೇಕೆ ಹೈನುಗಾರಿಕೆ ತರಬೇತಿ ನೀಡಲು ಅರ್ಜಿ ಆಹ್ವಾನ

Written by Ramlinganna

Published on:

Goat sheep training here : ಕುರಿ, ಮೇಕೆ ಸಾಕಾಣಿಕೆಯಲ್ಲಿ ಆಸಕ್ತಿಯಿರುವ ಹಾಗೂ ಹೈನುಗಾರಿಕೆಯಲ್ಲಿ ಆಸಕ್ತಿಯಿರುವ ರೈತರಿಗೆ ತರಬೇತಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ.

ಹೌದು, ಹಾಸನ ಜಿಲ್ಲೆಯ ರೈತರಿಗೆ, ರೈತ ಮಹಿಳೆಯರಿಗೆ, ಹಾಗೂ ಆಸಕ್ತಿಯುಳ್ಳ ಎಲ್ಲರಿಗೂ ಹಾಸನ ಪಶುಪಾಲನಾ ಇಲಾಖೆಯ ಪಶುಪಾಲನಾ ಮತ್ತು ಪಶುವೈದ್ಯಕೀಯ ತರಬೇತಿ ಕೇಂದ್ರದ ವತಿಯಿಂದ ತರಬೇತಿಯನ್ನು ಏರ್ಪಡಿಸಲಾಗಿದೆ ಎಂದು ಪಶುಪಾಲನಾ ಮತ್ತು ಪಶುವೈದ್ಯಕೀಯ ತರಬೇತಿ ಕೇಂದ್ರದ ಉಪ ನಿರ್ದೇಶಕರು ತಿಳಿಸಿದ್ದಾರೆ.

ತರಬೇತಿಯಲ್ಲಿ ಭಾಗವಹಿಸುವ ಶಿಬಿರಾರ್ಥಿಗಳಿಗೆ ಯಾವುದೇ ಪ್ರಯಾಣ ಭತ್ಯೆ  ನೀಡಲಾಗುವುದಿಲ್ಲ.

ಆಸಕ್ತಿಯುಳ್ಳವರು ಆಧಾರ್ ಕಾರ್ಡ್, ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಕ್ಕೆ ಸೇರಿದವರು ಜಾತಿ ಪ್ರಮಾಣ ಪತ್ರ ಝರಾಕ್ಸ್ ಪ್ರತಿ ಹಾಗೂ ಎರಡು ಭಾವಚಿತ್ರದೊಂದಿಗೆ ತರಬೇತಿ ಪ್ರಾರಂಭವಾಗುವ ದಿನಾಂಕದಂದು ಬೆಳಗ್ಗೆ 10.30 ಗಂಟೆಯೊಳಗೆ ಉಪ ನಿರ್ದೇಶಕರ ಕಚೇರಿ, ಹಾಸನ ಪಶುಪಾಲನಾ ಮತ್ತು ಪಶುವೈದ್ಯಕೀಯ ತರಬೇತಿ ಕೇಂದ್ರ ಬಿ.ಎಂ. ರಸ್ತೆ ಸಂತೇಪೇಟೆಯಲ್ಲಿ ಹಾಜರಾಗಬೇಕೆಂದು ಸೂಚಿಸಿದ್ದಾರೆ.

Goat sheep training here  ತರಬೇತಿ ದಿನಾಂಕಗಳ ಮಾಹಿತಿ

ರೈತರಿಗೆ ಆಧುನಿಕ ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿ ಜೂನ್ 2 ಹಾಗೂ ಜೂನ್ 3 ರಂದು ರೈತರಿಗೆ ಆಧುನಿಕ ಹೈನುಗಾರಿಕೆ ಸಾಕಾಣಿಕೆ ತರಬೇತಿ ಜೂನ್ 4 ಮತ್ತು 5 ರಂದು ನಡೆಯಲಿದೆ.

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08172 235226 ಗೆ ಸಂಪರ್ಕಿಸಲು ಕೋರಲಾಗಿದೆ.

ಕಾರ್ಮಿಕರ ಕಿಟ್ ವಿತರಣೆಗೆ ಅರ್ಜಿ ಆಹ್ವಾನ

ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ಹುಕ್ಕೇರಿ ತಾಲೂಕಿನ ನೋಂದಾಯಿತ ಅರ್ಹ ಕಾರ್ಮಿಕರಿಗೆ ಮೇಸನ್ (ಗೌಂಡಿ) ಇಲೆಕ್ಟ್ರಿಶಿಯನ್, ವೆಲ್ಡರ್, ಕಾರ್ಪೆಂಟರ್, ಪೇಂಟರ್ ಮತ್ತು ಪ್ಲಂಬರ್ ವೃತ್ತಿಯ ಸುರಕ್ಷತಾ ಕಿಟ್ ವಿತರಿಸಲು ಅರ್ಜಿ ಆಹ್ವಾನಿಸಲಾಗಿದೆ.

ಕಿಟ್ ಗಳನ್ನು ಪಡೆಯಲು 15 ದಿನದೊಳಗೆ ಅರ್ಜಿ ಸಲ್ಲಿಸಬೇಕು. ನಂತರ ಬರುವ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ. ತಪ್ಪು ಮಾಹಿತಿ ನೀಡಿ ಕಿಟ್ ಪಡೆದಿದ್ದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು. ಅರ್ಹ ಕಟ್ಟಡ ಕಾರ್ಮಿಕರು ಈ ಯೋಜನೆಯ ಸದುಪಯೋಗ ಪಡೆಯುವಂತೆ ಉಪವಿಭಾಗ-1 ಕಾರ್ಮಿಕ ಅಧಿಕಾರಿ ಮಲ್ಲಿಕಾರ್ಜುನ ಜೋಗೂರ ಹಾಗೂ ಹುಕ್ಕೇರಿ ವೃತ್ತ ಕಾರ್ಮಿಕ ನಿರೀಕ್ಷಕ ಮಹಾಂತೇಶ ಹಿರೇಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಖಾಲಿಯಿರುವ ವಿವಿಧ ಹುದ್ದೆಗಳ ಭರ್ತಿಗೆ ಇಂದಿನಿಂದ ನೇರ ಸಂದರ್ಶನ

ಚಿತ್ರದುರ್ಗ ರಾಜ್ಯದ ವಿವಿಧ ಕಾರಾಗೃಹಗಳಲ್ಲಿ ಖಾಲಿಯಿರುವ ಹುದ್ದೆಗಳಿಗೆ ಮಾಜಿ ಸೈನಿಕರನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ಮೇ 29 ರಿಂದ ಜೂನ್ 6 ರವರೆಗೆ ನೇರ ಸಂದರ್ಶನ ಹಮ್ಮಿಕೊಳ್ಳಲಾಗಿದೆ.

ಇದನ್ನೂ ಓದಿ ನಿಮ್ಮೂರಿನಲ್ಲಿ ಇಂದು ಮಳೆಯಾಗುವುದೇ? ಈ ವರುಣಮಿತ್ರ ನಂಬರಿಗೆ ಕರೆ ಮಾಡಿ

ಕಾರಾಗೃಹ ಮತ್ತು ಸುಧಾರಣಾ ಸೇವಾ ಇಲಾಖೆಯ ವತಿಯಿಂದ ನಡೆಯುವ ಈ ಸಂದರ್ಶನವು ನಿಗದಿಪಡಿಸಿದ ದಿನಾಂಕಗಳಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಬೆಂಗಳೂರಿನ ಗಾಂಧಿ ನಗರದ, ಕಾಳಿದಾಸ ರಸ್ತೆಯಲ್ಲಿರುವ (ಮಹಾ ಬೋಧಿ ಸೊಸೈಟಿ ಪಕ್ಕ, ಪ್ರೀಡಂ ಪಾರ್ಕ್)( ಕರ್ನಾಟಕ ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಅಕಾಡೆಮಿಯಲ್ಲಿ ನಡೆಯಲಿದೆ.

ಆಸಕ್ತ ಮಾಜಿ ಸೈನಿಕರು ತಮ್ಮ ಮಾಜಿ ಸೈನಿಕರ ಗುರುತಿನ ಚೀಟಿ ಹಾಗೂ ಸೇನಾ ಸೇವಾ ನಿವೃತ್ತಿ ಪುಸ್ತಕಗಳೊಂದಿಗೆ ಉಪ ನಿರ್ದೇಶಕರು ಹಾಗೂ ಬಂದೀಖಾನೆಗಳ ಮುಖ್ಯ ಅಧೀಕ್ಷಕರಾದ ಪಿ.ಎಸ್. ರಮೇಶ ಅವರನ್ನು ಸಂಪರ್ಕಿಸಿ ಸಂದರ್ಶನದಲ್ಲಿ ಭಾಗವಹಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 963232496560 ಅಥವಾ 9480806400 ಅನ್ನು ಸಂಪರ್ಕಿಸಬಹುದು ಎಂದು ಶಿವಮೊಗ್ಗ  ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Comment