Milk Milking Competition application : ದಸರಾ ಹಬ್ಬದ ಪ್ರಯುಕ್ತ ಜಿಲ್ಲಾ ಮಟ್ಟದ ಅಧಿಕ ಹಾಲು ಕರೆಯುವ ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಜಿ ಆಹ್ವಾನಿಸಲಾಗಿದೆ. ಪ್ರಥಮ ಬಹುಮಾನ 50 ಸಾವಿರ ದ್ವಿತೀಯ ಬಹುಮಾನ 30 ಸಾವಿರ ತೃತೀಯ ಬಹುಮಾನ 20 ಸಾವಿರ ರೂಪಾಯಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ.
ಹೌದು, ಶ್ರೀರಂಗಪಟ್ಟಣ ದಸರಾ ಪ್ರಯುಕ್ತ ಜಿಲ್ಲಾಮಟ್ಟದ ಅಧಿಕಾ ಹಾಲು ಕರೆಯುವ ಸ್ಪರ್ಧೆಯಲ್ಲಿ ಭಾಗವಹಿಸುವ ಸ್ಪರ್ಧಿಗಳು ಅಗತ್ಯ ದಾಖಲೆಗಳನ್ನು ಸಲ್ಲಿಸಿ ತಮ್ಮ ಹೆಸರು ನೋಂದಾಯಿಸಿಕೊಳ್ಳಬೇಕೆಂದು ಮನ್ಮುಲ್ ನಿರ್ದೇಶಕ ಬಿ. ಬೊರೇಗೌಡ ತಿಳಿಸಿದರು.
ಅರು ಪಟ್ಟಣದ ಪುರಸಭಾ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಹಾಗೂ ಜಿಲ್ಲಾ ಹಾಲು ಒಕ್ಕೂಟದಿಂದ ಕರೆಯಲಾಗಿದ್ದ ವಿಶೇಷ ಸಭೆಯಲ್ಲಿ ದಸರಾ ಅಂಗವಾಗಿ ಆಯೋಜಿಸಿರುವ ಜಿಲ್ಲಾಮಟ್ಟದ ಅಧಿಕ ಹಾಲು ಕರೆಯುವ ಸ್ಪರ್ಧೆ ಪೋಸ್ಟರ್ ಅನ್ನು ತಾಲೂಕು ಆಡಳಿತದಿಂದ ಬಿಡುಗಡೆಗೊಳಿಸಿ ಮಾತನಾಡಿದರು.
Milk Milking Competition application ಪ್ರಥಮ ಬಹುಮಾನ ದ್ವಿತೀಯ ಬಹುಮಾನ ತೃತೀಯ ಬಹುಮಾನ ಎಷ್ಟು ?
ವಿಜೇತ ಸ್ಪರ್ಧಿಗಳಿಗೆ ಪ್ರಥಮ ಬಹುಮಾನ ಮತ್ತು ಟ್ರೋಫಿಯೊಂದಿಗೆ 50 ಸಾವಿರ ರೂಪಾಯಿ, ದ್ವಿತೀಯ ಬಹುಮಾನ 30 ಸಾವಿರ ರೂಪಾಯಿ ಮತ್ತು ಟ್ರೋಫಿ ನೀಡಲಾಗುವುದು. ಅದೇ ರೀತಿ ಸಮಾಧಾನಕರ ಬಹುಮಾನ 10 ಸಾವಿರ ರೂಪಾಯಿ ನೀಡಲಾಗುತ್ತಿದೆ ಎಂದರು.
ಸ್ಪರ್ಧೆಯಲ್ಲಿ ಹಸುವಿನ ಮಾಲಿಕರು ಕಡ್ಡಾಯವಾಗಿ ಮಂಡ್ಯ ಜಿಲ್ಲೆಯವರೇ ಆಗಿರಬೇಕು. ತಾಲೂಕು ಪಶು ಆಸ್ಪತ್ರೆ ಕಚೇರಿಯಲ್ಲಿ ಅಕ್ಟೋಬರ್ 8 ರಿಂದ ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯೊಳಗೆ ಹಾಗೂ ಅಕ್ಟೋಬ್ರ 14 ರ ಬೆಳಗ್ಗೆ 10 ರೊಳಗೆ ಆಧಾರ್ ಕಾರ್ಡ್, ತಮ್ಮ ಭಾವಚಿತ್ರದೊಂದಿಗೆ ಸೂಕ್ತ ದಾಖಲೆಗಳನ್ನು ಸಲ್ಲಿಸಿ ಕಡ್ಡಾಯವಾಗಿ ಉಚಿತ ನೋಂದಣಿ ಮಾಡಿಸಿಕೊಳ್ಳಬೇಕು.
ಪಾಂಡವಪುರದಲ್ಲಿ ಹಾಲು ಕರೆಯುವ ಸ್ಪರ್ಧೆ
ಕ್ಯಾತನಹಳ್ಳಿ ಗ್ರಾಮದಲ್ಲಿ ಶಾಸಕ ದರ್ಶನ್ ಪುಟ್ಟಣ್ಮಯ್ಯ ಜನ್ಮದಿನದ ಪ್ರಯುಕ್ತ ಗುರುವಾರ ಹಾಗೂ ಶುಕ್ರವಾರ ಆಯೋಜಿಸಿದ್ದ ರಾಜ್ಯಮಟ್ಟದ ಹಾಲು ಕರೆಯುವ ಸ್ಪರ್ಧೆಯಲ್ಲಿ ಬಿಡದಿಯ ಅಶ್ವಿನಿ ಅಂಬರೀಶ ಅವರ ಹಸುವಿನಿಂದ 45 ಲೀಟರ್ 300 ಗ್ರಾಂ ಹಾಲು ಕರೆದು ಪ್ರಥಮ ಸ್ಥಾನ 75 ಸಾವಿರ ರೂಪಾಯಿ ಹಾಗೂ ಟ್ರೋಫಿ ಹಾಗೂ ಪಶು ಆಹಾರ ಬಹುಮಾನ ಪಡೆದರು.
ಇದನ್ನೂ ಓದಿ ಪಿಎಂ ಕಿಸಾನ್ ಹೊಸ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೇ? ಇಲ್ಲೇ ಚೆಕ್ ಮಾಡಿ
ಶ್ರೀರಂಗ ಪಟ್ಟಣ ತಾಲೂಕು ಚಿನ್ನೇನಹಳ್ಳಿ ಗ್ರಾಮದ ಕಿರಣ ಗುಳಿ ತಮ್ಮ ಹಸುವಿನಿಂದ 41 ಲೀಟರ್ 970 ಗ್ರಾಂ ಹಾಲು ಕರೆದು ದ್ವಿತೀಯ ಸ್ಥಾನ 55 ಸಾವಿರ ರೂಪಾಯಿ ನಗದು, ಟ್ರೋಫಿ ಹಾಗೂ ಪಶು ಆಹಾರ ಪಡೆದರು.
ಚನ್ನಪಟ್ಟಣದ ಅಭಿಷೇಕ್ ತಮ್ಮ ಹಸುವಿನಲ್ಲಿ 36 ಲೀಟರ್ 750 ಗ್ರಾಂ ಹಾಲು ಕರೆದು ತೃತೀಯ ಬಹುಮಾನ 25 ಸಾವಿರ ರೂಪಾಯಿ ನಗದು, ಟ್ರೋಫಿ ಹಾಗೂ ಪಶು ಆಹಾರ ಪಡೆದರು.
ರೈತರಿಗೆ ವೈಜ್ಞಾನಿಕ ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿ
ಕಲಬುರಗಿ ಪಶುಪಾಲನಾ ಮತ್ತು ಪಶು ವೈದ್ಯಕೀಯ ತರಬೇತಿ ಕೇಂದ್ರ ಸಂಸ್ಥೆಯಲ್ಲಿ ಇದೇ ಅಕ್ಟೋಬರ್ 8 ಹಾಗೂ 9 ರಂದು ಕಲಬುರಗಿ ಜಿಲ್ಲೆಯ ಎಲ್ಲಾ ರೈತ ಬಾಂಧವರಿಗಾಗಿ ಎರಡು ದಿನಗಳ ವೈಜ್ಞಾನಿಕ ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಕಲಬುರಗಿ ಪಶುಪಾಲನಾ ಮತ್ತು ಪಶು ವೈದ್ಯಕೀಯ ತರಬೇತಿ ಕೇಂದ್ರದ ಉಪ ನಿರ್ದೇಶಕರು ತಿಳಿಸಿದ್ದಾರೆ.
ತರಬೇತಿ ಪಡೆಯಲಿಚ್ಚಿಸುವ ರೈತರು ತಮ್ಮ ಆಧಾರ್ ಕಾರ್ಡ್, ನಕಲು ಪ್ರತಿ, ಎರಡು ಪಾಸ್ ಪೋರ್ಟ್ ಸೈಜ್ ಕಲರ್ ಫೋಟೋ ಹಾಗೂ ಜಾತಿ ಪ್ರಮಾಣ ಪತ್ರ ನಕಲು ಪ್ರತಿ (ಎಸ್.ಸಿ, ಮತ್ತು ಎಸ್.ಟಿ ಅಭ್ಯರ್ಥಿಗಳು ಮಾತ್ರ) ಸಲ್ಲಿಸಬೇಕು.





