ಕೃಷಿ ಹೊಂಡ, ಟ್ರ್ಯಾಕ್ಟರ್ ಖರೀದಿಗೆ ಶೇ. 50 ರಷ್ಟು ಸಬ್ಸಿಡಿ ನೀಡಲು ಅರ್ಜಿ ಆಹ್ವಾನ

Written by Ramlinganna

Published on:

Krishihonda and Tractory subsidy : ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ವಿವಿಧ ತೋಟಗಾರಿಕೆ ಬೆಳೆಗಳಿಗೆ ಸಹಾಯಧನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.

ಹೌದು ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನಿಂದ ವಿವಿಧ ಯೋಜನೆಗಳ ಅಡಿಯಲ್ಲಿ ಸೌಲಭ್ಯ ಪಡೆಯಲು ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.

ಬಾಳೆ, ದ್ರಾಕ್ಷಿ, ದಾಳಿಂಬೆ, ಮಾವು, ಡ್ರಾಗನ್ ಹಣ್ಣು, ಪೇರಲ, ಹೈಬ್ರೀಡ್ ತರಕಾರಿ ಬೆಳೆಗಳನ್ನು ಬೆಳೆಯಲು ಬೆಳೆಗಳ ಅನುಗುಣವಾಗಿ ಕನಿಷ್ಠ 1/2  ಎಕರೆಯಿಂದ ಗರಿಷ್ಠ 2 ಹೆಕ್ಟೇರ್ ವರೆಗೆ ಶೇ. 40 ರಂತೆ ಸಹಾಯಧನವನ್ನು ಹಾಗೂ ನೀರಾವರಿ ವ್ಯವಸ್ಥೆಗಾಗಿ, ನೀರು ಸಂಗ್ರಹಣ ಮಾಡಲು 2250 ಘಮೀ ಸಾಮರ್ಥ್ಯದ ವೈಯಕ್ತಿಕ ಕೃಷಿ ಹೊಂಡಕ್ಕೆ ಸಹಾಯಧನ ನೀಡಲಾಗುವುದು.

ಸಂರಕ್ಷಿತ ಬೇಸಾಯ ಪದ್ಧತಿ ಅಳವಡಿಸಿಕೊಳ್ಳಲು ಪಾಲಿಮನೆ ನಿರ್ಮಿಸಿಕೊಳ್ಳಲು, ಪ್ಲಾಸ್ಟಿಕ್ ಹೊದಿಕೆಗಾಗಿ, ಕಳೆ ಚಾಪೆ, ಪಕ್ಷಿ ಕೀಟ ನಿರೋಧಕ ಬಲೆ ಅಳವಡಿಸಲು ಶೇ. 50 ರಂತೆ ಸಹಾಯಧನವನ್ನು ನೀಡಲಾಗುವುದು.

ತೋಟಗಾರಿಕೆಯಲ್ಲಿ ಯಾಂತ್ರೀಕರಣಕ್ಕಾಗಿ 20 ಹೆಚ್.ಪಿ ಸಾಮರ್ಥ್ಯದ ಒಳಗಿನ ಟ್ರ್ಯಾಕ್ಟರ್ ಖರೀದಿಗಾಗಿ ಸಹಾಯಧನ ನೀಡಲಾಗುವುದು.

ಜೇನು ಕೃಷಿ ಕಾರ್ಯಕ್ರಮದಡಿ ಜೇನು ಪೆಟ್ಟಿಗೆ ಹಾಗೂ ನು ಕುಟುಂಬ ಖರೀದಿಸಲು ಶೇ. 40 ರಷ್ಟು ಸಹಾಯಧನ ನೀಡಲಾಗುವುದು.

ಆಸಕ್ತ ಎಲ್ಲಾ ವರ್ಗದ ರೈತರು ತಾಲೂಕಿನ ತೋಟಗಾರಿಕೆ ಇಲಾಖೆಗೆ ಭೇಟಿ ನೀಡಿ ಹೆಚ್ಚಿನ ಮಾಹಿತಿ ಪಡೆದು ಅರ್ಜಿ ಸಲ್ಲಿಸಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Krishihonda and Tractory subsidy ತೋಟಗಾರಿಕೆ ಇಲಾಖೆಯಲ್ಲಿ ಸಹಾಯಧನ ಪಡೆಯಲು ಅರ್ಜಿ ಆಹ್ವಾನ

2026-27ನೇ ಸಾಲಿನ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ತೋಟಗಾರಿಕೆ ಇಲಾಖೆಯಲ್ಲಿ ವಿವಿಧ ಫಲಾನುಭವಿ ಆಧಾರಿತ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದ್ದು, ಎಲ್ಲಾ ವರ್ಗದ ತೋಟಗಾರಿಕೆ ಬೆಳೆ ಬೆಳೆಯುವ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.

ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ತೋಟಗಾರಿಕೆ ಉತ್ಪನ್ನಗಳ ಶೇಖರಣೆ ಮತ್ತು ಸಾಗಾಣಿಕೆಗೆ ಅನಕೂಲವಾಗುವಂತೆ ಇಲಾಖೆಯಿಂದ ಅನುಮೋದಿತ ಮಾರಾಟಗಾರರಿಂದ ಪ್ಲಾಸ್ಟಿಕ್ ಕ್ರೇಟ್ಸ್ ಖರೀದಿಸಲು ಸಹಾಯಧನ ನೀಡಲಾಗುವುದು.

ಕ್ಷೇತ್ರಮಟ್ಟದಲ್ಲಿ ತೋಟಗಾರಿಕೆ ಉತ್ಪನ್ನಗಳ ವಿಂಗಡಣೆ, ಪ್ಯಾಕಿಂಗ್ ಮತ್ತು ಸಂಗ್ರಹಣೆ ಮಾಡಲು ಫಾರ್ಮಗೆಟ್ ಗಳನ್ನು ನಿರ್ಮಿಸಲು ಸಹಾಯಧನ ನೀಡಲಾಗುವುದು.

ಅದೇ ರೀತಿಯಲ್ಲಿ ತೋಟಗಾರಿಕೆ ಬೆಳೆಗಳಿಗೆ ಲಘು ಪೋಷಕಾಂಶಗಳನ್ನು ನೀಡಲು ಇಲಾಖೆಯಿಂದ ಶೇ. 100 ರಷ್ಟು ಸಹಾಯಧನದಲ್ಲಿ ಲಘು ಪೋಷಕಾಂಶಗಳ ಮಿಶ್ರಣವನ್ನು ವಿತರಿಸಲಾಗುವುದು. ಗೂ ರಾಜ್ಯ ವಲಯದ ಜೇನು ಸಾಕಾಣಿಕೆ ಯೋಜನೆಯಡಿ ಶೇ. 75 ರಷ್ಟು ಸಹಾಯಧನದಡಿ ಜೇನು ಪೆಟ್ಟಿಗೆ ಹಾಗೂ ಜೇನು ಕುಟುಂಬ ನೀಡಲಾಗುವುದು.

ತಾಲೂಕಿಗೆ ನಿಗದಿಪಡಿಸಿದ ಗುರಿ ಮತ್ತು ಅನುದಾನ ಲಭ್ಯವಿರುವವರಿಗೆ ಅರ್ಜಿಯನ್ನು ಸ್ವೀಕರಿಸಿ ಅರ್ಹತೆ ಹಾಗೂ ಜೇಷ್ಠತಾ ಆಧಾರ್ದ ಮೇಲೆ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುವುದು.

ರೈತರಿಗೆ ರಿಯಾಯಿತಿ ದರದಲ್ಲಿ ಗಿಡ ಲಭ್ಯ

ಕೊಡಗು ಜಿಲ್ಲೆಯ ನಾಪೋಕ್ಲು  ಹೊದ್ದೂರು ವಾಟೆಕಾಡು ಸಸ್ಯ ಕ್ಷೇತ್ರದಲ್ಲಿ 2026-27ನೇ ಸಾಲಿನ ಮಳೆಗಾಲದಲ್ಲಿ ನೆಡಲು ವಿವಿಧ ಹಣ್ಣಿನ, ಔಷಧೀಯ ಹಾಗೂ ಕಾಡು ಜಾತಿಯ ಸಸಿಗಳನ್ನು ಬೆಳೆಸಲಾಗಿದ್ದು, ರೈತರಿಗೆ ರಿಯಾಯಿತಿ ದರದಲ್ಲಿ ದೊರಕುತ್ತವೆ.

ಇದನ್ನೂ ಓದಿ ಹನಿ ನೀರಾವರಿ ಘಟಕ ನಿರ್ಮಾಣಕ್ಕೆ ಶೇ. 90 ರಷ್ಟು ಸಬ್ಸಿಡಿ ನೀಡಲು ಅರ್ಜಿ ಆಹ್ವಾನ

ಮಹಾಗನಿ, ನೇರಳೆ. ರಕ್ತ ಚಂದನ, ನಿಂಬೆ, ನೆಲ್ಲಿ, ಸಂಪಿಗೆ, ಲಾವಂಚ, ಸೀಬೆ, ತೇಗ, ಹೊನ್ನೆ, ಬೀಟೆ, ಹಿಪ್ಪೆ, ಸೀಮಾರೂಬಾ, ಬಿದಿರು ಮುಂತಾದ ಸಸಿಗಳನ್ನು ಲಭ್ಯವಿದ್ದು, ರೈತ ಫಲಾನುಭವಿಗಳಿಗೆ ಸರ್ಕಾರದ ಹೊಸ ಪರಿಷ್ಕೃತ ಆದೇಶದಂತೆ 8 -6 ಅಳತೆಯ ಗಿಡ ಒಂದಕ್ಕೆ 6 ರೂಪಾಯಿ, ಮತ್ತು 6-9 ಅಳತೆಯ ಗಿಡ ಒಂದಕ್ಕೆ 3 ರೂಪಾಯಿ ಯಂತೆ ರಿಯಾಯಿತಿ ದರದಲ್ಲಿ ಪಡೆದುಕೊಳ್ಳಬಹುದು.

ರೈತರು  ತಮ್ಮ ಆಧಾರ್ ಪ್ರತಿ, ರಾಷ್ಟೀಕೃತ ಬ್ಯಾಂಕ್ ಪಾಸ್ ಬುಕ್ ಪ್ರತಿ, ತಮ್ಮ ಜಮೀನಿನ ಆರ್.ಟಿ.ಸಿ ಪ್ರತಿಯನ್ನು ನೀಡಿ ಸಸಿ ಪಡೆಯಬಹುದು. ಹೆಚ್ಚಿನ ಮಾಹಿತಿಗಾಗಿ ಮಡಿಕೇರಿ ಉಪ ವಲಯ ಅರಣ್ಯಾಧಿಕಾರಿಗಳು 9482915684, 9164698938, ಗಸ್ತು  ಅರಣ್ಯ ಪಾಲಕರು 9632995904 ನ್ನು ಸಂಪರ್ಕಿಸಬಹುದು ಎಂದು ವಲಯ ಅರಣ್ಯಾಧಿಕಾರಿ ತಿಳಿಸಿದ್ದಾರೆ.

Leave a Comment