Varunamitra Helpline number contact : ನಿಮ್ಮೂರಿನಲ್ಲಿ ಇಂದು ಮಳೆಯಾಗುತ್ತೋ ಇಲ್ಲವೋ ಮಳೆ ಯಾವಾಗ ಪ್ರಾರಂಭವಾಗುತ್ತದೆ. ಗಾಳಿಯ ವೇಗ ಹೇಗಿರುತ್ತದೆ.? ಗುಡುಗು ಸಿಡಿಲಿನ ಆರ್ಭಟ ಇರುತ್ತದೆಯೇ ಅಥವಾ ಮಳೆಯೊಂದಿಗೆ ಗಾಳಿ ಇರುತ್ತದೆಯೋ? ಸಿಡಿಲು ಯಾವ ಪ್ರದೇಶದಲ್ಲಿ ಬೀಳುತ್ತದೆ ? ಎಂಬಿತ್ಯಾದಿ ಮಳೆಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿಯನ್ನು ಈಗ ರೈತರು ಕುಳಿತಲ್ಲಿಯೇ ತಮ್ಮ ಬಳಿಯಿರುವ ಮೊಬೈಲ್ ನಲ್ಲಿ ಕೇವಲ ಒಂದೇ ನಿಮಿಷದಲ್ಲಿ ಪಡೆಯಬಹುದು.
ಹೌದು, ಮಿತ್ರರೇ, ವರುಣಮಿತ್ರ ಎಂಬ ಸಹಾಯವಾಣಿಯೊಂದಿಗೆ ನೀವು ಎಲ್ಲಾ ಮಾಹಿತಿಯನ್ನು ಮೊಬೈಲ್ ನಲ್ಲೇ ಪಡೆಯಬಹುದು. ಅದು ಹೇಗೆ ಅಂದುಕೊಂಡಿದ್ದೀರಾ ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.
ತಮಗೆಲ್ಲಾ ಗೊತ್ತಿದ್ದ ಹಾಗೆ ಈಗಾಗಲೇ ಮುಂಗಾರು ಪೂರ್ವ ಮಳೆ ಆರಂಭವಾಗಿದೆ. ರಾಜ್ಯದ ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿ ಮಳೆಯಾಗುತ್ತಿದೆ. ಇನ್ನೆರಡು ದಿನಗಳಲ್ಲಿ ಮುಂಗಾರು ಮಳೆ ಆರಂಭವಾಗಲಿದೆ. ಮುಂಗಾರು ಪೂರ್ವ ಮಳೆಯಲ್ಲಿ ಸಿಡಿಲಿನ ಆರ್ಭಟ ಹೆಚ್ಚಿರುತ್ತದೆ. ಹಾಗಾಗಿ ಸಾರ್ವಜನಕರು ತುಂಬಾ ಜಾಗರೂಕತೆಯಿಂದ ಇರಬೇಕೆಂದು ಹವಾಮಾನ ಇಲಾಖೆ ಆಗಾಗ ತಿಳಿಸುತ್ತಲೇ ಬರುತ್ತಿದೆ.
Varunamitra Helpline number contact ನಿಮ್ಮೂರಿನ ಮಳೆಯ ಮಾಹಿತಿ ಬೇಕೆ?
ನಿಮ್ಮೂರಿನಲ್ಲಿ ಮಳೆಯಾಗುವ ಬರುತ್ತದೆ ಎಂಬ ಮಾಹಿತಿ ಬೇಕೆ? ವರುಣಮಿತ್ರ ಸಹಾಯವಾಣಿ ನಂಬರ್ 92433 45433 ಗೆ ಕರೆ ಮಾಡಿದರೆ ಸಾಕು, ನಿಮಗೆ ಮಳೆಯ ಮಾಹಿತಿ ದೊರೆಯಲಿದೆ. ಮುಂದಿನ ದಿನಗಳಲ್ಲಿ ಮಳೆ ಯಾವಾಗ ಬರುತ್ತದೆ ಎಂಬುದನ್ನು ಸಹ ತಿಳಿದುಕೊಳ್ಳಬಹುದು.
ಐದು ದಿನ ಮೊದಲೇ ಮಳೆಯ ಮಾಹಿತಿ ಇಲ್ಲಿ ಪಡೆಯಿರಿ
ಮೇಘದೂತ್ ಆ್ಯಪ್ ಮೂಲಕ ರೈತರು ಐದು ದಿನ ಮೊದಲೇ ಮಳೆಯ ಮಾಹಿತಿ ಸಿಗಲಿದೆ. ಮಳೆಯ ಮಾಹಿತಿ ಪಡೆಯಲು ಈ
https://play.google.com/store/apps/details?id=com.aas.meghdoot&hl=en_IN&gl=US&pli=1
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಮೇಘದೂತ್ ಆ್ಯಪ್ ಓಪನ್ ಆಗುತ್ತದೆ. ಅಲ್ಲಿ Install ಮೇಲೆ ಕ್ಲಿಕ್ ಮಾಡಬೇಕು. ನಂತರ ಓಪನ್ ಮೇಲೆ ಕ್ಲಿಕ್ ಮಾಡಬೇಕು. ಆಗ ಮೇಘದೂತ್ ಆ್ಯಪ್ ಓಪನ್ ಆಗುತ್ತದೆ. ಅಲ್ಲಿ ನೀವು ಭಾಷೆ ಆಯ್ಕೆ ಮಾಡಿಕೊಳ್ಳಬೇಕು. ನಂತರ ಮುಂದೆ ಮೇಲೆ ಕ್ಲಿಕ್ ಮಾಡಬೇಕು.
ಇದನ್ನೂ ಓದಿ : ಈ ಮಹಿಳೆಯರಿಗೆ ಕೊನೆಗೂ ಜಮೆಯಾಯಿತು ಗೃಹಲಕ್ಷ್ಮೀ 30ನೇ ಕಂತಿನ ಹಣ
ಆಗ ನಿಮಗೆ ನಿಖರವಾದ ಬೆಳೆ ಸಲಹೆ ಪಡೆಯಿರಿ ಎಂಬ ಸಂದೇಶ ಕಾಣಿಸುತ್ತದೆ. ಅದರ ಕೆಳಗಡೆಯಿರುವ ಮುಂದೆ ಮೇಲೆ ಕ್ಲಿಕ್ ಮಾಡಬೇಕು. ನಂತರ ವಿವಿಧ ಭಾಷೆಗಳಲ್ಲಿ ದಾದನಂತರ ಹವಾಮಾನ ಮುನ್ಸೂಚನೆ ಎಂಬ ಸಂದೇಶ ಕಾಣಿಸುತ್ತದೆ.
ಕಲಬುರಗಿಯಲ್ಲಿ ಬೆಳಗ್ಗೆ ಮಳೆ
ಕಲಬುರಗಿ ನಗರದ ಸುತ್ತುಮುತ್ತ ಗುರುವಾರ ಬೆಳಗ್ಗೆಯಿಂದ ತುಂತುರು ಮಳೆ ಶುರುವಾಗಿದೆ. ಇದರೊಂದಿಗೆ ಗುಡುಗು ಸಿಡಿಲಿನ ಆರ್ಭಟವೂ ಮುಂದುವರೆದಿದೆ. ಬಿಸಿಲಿಗೆ ಬೆಂಡಾಗಿದ್ದ ಕಲಬುರಗಿ ಮಂದಿಗೆ ತಂಪಾದ ವಾತಾವರಣ ನೆಮ್ಮದಿಯಿಂದ ಉಸಿರಾಡುವಂತೆ ಮಾಡಿದೆ. ಕಳೆದ ಎರಡು ತಿಂಗಳಿಂದ ಬಿಸಿಲಿಗೆ ಕಾದು ಕೆಂಪಾಗಿದ್ದ ನೆಲ ಈಗ ತಂಪಾಗಿದೆ.
ರಾಜ್ಯದಲ್ಲಿ ಒಂದು ವಾರ ಗುಡುಗು ಸಿಡಿಲಿನ ಮಳೆ
ರಾಜ್ಯದಲ್ಲಿ ಇಂದಿನಿಂದ ಒಂದು ವಾರ ಗುಡುಗು ಸಿಡಿಲಿನೊಂದಿಗೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮೂನ್ಸೂಚನೆ ನೀಡಿದೆ.
ರಾಜ್ಯದ ಬಹುತೇಕ ಎಲ್ಲಾ ಕಡೆ ಮಳೆಯಾಗಲಿದೆ. ಗುಡುಗು ಸಿಡಿಲಿನ ಆರ್ಭಟವೂ ಹೆಚ್ಚಿರಲಿದೆ. ಉತ್ತರ ಒಳನಾಡಿನ ಜಿಲ್ಲೆಗಳು, ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಬೆಂಗಳೂರು ಗ್ರಾಮಾಂತರ ಬೆಂಗಳೂರು ನಗರ ಸೇರಿದಂತೆ ವಿವಿಧ ಕಡೆ ಮಳೆಯಾಗಲಿದೆ. ಇದರಿಂದಾಗಿ ಕೃಷಿ ಚಟುವಟಿಕೆಗೂ ಹೊಸ ಜೋಶ್ ಬಂದಂತಾಗಿದೆ.





