Mukyamantri Negilayogi scheme Benefit : ಮುಖ್ಯಮಂತ್ರಿ ನೇಗಿಲ ಯೋಗಿ ಯೋಜನೆ ಅಡಿಯಲ್ಲಿ ರೈತರಿಗೆ ತಮ್ಮ ಜಮೀನು ಉಳುಮೆಗೆ 4500 ರೂಪಾಯಿಯವರೆಗೆ ಪ್ರೋತ್ಸಾಹಧನ ಸಿಗಲಿದೆ.
ಹೌದು, ರೈತರು ಈಗ ಸೌಲಭ್ಯ ಪಡೆಯಬಹುದು. ಅರ್ಜಿ ಎಲ್ಲಿ ಸಲ್ಲಿಸಬೇಕು. ಯಾವ ಯಾವ ದಾಖಲೆ ಬೇಕು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.
ಸಣ್ಣ ಮತ್ತು ಅತೀ ಸಣ್ಮ ರೈತರ ಕೃಷಿ ವೆಚ್ಚದ ಹೊರೆಯನ್ನು ತಗ್ಗಿಸಿ ಕೃಷಿ ಚಟುವಟಿಕೆಗಳನ್ನು ಸುಗಮಗೊಳಿಸುವ ಉದ್ದೇಶದಿಂದ ರಾಜ್ಯ ಸರ್ಕಾರವು ಮುಖ್ಯಮಂತ್ರಿ ನೇಗಿಲ ಯೋಗಿ ಯೋಜನೆ 2026 ಜಾರಿಗೆ ತಂದಿಂದೆ ಎಂದು ಕಲಬುರಗಿ ಜಂಟಿ ನಿರ್ದೇಶಕ ಸಮದ್ ಪಟೇಲ್ ತಿಳಿಸಿದ್ದಾರೆ.
ಈ ಯೋಜನೆಯ ಅನುಷ್ಠಾನಕ್ಕಾಗಿ ಕಲಬುರಗಿ ಜಿಲ್ಲೆಯ ಅಫಜಲ್ಪುರ ಮತ್ತು ಚಿತ್ತಾಪುರ ತಾಲೂಕುಗಳನ್ನು ಆಯ್ಕೆ ಮಾಡಲಾಗಿದೆ.
ಆರ್ಥಿಕ ಅನಾನುಕೂಲತೆಯಿಂದ ಸ್ವಂತ ಟ್ರ್ಯಾಕ್ಟರ್ ಹಾಗೂ ಇತರ ಕೃಷಿ ಯಂತ್ರೋಪಕರಣಗಳನ್ನು ಖರೀದಿಸಲಾಗದ ಸಣ್ಣ ರೈತರಿಗೆ, ಖಾಸಗಿ ಟ್ರ್ಯಾಕ್ಟರ್ ಗಳ ಬಾಡಿಗೆ ವೆಚ್ಚ ಹೆಚ್ಚಾಗುತ್ತಿದೆ. ಇದನ್ನು ತಪ್ಪಿಸಲು ಗರಿಷ್ಠ 3 ಎಕರೆಯವರೆಗೆ ಭೂಮಿ ಹೊಂದಿರುವ ಸಣ್ಣ ಮತ್ತು ಅತೀಸಣ್ಣ ರೈತರಿಗೆ ಉಳುಮೆ ಸೇರಿದಂತೆ ಅಗತ್ಯ ಕೃಷಿ ಕಾರ್ಯಗಳಿಗೆ ಸ್ಥಳೀಯ ಖಾಸಗಿ ಟ್ರ್ಯಾಕ್ಟರ್ ಗಳನ್ನು ಬಾಡಿಗೆ ಆಧಾರದ ಮೇಲೆ ಒದಗಿಸುವ ವ್ಯವಸ್ಥೆ ಕಲ್ಪಿಸಲಾಗುತ್ತದೆ.
Mukyamantri Negilayogi scheme Benefit ಎಕರೆಗೆ ಎಷ್ಟು ಹಣ ಸಿಗಲಿದೆ
ಪ್ರತಿ ಅರ್ಹ ರೈತರಿಗೆ ಗರಿಷ್ಠ 3 ಎಕರೆಯವರೆಗೆ ಯೋಜನೆಯ ಸೌಲಭ್ಯ ದೊರೆಯಲಿದ್ದು, ಕೈಗೊಳ್ಳಲು ಕೃಷಿ ಚಟುವಟಿಕೆಗಳ ಆಧಾರದ ಮೇಲೆ ಪ್ರೋತ್ಸಾಹ ಧನ ನೀಡಲಾಗುತ್ತದೆ.
20 ಗುಂಟೆಯಿಂದ 1 ಎಕರೆಯವರೆಗೆ ಒಂದು ಚಟುವಟಿಕೆಗೆ 500 ರೂಪಾಯಿ, ಎರಡಕ್ಕೆ 1000 ರೂಪಾಯಿ ಹಾಗೂ ಮೂರಕ್ಕೆ 1500 ರೂಪಾಯಿ ನೀಡಲಾಗುತ್ತದೆ.
2 ಎಕರೆವರೆಗೆ ಕ್ರಮವಾಗಿ 1 ಸಾವಿರ ರೂಪಾಯಿ, 2 ಸಾವಿರ ರೂಪಾಯಿ ಹಾಗೂ 3 ಸಾವಿರ ರೂಪಾಯಿ ಮತ್ತು 3 ಎಕರೆವರೆಗೆ ಕ್ರಮವಾಗಿ 1500, 3000 ಹಾಗೂ ಗರಿಷ್ಠ 4500 ರೂಪಾಯಿ ಪ್ರೋತ್ಸಾಹ ಧನ ದೊರೆಯಲಿದೆ.
ಇದನ್ನೂ ಓದಿ ಗಂಗಾ ಕಲ್ಯಾಣ ಯೋಜನೆ ಬೋರ್ವೆಲ್ ಕೊರೆಯಲು 3.50 ಲಕ್ಷ ರೂಪಾಯಿ ಸಬ್ಸಿಡಿ
ಅಫಜಲ್ಪುರ ಮತ್ತು ಚಿತ್ತಾಪುರ ತಾಲೂಕುಗಳ ಆಸಕ್ತ ಯಂತ್ರೋಪಕರಣ ಹೊಂದಿರುವ ರೈತರು, ಸೇವೆ ಒದಗಿಸಲು ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಯಾಪ್ ಮೂಲಕ ನೋಂದಣಿ ಮಾಡಿಕೊಳ್ಳಬೇಕು. ನೋಂದಣಿ ವೇಳೆ ಆಧಾರ್ ಕಾರ್ಡ್, ಟ್ರ್ಯಾಕ್ಟರ್ ಆರ್.ಸಿ, ಕಾರ್ಡ್ ಹಾಗೂ ಇತರ ದಾಖಲಾತಿಗಳನ್ನು ಸಲ್ಲಿಸಬೇಕು. ಇದರಿಂದಸಕಾಲದಲ್ಲಿ ಕೃಷಿ ಕಾರ್ಯ ನಡೆದು, ಕಾರ್ಮಿಕರ ಅವಲಂಬನೆ ಮತ್ತು ಕೃಷಿ ವೆಚ್ಚ ಕಡಿಮೆಯಾಗಿ ಉತ್ಪಾದಕತೆ ಹಾಗೂ ರೈತರ ಆರ್ಥಿಕ ಸ್ಥಿತಿ ಸುಧಾರಿಸಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಈ ಯೋಜನೆಯಿಂದ ಸ್ವಂತ ಕೃಷಿ ಯಂತ್ರೋಪಕರಣಗಳಿಲ್ಲದ ರೈತರಿಗೆ ಸಕಾಲದಲ್ಲಿ ಯಂತ್ರೋಪಕರಣಗಳ ಸೇವೆ ದೊರೆಯಲಿದೆ. ಕೃಷಿ ಕಾರ್ಮಿಕರ ಮೇಲಿನ ಅವಲಂಬನೆ ಹಾಗೂ ಕೃಷಿ ವೆಚ್ಚ ಕಡಿಮೆಯಾಗುವುದರೊಂದಿಗೆ ಸೂಕ್ತ ಸಮಯದಲ್ಲಿ ಭೂಮಿ ಸಿದ್ದತೆ ಬಿತ್ತನೆ ಮತ್ತು ಇತರೆ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಲು ಅನುಕೂಲವಾಗಲಿದೆ. ಇದರಿಂದ ಕೃಷಿ ಉತ್ಪಾದಕತೆ ಹೆಚ್ಚಿಸುವುದರ ಜತೆಗೆ ಸಣ್ಣ ರೈತರ ಆರ್ಥಿಕ ಸ್ಥಿತಿ ಸುಧಾರಿಸುವ ನಿರೀಕ್ಷೆಯಿದೆ ಎಂದು ಜಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Ration card ekyc status ಇಕೆವೈಸಿ ಸ್ಟೇಟಸ್ ಚೆಕ್ ಮಾಡುವುದು ಹೇಗೆ ?
ಇಕೆವೈಸಿ ಮಾಡಿಸಿದ ನಂತರ ಇಕೆವೈಸಿ ಆಗಿದೆಯೋ ಇಲ್ಲವೋ ಎಂಬ ಸ್ಟೇಟಸ್ ಚೆಕ್ ಮಾಡಲು ಆಹಾರ ಇ ಸೇವೆಗಳ ಪೋರ್ಟಲ್
https://ahara.karnataka.gov.in/Home/Home
ಗೆ ಭೇಟಿ ನೀಡಬೇಕು. ಅಲ್ಲಿ ಇ ಕೇಶನ್ ಕಾರ್ಡ್ ವಿಭಾಗದ ಅಡಿಯಲ್ಲಿರುವ ಪಡಿತರ ಚೀಟಿ ತೋರಿಸಿ ಮೇಲೆ ಕ್ಲಿಕ್ ಮಾಡಬೇಕು. ನಂತರ ನಿಮ್ಮ ವಿಭಾಗ (ಬೆಂಗಳೂರು, ಮೈಸೂರು ಅಥವಾ ಕಲಬುರಗಿ) ಆಯ್ಕೆ ಮಾಡಿ. ಪಡಿತರ ಚೀಟಿ ಸಂಖ್ಯೆಯನ್ನು ನಮೂದಿಸಿ ಓಟಿಪಿ ಮೂಲಕ ಸಲ್ಲಿಸಿ.. ಪರದೆಯ ಮೇಲೆ ಕುಟುಂಬ ಸದಸ್ಯರ ಪಟ್ಟಿ ಕಾಣಿಸುತ್ತದೆ. ಅಲ್ಲಿ ಪ್ರತಿಯೊಬ್ಬರ ಹೆಸರಿನ ಮುಂದೆ ಇಕೆವೈಸಿ ಸ್ಥಿತಿಯು ತೋರಿಸುತ್ತದೆ.
Ration card ekyc status ಮೊಬೈಲ್ ನಲ್ಲೇ ಇಕೆವೈಸಿ ಮಾಡುವುದು ಹೇಗೆ ?
ಯಾರು ಯಾರು ಇನ್ನೂವರೆಗೆ ಇಕೆವೈಸಿ ಮಾಡಿಸಿಲ್ಲವೋ ಅವರು ಕೊನೆಯ ದಿನಾಂಕದವರೆಗೆ ಕಾಯದೆ ಕೂಡಲೇ ಕೆಲಸ ಮಾಡಬೇಕು.





