Mini Tractor purchase here : ತೋಟಗಾರಿಕೆ ಇಲಾಖೆಯ ವತಿಯಿಂದ ಮಿನಿ ಟ್ರ್ಯಾಕ್ಟರ್ ಖರೀದಿಗೆ ರೈತರಿಗೆ ಸಬ್ಸಿಡಿ ನೀಡಲು ವಿವಿಧ ಜಿಲ್ಲೆಗಳಿಂದ ಅರ್ಜಿ ಆಹ್ವಾನಿಸಲಾಗಿದೆ
ತುಮಕೂರು ಜಿಲ್ಲೆಯ ತೋಟಗಾರಿಕೆ ಇಲಾಖೆ ವತಿಯಿಂದ 2026-27ನೇ ಸಾಲಿನ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ತೋಟಗಾರಿಕೆ ರೈತರಿಗೆ ನೆರವು ನೀಡಲು ಅರ್ಜಿ ಆಹ್ವಾನಿಸಲಾಗಿದೆ.
ಈ ಯೋಜನೆಯ ವಿವಿಧ ಕಾರ್ಯಕ್ರಮಗಳಡಿ ಮಿನಿ ಟ್ರ್ಯಾಕ್ಟರ್, ಹಣ್ಣಿನ ಬೆಳೆಗಳಾದ ಬಾಳೆ, ಹೈಬ್ರೀಡ್ ತರಕಾರಿ, ಕೋಕೋ ಹಾಗೂ ಸಾಂಬಾರು ಬೆಳೆಗಳ ಹೊಸ ಪ್ರದೇಶ ವಿಸ್ತರಣೆ ವೈಯಕ್ತಿಕ ನೀರು ಸಂಗ್ರಹಣಾ ಘಟಕಗಳ ನಿರ್ಮಾಣ, ಮಾವು ತೋಟಗಳ ಪುನಶ್ಚೇತನ, ಪ್ಲಾಸ್ಟಿಕ್ ಹೊದಿಕೆ, ಪಕ್ಷಿನಿರೋಧಕ ಬಲೆ ಅಳವಡಿಕೆ, ಸಮಗ್ರ ಕೀಟ, ರೋಗ, ಪೋಷಕಾಂಶಗಳ ನಿರ್ವಹಣೆ ನೆರವು ನೀಡಲಾಗುವುದು.
ಈ ನೆರವಿನಲ್ಲಿ ಮಾರ್ಗಸೂಚಿಯನ್ವಯ ಕಾರ್ಯಕ್ರಮಗಳನ್ನಾಧರಿಸಿ ಅನುದಾನ ಲಭ್ಯತೆಗೆ ಅನುಗುಣವಾಗಿ ಶೇ. 25 ರಿಂದ 50 ರಷ್ಟು ಸಹಾಯಧನ ನೀಡಲಾಗುವುದು.
ಆಸಕ್ತ ರೈತರು ಅರ್ಜಿಯೊಂದಿಗೆ ಪಹಣಿ, ಆಧಾರ್ ಪ್ರತಿ, ಬ್ಯಾಂಕ್ ಪಾಸ್ ಬುಕ್ ಝರಾಕ್ಸ್, ಎಫ್ಐಡಿ ನಂಬರಿನೊಂದಿಗೆ ಜೂನ್ 30 ರೊಳಗೆ ಸಂಬಂಧಿಸಿದ ತಾಲೂಕಿನ ತೋಟಗಾರಿಕೆ ಕಚೇರಿಗೆ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗಾಗಿ ತೋಟಗಾರಿಕೆ ಇಲಾಖೆ, ತಿಪಟೂರು ಇಲಾಖೆ ಅಥವಾ 9980390876, 9995059100, 8660709778, 9164840484 ಗೆ ಸಂಪರ್ಕಿಸಬಹುದು ಎಂದು ನಿರ್ದೇಶಕರಾದ ಮಂಜು ಎಚ್.ಎಸ್. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Mini Tractor purchase here ಟ್ರ್ಯಾಕ್ಟರ್ ಖರೀದಿಗೆ ಸಹಾಯಧನ ನೀಡಲು ಅರ್ಜಿ ಆಹ್ವಾನ
ಪ್ರಸಕ್ತ ಸಾಲಿನ ಹೊನ್ನಾಳಿ ಮತ್ತು ನ್ಯಾಮತಿ ತಾಲೂಕಿನ ತೋಟಗಾರಿಕೆ ಇಲಾಖೆಯಿಂದ ವಿವಿಧ ಯೋಜನೆಗಳ ಸಹಾಯಧನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
ತೋಟಗಾರಿಕೆ ಮಿಷನ್ ಯೋಜನೆಯಡಿ ಕೃಷಿ ಹೊಂಡ, ಟ್ರ್ಯಾಕ್ಟರ್, ಪ್ರಾಥಮಿಕ ಸಂಸ್ಕರಣಾ ಘಟಕ ನಿರ್ಮಾಣ, ಎರೆಹುಳು ಘಟಕ ನಿರ್ಮಾಣ, ಎಸ್.ಎಂ.ಎ.ಎಂ ಯೋಜನೆಯಡಿ ಯಂತ್ರೋಪಕರಣಗಳಿಗೆ ಸಹಾಯಧನ ಲಭ್ಯವಿದ್ದು, ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಸೋಲಾರ್ ಪಂಪ್ ಸೆಟ್, ಲಘು ಪೋಷಕಾಂಶಗಳ ಮಿಶ್ರಣ, ಹವಾಮಾನ ಆಧಾರಿತ ಘಟಕ, ಫಾರಂ ಗೇಟ್, ಕಡಿಮೆ ವೆಚ್ಚದ ಹಣ್ಣು ಮಾಗಿಸುವ ಘಟಕ, ತೆಂಗು ಶೇಖರಣ ಘಟಕಗಳ ಸ್ಥಾಪನೆಗೆ ಸಹಾಯಧನ ನೀಡಲಾಗುವುದು.
ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ತೋಟಗಾರಿಕೆ ಬೆಳಗಳಿಗೆ ಹನಿ ನೀರಾವರಿ ಘಟಕ ಅಳವಡಿಸಿಕೊಳ್ಳಲು 2 ಹೆಕ್ಟೇರ್ ವರೆಗೆ ಶೇ. 90 ರಷ್ಟು ಸಹಾಯಧನ ನೀಡಲಾಗುವುದು. ಆಸಕ್ತರು ಜೂನ್ 30 ರೊಳಗೆ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿಪಂ) ಹೊನ್ನಾಳಿ ಕಚೇರಿ ಹಾಗೂ ಹೋಬಳಿವಾರು ರೈತ ಸಂಪರ್ಕ ಕೇಂದ್ರಗಳಲ್ಲಿ ಸಹಾಯಕ ತೋಟಗಾರಿಕೆ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಬಹುದು ಎಂದು ಹೊನ್ನಾಳಿಯ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ತಿಳಿಸಿದ್ದಾರೆ.
ಟ್ರ್ಯಾಕ್ಟರ್ ಖರೀದಿ, ಹನಿ ನೀರಾವರಿಗೆ ಸಬ್ಸಿಡಿ ನೀಡಲು ಅರ್ಜಿ ಆಹ್ವಾನ
2026-27ನೇ ಸಾಲಿನ ರಾಷ್ಟ್ರೀಯ ಸಮಗ್ರ ತೋಟಗಾರಿಕೆ ಅಭಿವೃದ್ಧಿ ಮಿಷನ್ ಯೋಜನೆಯಡಿ ಹೊಸ ಪ್ರದೇಶ ವಿಸ್ತರಣೆ (ಕಂದು ಬಾಳೆ, ಅಂಗಾಂಶ ಬಾಳೆ, ಪಪ್ಪಾಯ, ಅಂಜೂರ, ದಾಳಿಂಬೆ, ಮಾವು, ಸೀಬೆ, ಹುಣಸೆ, ನಿಂಬೆ, ಹೈಬ್ರೀಡ್ ತರಕಾರಿ, ಸೇವಂತಿಗೆ, ಚೆಂಡು ಹೂವು, ಮಲ್ಲಿಗೆ, ಸಾಬಾರು ಮತ್ತು ಔಷಧಿ ಗಿಡಗಳು) ಕೃಷಿಹೊಂಡ, ಪ್ಲಾಸ್ಟಿಕ್ ಹೊದಿಕೆ, ಪಕ್ಷಿ ನಿರೋಧಕ ಬಲೆ, ಕಳೆ ಛಾಪೆ, ಟ್ರ್ಯಾಕ್ಟರ್ , ಫಾರ್ಮಗೆಟ್, ಪ್ಯಾಕ್ ಹೌಸ್, ಈರುಳ್ಳಿ, ಶೇಖರಣಾ ಘಟಕ, ತಳ್ಳುವ ಗಾಡಿ ಮತ್ತು ಇತ್ಯಾದಿ ಮುಂದುವರಿದು ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಹನಿ ನೀರಾವರಿ, ಮತ್ತು ರಾಜ್ಯ ಸಾಮರ್ಥ್ಯವುಳ್ಳ ರಾಜ್ಯಗಳಲ್ಲಿ ಎಣ್ಣೆ ತಾಳೆ ವ್ಯವಸಾಯ ಯೋಜನೆಯಡಿ ಹೊಸ ಪ್ರದೇಶ ವಿಸ್ತರಣೆ ಹಾಗೂ ವಿವಿಧ ಘಟಕಗಳಿಗೆ ಗದಗ ಜಿಲ್ಲೆಯ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಸಾಮಾನ್ಯ ವರ್ಗದ ರೈತರು ಸಹಾಯಧನ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ.
ಇದನ್ನೂ ಓದಿ ಪಿಎಂ ಕಿಸಾನ್ ಹಣ ಜಮೆಗೆ ಫ್ರೂಟ್ಸ್ ಐಡಿ ನೋಂದಣಿ ಹೀಗೆ ಮಾಡಿ
ಅರ್ಜಿಯೊಂದಿಗೆ ಪಹಣಿ ಮತ್ತು ಆಧಾರ್ ಕಾರ್ಡ್, ಲಗತ್ತಿಸಬೇಕು. ಆಸಕ್ತಿಯುಳ್ಳ ರೈತರು ಜೂನ್ 15 ರೊಳಗಾಗಿ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿಪಂ) ಮುಂಡರಗಿ ಕಚೇರಿಗೆ ಅರ್ಜಿಯನ್ನು ಸಲ್ಲಿಸಬಹುದು.
ಮಾರ್ಗಸೂಚಿ ಪ್ರಕಾರ ಆಯ್ಕೆಯಾದ ರೈತರಿಗೆ ಆದ್ಯತೆ ಮೇರೆಗೆ ಜೇಷ್ಠತೆ ಅನುಸಾರವಾಗಿ ಸಹಾಯಧನಕ್ಕೆ ಪರಿಗಣಿಸಲಾಗುವುದು. ರೈತರು ಯೋಜನೆಯ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ





