Bara Parihara payment Condition : ಬರ ಪರಿಹಾರ ಹಣ ಬಿಡುಗಡೆಯಾಗಿದೆ. ಆದರೆ ರೈತರಿಗೆ ಜಮೆ ಮಾಡಲು ಕೆಲವು ಷರತ್ತುಗಳನ್ನು ವಿಧಿಸಲಾಗಿದೆ. ಆ ಷರತ್ತುಗಳು ಯಾವುದು ರೈತರೇನು ಮಾಬೇಕು ಎಂಬುದ ಮಾಹಿತಿ ಇಲ್ಲಿದೆ.
ಬರ ಪರಿಹಾರ ಹಣಕ್ಕಾಗಿ ರೈತರು ಯಾವುದೇ ಅರ್ಜಿ ಸಲ್ಲಿಸಬೇಕಿಲ್ಲ. ರೈತರು ಪರಿಹಾರಕ್ಕಾಗಿ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ. ಕಂದಾಯ ಇಲಾಖೆಯ ಪರಿಹಾರ ತಂತ್ರಾಂಶ ಫ್ರೂಟ್ಸ್ ಪೋರ್ಟಲ್ ಹಾಗೂ ಮಂಗಾರು ಬೆಳೆ ಸಮೀಕ್ಷೆಯ ಅಧಿಕೃತ ದತ್ತಾಂಶದ ಆಧಾರದ ಮೇಲೆ ನೇರವಾಗಿ ಅರ್ಹರನ್ನು ಗುರುತಿಸಲಾಗುತ್ತದೆ.
ಆಧಾರ್ ಲಿಂಕ್ ಖಾತೆಗೆ ಜಮೆ
ಫಲಾನುಭವಿ ರೈತರ ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆಯಾಗಿರಬೇಕು. ಡಿಬಿಟಿ ಮೂಲಕವೇ ಹಣ ವರ್ಗಾವಣೆಯಾಗಲಿದೆ.
Bara Parihara payment Condition ಸಣ್ಣ ಮತ್ತು ಅತೀಸಣ್ಣ ರೈತರಿಗೆ ಮೊದಲ ಆದ್ಯತೆ
ಬೆಳೆ ಹಾನಿ ಪರಿಹಾರ ಹಣ ಜಮೆ ಮಾಡುವಾಗ ಆಯಾ ತಾಲೂಕಿನಲ್ಲಿ ಅತೀ ಕಡಿಮೆ ಜಮೀನು ಹೊಂದಿರುವ ಸಣ್ಣ ರೈತರಿಂದ ಆರಂಭಿಸಿ ಹೆಚ್ಚು ಜಮೀನು ಹೊಂದಿರುವ ರೈತರಿಗೆ ಏರಿಕೆ ಕ್ರಮದಲ್ಲಿ ಹಣ ಪಾವತಿಸಲಾಗುತ್ತದೆ. ಬೆಳೆಗಳಲ್ಲೂ ಮೊದಲು ಮಳೆಯಾಶ್ರಿತ ನಂತರ ನೀರಾವರಿ ಹಾಗೂ ಕೊನೆಯದಾಗಿ ಬಹುವಾರ್ಷಿಕ ಬೆಳೆಗೆ ಆದ್ಯತೆ ನೀಡಲಾಗುವುದು.
ಗರಿಷ್ಠ 2 ಹೆಕ್ಟೇರ್ ರವರಗೆ ಬರ ಪರಿಹಾರ ಹಣ ಜಮೆಯಾಗಲಿದೆ
ಬ್ಬ ರೈತ ಒಂದಕ್ಕಿಂತ ಹೆಚ್ಚು ತಾಲೂಕುಗಳಲ್ಲಿ ಜಮೀನು ಹೊಂದಿದ್ದರೂ, ಆತನಿಗೆ ಗರಿಷ್ಠ 2 ಹೆಕ್ಟೇರ ಗೆ ಮಾತ್ರ ಪರಿಹಾರ ಸೀಮಿತವಾಗಿರುತ್ತದೆ.
ಮೊದಲ ಕಂತು ಎಷ್ಟು ಹಣ ಜಮೆ
ಬರಪೀಡಿತ ತಾಲೂಕುಗಳ ರೈತರಿಗೆ ಮೊದಲ ಹಂತದ ಬೆಳೆ ಹಾನಿ ಪರಿಹಾರ ಹಣವನ್ನು ಪ್ರತಿ ಅರ್ಹ ರೈತರಿಗೆ 2500 ರೂಪಾಯಿ ಬಿಡುಗಡೆ ಮಾಡಲು ಆದೇಶಿದೆ.
ಹೌದು, ಈ ಹಣ ಜಮೆಗೆ ಕೆಲವು ಷರತ್ತುಗಳನ್ನು ವಿಧಿಸಿದೆ. ರಾಜ್ಯದ 226 ಬರಪೀಡಿತ ತಾಲೂಕುಗಳ ಸುಮಾರು 45 ರಿಂದ 50 ಲಕ್ಷ ರೈತರಿಗೆ ಈ ಆದೇಶದಿಂದ ನೇರ ಪ್ರಯೋಜನ ಸಿಗಲಿದೆ.
ಬೆಳೆ ಹಾನಿ ಪರಿಹಾರಕ್ಕೆ ಅರ್ಹತೆ ಪಡೆದಿರುವ ರೈತರಿಗೆ ಮೊದಲ ಕಂತಾಗಿ ಗರಿಷ್ಠ 2500 ರೂಪಾಯಿ ತಕ್ಷಣವೇ ಬಿಡುಗಡೆ ಮಾಡಲಾಗುತ್ತದೆ. ಜಂಟಿ ಖಾತೆದಾರರಾಗಿದ್ದಲ್ಲಿ ಫ್ರೂಟ್ಸ್ ತಂತ್ರಾಂಶದಲ್ಲಿ ನೋಂದಾಯಿಸಲಾದ ವಿಸ್ತೀರ್ಣಕ್ಕೆ ಅನುಗುಣವಾಗಿ ಪರಿಹಾರವನ್ನು ಹಂಚಿಕೆ ಮಾಡಲಾಗುತ್ತದೆ. ಒಂದೇ ಜಮೀನಿಗೆ ಯಾವುದೇ ಕಾರಣಕ್ಕೂ ಎರಡೆರಡು ಬಾರಿ ಪರಿಹಾರ ಪಾವತಿಸಯಾಗುವುದಿಲ್ಲ.
ಇದನ್ನೂ ಓದಿ ನಿಮ್ಮ ಜಮೀನಿನ ಟೊಂಚ್ ನಕ್ಷೆ ಮೊಬೈಲ್ ನಲ್ಲಿ ಹೀಗೆ ಪಡೆಯಿರಿ
ಪಹಣಿ ಮತ್ತು ಬೆಳೆ ಸಮೀಕ್ಷೆಯ ವಿಸ್ತೀರ್ಣದಲ್ಲಿ ವ್ಯತ್ಯಾಸವಿದ್ದರೆ ಗ್ರಾಮ ಆಡಳಿತಾಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ 3 ದಿನಗಳಲ್ಲಿ ಬಯೋಮೆಟ್ರಿಕ್ ದೃಢೀಕರಣದೊಂದಿಗೆ ಸರಿಪಡಿಸಬೇಕು.
ಆರ್.ಟಿ.ಸಿ ಕಾಲಂನಲ್ಲಿ ಅಧಿಕೃತವಾಗಿ ಭೂ ಪರಿವರ್ತನೆ ಎಂದು ನಮೂದಾಗದಿದ್ದರೂ, ಇತ್ತೀಚಿನ ಬೆಳೆ ಸಮೀಕ್ಷೆಯ ದತ್ತಾಂಶದಲ್ಲಿ ಎನ್.ಎ ಎಂದು ದಾಖಲಾಗಿರುವ ಜಮೀನುಗಳನ್ನು ಪರಿಹಾರಕ್ಕಾಗಿ ಪರಿಗಣಿಸುವಂತಿಲ್ಲ ಒಂದೇ ಹಿಸ್ಸಾ ಜಮೀನಿನಲ್ಲಿ ಬಹು ಮಾಲೀಕರಿದ್ದಲ್ಲಿ ಒಂದೇ ಕ್ಷೇತ್ರಕ್ಕೆ ಎರಡು ಬಾರಿ ಪರಿಹಾರ ಪಾವತಿಯಾಗುವುದಿಲ್ಲ.
ಬರ ಪರಿಹಾರ ನಿಮಗೆ ಜಮೆಯಾಗಿದೆಯೇ ಹೀಗೆ ಚೆಕ್ ಮಾಡಿ
ಬರ ಪರಿಹಾರ ಹಣ ನಿಮ್ಮ ಖಾತೆಗ ಜಮೆಯಾಗಿದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಲು ಈ
https://parihara.karnataka.gov.in/PariharaPayment/
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮಗ ಪರಿಹಾರ ನಮೂದು ಸಂಖ್ಯೆ ಆಧಾರ್ ಸಂಖ್ಯೆ ಎಂಬ ಎರಡು ಆಯ್ಕೆಗಳು ಕಾಣಿಸುತ್ತವೆ. ಅಲ್ಲಿ ನೀವು ಆಧಾರ್ ಸಂಖ್ಯೆ ಆಯ್ಕೆ ಮಾಡಿಕೊಳ್ಳಬೇಕು. ಅಲ್ಲಿ ನೀವು Calamity Type ನಲ್ಲಿ Drought ಆಯ್ಕೆ ಮಾಡಿಕೊಳ್ಳಬೇಕು Year ನಲ್ಲಿ 2025-27 ಆಯ್ಕೆ ಮಾಡಿಕೊಳ್ಳಬೇಕು. ಇದಾದ ನಂತರ ನೀವು ನಿಮ್ಮ ಆಧಾರ್ ಕಾರ್ಡ್ ನಮೂದಿಸಬೇಕು. ನಂತರ ಅಲ್ಲಿ ಕಾಣುವ ಕ್ಯಾಪ್ಚ್ಯಾ ಕೋಡ್ ಹಾಕಬೇಕು. ನಂತರ ವಿವರಗಳನ್ನು ಪಡೆಯಿರಿ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮಗೆ ಬರ ಪರಿಹಾರ ಹಣ ಜಮೆಯಾಗಿದ್ದರೆ ಯಾವ ಸರ್ವೆ ನಂಬರಿಗೆ ಯಾವಾಗ ಬ್ಯಾಂಕ್ ನ ಖಾತೆಗೆ ಜಮೆಯಾಗಿದೆ ಎಂಬ ಮಾಹಿತಿ ಕಾಣಿಸುತ್ತದೆ.





