ಬೆಳೆ ವಿಮೆ ಹೆಕ್ಟೇರಿಗೆ ಎಷ್ಟು ಕಟ್ಟಿದರೆ ಎಷ್ಟು ಜಮೆಯಾಗುತ್ತದೆ ? ಇಲ್ಲಿದೆ ಮಾಹಿತಿ

Written by Ramlinganna

Published on:

Bele vime calculation check : 2026-27ನೇ ಸಾಲಿನ ಮುಂಗಾರು ಹಂಗಾಮಿಗಾಗಿ ಮರು ವಿನ್ಯಾಸಗೊಳಿಸಲಾದ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆ ಅನುಷ್ಠಾನಕ್ಕೆಬಂದಿದ್ದು, ಅರ್ಹ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.

Bele vime calculation check ವಿಮಾ ತಂಚು ಮತ್ತು ವಿಮಾ ಮೊತ್ತದ ವಿವರ

ಪ್ರತಿ ಹೆಕ್ಟೇರಿಗೆ ಹಸಿರು ಮೆಣಸಿನ ಕಾಯಿ ವಿಮಾ ಕಂತು 3550 ರೂಪಾಯಿ ಪಾವತಿಸಬೇಕು. ಬೆಳೆ ಹಾನಿಯಾದರೆ 71 ಸಾವಿರ ರೂಪಾಯಿಯವರೆಗೆ ವಿಮೆ ಹಣ ಜಮೆಯಾಗಲಿದೆ.

ಪಪ್ಪಾಯಿ ವಿಮಾ ಕಂತು ಹಣ 6700 ರೂಪಾಯಿ ಹಣ ಪಾವತಿಸಬೇಕು. 1.34,000 ರೂಪಾಯಿ ಜಮೆ ಯಾಗುತ್ತದೆ. ಅದೇ ರೀತಿ ದ್ರಾಕ್ಷಿ ಬೆಳೆಗೆ ಪ್ರತಿ ಹೆಕ್ಟೇರಿಗೆ 14000 ರೂಪಾಯಿ ವಿಮಾ ಮೊತ್ತ ಕಟ್ಟಬೇಕು. 2,80,000 ರೂಪಾಯಿ ಹಣ ಜಮೆಯಾಗಲಿದೆ. ಜುಲೈ 31 ಕೊನೆಯ ದಿನವಾಗಿದೆ.

ಆಸಕ್ತ ರೈತರು ತಮ್ಮ ಹತ್ತಿರದ ಬ್ಯಾಂಕ್, ಗ್ರಾಮ     ಒನ್ ಕೇಂದ್ರ ಅಥವಾ ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ನೋಂದಣಿ ಮಾಡಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ರೈತರು ತಮ್ಮ ತಾಲೂಕಿನ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರನ್ನು, ರೈತ ಸಂಪರ್ಕ ಕೇಂದ್ರದ ಸಹಾಯಕ ತೋಟಗಾರಿಕೆ ಅಧಿಕಾರಿಗಳು ಅಥವಾ ಹತ್ತಿರದ ಬ್ಯಾಂಕ್ ಅಧಿಕಾರಿಗಳನ್ನು ಸಂಪರ್ಕಿಸಲು ಕೋರಲಾಗಿದೆ.

ಬೆಳೆ ವಿಮೆ ನೋಂದಣಿಗೆ ರೈತರು ಕಡ್ಡಾಯವಾಗಿ ಫ್ರೂಟ್ಸ್  ಐಡಿ (ಎಫ್.ಐ.ಡಿ)  ಎನ್.ಪಿ.ಸಿ.ಐ ಸೀಡಿಂಗ್ ಆಗಿರುವ ಬ್ಯಾಂಕ್ ಖಾತೆ, ಆಧಾರ್ ಕಾರ್ಡ್ ಮತ್ತು ಜಮೀನಿನ ದಾಖಲೆ ಹೊಂದಿರಬೇಕು. ರೈತರ ಬ್ಯಾಂಕ್ ಖಾತೆಯ ಎಫ್ಐಡಿ ಮತ್ತು ಆಧಾರ್ ಜೋಡಣೆಯಾಗಿರುವುದು ಕಡ್ಡಾಯವಾಗಿದೆ. ವಿಮೆ ಮಾಡಿಸಿದ ಬೆಳೆಗಳಿಗೆ ಪ್ರಕೃತಿ ವಿಕೋಪ ಅಥವಾ ಇತರೆ ಕಾರಣಗಳಿಂದ ಹಾನಿ ಆದಲ್ಲಿ ರೈತರು 72 ಗಂಟೆಗಳ ಒಳಗಾಗಿ ಕೃಷಿ ಇಲಾಖೆ, ಬ್ಯಾಂಕ್ ಅಥವಾ ವಿಮಾ ಸಂಸ್ಥೆಗೆ ಮಾಹಿತಿ ನೀಡಬೇಕು.

ಹೆಸರು ಬೆಳಿಗೆ ರೈತರು 794 ರೂಪಾಯಿ ಪಾವತಿಸಬೇಕು. ಬೆಳೆ ಹಾನಿಯಾದರ ವಿಮಾ ಮೊತ್ತ 39700 ರೂಪಾಯಿ ಜಮೆಯಾಗುತ್ತದೆ. ಈರುಳ್ಳಿಗೆ 4695 ರೂಪಾಯಿ ಪಾವತಿಸಬೇಕು. ಬೆಳೆ ಹಾನಿಯಾದರೆ 93900 ರೂಪಾಯಿ ಜಮೆಯಾಗುತ್ತದ. ಮುಸುಕಿನ ಜೋಳ ನೀರಾವರಿಗೆ 1524 ರೂಪಾಯಿ ಪಾವತಿಸಬೇಕು. ಇದಕ್ಕೆ 76200 ರೂಪಾಯಿ ಜಮೆಯಾಗುತ್ತದೆ. ಜೋಳ  ನೀರಾವರಿಗೆ 1052 ರೂಪಾಯಿ ಪಾವತಿಸಬೇಕು. ಇದಕ್ಕೆ 52600 ರೂಪಾಯಿ ಜಮೆಯಾಗುತ್ತದೆ. ಸಜ್ಜೆ ಬೆಳೆಗೆ 696 ರುಪಾಯಿ ಪಾವತಿಸಬೇಕು. ಇದಕ್ಕೆ 34800 ರೂಪಾಯಿ ಜಮೆಯಾಗುತ್ತದೆ.

ಇದೇ ರೀತಿ ನೀವು ನಿಮ್ಮ ಜಿಲ್ಲೆಗಳಲ್ಲಿ ಯಾವ ಬೆಳೆಗಳಿಗೆ ಎಷ್ಟು ವಿಮೆ ಹಣ ಕಟ್ಟಿದರೆ ಎಷ್ಟು ವಿಮೆ ಹಣ ಜಮೆಯಾಗುತ್ತದೆ ಎಂಬ ಮಾಹಿತಿಯನ್ನು ಮೊಬೈಲ್ ನಲ್ಲೇ ಚೆಕ್ ಮಾಡಬಹುದು.

Bele vime calculation check ಯಾವ ಯಾವ ಬೆಳೆಗೆ ವಿಮೆ ಮಾಡಿಸಬಹುದು. ವಿಮೆ ಮಾಡಿಸಿದರೆ ಎಷ್ಟು ಹಣ ಜಮೆಯಾಗಬಹುದು

ರೈತರು ತಮ್ಮ ಊರಿನ ವ್ಯಾಪ್ತಿಯಲ್ಲಿರುವ ಯಾವ ಯಾವ ಬೆಳೆಗಳಿಗೆ ವಿಮೆ ಮಾಡಿಸಬಹುದು ಎಂಬುದನ್ನು ಚೆಕ್ ಮಾಡಲು ಈ

https://www.samrakshane.karnataka.gov.in/

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಬೆಳೆ ವಿಮೆ ಕುರಿತು ಮಾಹಿತಿ ಪಡೆಯುವ ಪೇಜ್ ಸಂರಕ್ಷಣೆ ತೆರೆದುಕೊಳ್ಳುತ್ತದೆ.

ಅಲ್ಲಿ ನೀವು ಮುಂದೆ ಮೇಲೆ ಕ್ಲಿಕ್ ಮಾಡಬೇಕು.  ಆಗ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ. Premium Calculator ಮೇಲೆ ಕ್ಲಿಕ್ ಮಾಡಬೇಕು ನಂತರ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ.

ಇದನ್ನೂ ಓದಿ  ನೀವು ನಿಂತಿರುವ ಜಮೀನಿನ ಮಾಲಿಕರು ಯಾರಿದ್ದಾರೆ? ಹೀಗೆ ಚೆಕ್ ಮಾಡಿ

ನಿಮ್ಮ ಜಿಲ್ಲೆ ಆಯ್ಕೆ ಮಾಡಿಕೊಳ್ಳಬೇಕು. ನಿಮ್ಮ ತಾಲೂಕು ಆಯ್ಕೆ ಮಾಡಿಕೊಳ್ಳಬೇಕು. ಹೋಬಳಿ ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ ಗ್ರಾಮ ಆಯ್ಕೆ ಮಾಡಿಕೊಳ್ಳಬೇಕು. ಇದಾದ ನಂತರ ನಿಮ್ಮ ಊರಿಂದ ನೀವು ಯಾವ ಯಾವ ಬೆಳೆಗಳ ವಿಮೆ ಮಾಡಿಸಬಹುದು ಎಂಬ ಬೆಳೆಗಳ ಹೆಸರು ಕಾಣಿಸುತ್ತದೆ. ಬೆಳೆ ಆಯ್ಕೆ ಮಾಡಿಕೊಂಡ ನಂತರ ನೀವು ಎಷ್ಟು ಎಕರೆ  ವಿಮೆ ಮಾಡಿಸಬೇಕೆಂದುಕೊಂಡಿದ್ದೀರೋ ಅಲ್ಲಿ ನಮೂದಿಸಬೇಕು. ನಂತರ Show Premium ಮೇಲೆ ಕ್ಲಿಕ್ ಮಾಡಬೇಕು. ಉದಾಹರಣೆಗೆ ನೀವು ತೊಗರಿ ಒಂದು ಎಕರೆಗೆ ವಿಮೆ ಮಾಡಿಸಬಹುದಾದರೆ ಎಕೆರೆಗೆ ರೈತರು 466 ರೂಪಾಯಿ ಪಾವತಿಸಬೇಕು. ನಿಮ್ಮ ಬೆಳೆ ಸಂಪೂರ್ಣ ಹಾನಿಯಾದರೆ ನಿಮಗೆ 23 ಸಾವಿರ ರೂಪಾಯಿಯವರೆಗೆ ವಿಮೆ ಹಣ ಜಮೆಯಾಗಲಿದೆ. ಇದೇ ರೀತಿ ನೀವು ಬೇರೆ ಬೇರೆ ಬೆಳೆಗಳನ್ನು  ಚೆಕ್ ಮಾಡಬಹುದು.

Leave a Comment