ಬೆಳೆ ಹಾನಿಯಾದರೆ ಯಾರಿಗೆ ಕರೆ ಮಾಡಬೇಕು ? ಇಲ್ಲಿದೆ ಮಾಹಿತಿ

Written by Ramlinganna

Published on:

Belevime Helpline number : ಮುಂಗಾರು ಹಂಗಾಮಿಗೆ ಬೆಳೆ ವಿಮೆ ಮಾಡಿಸುವ ರೈತರಿಗಿಲ್ಲಿದೆ ಅತ್ಯಂತ ಮಹತ್ವದ ಮಾಹಿತಿ. ಹೌದು, 2026-27ನೇ ಸಾಲಿನ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ಮುಂಗಾರು ಹಂಗಾಮಿಗೆ ವಿಮೆ ಮಾಡಿಸುವ ಮುನ್ನ ಈ ಕೆಳಗಿನ ಮಾಹಿತಿ ತಿಳುದಕೊಳ್ಳಲಬೇಕು.

ಬಹುತೇಕ ರೈತರು ಬೆಳೆ ವಿಮೆ ಮಾಡಿಸುತ್ತಾರೆ. ಆದರೆ ಯಾವ ವಿಮಾ ಕಂಪನಿಗೆ ಹಣ ಪಾವತಿಸುತ್ತಾರೆ ಹಾಗೂ ವಿಮಾ ಕಂಪನಿಯ ಸಹಾಯವಾಣಿ ನಂಬರ್ ಗಳು ಯಾವುವು ಎಂಬುದರ ಮಾಹಿತಿ ಇಲ್ಲಿದೆ.

Belevime Helpline number  ನಿಮ್ಮ ಜಿಲ್ಲೆಗೆ ಯಾವ ವಿಮಾ ಕಂಪನಿ ಇದೆ ತಿಳಿಯುವುದು ಹೇಗೆ ?

ನಿಮ್ಮ ಜಿಲ್ಲೆಗೆ ಯಾವ ವಿಮಾ ಕಂಪನಿಯನ್ನು ನಿಯೋಜಿಸಲಾಗಿದೆ ಎಂಬುದನ್ನು ತಿಳಿದುಕೊಳ್ಳಲು ಈ

https://www.samrakshane.karnataka.gov.in/PublicHome.aspx

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮಗೆ ಸಂರಕ್ಷಣೆ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನೀವು Know your insurance co.ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ಕರ್ನಾಟಕ ಯಾವ ಜಿಲ್ಲೆಗೆ ಯಾವ ವಿಮಾ ಕಂಪನಿಯನ್ನು ನಿಯೋಜಿಸಲಾಗಿದೆ ಎಂಬ ಮಾಹಿತಿ ಕಾಣಿಸುತ್ತದೆ ಅಲ್ಲಿ ನಿಮ್ಮ ಜಿಲ್ಲೆ ಕಾಣಿಸದಿದ್ದರೆ ಸೆಲೆಕ್ಟ್ ಡಿಸ್ಟ್ರಿಕ್ಟ್ ನಲ್ಲಿ ನಿಮ್ಮ ಜಿಲ್ಲೆ ಆಯ್ಕೆ ಮಾಡಿಕೊಳ್ಳಬೇಕು. ಆಗ ನಿಮ್ಮ  ಜಿಲ್ಲೆಗೆ ಯಾವ ವಿಮಾ ಕಂಪನಿಯನ್ನು ನಿಯೋಜಿಸಲಾಗಿದೆ ಎಂಬ ಮಾಹಿತಿ ಕಾಣಿಸುತ್ತದೆ.

ನಿಮ್ಮ ಜಿಲ್ಲೆಯ ವಿಮಾ ಕಂಪನಿಯ ಸಹಾಯವಾಣಿ ಯಾವುದು ?

ನಿಮ್ಮ ಜಿಲ್ಲೆಯ ಸಹಾಯವಾಣಿ ನಂಬರ್ ಯಾವುದು ಎಂಬುದನ್ನು ಚೆಕ್ ಮಾಡಲು  ಈ ಲಿಂಕ್

https://www.samrakshane.karnataka.gov.in/HomePages/ContactUs.aspx

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮಗೆ ವಿಮಾ ಕಂಪನಿಗಳ ಎದುರು ಸಹಾಯವಾಣಿ ನಂಬರ್ ಕಾಣಿಸುತ್ತದೆ. ಆ ನಂಬರಿಗೆ ಕರೆ ಮಾಡಿದರೆ ಸಾಕು ನಿಮಗೆ ಬೆಳೆ ವಿಮೆ ಕುರಿತಂತೆ ಎಲ್ಲಾ ಮಾಹಿತಿ ಸಿಗುತ್ತದೆ.

ವಿಮೆ ಮಾಡಿಸುವುದು ಹೇಗೆ ಎಲ್ಲಿ ಮಾಡಿಸಬೇಕು ಹಾಗೂ ವಿಮಾ ಹೇಗೆ ನಿರ್ಧರಿಸುತ್ತಾರೆ ಎಂಬ ಸಂಪೂರ್ಣ ಮಾಹಿತಿ ಸಿಗಲಿದೆ.

ಬೆಳೆ ವಿಮೆ ಹಣ ಹೇಗೆ ನಿರ್ಧರಿಸುತ್ತಾರೆ ?

ಪ್ರಕೃತಿ ವಿಕೋಪಗಳಿಂದ ಬೆಳೆ ಹಾನಿಯಾದರೆ ನೀವು ವಿಮಾ ಕಂಪನಿಗೆ ಕರೆ ಮಾಡಬೇಕಾಗುತ್ತದೆ.  ಆಗ ವಿಮಾ ಕಂಪನಿಯ ಪ್ರತಿನಿಧಿ ರೈತರ ಜಮೀನಿಗೆ ಬಂದು ಬೆಳೆ ಪರಿಶೀಲನೆ ಮಾಡಿ ವಿಮೆ ಹಣ ನಿರ್ಧರಿಸುತ್ತಾರೆ. ಯಾವ ಪ್ರಮಾಣದಲ್ಲಿ ಬೆಳೆ ಹಾನಿಯಾಗಿದೆ ಅಂದರೆ ಎಷ್ಟು ಪ್ರಮಾಣದಲ್ಲಿ ಬೆಳೆ ಹಾನಿಯಾಗಿದೆ ಎಂಬುದನ್ನು ನೋಡುತ್ತಾರೆ. ನಂತರ ಮೇಲಧಿಕಾರಿಗಳಿಗೆ ಬೆಳೆ ಹಾನಿಯ ಕುರಿತಂತೆ ವರದಿ ಸಲ್ಲಿಸುತ್ತಾರೆ. ಇದಾದ ನಂತರ ರೈತರಿಗೆ ಬೆಳೆ ಎಷ್ಟಾಗಿದೆ ಎಂಬುದರ ಆಧಾರದ ಮೇಲೆ  ರೈತರ ಖಾತೆಗೆ ವಿಮೆ ಹಣ ಜಮೆಯಾಗುತ್ತದೆ.

ಇದನ್ನೂ ಓದಿ ಬೆಳೆ ವಿಮೆ ಮಾಡಿಸಿದ ನಂತರ ಹಣ ಜಮೆಯಾಗಲು ರೈತರೇನು ಮಾಡಬೇಕು?

ಈಗಾಗಲೇ ರಾಜ್ಯದಲ್ಲಿ ಮುಂಗಾರು ಹಂಗಾಮಿಗೆ ಬೆಳೆ ವಿಮೆಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭವಾಗಿದೆ. ಬೆಳೆಗೆ ವಿಮೆ ಮಾಡಿಸಿದ ನಂತರ ರಸೀದಿ ನಿಮ್ಮ ಬಳಿ ಇಟ್ಟುಕೊಳ್ಳಬೇಕು. ಅಷ್ಟೇ ಅಲ್ಲ, ಬೆಳೆ ಹಾನಿಯಾದಾಗ ಕೂಡಲೇ ಕರೆ ಮಾಡಬೇಕು. 72 ಗಂಟೆಯೊಳಗೆ ವಿಮಾ ಪ್ರತಿನಿಧಿ ನಿಮ್ಮ ಜಮೀನಿಗೆ ಬಂದು ಬೆಳೆ ಪರಿಶೀಲನೆ ಮಾಡುತ್ತಾರೆ.

ಹೆಚ್ಚಿನ ಮಾಹಿತಿಗಾಗಿ ರೈತರು ತೋಟಗಾರಿಕೆ ಇಲಾಖೆ, ಕೃಷಿ ಇಲಾಖೆ, ಬ್ಯಾಂಕ್ ಅಧಿಕಾರಿ, ಅಗ್ರಿಕಲ್ಚರ್ ವಿಮಾ ಕಂಪನಿ ಸಂಸ್ಥೆಯ ಪ್ರತಿ ನಿಧಿಗಳಿಗೆ ಅಥವಾ ವಿಶೇಷವಾಗಿ ರೈತರು ತಮ್ಮ ಹತ್ತಿರದ ರೈತ ಸಂಪರ್ಕ ಇಲಾಖೆಗೆ ಭೇಟಿ ನೀಡಿ ಮಾಹಿತಿ ಪಡೆಯಬಹುದು. ಕೊನೆಯ ದಿನಾಂಕದವರೆಗೆ ಕಾಯದೆ ಕೂಡಲೇ ಬೆಳೆ ವಿಮೆ ಮಾಡಿಸಿಕೊಳ್ಳಬಹುದು. ಈ ಮಾಹಿತಿ ನಿಮಗೆ ಉಪಯುಕ್ತವಾಗಿದೆ ಎಂದು ನಾನು ಭಾವಿಸಿದ್ದೇನೆ..

Leave a Comment