ಬೆಳೆ ವಿಮೆ ಪರಿಹಾರ ತಾರತಮ್ಯನಿವಾರಣೆಗೆ ಪ್ರತ್ಯೇಕ ಪರಿಶೀಲನಾ ಸಮಿತಿ ರಚನೆ

Written by Ramlinganna

Published on:

Belevime parihara samiti : ಬೆಳೆ ವಿಮೆ ಪರಿಹಾರ ವಿತರಣೆಯಲ್ಲಿ ಯಾವುದೇ ಲೋಪ ಅಥವಾ ತಾರತಮ್ಯವಾಗದಂತೆ ತಾಲೂಕು ಹಂತದಲ್ಲಿ ಪ್ರತ್ಯೇಕ ಪರಿಶೀಲನಾ ಸಮಿತಿ ರಚಿಸಲಾಗುವುದು ಎಂದು ರಾಜ್ಯದ ಗೃಹ, ಐ.ಟಿ-ಬಿ.ಟಿ, ಇ-ಆಡಳಿತ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ (ಪ್ರಕೃತಿ ವಿಕೋಪ) ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ಸೋಮವಾರ ನಗರದ ಇಲ್ಲಿನ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಕರೆಯಲಾದ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಸದರಿ ಸಮಿತಿಗೆ ಅಧಿಕಾರಿಗಳು ಮತ್ತು ಇತರರನ್ನು ನೇಮಿಸುವಂತೆ ಈಗಾಗಲೆ ಡಿ.ಸಿ. ಅವರಿಗೆ ನಿರ್ದೇಶನ ನೀಡಿದ್ದೇನೆ. ಇನು ಕ್ರಾಪ್ ಕಟ್ಟಿಂಗ್ ಎಕ್ಸಪರಿಮೆಂಟ್ ನಿಖರವಾಗಿ ಅರಿಯಲು ನಿಯಮಾವಳಿಯಲ್ಲಿ ಕೆಲವೊಂದು ಬದಲಾವಣೆ ಸಹ ತರಲಾಗುವುದು ಎಂದರು.

ಕಳೆದ ವರ್ಷ ರಾಜ್ಯದಲ್ಲಿ ಮೊದಲನೇ ಸ್ಥಾನ ಮತ್ತು ದೇಶದಲ್ಲಿ ಎರಡನೇ ಸ್ಥಾನದಲ್ಲಿ ಕಲಬುರಗಿ ಜಿಲ್ಲೆಯ ರೈತರು ಬೆಳೆ ವಿಮೆ, ಸರ್ಕಾರದಿಂದ ಇನ್ಪುಟ್ ಸಬ್ಸಿಡಿ ಪಡೆದಿದ್ದಾರೆ. ಕೃಷಿ, ತೋಟಗಾರಿಕೆ, ಕಂದಾಯ ಅಧಿಕಾರಿಗಳ ನಿಖರ ವರದಿ ಮತ್ತು ಗ್ರೌಂಡ್ ಟ್ರುತ್ ವರದಿ ಪರಿಣಾಮ ಇದು ಸಾಧ್ಯವಾಗಿದೆ. ಕಳೆದ ಮೂರು ವರ್ಷಗಳ ಅವಧಿಯಲ್ಲಿ ಕ್ರಾಪ್ ಇನ್ಶೂರೆನ್ಸ್, ಮಿಡ್-ಸೀಸನ್ ಅಡ್ವರ್ಸಿಟಿ ಹಾಗೂ ಇನ್‌ಪುಟ್ ಸಬ್ಸಿಡಿ ಒಳಗೊಂಡAತೆ ಜಿಲ್ಲೆಯ ರೈತರಿಗೆ ಒಟ್ಟು 3,035 ಕೋಟಿ ರೂಪಾಯಿಗೂ ಅಧಿಕ ಮೊತ್ತದ ಪರಿಹಾರವನ್ನು ನೀಡಲಾಗಿದೆ ಎಂದರು.

ಜಿಲ್ಲೆಯಲ್ಲಿ ಕಳೆದ ವರ್ಷ ದಾಖಲೆ ಪ್ರಮಣದಲ್ಲಿ ಬೆಳೆ ವಿಮೆನಡಿ 585.72 ಕೋಟಿ ರೂ. ಪರಹಾರ ನೀಡಿದರು ಕೆಲವೆಡೆ ಮಧ್ಯಂತರ ಪರಿಹಾರ ಸಿಕ್ಕ ರೈತರಿಗೆ ಅಂತಿಮ ಪರಿಹಾರ ಸಿಕ್ಕಿಲ್ಲ ಎಂಬ ಮಾಹಿತಿ ಇದೆ. ಈ ವರ್ಷ ಅದು ಮರುಕಳಿಸದಂತೆ ರೈತರಿಗೆ ನ್ಯಾಯಯುತ ಪರಿಹಾರ ಸಿಗಲು ಎಚ್ಚರ ವಹಿಸಲಾಗುವುದು. ಇನ್ನು ಕಳೆದ ವರ್ಷ ಕೆಲ ರೈತರಿಗೆ ನ್ಯಾಯಯುತ ಪರಿಹಾರ ಸಿಗದಿರುವುದಕ್ಕೆ ಸಂಬಧಿಸಿದವರ ಮೇಲೆ ಕ್ರಮ ವಹಿಸಲಾಗುವುದು ಎಂದು ಸಚಿವರು ತಿಳಿಸಿದರು.

ನಮ್ಮ ರೈತರಿಗೆ ಕಷ್ಟಕಾಲದಲ್ಲಿ ಕೈ ಹಿಡಿಯುವ ಬೆಳೆ ವಿಮೆ ನೋಂದಣಿ ಮಾಡಿಕೊಳ್ಳಲು ಹೆಚ್ಚು ಪ್ರೇರೇಪಿಸಲಾಗುತ್ತಿದೆ. ಈ ಬಾರಿಯ ಸಹ ಮುಂಗಾರು ಹಂಗಾಮಿನಲ್ಲಿ ದಾಖಲೆ ಪ್ರಮಾಣದಲ್ಲಿ 4,58,609ಕ್ಕೂ ಹೆಚ್ಚು ರೈತರು 5,35,850 ಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶಕ್ಕೆ ಬೆಳೆ ವಿಮೆ ನೋಂದಣಿ ಮಾಡಿಕೊಂಡಿದ್ದಾರೆ. ಇನ್ನು ಪ್ರಸ್ತುತ ವರ್ಷ ಬೆಳೆ ವಿಮೆ ನೋಂದಾಯಿಸಿಕೊAಡ ರೈತರಲ್ಲಿ ಹೆಸರು, ಉದ್ದು, ಸೋಯಾಬಿನ್, ತೊಗರಿ ಬೆಳೆದ 37,051 ರೈತರಿಗೆ ಮಧ್ಯಂತರ ಪರಿಹಾರ ನೀಡಲು ಜಿಲ್ಲಾಡಳಿತದಿಂದ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಶೀಘ್ರ ಅನುಮೋದನೆ ದೊರಕಿಸಕೊಡಲಾಗುವುದು ಎಂದರು.

ಕೇAದ್ರ ಸರ್ಕಾರ ಬರ ಘೋಷಣೆಗೆ 2017ರಲ್ಲಿ ತಿದ್ದುಪಡಿ ಕಠಿಣ ನಿಯಮಾವಳಿಗಳನ್ನು ತಂದ ಪರಿಣಾಮ ನಮ್ಮ ರೈತಾಪಿ ಜನರಿಗೆ ನಾವು ನ್ಯಾಯ ನೀಡಲು ಸಾಧ್ಯವಾಗುತ್ತಿಲ್ಲ. ನಿಯಮಾವಳಿ ಸರಳೀಕರಣಗೊಳಿಸುವಂತೆ ಈಗಾಗಲೆ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಪತ್ರ ಬರೆದಿದೆ. ಕಳೆದ ಬಾರಿ ಕೇಂದ್ರ ಸರ್ಕಾರ ಬರ ಪರಿಹಾರ ನೀಡಲು ವಿಳಂಬ ಧೋರಣೆ ನಡೆಸಿದ್ದರಿಂದ ಸುಪ್ರೀಂ ಕೋರ್ಟ್ಗೆ ಹೋಗಿ ನಮ್ಮ ರೈತರಿಗೆ ಪರಿಹಾರ ಕೊಡಿಸುವ ಕೆಲಸ ನಮ್ಮ ಸರ್ಕಾರ ಮಾಡಿದೆ ಎಂದ ಅವರು, ರೈತರ ಹಿತಕ್ಕಾಗಿ ನಮ್ಮ ಸರ್ಕಾರ ಬದ್ದವಾಗಿದೆ ಎಂದರು.

ಇದನ್ನೂ ಓದಿ ಕೊನೆಗೂ ಜಮೆಯಾಯಿತು ಬೆಳೆ ವಿಮೆ ಹಣ- ನಿಮಗೆಷ್ಟು ಜಮೆ? ಹೀಗೆ ಚೆಕ್ ಮಾಡಿ

ಪ್ರಸ್ತುತ ಸೂಪರ್ ಎಲ್ನಿನೋ ಬಗ್ಗೆಯೂ ಗಮನಹರಿಸಿ ನೆರವು ನೀಡುವಂತೆ ಈಗಾಗಲೆ ಮುಖ್ಯಮಂತ್ರಿಗಳು ಮತ್ತು ಉಪ ಮುಖ್ಯಮಂತ್ರಿಗಳು ಪ್ರಧಾನಮಂತ್ರಿ ಮತ್ತು ಕೇಂದ್ರದ ಗೃಹ ಸಚಿವರ ಗಮನ ಸೆಳೆದಿದ್ದು, ಯಾವ ರೀತಿಯ ಸ್ಪಂದನೆ ವ್ಯಕ್ತವಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ. ಬರ ಘೋಷಣೆ ಕೇಂದ್ರದ ಎನ್.ಡಿ.ಆರ್.ಎಫ್. ನಿಯಮಾವಳಿ ಪ್ರಕಾರ ಮಾಡಬೇಕಿರುವುದರಿಂದ ಅರ್ಹತಾ ಷರತ್ತು ಪೂರೈಸದ ಹೊರತು ಘೋಷಣೆ ಕಷ್ಟಸಾಧ್ಯ ಎಂದು ಪ್ರಿಯಾಂಕ್ ಖರ್ಗೆ ಸ್ಪಷ್ಟಪಡಿಸಿದರು.

Belevime parihara samiti ಯಾವ ಯಾವ ಬೆಳೆಗಳಿಗೆ ಆಗಸ್ಟ್ 14 ರೊಳಗೆವಿಮೆ ಮಾಡಿಸಬಹುದು ಚೆಕ್ ಮಾಡುವುದು ಹೇಗೆ ?

ಯಾವ ಯಾವ ಬೆಳೆಗಳಿಗೆ ವಿಮೆ ಮಾಡಿಸಬಹುದು ಎಂಬುದನ್ನು ಚೆಕ್ ಮಾಡಲು ಈ

https://www.samrakshane.karnataka.gov.in/

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಸಂರಕ್ಷಣೆ ಪೇಜ್ ತೆರೆದುಕೊಳ್ಳುವುದು. ಅಲ್ಲಿ ನೀವು ಮುಂದೆ ಮೇಲೆ ಕ್ಲಿಕ್ ಮಾಡಬೇಕು. ಇದಾದ ನಂತರ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ View cut of Dates ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನೀವು ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿಕೊಂಡ ನಂತರ ಇನ್ನೊಂದು ಪೇಜ್ ಓಪನ್ ಆಗುತ್ತದೆ. ಅಲ್ಲಿ ನೀವು ಯಾವ ಯಾವ ಬೆಳೆಗಳಿಗೆ ವಿಮೆ ಮಾಡಿಸಬಹುದು ಎಂಬ ಪಟ್ಟಿ ಕಾಣಿಸುತ್ತದೆ. ಇದರೊಂದಿಗೆ ವಿಮೆ ಮಾಡಿಸಲು ಇನ್ನೂ ಎಷ್ಟು ದಿನ ಬಾಕಿ ಇದೆ ಎಂಬ ಮಾಹಿತಿಯೂ ಅಲ್ಲಿ ಕಾಣಿಸುತ್ತದೆ. ಇದರೊಂದಿಗೆ ಆಗಸ್ಟ್ ತಿಂಗಳ 14 ರವರೆಗೆ ಯಾವ ಯಾವ ಬೆಳೆಗಳಿಗೆ ವಿಮೆ ಮಾಡಿಸಬಹುದು ಎಂಬ ಮಾಹಿತಿ ನಿಮಗೆ ಕಾಣಿಸುತ್ತದೆ. ಹಾಗಾಗಿ ಕೊನೆಯ ದಿನಾಂಕದವರೆಗೆ ಕಾಯದೆ ಕೂಡಲೇ ಬೆಳೆ ವಿಮೆ ಮಾಡಿಸಬಹುದು ಇಲ್ಲದಿದ್ದರೆ ನೀವು ಬೆಳೆ ವಿಮೆ ಪರಿಹಾರ ಪಡೆಯುವಲ್ಲಿ ವಂಚಿತರಾಗಬಹುದು.

Leave a Comment