ಬೆಳೆ ಸಮೀಕ್ಷೆ ಸರಿಯಾಗಿದೆಯೇ ಇಲ್ಲೇ ಚೆಕ್ ಮಾಡಿ

Written by Ramlinganna

Published on:

Beledarshak app check now : ಬೆಳೆ ಸಮೀಕ್ಷೆ ಆಗಿದೆಯೋ ಇಲ್ಲವೋ ಅಂದರೆ ಬೆಳೆ ಸಮೀಕ್ಷೆ ಸರಿಯಾಗಿದೆಯೋ ಇಲ್ಲವೋ ಎಂಬುದನ್ನು ರೈತರು ಈಗ ಮೊಬೈಲ್ ನಲ್ಲೇ ಚೆಕ್ ಮಾಡಬಹುದು.

ಹೌದು, ಮುಂಗಾರು ಹಂಗಾಮಿಗೆ ಬೆಳೆ ವಿಮೆ ಪ್ರಕ್ರಿಯೆ ಆರಂಭವಾಗಿದೆ. ಈಗಾಗಲೇ ಬಹುತೇಕ ರೈತರು ಬೆಳೆ ವಿಮೆ ಮಾಡಿದ್ದಾರೆ ಇನ್ನೂ ಕೆಲವು ರೈತರು ಬೆಳೆ ವಿಮೆ ಮಾಡಿಸುತ್ತಿದ್ದಾರೆ. ಬೆಳೆ ವಿಮೆ ಪ್ರಕ್ರಿಯೆ ಪೂರ್ಣಗೊಂಡಿದ್ದೇಯೋ ಇಲ್ಲವೋ ಎಂಬುದನ್ನು ಸಹ ರೈತರು ಈಗ ಮೊಬೈಲ್ ನಲ್ಲೇ ಚೆಕ್ ಮಾಡಬಹುದು. ರೈತರು ಬೆಳೆ ಸಮೀಕ್ಷೆಯನ್ನು ಸಹ ಮೊಬೈಲ್ ನಲ್ಲಿ ಸ್ವತಃ ರೈತರೇ ಮಾಡಬಹುದು. ಬೆಳೆ ಸಮೀಕ್ಷೆ ಮಾಡಿದ ನಂತರ ಬೆಳೆ ಸಮೀಕ್ಷೆ ಸರಿಯಾಗಿದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಬಹುದು. ಬೆಳೆ ಸಮೀಕ್ಷೆ ಸರಿಯಾದರೆ ಮಾತ್ರ ಬೆಳೆ ವಿಮೆ ಹಣ ರೈತರ ಖಾತೆಗೆ ಜಮೆಯಾಗಬಹುದು.

Beledarshak app check now ಬೆಳೆ ದರ್ಶಕ ಯಾಪ್ ನಲ್ಲಿ ಬೆಳೆ ಸಮೀಕ್ಷೆ ಸರಿಯಾಗಿದೆಯೇ ಇಲ್ಲೇ ಚೆಕ್ ಮಾಡಿ

ಬೆಳೆ ದರ್ಶಕ ಯಾಪ್ ನಲ್ಲಿ ಬೆಳೆ ಸಮೀಕ್ಷೆ ಸರಿಯಾಗಿದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಲು ಈ

https://play.google.com/store/apps/details?id=com.crop.offcskharif_2021&hl=en_IN&pli=1

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.ಆಗ ಬೆಳೆ ದರ್ಶಕ್ ಯಾಪ್ ಓಪನ್ ಆಗುತ್ತದೆ. ಅಲ್ಲಿ ನೀವು install ಮೇಲೆ ಕ್ಲಿಕ್ ಮಾಡಬೇಕು. ಇದಾದ ನಂತರ ಓಪನ್ ಮೇಲೆ ಕ್ಲಿಕ್ ಮಾಡಬೇಕು. ನಂತರ ನಿಮಗೆ ಬೆಳೆ ದರ್ಶಕ್ 2025-26 ಕೆಳಗಡೆ ಬೆಳೆ ಸಮೀಕ್ಷೆ ಮಾಹಿತಿ ವೀಕ್ಷಣೆ ಕಾಣಿಸುತ್ತದೆ. ಅದರ ಕೆಳಗಡೆ ಸರ್ಕಾರಿ ಸಿಬ್ಬಂದಿ ಪ್ರೈವೆಟ್ ರೆಸಿಡೆಂಟ್ಸ್  ಹಾಗೂ ರೈತ ಎಂಬ ಆಯ್ಕೆಗಳು ಕಾಣಿಸುತ್ತವೆ. ಅದರಲ್ಲಿ ನೀವು ರೈತ ಮೇಲೆ ಕ್ಲಿಕ್ ಮಾಡಬೇಕು. ನಂತರ ವೈಲ್ ಯೂಸಿಂಗ್ ದಿಸ್ ಯಾಪ್ ಮೇಲೆ ಕ್ಲಿಕ್ ಮಾಡಬೇಕು. ನಂತರ ಅಟೋ ಮೇಲೆ ಕ್ಲಿಕ್ ಮಾಡಬೇಕು.

ಆಗ ನಿಮಗೆ ಸರ್ವೆ ನಂಬರ್ ಆಯ್ಕೆ ಕೆಳಗಡೆ ಕೆಲವು ಆಯ್ಕೆಗಳು ಕಾಣಿಸುತ್ತವೆ. ವರ್ಷ, ಋತು, ಜಿಲ್ಲೆ, ತಾಲೂಕು, ಹೋಬಳಿ ಹಾಗೂ ಗ್ರಾ ಮ ಕಾಣಿಸುತ್ತದೆ. ನಂತರ ಸರ್ವೆ ನಂಬರ್ ಹೀಗೆ ವಿವಿಧ ಆಯ್ಕೆಗಳು ಕಾಣಿಸುತ್ತವ. ಅದರಲ್ಲಿ ನೀವು ಒಂದೊಂದಾಗಿ ಸರಿಯಾಗಿ ಮಾಹಿತಿಗಳ್ನು ಭರ್ತಿ ಮಾಡಬೇಕಾಗುತ್ತದೆ.

ಇದನ್ನೂ ಓದಿ ಬೆಳೆ ಹಾನಿಯಾದರೆ ಯಾರಿಗೆ ಕರೆ ಮಾಡಬೇಕು ? ಇಲ್ಲಿದೆ ಮಾಹಿತಿ

ಅಲ್ಲಿ ನೀವು 2025-26 ಆಯ್ಕೆ ಮಾಡಿಕೊಳ್ಳಬೇಕು. ಋತು ವಿನಲ್ಲಿ ಹಿಂಗಾರು ಆಯ್ಕೆ ಮಾಡಿಕೊಳ್ಳಬೇಕು. ನಂತರ ಜಿಲ್ಲೆ ಆಯ್ಕೆ ಮಾಡಿಕೊಳ್ಳಬೇಕು. ಇದಾದ ನಂತರ ತಾಲೂಕು ಆಯ್ಕೆ ಮಾಡಿಕೊಳ್ಳಬೇಕು. ನಂತರ ಹೋಬಳಿ ಆಯ್ಕೆ ಮಾಡಿಕೊಳ್ಳಬೇಕು. ನಂತರ ಗ್ರಾಮ ಆಯ್ಕೆ ಮಾಡಿಕೊಳ್ಳಬೇಕು. ನಂತರ ಸರ್ವೆ ನಂಬರ್ ನಮೂದಿಸಿ ವಿವರ ಪಡೆಯಿರಿ ಮೇಲೆ ಕ್ಲಿಕ್ ಮಾಡಬೇಕು.

ಇದಾದ ನಂತರ ಸರ್ವೆ ನಂಬರ್  ಹಿಸ್ಸಾ ನಂಬರ್ ಆಯ್ಕೆ ಮಾಡಿಕೊಳ್ಳಬೇಕು. ನಂತರ ಮಾಲಿಕ ವಿವರ ಮೇಲೆ ಕ್ಲಿಕ್ ಮಾಡಬೇಕು. ನಂತರ ಸರ್ವೆ ನಂಬರ್ ನಲ್ಲಿರುವ ಮಾಲಿಕರ ಹೆಸರು ಕಾಣಿಸುತ್ತದೆ. ನಿಮ್ಮ ಹೆಸರು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ನಂತರ ಸಮೀಕ್ಷೆಯ ವಿವರಗಳನ್ನು ಪಡೆಯಿರಿ ಮೇಲೆ ಕ್ಲಿಕ್ ಮಾಡದರೆ ನೀವು ಏನೇನು ಮಾಹಿತಿಗಳನ್ನು ಭರ್ತಿ ಮಾಡಿದ್ದೀರಿ ಅಂದರೆ ಅಪ್ಲೋಡ್ ಮಾಡಿದ್ದೀರಿ ಎಂಬ ಮಾಹಿತಿಗಳನ್ನು ಕಾಣಿಸುತ್ತವೆ. ಅದರಲ್ಲಿ ಎಲ್ಲಾ ಮಾಹಿತಿಗಳು ಸರಿಯಾಗಿವೇ ಎಂಬುದನ್ನು ಚೆಕ್ ಮಾಡಬಹುದು.

ಬೆಳೆ ಸಮೀಕ್ಷೆ ಏಕೆ ಮಾಡಬೇಕು?

ರಾಜ್ಯದಲ್ಲಿ ನಡೆಯುತ್ತಿರುವ ಬೆಳೆ ಸಮೀಕ್ಷೆಯಲ್ಲಿ ರೈತರಿಗೆ ನೆರವಾಗುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ರೈತ ಸ್ನೇಹಿ ಬೆಳೆ ದರ್ಶಕ್ ಯಾಪ್ ವೊಂದನ್ನು ಬಿಡುಗಡೆ ಮಾಡಿದೆ.ಬೆಳೆ ಸಮೀಕ್ಷೆಗೆ ನಿಯೋಜನೆಗೊಂಡಿರುವ ಸಿಬ್ಬಂದಿ, ಬೆಳೆ ಸಮೀಕ್ಷೆಯ ನಿಖರತೆಯನ್ನು ಅರಿಯಲು ಇದು ರೈತರಿಗೆ ನೆರವಾಗಲಿದೆ. ಈ ಯಾಪ್ ನ್ನು ಗೂಗಲ್ ಪ್ಲೇ ಸ್ಟೋರ್ ನಿಂದ ಇದನ್ನು ರೈತರು ಡೌನ್ಲೋಡ್ ಮಾಡಿಕೊಳ್ಳಬಹುದು. ಈ ಮೂಲಕ ಬೆಳೆ ಸಮೀಕ್ಷೆಯ ಮಾಹಿತಿಯನ್ನು ಅಂಗೈನಲ್ಲೇ ಅರಿಯಬಹುದು.

Leave a Comment