ಭಾಗ್ಯಲಕ್ಷ್ಮೀ ಹಣ ಜಮೆಯಾಗಬೇಕಾದರೆ ಈ ಕೆಲಸ ಮಾಡಿ

Written by Ramlinganna

Published on:

Bhagya lakshmi bond check : ಕಲಬುರಗಿ ನಗರದ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ ವತಿಯಿಂದ 2006-07, 2007-08, ಹಾಗೂ 2008-09 ನೇ ಸಾಲಿನಲ್ಲಿ ಭಾಗ್ಯಲಕ್ಷ್ಮೀ ಯೋಜನೆಯಡಿ ಸೌಲಭ್ಯವನ್ನು ಪಡೆದು, ಪ್ರಸ್ತುತ 18 ವರ್ಷ ಪೂರ್ಣಗೊಂಡಿರುವ ಫಲಾನುಭವಿಗಳಿಗೆ ಪರಿಪಕ್ವ (ಮೆಚ್ಯುರಿಟಿ) ಮೊತ್ತ ಪಾವತಿಸಲು ಅರ್ಜಿ ಆಹ್ವಾನಿಸಲಾಗಿದೆ ಎಂದು ಕಲಬುರಗಿ ನಗರದ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಹೇಳಿದ್ದಾರೆ

ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಪ್ರಧಾನ ಕಚೇರಿಯ ವೀಡಿಯೋ ಸಂವಾದ ಸಭೆಯ ನಡವಳಿಯ (ದಿನಾಂಕ  04-04-2024) ಆದೇಶದನ್ವಯ, ಫಲಾನುಭವಿಗೆ 18 ವರ್ಷ ಪೂರ್ಣಗೊಂಡ ದಿನದಿಂದ 3 ವರ್ಷಗಳ ಒಳಗಾಗಿ ಕಚೇರಿಯಲ್ಲಿ ಆನ್ಲೈನ್  ಅರ್ಜಿ ನೋಂದಾಯಿಸುವುದು ಕಡ್ಡಾಯವಾಗಿದೆ.

ಒಂದು ವೇಳೆ 3 ವರ್ಷದ ಒಳಗೆ ಫಲಾನುಭವಿಗಳು ಕಚೇರಿಗೆ ಅರ್ಜಿ ನೋಂದಾಯಿಸಿಕೊಳ್ಳದಿದ್ದರೆ ಪರಿಪಕ್ವದ ಮೊತ್ತವನ್ನು ಸರ್ಕಾರಕ್ಕೆ ಜಮೆ ಮಾಡಲಾಗುವುದು.

ಭಾಗ್ಯಲಕ್ಷ್ಮೀ ಯೋಜನೆಯ ಫಲಾನುಭವಿಗಳು ಪರಿಪಕ್ವ ಮೊತ್ತದ ಅರ್ಜಿ ನಮೂನೆ, ಭಾಗ್ಯಲಕ್ಷ್ಮೀ ಮೂಲ ಬಾಂಡ್, ಜನನ ಪ್ರಮಾಣ ಪತ್ರ, ಶಾಲಾ ದಾಖಲಾತಿ, ಪಡಿತರ ಚೀಟಿ, ಬ್ಯಾಂಕ್ ಪಾಸ್ ಬುಕ್, ಫಲಾನುಭವಿ ಪೋಷಕರ ಆಧಾರ್ ಕಾರ್ಡ್ ಹಾಗೂ ಇತರೆ ದಾಖಲಾತಿಗಳೊಂದಿಗೆ ಶಿಶು ಅಭಿವೃದ್ಧಿ ಯೋಜನೆಯ ವ್ಯಾಪ್ತಿಯಲ್ಲಿ ಬರುವ ಅಂಗನವಾಡಿ ಕೇಂದ್ರಗಳಿಗೆ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ ಭೇಟಿ ನಿ ಅರ್ಜಿ ಸಲ್ಲಿಸಲು ಕೋರಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ತಮ್ಮ ಸಮೀಪದ ಅಂಗನವಾಡಿ ಕೇಂದ್ರಗಳು ಅಥವಾ ಕಲಬುರಗಿ ನಗರದ ಹೆಚ್.ಸಿ.ಜಿ ಆಸ್ಪತ್ರೆ ಹತ್ತಿರ, ಲಾಹೋಟಿ ಪೆಟ್ರೋಲ್ ಪಂಪ್ ಎದುರುಗಡೆ, ಖೂಬಾ ಲೇಔಟ್ ನಲ್ಲಿರುವ ಶಿಶು ಅಭಿವೃದ್ಧಿ ಯೋಜನಾಧಿಕರಿಗಳ ಕಚೇರಿಗೆ ಸಂಪರ್ಕಿಸಲು ತಿಳಿಸಿದ್ದಾರೆ.

Bhagya lakshmi bond check ಭಾಗ್ಯಲಕ್ಷ್ಮೀ ಸ್ಟೇಟಸ್ ಮೊಬೈಲ್ ನಲ್ಲೇ ಚೆಕ್ ಮಾಡಿ

ಭಾಗ್ಯಲಕ್ಷ್ಮೀ ಯೋಜನೆ ಅಡಿಯಲ್ಲಿ ನೋಂದಣಿ ಮಾಡಿಸಿದ ಫಲಾನುಭವಿಗಳ 18 ವರ್ಶ ತುಂಬಿದ ಮಗುವಿನ ಖಾತೆಗೆ ಈಗ ಹಣ ಜಮೆಯಾಗುತ್ತಿದೆ. ನಿಮ್ಮ ಮಗಳ ಹೆಸರಿಗೆ ಯಾವಾಗ ಭಾಗ್ಯಲಕ್ಷ್ಮೀ ಯೋಜನೆಗೆ ನೋಂದಣಿ ಮಾಡಿಸಿದ್ದೀರೆ ನಿಮ್ಮ ಮಗಳ ಹೆಸರಿಗೆ ಯಾವಾಗ ಜಮೆಯಾಗಲಿದೆ ಎಷ್ಟು ಜಮೆಯಾಗಬಹುದು ಎಂಬುದನ್ನು ಮೊಬೈಲ್ ನಲ್ಲೇ ಚೆಕ್ ಮಾಡಬಹುದು.

ಏನಿದು ಭಾಗ್ಯಲಕ್ಷ್ಮೀ ಯೋಜನೆ?

ಬಡನತ ರೇಖೆಗಿಂತ ಕೆಳಗಿರುವ ಕುಟುಂಬಗಳಲ್ಲಿ ಹೆಣ್ಣು ಮಗುವಿನ ಜನನ ಉತ್ತೇಜಿ,ಸಲು 2006-07ನೇ ಸಾಲಿನಲ್ಲಿ ಹೆಣ್ಣು ಮಕ್ಕಳ ರಕ್ಷಣೆಗೆ ಭಾಗ್ಯಲಕ್ಷ್ಮೀ ಎಂಬ ಹೊಸ ಯೋಜನೆಯನ್ನು ಜಾರಿಗೆ ತರಲಾಗಿದೆ. ಈ ಯೋಜನೆಯ ಆರ್ಥಿಕ ಸೌಲಭ್ಯವನ್ನು ಹೆಣ್ಣು ಮಗುವಿಗೆ ಅದರ ತಾಯಿ ತಂದೆ ಪೋಷಕರ ಮೂಲಕ ಕೆಲವು ನಿಬಂಧನೆಗಳನ್ನು ಪೂರೈಸಿದಲ್ಲಿ ಹಣ ಜಮೆ ಮಾಡಲಾಗುವುದು.

ಭಾಗ್ಯಲಕ್ಷ್ಮೀ ಯೋಜನೆಗೆ ಯಾರು ಯಾರು ಅರ್ಹತೆ ಪಡೆದಿರುತ್ತಾರೆ?

ಬಡತನ ರೇಖೆಗಿಂತ ಕೆಳಗೆ ಇರುವ ಕುಟುಂಬಗಳಲ್ಲಿ 31-03-2006 ನ ನಂತರ ಜನಿಸಿದ ಹೆಣ್ಣು ಮಕ್ಕಳು ಈ ಯೋಜನೆಯಡಿ ಫಲಾನುಭವಿಯಾಗಿ ನೋಂದಾಯಿಸಿಕೊಳ್ಳಲು ಅರ್ಹರಿರುತ್ತಾರೆ.

ಇದನ್ನೂ ಓದಿ :ಯಾವ ಯಾವ ಬೆಳಗೆ ವಿಮೆ ಮಾಡಿಸಲು ಜುಲೈ 31 ಕೊನೆಯ ದಿನ ಇಲ್ಲಿದೆ ಮಾಹಿತಿ

ಮಗು ಜನಿಸಿದ ಒಂದು ವರ್ಷದೊಳಗೆ ಜನನ ಪ್ರಮಾಣ ಪತ್ರವನ್ನು ಒದಗಿಸಿ ನೋಂದಾಯಿಸಲು ಅವಕಾಶವಿತ್ತು.

ಯೋಜನೆಯ ಸೌಲಭ್ಯಗಳನ್ನು ಬಡತನ ರೇಖೆಗಿಂತ ಕೆಳಗೆ ಇರುವ ಕುಟುಂಬದ ಇಬ್ಬರು ಹೆಣ್ಣುಮಕ್ಕಳಿಗೆ ಸೀಮಿತಗೊಳಿಸಲಾಗಿದೆ.

ಈ ಯೋಜನೆಯ ಅಡಿಯಲ್ಲಿ ನೋಂದಣಿಯಾದ ಮೊದಲನೇ ಹೆಣ್ಣು ಮಗುವಿನ ಹೆಸರಿನಲ್ಲಿ 19300 ಹಾಗೂ ಅದೇ ಕುಟುಂಬದಲ್ಲಿ 2ನೇ ಹೆಣ್ಣು ಮಗವಿನ ಹೆಸರಿನಲ್ಲಿ 18350 ರೂಪಾಯಿಗಳನ್ನು ಠೇವಣಿ ಇಡಲಾಗುತ್ತದೆ. 18 ವರ್ಷ ಪೂಣಗೊಂಡ ನಂತರದಲ್ಲಿ ಹೆಣ್ಣು ಮಕ್ಕಳು 1 ಲಕ್ಷ ರೂಪಾಯಿ ಹಣ ಪಡೆಯಲು ಅರ್ಹರಿರುತ್ತಾರೆ.

Bhagyalakshmi amount status check  ಭಾಗ್ಯಲಕ್ಷ್ಮೀ ಬಾಂಡ್ ಸ್ಟೇಟಸ್ ಚೆಕ್ ಮಾಡುವುದು ಹೇಗೆ?

ಭಾಗ್ಯಲಕ್ಷೀ ಬಾಂಡ್ ಸ್ಟೇಟಸ್ ಚೆಕ್ ಮಾಡಲು ಈ

https://mahitikanaja.karnataka.gov.in/WomenAndChild/Bhagyalakshmi?ServiceId=5673&Type=Table&DepartmentId=3136

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮಗೆ ಭಾಗ್ಯಲಕ್ಷ್ಮೀ ಸ್ಟೇಟಸ್ ಚೆಕ್ ಮಾಡುವ ಪೇಜ್ ತೆರದುಕೊಳ್ಳುತ್ತದೆ. ಅಲ್ಲಿ ನೀವು ಅಲ್ಲಿ ಅಲ್ಲಿ ನೀವು ನಿಮ್ಮ ಮಗಳ ಹೆಸರಿಗೆ ನೀಡಲಾದ ಭಾಗ್ಯಲಕ್ಷ್ಮೀ ಬಾಂಡ್ ಐಡಿ ನಂಬರ್ ಹಾಕಬೇಕು. ನಂತರ ಸಲ್ಲಿಸಿ ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ತೆರದುಕೊಳ್ಳುತ್ತದೆ. ಅಲ್ಲಿ ನಿಮ್ಮ ಮಗಳ ಹೆಸರಿಗೆ ಭಾಗ್ಯಲಕ್ಷ್ಮೀ ಬಾಂಡ್ ಯಾವಾಗ ಮಾಡಿಸಲಾಗಿದೆ. ಭಾಗ್ಯಲಕ್ಷ್ಮೀ ಹಣ ಎಷ್ಟು ಬರುತ್ತದೆ. ಯಾವ ದಿನಾಂಕ ನಿಮ್ಮ ಖಾತೆಗೆ ಜಮೆಯಾಗಬಹುದು ಸೇರಿದಂತೆ ಎಲ್ಲಾ ಮಾಹಿತಿ ಮೊಬೈಲ್ ನಲ್ಲೇ ಸಿಗುತ್ತದೆ.

Leave a Comment