PVC pipe purchase subsidy : 2026-27ನೇ ಸಾಲಿನಲ್ಲಿ ಪಿವಿಸಿ ಪೈಪ್ ಖರೀದಿಗೆ ಸಬ್ಸಿಡಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ.
ಹೌದು, 2026-27ನೇ ಸಾಲಿನಲ್ಲಿ ಗದಗ ತಾಲೂಕಿನ ಕೃಷಿ ಇಲಾಖೆಯ ಪಿಎಂಕೆಎಸ್ವೈ ಯೋಜನೆ ಅಡಿಯಲ್ಲಿ ತುಂತುರು ನೀರಾವರಿ ಘಟಕ ಹಾಗೂ ಪಿವಿಸಿ ಪೈಪ್ ಗಳು ಲಭ್ಯವಿದೆ
PVC pipe purchase subsidy ರೈತರು ನೀರಾವರಿ ಕೃಷಿ ಹೊಂಡ, ಬೋರ್ ವೆಲ್ ಹಾಗೂ ನಾಲಾ ಪಕ್ಕದಲ್ಲಿ ಜಮೀನು ಇರುವ ರೈತರು ಸೌಲಭ್ಯ ಪಡೆಯಲು ಅರ್ಹರು. ಈ ಹಿಂದೆ ಪಿವಿಸಿ ಪೈಪುಗಳನ್ನು ಪಡೆಯಲು ರೈತರು ಪೂರ್ಣ ಮೊತ್ತ ಪಾವತಿಸಿ ಅರ್ಹರು. ಈ ಹಿಂದೆ ಪಿವಿಸಿ ಪೈಪುಗಳನ್ನು ಪಡೆಯಲು ರೈತರು ಪೂರ್ಣ ಮೊತ್ತ ಪಾವತಿಸಿ ತೆಗೆದುಕೊಳ್ಳಬೇಕಾಗಿತ್ತು. ಆದರೆ ಈಗ ರೈತರು ವಂತಿಕೆ ಮಾತ್ರ ಪಾವತಿಸಿ ಸೌಲಭ್ಯ ಪಡೆಯಬಹುದು.
ಪಿವಿಸಿ ಪೈಪ್ ದರ 63 ಎಂಎಂ 35 ಪೈಪುಗಳಿಗೆ ರೈತರ ವಂತಿಕೆ 9912 ರೂಪಾಯಿ, 75 ಎಂಎಂಗೆ 25 ಪೈಪುಗಳಿಗೆ ರೈತರ ವಂತಿಕೆ 9575 ರೂಪಾಯಿ ಹಾಗೂ 90 ಎಂಎಂ 18 ಪೈಪುಗಳಿಗೆ ರೈತರ ವಂತಿಕೆ 9747 ಇದೆ.ಹೆಚ್ಚಿನ ಮಾಹಿತಿಗಾಗಿ ರೈತ ಸಂಪರ್ಕ ಕೇಂದ್ರ ಹುಲಕೋಟಿ ಹಾಗೂ ಬೆಟಗೇರಿ ಸಂಪರ್ಕಿಸಬಹುದು ಎಂದು ಗದಗ ಸಹಾಯಕ ಕೃಷಿ ನಿರ್ದೇಶಕ ಮಲ್ಲಯ್ಯ ಕೊರವನವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
PVC pipe purchase subsidy ತೋಟಗಾರಿಕೆ ಬೆಳೆಗಳಿಗೆ ಅರ್ಜಿ ಆಹ್ವಾನ
ಹಿರೇಕೇರೂರು ಹಾಗೂ ರಟ್ಟಿಹಳ್ಳಿ ತಾಲೂಕಿನ 2026-27ನೇ ಸಾಲಿನ ಹವಾಮಾನ ಆಧಾರಿತ ಬೆಳೆ ವಿಮೆ ನೋಂದಣಿಗೆ ಅರ್ಜಿ ಆಹ್ವಾನಿಸಲಾಗಿದೆ.
ತೋಟಗಾರಿಕೆ ಬೆಳೆಗಳಾದ ಅಡಕೆ, ಮಾವು, ಶುಂಠಿ, ಹಸಿ ಮೆಣಸಿನಕಾಯಿ ಬೆಳೆಗಳಿಗೆ ಅಧಿಸೂಚಿಸಲಾಗಿದೆ
ರೈತರು ಬೆಳೆ ವಿಮೆ ನೋಂದಣಿ ಮಾಡಲು ಜುಲೈ 31 ಕೊನೆಯ ದಿನವಾಗಿದೆ.
ಹೆಚ್ಚಿನ ಮಾಹಿತಿಗಾಗಿ ಹಿರೇಕೇರೂರು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಮತ್ತು ಹೋಬಳಿ ಮಟ್ಟದ ಸಹಾಯಕ ತೋಟಗಾರಿಕೆ ಅಧಿಕಾರಿಗಳನ್ನು ಸಂಪರ್ಕಿಸಬಹುದು.
ಮುಂಗಾರು ಬೆಳೆ ವಿಮೆ ನೋಂದಣಿ ಆರಂಭ
2026-27ನೇ ಸಾಲಿನ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಶಲ್ ಬಿಮಾ ಯೋಜನೆಯಡಿ ಮುಂಗಾರು ಹಂಗಾಮಿನ ಬೆಳೆ ವಿಮೆ ಯೋಜನೆಯಡಿ ಮುಂಗಾರು ಹಂಗಾಮಿನ ಬೆಳೆ ವಿಮೆ ನೋಂದಣಿ ಪ್ರಕ್ರಿಯೆ ಆರಂಭವಾಗಿದೆ.
ಎಲ್ಲಾ ಅರ್ಹ ರೈತರು (ಬೆಳೆ ಸಾಲ ಪಡೆದ ಹಾಗೂ ಪಡೆಯದ ರೈತರು) ನಿಗದಿತ ಅವಧಿಯೊಳಗೆ ತಮ್ಮ ಬೆಳೆಗಳಿಗೆ ವಿಮೆ ಮಾಡಿಸಿ ಯೋಜನೆಯ ಸೌಲಭ್ಯ ಪಡೆದುಕೊಳ್ಳಬೇಕು.
ಯಾವ ಯಾವ ಬೆಳೆಗೆ ವಿಮೆ ಮಾಡಿಸಬಹುದು ? ಇಲ್ಲಿ ಚೆಕ್ ಮಾಡಿ
ರೈತರು ತಮ್ಮ ಊರಿನ ವ್ಯಾಪ್ತಿಯಲ್ಲಿರುವ ಯಾವ ಯಾವ ಬೆಳೆಗಳಿಗೆ ವಿಮೆ ಮಾಡಿಸಬಹುದು ಎಂಬುದನ್ನು ಚೆಕ್ ಮಾಡಲು ಈ
https://www.samrakshane.karnataka.gov.in/
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಬೆಳೆ ವಿಮೆ ಕುರಿತು ಮಾಹಿತಿ ಪಡೆಯುವ ಪೇಜ್ ಸಂರಕ್ಷಣೆ ತೆರೆದುಕೊಳ್ಳುತ್ತದೆ.
ಅಲ್ಲಿ ನೀವು ಮುಂದೆ ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ. Premium Calculator ಮೇಲೆ ಕ್ಲಿಕ್ ಮಾಡಬೇಕು ನಂತರ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ.
ಇದನ್ನೂ ಓದಿ : ಬೆಳೆ ವಿಮೆ ಮಾಡಿಸಲು ಕೊನೆಯ ದಿನಾಂಕ ಯಾವುದು? ಮೊಬೈಲ್ ನಲ್ಲಿ ಚೆಕ್ ಮಾಡಿ
ನಿಮ್ಮ ಜಿಲ್ಲೆ ಆಯ್ಕೆ ಮಾಡಿಕೊಳ್ಳಬೇಕು. ನಿಮ್ಮ ತಾಲೂಕು ಆಯ್ಕೆ ಮಾಡಿಕೊಳ್ಳಬೇಕು. ಹೋಬಳಿ ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ ಗ್ರಾಮ ಆಯ್ಕೆ ಮಾಡಿಕೊಳ್ಳಬೇಕು. ಇದಾದ ನಂತರ ನಿಮ್ಮ ಊರಿಂದ ನೀವು ಯಾವ ಯಾವ ಬೆಳೆಗಳ ವಿಮೆ ಮಾಡಿಸಬಹುದು ಎಂಬ ಬೆಳೆಗಳ ಹೆಸರು ಕಾಣಿಸುತ್ತದೆ. ಬೆಳೆ ಆಯ್ಕೆ ಮಾಡಿಕೊಂಡ ನಂತರ ನೀವು ಎಷ್ಟು ಎಕರೆ ವಿಮೆ ಮಾಡಿಸಬೇಕೆಂದುಕೊಂಡಿದ್ದೀರೋ ಅಲ್ಲಿ ನಮೂದಿಸಬೇಕು. ನಂತರ Show Premium ಮೇಲೆ ಕ್ಲಿಕ್ ಮಾಡಬೇಕು. ಉದಾಹರಣೆಗೆ ನೀವು ತೊಗರಿ ಒಂದು ಎಕರೆಗೆ ವಿಮೆ ಮಾಡಿಸಬಹುದಾದರೆ ಎಕೆರೆಗೆ ರೈತರು 466 ರೂಪಾಯಿ ಪಾವತಿಸಬೇಕು. ನಿಮ್ಮ ಬೆಳೆ ಸಂಪೂರ್ಣ ಹಾನಿಯಾದರೆ ನಿಮಗೆ 23 ಸಾವಿರ ರೂಪಾಯಿಯವರೆಗೆ ವಿಮೆ ಹಣ ಜಮೆಯಾಗಲಿದೆ. ಇದೇ ರೀತಿ ನೀವು ಬೇರೆ ಬೇರೆ ಬೆಳೆಗಳನ್ನು ಚೆಕ್ ಮಾಡಬಹುದು.





