PMkisan 24th installment release : ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳಿಗೆ ಇಲ್ಲಿದೆ ಗುಡ್ ನ್ಯೂಸ್, ಪಿಎಂ ಕಿಸಾನ್ 24ನೇ ಕಂತಿನ ಹಣ ಜಮೆಗಾಗಿ ಕಾಯುತ್ತಿರುವ ರೈತರಿಗೆ ಸಂತಸದ ಸುದ್ದಿ, ಅದೇನಪಾ ಅಂದರೆ ಇದೇ ತಿಂಗಳು ಅಕ್ಟೋಬರ್ 30 ರಂದು ರೈತರ ಖಾತೆಗೆ ಪಿಎಂ ಕಿಸಾನ್ ಹಣ ಜಮೆಯಾಗಲಿದೆ. ಅಂದು ಪಿಎಂ ನರೇಂದ್ರ ಮೋದಿಯವರು ಡಿಬಿಟಿ ಮೂಲಕ ರೈತರ ಖಾತೆಗೆ ಜಮೆಯಾಗುವ ಪ್ರಕ್ರಿಯೆಯನ್ನು ಚಾಲನೆ ನೀಡಲಿದ್ದಾರೆ.
ಹೌದು, ಯಾರು ಯಾರು ಪಿಎಂ ಕಿಸಾನ್ ಯೋಜನೆಗೆ ಇಕೆವೈಸಿ ಮಾಡಿಸಿದ್ದೀರೋ ಅವರು ಚಿಂತೆ ಅವಶ್ಯಕತೆಯಿಲ್ಲ. ಇನ್ನೂವರೆಗೆ ಯಾರು ಯಾರು ಇಕೆವೈಸಿ ಮಾಡಿಸಿಲ್ಲವೋ ಕೂಡಲೇ ನಿಮ್ಮ ಹತ್ತಿರದ ಸಿಎಸ್.ಸಿ ಕೇಂದ್ರಗಳಿಗೆ ಹೋಗಿ ಆಧಾರ್ ಕಾರ್ಡ್ ನಂಬರ್ ಸಹಾಯದೊಂದಿಗೆ ಇಕೆವೈಸಿ ಮಾಡಿಸಿಕೊಳ್ಳಬೇಕು.
PMkisan 24th installment release ಪಿಎಂ ಕಿಸಾನ್ ಹಣ ಯಾವ ರೈತರ ಖಾತೆಗೆ ಜಮೆಯಾಗಲಿದೆ ?
ಪಿಎಂ ಕಿಸಾನ್ 24ನೇ ಕಂತಿನ ಹಣ ಯಾವ ಯಾವ ರೈತರಿಗೆ ಜಮೆಯಾಗಲಿದೆ ಎಂಬ ಸಂಶಯ ಈಗ ಬೇಡ, ಈ ಕೆಳಗಿನ ಪಟ್ಟಿಯಲ್ಲಿರುವ ಫಲಾನುಭವಿಗಳ ಖಾತೆಗೆ ಮುಂದಿನ ಕಂತು ಜಮೆಯಾಗಲಿದೆ. ಈ ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಲು ಈ
https://pmkisan.gov.in/Rpt_BeneficiaryStatus_pub.aspx
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮಗೆ ಪಿಎಂ ಕಿಸಾನ್ ಫಲಾನುಭವಿಗಳ ಹೆಸರು ಚೆಕ್ ಮಾಡುವ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನೀವು ಕರ್ನಾಟಕ ರಾಜ್ಯವನ್ನು ಆಯ್ಕೆ ಮಾಡಿಕೊಳ್ಳಬೇಕು. ಇದಾದ ನಂತರ ನೀವು ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿಕೊಳ್ಳಬೇಕು. ಇದಾದ ನಂತರ ನಿಮ್ಮ ತಾಲೂಕು ಆಯ್ಕೆ ಮಾಡಿಕೊಳ್ಳಬೇಕು. ಬ್ಲಾಕ್ ನಲ್ಲಿಯೂ ಸಹ ನಿಮ್ಮ ತಾಲೂಕು ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ ಊರು ಆಯ್ಕೆ ಮಾಡಿಕೊಳ್ಳಬೇಕು. ನಂತರ Get Report ಮೇಲೆ ಕ್ಲಿಕ್ ಮಾಡಬೇಕು, ಆಗ ನೀವು ಆಯ್ಕೆ ಮಾಡಿಕೊಂಡ ಊರಿನಲ್ಲಿ ಯಾವ ಯಾವ ರೈತರ ಹೆಸರಿದೆಯೋ ಅವರ ಖಾತೆಗೆ ಇದೇ ತಿಂಗಳು ಅಕ್ಟೋಬರ್ 30 ರಂದು ಪಿಎಂ ಕಿಸಾನ್ ಯೋಜನೆಯ 24ನೇ ಕಂತಿನ ಹಣ ಜಮೆಯಾಗಲಿದೆ.
ಇಕೆವೈಸಿ ಮಾಡಿಸಿದ್ದೀರೋ ?
ಪಿಎಂ ಕಿಸಾನ್ ಫಲಾನುಭವಿಗಳು ಇನ್ನೂವರೆಗೆ ಒಂದು ವೇಳೆ ನೀವು ಇಕೆವೈಸಿ ಮಾಡಿಸಿಲ್ಲವಾದರೆ ಕೂಡಲೇ ಇಕೆವೈಸಿ ಮಾಡಿಸಿಕೊಳ್ಳಬೇಕು. ಕೇವಲ ಒಂದು ನಿಮಿಷ ಹಿಡಿಯಲಿದೆ. ನಿಮ್ಮ ಫೋಟೋದೊಂದಿಗೆ ಅಥವಾ ಬಯೋಮೆಟ್ರಿಕ್ ಆಧಾರದ ಮೇಲೆ ಇಕೆವೈಸಿಯನ್ನು ಸಿ.ಎಸ್.ಸಿ ಕೇಂದ್ರಗಳಲ್ಲಿ ಮಾಡಲಾಗುವುದು. ಅಥವಾ ನಿಮ್ಮ ಬಳಿಯಿರುವ ಫೋನ್ ನಲ್ಲಿಯೂ ಸಹ ಪಿಎಂ ಕಿಸಾನ್ ಯಾಪ್ ಇನಸ್ಟಾಲ್ ಮಾಡಿಕೊಂಡು ಇಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು.
ಏನಿದು ಪಿಎಂ ಕಿಸಾನ್ ಹಣ ?
ದೇಶದ ರೈತರು ಆರ್ಥಿಕವಾಗಿ ಸಹಾಯವಾಗಲೆಂಬ ಉದ್ದೇಶದಿಂದ ಕೇಂದ್ರ ಸರ್ಕಾರವು ಪಿಎಂ ಕಿಸಾನ್ ಯೋಜನೆಯನ್ನು ಆರಂಭಿಸಿದೆ. ಪ್ರತಿ ವರ್ಷ 6 ಸಾವಿರ ರೂಪಾಯಿ ಹಣವನ್ನು ಪ್ರತಿ ನಾಲ್ಕು ತಿಂಗಳಿಗೊಮ್ಮೆ 2 ಸಾವಿರ ರೂಪಾಯಿಯಿಂತೆ ಹಣ ಜಮೆ ಮಾಡಲಾಗುತ್ತದೆ. ಒಂದು ವರ್ಷಕ್ಕೆ 6 ಸಾವಿರ ರೂಪಾಯಿ ಜಮೆಯಾಗಲಿದೆ. ಇಲ್ಲಿಯವರೆಗೆ ಒಟ್ಟು 23 ಕಂತುಗಳ ಹಣ ರೈತರ ಖಾತೆಗೆ ಅಂದರೆ 46 ಸಾವಿರ ರೂಪಾಯಿ ಪಿಎಂ ಕಿಸಾನ್ ಯೋಜನೆಯಿಂದ ರೈತರ ಖಾತೆಗೆ ಜಮೆಯಾಗಿದೆ. ಮುಂದಿನ ಕಂತು 24ನೇ ಕಂತಿನ ಹಣದೊಂದಿಗೆ ಒಟ್ಟು 48 ಸಾವಿರ ರೂಪಾಯಿ ಹಣವನ್ನು ರೈತರ ಖಾತೆಗೆ ಜಮೆ ಮಾಡಿದಂತಾಗುತ್ತದೆ.
ಇದನ್ನೂ ಓದಿ : ಪಿಎಂ ಕಿಸಾನ್ ಮಾನಧನ್ ಯೋಜನೆಯಡಿ ರೈತರಿಗೆ ಸಿಗಲಿದೆ ತಿಂಗಳಿಗೆ 3 ಸಾವಿರ
ಪ್ರತಿ ನಾಲ್ಕು ತಿಂಗಳಿಗೊಮ್ಮೆ ಜಮೆಯಾಗುವ ಈ ಹಣ ಕಳೆದ ಕಂತು ಅಂದರೆ 23ನೇ ಕಂತಿನ ಹಣ ಜೂನ್ ತಿಂಗಳಲ 20 ರಂದು ಪಶ್ಚಿಮ ಬಂಗಾಳ ರಾಜ್ಯದ ಹೂಗ್ಲಿ ಜಿಲ್ಲೆಯಿಂದ ಬಿಡುಗಡೆಯಾಗಿತ್ತು.





