ಹೈಟೆಕ್ ಹಾರ್ವೆಸ್ಟರ್ ಹಬ್ ಯೋಜನೆಯಡಿ ರೈತರಿಂದ ಅರ್ಜಿ ಆಹ್ವಾನ

Written by Ramlinganna

Published on:

Hitech harvest hub subsidy : 2026-27ನೇ ಸಾಲಿಗೆ ಕೃಷಿ ಇಲಾಖೆಯಿಂದ ಹೈಟೆಕ್ ಹಾರ್ವೆಸ್ಟರ್ ಹಬ್ (ಶುಗರ್ ಕೇನ್ ಹಾರ್ವೆಸ್ಟರ್ ಮತ್ತು ಕಂಬೈನ್ ಹಾರ್ವೆಸ್ಟರ್) ಯೋಜನೆಯಡಿ ಆಸಕ್ತಿಯುಳ್ಳ ರೈತರಿಂದ ಹಾರ್ವೆಸ್ಟರ್ ಹಬ್ ಘಟಕಗಳಿಗೆ ಅರ್ಜಿ ಆಹ್ವಾನಿಸಲಾಗಿದೆ ಎಂದು ಕಲಬುರಗಿ ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.

ಈ ಯೋಜನೆಯಡಿ ಸಾಮಾನ್ಯ ರೈತರಿಗೆ ಗರಿಷ್ಟ ಶೇ 50ರಂತೆ, ಪ.ಜಾ/ಪ.ಪಂ ವರ್ಗದ ರೈತರಿಗೆ ಗರಿಷ್ಠ ಶೇ. 70 ರಷ್ಟು ಹಾಗೂ ಸಂಘ-ಸಂಸ್ಥೆಗಳಿಗೆ (ಚಾಲ್ತಿಯಲ್ಲಿರುವ ಕೃಷಿಯಂತ್ರಧಾರೆ ಕೇಂದ್ರಗಳ ಸೇವಾದಾರ ಸಂಸ್ಥೆ/ ಎಫ್‌ಪಿಓ ಗಳನ್ನೂಳಗೂಂಡಂತೆ) ಶೇ.70 ರಷ್ಟು ಕ್ರೆಡಿಟ್ ಲಿಂಕ್ ಬ್ಯಾಂಕ್ ಎಂಡೆಡ್ ಸಬ್ಸಿಡಿ (Credit Linked Backended Subsidy) ನೀಡಲಾಗುತ್ತದೆ. ಈ ಕೆಳಕಂಡ ವರ್ಗದಡಿ ವೈಯಕ್ತಿಕ ರೈತರಿಂದ ಹಾರ್ವೆಸ್ಟರ್ ಹಬ್ ಘಟಕಗಳ ಅರ್ಜಿ ಸಲ್ಲಿಸಬಹುದಾಗಿದೆ.

ಶುಗರ್ ಕೇನ್ ಹಾರ್ವೆಸ್ಟರ್ ಪರಿಶಿಷ್ಟ ಜಾತಿಯ-1 ಹಾಗೂ ಕಂಬೈನ್ ಹಾರ್ವೆಸ್ಟರ್ ಸಾಮಾನ್ಯ-1 ಹಾಗೂ ಪರಿಶಿಷ್ಟ ಜಾತಿ-1 ಹೈಟೆಕ್ ಹಾರ್ವೆಸ್ಟರ್ ಹಬ್‌ಗಳು ಮಂಜೂರಾಗಿರುತ್ತವೆ. ಅರ್ಹ ರೈತರು ಭರ್ತಿ ಮಾಡಿದ ಅರ್ಜಿಯೊಂದಿಗೆ       ಆಧಾರ್‌ಕಾರ್ಡ್ ಝೆರಾಕ್ಸ್ ಹಾಗೂ ಎಫ್‌ಐಡಿ ನಂಬರ್, ಫೋಟೋ, ಬ್ಯಾಂಕ್ ಪಾಸ್‌ಬುಕ್ ಝೆರಾಕ್ಸ್ , ತಾತ್ವಿಕ ಸಾಲ ಮಂಜೂರಾತಿ ಪತ್ರ (In Principle Loan Sanction Letter) ಹಾಗೂ ರೂ. 100 ರ ಬಾಂಡ ಪೇಪರ ನೋಟರಿ ಮಾಡಿ ಹೈಟೆಕ್ ಹಾರ್ವೆಸ್ಟರ್ ಹಬ್ ಪರಭಾರೆ ಮಾಡುವುದಿಲ್ಲ ಎಂಬ ಮುಚ್ಚಳಿಕೆ ಅರ್ಜಿಯೊಂದಿಗೆ ಸಲ್ಲಿಸಬೇಕು.

Hitech harvest hub subsidy  ಆಸಕ್ತಿಯುಳ್ಳ ರೈತರು ನಿಗದಿತ ನಮೂನೆಯಲ್ಲಿ ಭರ್ತಿ ಮಾಡಿದ ಅರ್ಜಿಯೊಂದಿಗೆ ಅವಶ್ಯಕ ದಾಖಲಾತಿ ಹಾಗೂ ಸಂಬAಧಿಸಿರುವ ಬ್ಯಾಂಕ್‌ದಿAದ ತಾತ್ವಿಕ ಸಾಲಮಂಜೂರಾತಿ ಪತ್ರದೊಂದಿಗೆ (In Principle Loan Sanction Letter) 2026ರ ಜುಲೈ 31ರೊಳಗಾಗಿ ಕಲಬುರಗಿ ಜಂಟಿ ಕೃಷಿ ನಿರ್ದೇಶಕರ ಕಛೇರಿಯಲ್ಲಿ ಅರ್ಜಿ ಸಲ್ಲಿಸಬೇಕು.

ಮತ್ತಿತರ ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ಜಂಟಿ ಕೃಷಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಲು ಕೋರಲಾಗಿದೆ.

ಮೀನು ಮರಿ ಹಾಗೂ ಮೀನುಗಾರಿಕೆ ಸಲಕರಣೆ ವಿತರಣೆಗೆ ಸಹಾಯಧನ ನೀಡಲು ಅರ್ಜಿ ಆಹ್ವಾನ

ಮೀನುಗಾರಿಕೆ ಇಲಾಖೆಯಿಂದ 2026-27ನೇ ಸಾಲಿಗೆ ರಾಜ್ಯ ವಲಯ ಯೋಜನೆಯಡಿ ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ಬಾಕಿ ಉಳಿದ ಗುರಿಗಳಂತೆ ಮೀನು ಕೃಷಿ ಕೊಳಗಳ ನಿರ್ಮಾಣ, ಸರ್ಕಾರಿ ಕೆರೆಗಳಲ್ಲಿ ಬಿತ್ತನೆ ಮಾಡಲು ಖರೀದಿಸಿದ ಮೀನುಮರಿ ಖರೀದಿಗೆ ಸಹಾಯಧನ ನೀಡಲಾಗುವುದು.

ಸರ್ಕಾರಿ ಕೆರೆಗಳನ್ನು ಗುತ್ತಿಗೆ ಟೆಂಡರ್ ನಲ್ಲಿ ಪೆಡದ ಫಲಾನುಭವಿಗಳಿಗೆ ಕೆರೆ ಅಂಚಿನಲ್ಲಿ ಮೀನು ಕೃಷಿ ಕೊಳ ನಿರ್ಮಾಣಕ್ಕಾಗಿ ಸಹಾಯಧನ ನೀಡಲಾಗುವುದು.

ಇದನ್ನೂ ಓದಿ ಯಾವ ಯಾವ ಬೆಳಗೆ ವಿಮೆ ಮಾಡಿಸಲು ಜುಲೈ 31 ಕೊನೆಯ ದಿನ ಇಲ್ಲಿದೆ ಮಾಹಿತಿ

ನದಿ ಭಾಗಗಳಲ್ಲಿ ಮೀನು ಹಿಡಿಯಲು ಮೀನುಗಾರಿಕೆ ಇಲಾಖೆಯಿಂದ ಅಧಿಕೃತ ಪರವಾನಿಗೆ ಪಡೆದ ಫಲಾನುಭವಿಗಳಿಗೆ ಹಾಗೂ ಮೀನುಗಾರರ ಸಹಕಾರ ಸಂಘಗಳ ಸದಸ್ಯರುಗಳಿಗೆ ಮೀನುಗಾರಿಕೆ ಸಲಕರಣೆ ಕಿಟ್ ವಿತರಣೆ ಯೋಜನೆ ಅನುಷ್ಠಾನಗೊಳಿಸಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಸಂಬಂಧಿಸಿದ ತಾಲೂಕು ಮೀನುಗಾರಿಕೆ ಸಹಾಯಕ ನಿರ್ದೇಶಕರು ರಾಯಚೂರು 8050196667 ಹಾಗೂ ಸಿಂಧನೂರು, ಲಿಂಗಸೂಗುರು 9110878145 ಅಥವಾ ಜಿಲ್ಲಾ ಕಚೇರಿಯನ್ನು ಸಂಪರ್ಕಿಸಬಹುದು.

ಕಿಸಾನ್ ಕ್ರೆಡಿಟ್ ಕಾರ್ಡ್ ಗಳ ವಿತರಣೆಗೆ ಅರ್ಜಿ ಆಹ್ವಾನ

ಮೀನುಗಾರಿಕೆ ಇಲಾಖೆಯಿಂದ 2026-27ನೇ ಸಾಲಿಗೆ ರಾಯಚೂರು, ಮಾನ್ವಿ, ದೇವದುರ್ಗ, ಸಿರವಾರ ಹಾಗೂ ಅರಕೇರಾ ತಾಲೂಕು ಸಂಘಗಳ ಸದಸ್ಯರಿಂದ, ವೃತ್ತಿಪರ ಮೀನುಗಾರರಿಂದ ಹಾಗೂ ಆಸಕ್ತ ಮೀನು ಕೃಷಿಕರಿಂದ ಮೀನು ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಲು ಅನುಕೂಲವಾಗುವಂತೆ ಬ್ಯಾಂಕುಗಳ ಮೂಲಕ ಸಾಲದ ಸೌಲಭ್ಯ ಒದಗಿಸಿ, ಮೀನು ಕೃಷಿಕರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ಗಳನ್ನು ವಿತರಿಸಲು ಅರ್ಜಿ ಆಹ್ವಾನಿಸಲಾಗಿದೆ.

ಈ ಯೋಜನೆ ಅಡಿಯಲ್ಲಿ ಸೌಲಭ್ಯ ಪಡೆಯಲು ಆಸಕ್ತ ಮೀನುಗಾರರು ಮೀನು ಕೃಷಿಕರು ಆಗಸ್ಟ್ 14 ರೊಳಗಾಗಿ ಅರ್ಜಿ ಸಲ್ಲಿಸಲು ಕೋರಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ರಾಯಚೂರು ಜಿಲ್ಲೆಯ ಆಯಾ ತಾಲೂಕಿನ ಮೀನುಗಾರಿಕೆ ಇಲಾಖೆಯ ಕಚೇರಿಯನ್ನು ಸಂಪರ್ಕ ಮಾಡಬಹುದಾಗಿದೆ ಎಂದು ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Comment