Bara Parihara release tomarrow : ರಾಜ್ಯ ಸರ್ಕಾರವು ಬರದಿಂದ ಬೆಳೆ ನಷ್ಟವಾದ ಅರ್ಹ ರೈತರ ಖಾತೆಗೆ 2500 ರೂಪಾಯಿ ಮಧ್ಯಂತರ ಪರಿಹಾರ ಜಮೆ ಮಾಡಲಾಗುವುದು ಎಂದು ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ.
ಹೌದು, ತಮಗೆಲ್ಲಾ ಗೊತ್ತಿದ್ದ ಹಾಗೆ ಬರ ಪರಿಹಾರ ಹಣ ಬಿಡುಗಡೆಯಾಗಿದೆ. ಸೋಮವಾರಿಂದ ರೈತರ ಖಾತೆಗೆ ಜಮೆ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.
ಅರ್ಹ ರೈತರನ್ನು ಗುರುತಿಸಲು ಸೂಚಿಸಿರುವ 17 ಅಂಶಗಳನ್ನು ತೊಡಕುಗಳಾಗಿ ಬಿಬಿಸುತ್ತಿರುವ ಪ್ರತಿಪಕ್ಷ ನಾಯಕ ಆರ್. ಅಶೋಕ ವರು ತಮ್ಮ ಸ್ಥಾದನ ಜವಾಬ್ದಾರಿ ಅರಿತು ನಡೆದುಕೊಳ್ಳಬೇಕು. ಎಂದು ಪರಮೇಶ್ವರ್ ತಿರುಗೇಟು ನೀಡಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ನೈಜ ಫಲಾನುಭವಿಗಳಿಗೆ ಪರಿಹಾರ ತಲುಪಿಸುವುದು, ಒಂದೇ ಫಲಾನುಭವಿಗೆ ಎರಡೆರಡು ಬಾರಿ ಹಣ ಪಾವತಿ ತಡೆಯುವುದು ಹಾಗೂ ಸಾರ್ವಜನಿಕ ಹಣದ ಸದ್ಬಳಕೆಯನ್ನು ಖಚಿತಪಡಿಸಿಕೊಳ್ಳುವುದು ನಿಯಮಗಳ ಉದ್ದೇಶವಾಗಿದೆ.
ಕೇಂದ್ರ ಸರ್ಕಾರದ ಎಸ್.ಡಿ.ಆರ್.ಎಪ್, ಎನ್.ಡಿ.ಆರ್.ಎಪ್ ಪರಿಹಾರ ಮಾನದಂಡಗಳ ಭಾಗವಾಗಿದ್ದು, 2005 ರಿಂದಲೇ ಜಾರಿಯಲ್ಲಿದೆ ಎಂದು ಪರಮೇಶ್ವರ್ ತಿರುಗೇಟು ನೀಡಿದ್ದಾರೆ.
ಎರಡು ಹೆಕ್ಟೇರ್ ಮಿತಿಯು ಬೆಳೆಹಾನಿ ಪರಿಹಾರಕ್ಕೆ ಪರಿಗಣಿಸಬಹುದಾದ ಗರಿಷ್ಠ ವಿಸ್ತೀರ್ಣಕ್ಕೆ ಸಂಬಂಧಿಸಿದ್ದೇ ಹೊರತು, ಎಱಡು ಹೆಕ್ಟೇರ್ ಗಿಂತ ಹೆಚ್ಚು ಜಮೀನು ಹೊಂದಿರುವ ರೈತರು ಪರಿಹಾರಕ್ಕೆ ಅನರ್ಹರು ಎಂದರ್ಥವಲ್ಲ, ಇದು ಕರ್ನಾಟಕ ಸರ್ಕಾರ ಹೊಸದಾಗಿ ವಿಧಿಸಿರುವ ನಿರ್ಬಂಧವಲ್ಲ. ಕೇಂದ್ರ ಸರ್ಕಾರ ನಿಗದಿಪಡಿಸಿರುವ ನಿಯಮಗಳಿಗೂ ಅವುಗಳನ್ನು ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರ ಅಳವಡಿಸಿಕೊಂಡಿರುವ ಪ್ರಕ್ರಿಯೆಗಳಿಗೂ ಇರುವ ವ್ಯತ್ಯಾಸವನ್ನು ವಿರೋಧ ಪಕ್ಷದವರು ಅರ್ಥಮಾಡಿಕೊಳ್ಳಬೇಕು ಎಂದಿದ್ದಾರೆ.
Bara Parihara release tomarrow ಬರ ಪರಿಹಾರ ನಿಮಗೆ ಜಮೆಯಾಗಿದೆಯೇ ಹೀಗೆ ಚೆಕ್ ಮಾಡಿ
ಬರ ಪರಿಹಾರ ಹಣ ನಿಮ್ಮ ಖಾತೆಗೆ ಇಂದು ಜಮೆಯಾಗಿದೆಯೇ ಎಂಬುದನ್ನು ಚೆಕ್ ಮಾಡಲು ಈ
https://parihara.karnataka.gov.in/PariharaPayment/
ಲಿಂಕ್ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ.. ಆಗ ಪರಿಹಾರ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನಿಮಗೆ ಪರಿಹಾರ ನಮೂದು ಸಂಖ್ಯೆ ಆಧಾರ್ ಸಂಖ್ಯೆ ಎಂಬ ಎರಡು ಆಯ್ಕೆಗಳು ಕಾಣಿಸುತ್ತವೆ. ಅಲ್ಲಿ ನೀವು ಆಧಾರ್ ಸಂಖ್ಯೆ ಆಯ್ಕೆ ಮಾಡಿಕೊಳ್ಳಬೇಕು. ಅಲ್ಲಿ ನೀವು Calamity Type ನಲ್ಲಿ Drought ಆಯ್ಕೆ ಮಾಡಿಕೊಳ್ಳಬೇಕು Year ನಲ್ಲಿ 2025-27 ಆಯ್ಕೆ ಮಾಡಿಕೊಳ್ಳಬೇಕು. ನಂತರ ನೀವು ನಿಮ್ಮ ಆಧಾರ್ ಕಾರ್ಡ್ ನಮೂದಿಸಬೇಕು. ಅಲ್ಲಿ ಕಾಣುವ ಕ್ಯಾಪ್ಚ್ಯಾ ಕೋಡ್ ಹಾಕಬೇಕು. ನಂತರ ವಿವರಗಳನ್ನು ಪಡೆಯಿರಿ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮಗೆ ಬರ ಪರಿಹಾರ ಹಣ ಜಮೆಯಾಗಿದ್ದರೆ ಯಾವ ಸರ್ವೆ ನಂಬರಿಗೆ ಯಾವಾಗ ಬ್ಯಾಂಕ್ ನ ಖಾತೆಗೆ ಜಮೆಯಾಗಿದೆ ಎಂಬ ಮಾಹಿತಿ ಕಾಣಿಸುತ್ತದೆ.
ಮುಂದಿನ ಕಂತು ಯಾವಾಗ ಬಿಡುಗಡೆ ?
ಸೋಮವಾರ ನಂತರ ಪರಿಹಾರ ವಿತರಣೆ ಪ್ರಕ್ರಿಯೆ ಆರಂಭವಾಗಲಿದ್ದು, ಅರ್ಹ ರೈತರ ಖಾತೆಗೆ ಮಧ್ಯಂತರ ಪರಿಹಾರದ ಹಣ ಜಮೆ ಮಾಡಲು ನಿರ್ಧರಿಸಿದ್ದೇವೆ. ಇದು ಪರಿಹಾರದ ಮೊದಲ ಕಂತು ಮಾತ್ರವೇ ಹೊರತು ರೈತರಿಗೆ ಸಲ್ಲಬೇಕಾದ ಸಂಪೂರ್ಣ ಪರಿಹಾರವಲ್ಲ. ಕೇಂದ್ರ ಸರ್ಕಾರವು ಎನ್.ಡಿ.ಆರ್.ಎಫ್ ಅನುದಾನ ಬಿಡುಗಡೆ ಮಾಡಿದ ಕೂಡಲೇ ಮುಂದಿನ ಕಂತಿ ಪರಿಹಾರ ವಿತರಿಸಲಾಗುವುದು ಎಂದರು.
ಇದನ್ನೂ ಓದಿ ಮಹಿಳೆಯರಿಗೆ ಸ್ವಂತ ಉದ್ಯೋಗ ಮಾಡಲು 2 ಲಕ್ಷ ರೂಪಾಯಿಯವರೆಗೆ ಸಬ್ಸಿಡಿ ಸಿಗಲಿದೆ
ಫಲಾನುಭವಿ ರೈತರ ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆಯಾಗಿರುವ ಖಾತೆಗೆ ಜಮೆಯಾಗಲಿದೆ. ಡಿಬಿಟಿ ಮೂಲಕವೇ ಹಣ ವರ್ಗಾವಣೆಯಾಗಲಿದೆ.
ಎಸ್.ಡಿ.ಆರ್.ಎಫ್ ಎನ್.ಡಿ.ಆರ್.ಎಫ್ ನಿಯಮಗಳ ಪ್ರಕಾರ ಎಷ್ಟು ಹಣ ಜಮೆಯಾಗಬೇಕು ?
ಕೇಂದ್ರ ಗೃಹ ಸಚಿವಾಲಯ ಹೊರಡಿಸಿರುವ ಪರಿಷ್ಕೃತ ಮಾನದಂಡಗಳ ಪ್ರಕಾರ, ಮಳೆಯಾಶ್ರಿತ ಬೆಳೆಗಳಿಗೆ ಪ್ರತಿ ಹೆಕ್ಟೇರಿಗೆ 11 ಸಾವಿರ ರೂಪಾಯಿ, ನೀರಾವರಿ ಬೆಳೆಗೆ ಪ್ರತಿ ಹೆಕ್ಟೇರಿಗೆ 22 ಸಾವಿರ ರೂಪಾಯಿ ಬಹುವಾರ್ಷಿಕ ಹಾಗೂ ತೋಟಗಾರಿಕೆ ಬೆಳೆಗಳಿಗೆ 28 ಸಾವಿರ ರೂಪಾಯಿ ಪರಿಹಾರ ನೀಡಲು ಅವಕಾಶವಿದೆ. ನಿಗದಿತ ಮಿತಿಗಳ ಅನ್ವಯ ಅರ್ಹ ರೈತರಿಗೆ ಸಲ್ಲಿಸಬೇಕಾದ ಉಳಿದ ಪರಿಹಾರವನ್ನು ಅಗತ್ಯ ಎನ್.ಡಿ.ಆರ್.ಎಫ್ ಅನುದಾನ ಬಿಡುಗಡೆಯಾದ ಬಳಿಕ ವಿತರಿಸಲಾಗುವುದು ಎಂದು ಅವರು ಹೇಳಿದ್ದಾರೆ.





