ಬೆಳೆ ವಿಮೆ ಮಾಡಿಸಿದ ನಂತರ ಹಣ ಜಮೆಯಾಗಲು ರೈತರೇನು ಮಾಡಬೇಕು?

Written by Ramlinganna

Published on:

what to do for crop insurance :ಮುಂಗಾರು ಹಂಗಾಮಿಗೆ ಬೆಳೆ ವಿಮೆ ಅರ್ಜಿ ಆಹ್ವಾನಿಸಿದ್ದು ತಮಗೆಲ್ಲಾ ಗೊತ್ತಿದ್ದ ಸಂಗತಿ. ಆದರೆ ಬೆಳೆ ವಿಮೆ ಮಾಡಿಸಿದ ಬೆಳೆ ವಿಮೆ ಹಣ ಜಮೆಯಾಗಲು ರೈತರೇನು ಮಾಡಬೇಕು ಬೆಳೆ ವಿಮೆ ಹಣ ಹೇಗೆ ನಿರ್ಧರಿಸುತ್ತಾರೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.

ಪ್ರಸಕ್ತ  ಸಾಲಿನ ಮುಂಗಾರು ಹಂಗಾಮಿನ ವಿವಿಧ ಬೆಳೆಗಳ ವಿಮೆ ಮಾಡಿಸಲು  ವಿವಿಧ ಜಿಲ್ಲೆಗಳ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.ಹೌದು, ಮುಂಗಾರು ಹಂಗಾಮಿನ ಬೆಳೆಗಳಿಗೆ ವಿಮೆ ಮಾಡಿಸಲು ಕೆಲವು ಬೆಳೆಗಳಿಗೆ ಜೂನ್ 30 ಕೊನೆಯ ದಿನವಾಗಿದ್ದರೆ ಇನ್ನೂ ಕೆಲವು ಬೆಳೆಗಳಿಗೆ ಜುಲೈ 31 ರವರೆಗೆ ಕಾಲಾವಕಾಶವಿದೆ. ಹಾಗಾದರೆ ಯಾವ ಯಾವ ಬೆಳೆಗಳಿಗೆ ವಿಮೆ ಮಾಡಿಸಬಹುದು ಎಂಬುದನ್ನು ಸಹ ಇಲ್ಲೇ ತಿಳಿದುಕೊಳ್ಳಬಹುದು.

what to do for crop insurance ಬೆಳೆ ವಿಮೆ ಮಾಡಿಸಿದ ನಂತರ ರೈತರೇನು ಮಾಡಬೇಕು ?

ಬೆಳೆ ವಿಮೆ ಮಾಡಿಸಿದ ನಂತರ ರೈತರು ತಮ್ಮ ವಿಮಾ ಹಣ ಪಾವತಿಸಿದ ರಸೀದಿ ಇಟ್ಟುಕೊಳ್ಳಬೇಕು.  ಹಾಗೂ ಯಾವ ವಿಮಾ ಕಂಪನಿಗೆ ವಿಮೆ ಹಣ ಪಾವತಿಸಿದ್ದಾರೆ ಎಂಬುದನ್ನು ತಿಳಿದುಕೊಳ್ಳಬೇಕು. ಬಹುತೇಕ ರೈತರು ವಿಮೆ ಹಣ ಪಾವತಿಸುತ್ತಾರೆ. ಆದರೆ ಅವರಿಗೆ ಯಾವ ವಿಮಾ ಕಂಪನಿಗೆ ಹಣ ಪಾವತಿಸಿದ್ದಾರೆ ಎಂಬುದೇ ಗೊತ್ತಿರುವುದಿಲ್ಲ.

ಪ್ರತಿಯೊಂದು ಜಿಲ್ಲೆಗೆ ಒಂದು ವಿಮಾ ಕಂಪನಿಯನ್ನು ಸರ್ಕಾರ ನಿಯೋಜಿಸಿದೆ. ನೀವು ಎಲ್ಲಿ ವಿಮಾ ಹಣ ಪಾವತಿಸುತ್ತಿದ್ದೀರೋ ಅಲ್ಲಿಯೇ ಆ ವಿಮಾ ಕಂಪನಿಯ ಸಹಾಯವಾಣಿ ನಂಬರ್ ಪಡೆದುಕೊಳ್ಳಬೇಕು. ಅಷ್ಟೇ ಅಲ್ಲ, ಪ್ರತಿಯೊಂದು ತಾಲೂಕಿಗೂ ಒಬ್ಬ ವಿಮಾ ಪ್ರತಿನಿಧಿ ಇರುತ್ತಾರೆ. ಆ ವಿಮಾ ಪ್ರತಿ ನಿಧಿಯ ಮೊಬೈಲ್ ನಂಬರ್ ಪಡೆದುಕೊಳ್ಳಬೇಕು.ಏಕೆಂದರೆ ಬೆಳೆ ಹಾಳಾದಾಗ ಅವರಿಗೆ ಕರೆ ಮಾಡಬೇಕಾಗುತ್ತದೆ. ಆಗ ಆ ಪ್ರತಿನಿಧಿ ನಿಮ್ಮ ಜಮೀನಿಗೆ ಬರುತ್ತಾರೆ. ಬೆಳೆ ಹಾಳಾಗಿರುವ ಕುರಿತು ಪರಿಶೀಲನೆ ಮಾಡುತ್ತಾರೆ. ನಂತರ ವಿಮಾ ಕಂಪನಿಗೆ ಬೆಳೆ ಹಾಳಾಗಿರುವ ಕುರಿತು ವರದಿ ಸಲ್ಲಿಸುತ್ತಾರೆ. ಹಾಗಾಗಿ ವಿಮಾ ಕಂಪನಿಯ ಪ್ರತಿನಿಧಿಯ ನಂಬರ್ ಇಟ್ಟುಕೊಳ್ಳುವುದು ಅತೀ ಮಹತ್ವದ್ದಾಗಿದೆ.

ಪ್ರಾಕೃತಿಕ ವಿಕೋಪದಿಂದ ಬೆಳೆ ಹಾಳಾದರೆ ಕೂಡಲೇ ನಿಮ್ಮ ತಾಲೂಕಿಗೆ ನಿಯೋಜಿಸಿದ ವಿಮಾ ಪ್ರತಿನಿಧಿಗೆ ಕರೆ ಮಾಡಬೇಕಾಗುತ್ತದೆ.

ಯಾವ ಯಾವ ಬೆಳೆಗೆ ವಿಮೆ ಮಾಡಿಸಬಹುದು ? ಇಲ್ಲಿ ಚೆಕ್ ಮಾಡಿ

ರೈತರು ತಮ್ಮ ಊರಿನ ವ್ಯಾಪ್ತಿಯಲ್ಲಿರುವ ಯಾವ ಯಾವ ಬೆಳೆಗಳಿಗೆ ವಿಮೆ ಮಾಡಿಸಬಹುದು ಎಂಬುದನ್ನು ಚೆಕ್ ಮಾಡಲು ಈ

https://www.samrakshane.karnataka.gov.in/

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಬೆಳೆ ವಿಮೆ ಕುರಿತು ಮಾಹಿತಿ ಪಡೆಯುವ ಪೇಜ್ ಸಂರಕ್ಷಣೆ ತೆರೆದುಕೊಳ್ಳುತ್ತದೆ.

ಅಲ್ಲಿ ನೀವು ಮುಂದೆ ಮೇಲೆ ಕ್ಲಿಕ್ ಮಾಡಬೇಕು.  ಆಗ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ. Premium Calculator ಮೇಲೆ ಕ್ಲಿಕ್ ಮಾಡಬೇಕು ನಂತರ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ.

ಇದನ್ನೂ ಓದಿ  ಬೆಳೆ ವಿಮೆ ಹೆಕ್ಟೇರಿಗೆ ಎಷ್ಟು ಕಟ್ಟಿದರೆ ಎಷ್ಟು ಜಮೆಯಾಗುತ್ತದೆ ? ಇಲ್ಲಿದೆ ಮಾಹಿತಿ

ನಿಮ್ಮ ಜಿಲ್ಲೆ ಆಯ್ಕೆ ಮಾಡಿಕೊಳ್ಳಬೇಕು. ನಿಮ್ಮ ತಾಲೂಕು ಆಯ್ಕೆ ಮಾಡಿಕೊಳ್ಳಬೇಕು. ಹೋಬಳಿ ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ ಗ್ರಾಮ ಆಯ್ಕೆ ಮಾಡಿಕೊಳ್ಳಬೇಕು. ಇದಾದ ನಂತರ ನಿಮ್ಮ ಊರಿಂದ ನೀವು ಯಾವ ಯಾವ ಬೆಳೆಗಳ ವಿಮೆ ಮಾಡಿಸಬಹುದು ಎಂಬ ಬೆಳೆಗಳ ಹೆಸರು ಕಾಣಿಸುತ್ತದೆ. ಬೆಳೆ ಆಯ್ಕೆ ಮಾಡಿಕೊಂಡ ನಂತರ ನೀವು ಎಷ್ಟು ಎಕರೆ  ವಿಮೆ ಮಾಡಿಸಬೇಕೆಂದುಕೊಂಡಿದ್ದೀರೋ ಅಲ್ಲಿ ನಮೂದಿಸಬೇಕು. ನಂತರ Show Premium ಮೇಲೆ ಕ್ಲಿಕ್ ಮಾಡಬೇಕು. ಉದಾಹರಣೆಗೆ ನೀವು ತೊಗರಿ ಒಂದು ಎಕರೆಗೆ ವಿಮೆ ಮಾಡಿಸಬಹುದಾದರೆ ಎಕೆರೆಗೆ ರೈತರು 466 ರೂಪಾಯಿ ಪಾವತಿಸಬೇಕು. ನಿಮ್ಮ ಬೆಳೆ ಸಂಪೂರ್ಣ ಹಾನಿಯಾದರೆ ನಿಮಗೆ 23 ಸಾವಿರ ರೂಪಾಯಿಯವರೆಗೆ ವಿಮೆ ಹಣ ಜಮೆಯಾಗಲಿದೆ. ಇದೇ ರೀತಿ ನೀವು ಬೇರೆ ಬೇರೆ ಬೆಳೆಗಳನ್ನು  ಚೆಕ್ ಮಾಡಬಹುದು.

Leave a Comment