ಡಿಸೆಂಬರ್ 1 ರೊಳಗೆ ಈ ರೈತರ ಖಾತೆಗೆ ಬರ ಪರಿಹಾರದ 5000 ಜಮೆ

Written by Ramlinganna

Published on:

Baraparihara 5000 credited before december : ಬರಪೀಡಿತ ಪ್ರದೇಶಗಳ ರೈತರ ಖಾತೆಗೆ ತಲಾ 5 ಸಾವಿರ ರೂಪಾಯಿ ಪರಿಹಾರದ ಎರಡೂ ಕಂತುಗಳನ್ನು ಡಿಸೆಂಬರ್ 1 ರೊಳಗಾಗಿ ರೈತರ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ತಿಳಿಸಿದರು.

ವಿಕಾಸಸೌದದಲ್ಲಿ ಶುಕ್ರವಾರ ಜಿಲ್ಲಾಧಿಕಾರಿಗಳು, ಡಿಡಿಎಲ್ಆರ್ (ಭೂ ದಾಖಲೆಗಳ ಉಪ ನಿರ್ದೇಶಕರು) ಉಪ ವಿಭಾಗಾಧಿಕಾರಿ ಮತ್ತು ಕಂದಾಯ ಇಲಾಖೆ ಹಿರಿಯ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿ ಬಳಿಕ ಮಾತನಾಡಿದ ಅವರು, ಬರ ಪರಿಹಾರವನ್ನು ಎರಡು ಕಂತುಗಳಳಲ್ಲಿ ನೀಡಲು ಸರ್ಕಾರ ನಿರ್ಧರಿಸಿದೆ. ಡಿಸೆಂಬರ್ 1 ರೊಳಗೆ ಎರಡೂ ಕಂತಿನ ಒಟ್ಟು 5 ಸಾವಿರ ರೂಪಾಯಿ ಅನ್ನು ರೈತರ ಖಾತೆಗೆ ವರ್ಗಾಯಸಲಾಗುತ್ತದೆ.

ಬರ ಪರಿಹಾರಕ್ಕಾಗಿ ಕೇಂದ್ರ ಸರ್ಕಾರದಿಂದ 22400 ಕೋಟಿ ರೂಪಾಯಿ ಅನುದಾನ ಕೇಳಿದ್ದೇವೆ. ಅದಕ್ಕೆ ಈವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಕೇಂದ್ರ ಕೃಷಿ ಸಚಿವರು, ಗೃಹ ಸಚಿವ ಅಮಿತ್ ಶಾ ಪ್ರಧಾನಿ ನರೇಂದ್ರ ಮೋದಿಯವರ ಭೇಟಿಗೆ ಸಮಯ ಕೋರಿ ಪತ್ರ ಬರೆಯಲಾಗಿದ್ದರೂ ಉತ್ತರ ಬಂದಿಲ್ಲ. ಇದು ಒಕ್ಕೂಟ ಸರ್ಕಾರಕ್ಕೆ ಭೂಷಣವಲ್ಲ. ಆದರೆ ನಾವು ಮಾತ್ರ ಅನುದಾನ ತರುವ ಸಂಬಂಧ ಪ್ರಯತ್ನಗಳನ್ನು ನಿಲ್ಲಿಸಿಲ್ಲ. ಹಾಗಾಗಿಯೇ ರಾಜ್ಯದಲ್ಲಿ 57.03 ಲಕ್ಷ ಹೆಕ್ಟೇರ್ ವ್ಯಾಪ್ತಿಯಲ್ಲಿ ಬೆಳೆ ನಷ್ಟವಾಗಿದ್ದು, 62,481 ಕೋಟಿ ರೂಪಾಯಿ ನಷ್ಟವುಂಟಾಗಿದೆ. ಕೇಂದ್ರದ ನೆರವು ಬಾರದಿದ್ದರೂ ನಾವು ಸುಮ್ಮನಿಲ್ಲ. ಈ ಕಾರಣದಿಂದಾಗಿ ರೈತರಿಗೆ ತಲಾ 5 ಸಾವಿರ ರೂಪಾಯಿ ಪರಿಹಾರವನ್ನು ಡಿಸೆಂಬರ್ 1 ರೊಳಗಾಗಿ ಪಾವತಿಸಲಾಗುವುದು ಎಂದು ಹೇಳಿದರು.

Baraparihara 5000 credited before december ಕಳೆದ ಎರಡು ವಾರದ ಹಿಂದೆ ಯಾದಗಿರಿ ಜಿಲ್ಲೆಗೆ ಬರ ಪರಿಹಾರ ಬಿಡುಗಡೆ

ಕಳೆದ ಎರಡು ವಾರದ ಹಿಂದೆ ಯಾದಗಿರಿ ಜಿಲ್ಲೆಯ ರೈತರಿಗೆ ಮೊದಲ ಹಂತದ ಬರ ಪರಿಹಾರ ಹಣವನ್ನು 2500 ರೂಪಾಯಿ ಬಿಡುಗಡೆ ಮಾಡಲಾಗಿದೆ. ಕೆಲವು ರೈತರಿಗೆ 2000 ಇನ್ನೂ ಕೆಲವು ರೈತರಿಗೆ 1500 ರೂಪಾಯಿ ಜಮೆಯಾಗಿದೆ ಎಂಬ ಮಾಹಿತಿ ಬಂದಿತ್ತು. ಯಾವ ಯಾವ ರೈತರಿಗೆ ಕಡಿಮೆ ಹಣ ಜಮೆಯಾಗಿದೆಯೋ ಅವರಿಗೂ ಸಹ ಎರಡು ಕಂತಿನ ಹಣ ಸೇರಿ  ಒಟ್ಟು 5000 ರೂಪಾಯಿ ಜಮೆ ಮಾಡಲಾಗುವುದು ಎಂದು ಈ ಹಿಂದೆ ಮಾಹಿತಿ ನೀಡಿದ್ದರು.

ಯಾರು ಯಾರಿಗೆ ಬರ ಪರಿಹಾರ ಹಣ ಜಮೆಯಾಗಿದೆ ಸ್ಟೇಟಸ್ ಚೆಕ್ ಮಾಡುವುದು ಹೇಗೆ ?

ಬರ ಪರಿಹಾರ ಜಮೆಯಾಗಿದೆಯೇ ಎಷ್ಟು ಹಣ ಜಮೆಯಾಗಿದೆ ಎಂಬುದನ್ನು ಚೆಕ್ ಮಾಡಲು ಈ

https://parihara.karnataka.gov.in/service92/

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮಗೆ BHOOMI ONLINE PARIHARA INPUT SUBSIDY PAYMENT DETAILS ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನೀವು ವರ್ಷ ಆಯ್ಕೆ ಮಾಡಿ ಎಂಬುದರಲ್ಲಿ 2026-27 ಆಯ್ಕೆಮಾಡಿಕೊಳ್ಳಬೇಕು. ನಂತರ ಋತು ವಿನಲ್ಲಿ kharif ಆಯ್ಕೆ ಮಾಡಿಕೊಳ್ಳಬೇಕು. ಇದಾದ ನಂತರ ವಿಪತ್ತು ಆಯ್ಕೆ ಮಾಡಿಯಲ್ಲಿ  Drought ಆಯ್ಕೆ ಮಾಡಿಕೊಳ್ಳಬೇಕು. ಇದಾದ ನಂತರ Get Data / ಹುಡುಕು ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ನಿಮಗೆ Aadhaar Number ಆಧಾರ್ ಸಂಖ್ಯೆ, Farmer ID ರೈತರ ಗುರುತಿನ ಸಂಖ್ಯೆ (FID), Mobile Number / ಮೊಬೈಲ್ ಸಂಖ್ಯೆ, Survey Number /ಸರ್ವೆ ನಂಬರ್  ಆಯ್ಕೆಗಳು ಕಾಣಿಸುತ್ತವೆ. ಅದರಲ್ಲಿ ನೀವು ಮೊಬೈಲ್ ಸಂಖ್ಯೆ ಮೇಲೆ ಕ್ಲಿಕ್ ಮಾಡಬೇಕು. ನಂತರ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನೀವು ಮೊಬೈಲ್ ನಂಬರ್ ನಮೂದಿಸಬೇಕು ನಂತರ Fetch / ಪಡೆಯಿರಿ. ನಂತರ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ.

Bara parihara payment status  ಹಣ ಸಂದಾಯದ ವಿವರಗಳು Payment Details

ಕ್ರಮ ಸಂಖ್ಯೆ, ಜಿಲ್ಲೆಯ ಹೆಸರು, ಬ್ಯಾಂಕಿನ ಹೆಸರು, ಮೊತ್ತ, ಖಾತೆದಾರನ ಹೆಸರು, ಬ್ಯಾಂಕ್ ಅಕೌಂಟ್ ನಂಬರ್, ಹಣ ಸಂದಾಯದ ಸ್ಥಿತಿ, ಸಂದಾಯವಾದ ದಿನಾಂಕ, ಸಂದಾಯ ವಿಪತ್ತಿನ ರೀತಿ, ಸಂದಾಯ ಕಾಲ ವರ್ಷ ಎಲ್ಲವೂ ಮಾಹಿತಿ ಇರುತ್ತದೆ. ಇನ್ನೂ ಜಮೆಯಾಗಿಲ್ಲವಾದರೆ ಅಲ್ಲಿ No Data Found ಎಂಬ ಮಾಹಿತಿ ಕಾಣಿಸುತ್ತದೆ.

ಪರಿಹಾರ ನಮೂದಿಸಿದ ವಿವರಗಳು

ಅಲ್ಲಿ ಕ್ರಮ ಸಂಖ್ಯೆ, ಆಧಾರ್ ನಂಬರ್ ಕೊನೆಯ ನಾಲ್ಕು ನಂಬರ್ ಗಳು, ಜಿಲ್ಲೆ, ತಾಲೂಕು, ಮುಧೋ ನಿಮ್ಮ ಊರು ಕಾಣಿಸುತ್ತದೆ.ಇದಾದ ನಂತರ ನಿಮ್ಮ ಸರ್ವೆ ನಂಬರ್ ಕಾಣಿಸುತ್ತದೆ. ಇದಾದ ನಂತರ ನೀವು ಯಾವ ಬೆಳೆ ಹಾಕಿದ್ದೀರಿ ಎಂಬ ಮಾಹಿತಿ ಕಾಣಿಸುತ್ತದೆ. ಎಷ್ಟು ಎಕೆ ಜಮೀನು ಇದೆ ಎಂಬ ಮಾಹಿತಿ ಕಾಣಿಸುತ್ತದೆ.

ಇದನ್ನೂ ಓದಿ ಬೆಳೆ ವಿಮೆಗೆ ಅರ್ಜಿ ಆಹ್ವಾನ ಯಾವ ಬೆಳೆಗೆ ಎಷ್ಟು ಹಣ ಜಮೆ? ಇಲ್ಲಿದೆ ಮಾಹಿತಿ

Leave a Comment