Pmkisan money credit today ಪಿಎಂ ಕಿಸಾನ್ ಯೋಜನೆಯ 24ನೇ ಕಂತಿನ ಹಣ ಇಂದು ರೈತರ ಖಾತೆಗೆ ಜಮೆಯಾಗಲಿದೆ. ಹೌದು, ತಮಗೆಲ್ಲಾ ಗೊತ್ತಿದ್ದ ಹಾಗೆ ಇಂದು ಗುಜರಾತ್ ರಾಜ್ಯದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪಿಎಂ ಕಿಸಾನ್ ಯೋಜನೆಯ 24ನೇ ಕಂತಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಚಾಲನೆ ನೀಡಲಿದ್ದಾರೆ.
Pmkisan money credit today ಯಾರಿಗೆ ಪಿಎಂ ಕಿಸಾನ್ ಹಣ ಜಮೆಯಾಗಲಿದೆ
ಪಿಎಂ ಕಿಸಾನ್ 24ನೇ ಕಂತಿನ ಹಣ ಇಂದು ಟಯಾರು ಯಾರು ಇಕೆವೈಸಿ ಮಾಡಿಸಿದ್ದಾರೋ ಅಂತಹ ರೈತರಿಗೆಲ್ಲರಿಗೂ ಪಿಎಂ ಕಿಸಾನ್ ಹಣ ಇಂದು ಜಮೆಯಾಗಲಿದೆ. ಹೌದು, ಇನ್ನೂ ಯಾರು ಯಾರು ಪಿಎಂ ಕಿಸಾನ್ ಇಕೆವೈಸಿ ಮಾಡಿಸಿಲ್ಲವೋ ಬೆಳಗ್ಗೆ 11 ಗಂಟೆಯೊಳಗೆ ಇಕೆವೈಸಿ ಮಾಡಿಸಿಕೊಳ್ಳಿ. ಇಲ್ಲದಿದ್ದರೆ ಪಿಎಂ ಕಿಸಾನ್ 24ನೇ ಕಂತಿನ ಹಣ ಜಮೆಯಾಗುವುದಿಲ್ಲ.
ಪಿಎಂ ಕಿಸಾನ್ ಫಲಾನುಭವಿಗಳ ಪಟ್ಟಿ
ಪಿಎಂ ಕಿಸಾನ್ ಯಾರು ಯಾರಿಗೆ ಜಮೆಯಾಗಲಿದೆ ಎಂಬುದನ್ನು ಚೆಕ್ ಮಾಡಲು ಈ
https://pmkisan.gov.in/Rpt_BeneficiaryStatus_pub.aspx
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನೀವು ಕರ್ನಾಟಕ ರಾಜ್ಯ ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ ಜಿಲ್ಲೆ, ತಾಲೂಕು, ನಿಮ್ಮ ಊರು ಆಯ್ಕೆ ಮಾಡಿಕೊಳ್ಳಬೇಕು. ನಂತರ ಅಲ್ಲಿ ಕಾಣುವ Get Report ಮೇಲೆ ಕ್ಲಿಕ್ ಮಾಡಿದರೆ ಸಾಕು ನಿಮ್ಮ ಊರಿನಲ್ಲಿ ಯಾರು ಯಾರು ಪಿಎಂ ಕಿಸಾನ್ ಹಣ ಜಮೆಯಾಗಲಿದೆ ಎಂಬ ಪಟ್ಟಿ ಕಾಣಿಸಲಿದೆ. ಆದರೆ ಒಂದು ಮಾತು ನೆನಪಿಟ್ಟುಕೊಳ್ಳಿ ಪ್ರತಿ ವರ್ಷ ಇಕೆವೈಸಿ ಮಾಡಿಸಬೇಕು. ಕಳೆದ ವರ್ಷ ನೀವು ಇಕೆವೈಸಿ ಮಾಡಿಸಿದ್ದರೆ ಈ ವರ್ಷವೂ ಇಕೆವೈಸಿ ಮಾಡಿಸಿಕೊಳ್ಳಬೇಕು. ಇಲ್ಲದಿದ್ದರೆ ಪಿಎಂ ಕಿಸಾನ್ ಹಣ ನಿಮ್ಮ ಖಾತೆಗೆ ಜಮಯಾಗುವುದಿಲ್ಲ.
ಪ್ರತಿವರ್ಷ ಬಯೋಮೆಟ್ರಿಕ್ ಇಕೆವೈಸಿ ಕಡ್ಡಾಯ
ಇಕೆವೈಸಿ ಮಾಡಿಸದ ಫಲಾನುಭವಿಗಳಿಗೆ ಪ್ರೋತ್ಸಾಹಧನ ತಡೆ ಹಿಡಿಯಲಾಗುವುದು. ಆದ್ದರಿಂದ ಕೂಡಲೇ ಫಲಾನುಭವಿಗಳು ಇಕೆವೈಸಿ ಮಾಡಿಕೊಳ್ಳಬೇಕು. ಈ ಯೋಜನೆ ಅಡಿಯಲ್ಲಿ ಸೌಲಭ್ಯ ಪಡೆಯಲು ಪ್ರತಿ ವರ್ಷ ಇಕೆವೈಸಿ ಮಾಡಿಸಿಕೊಳ್ಳಬೇಕು. ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರ, ಸಿ.ಎಸ್.ಸಿ ಕೇಂದ್ರ, ಕರ್ನಾಟಕ ಒನ್, ಬೆಂಗಳೂರು ಒನ್ ಕೇಂದ್ರಗಳಲ್ಲಿ ಇಕೆವೈಸಿ ಮಾಡಿಸಿಕೊಳ್ಳಬೇಕು.
ಇದನ್ನೂ ಓದಿ ನಿಮ್ಮ ಜಮೀನಿನ ಟೊಂಚ್ ನಕ್ಷೆ ಮೊಬೈಲ್ ನಲ್ಲಿ ಹೀಗೆ ಪಡೆಯಿರಿ
ಹೆಚ್ಚಿನ ಮಾಹಿತಿಗೆ ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗಳ ಅಧಿಕಾರಿಗಳನ್ನು ಸಂಪರ್ಕಿಸಲು ಮಾಹಿತಿ ಪಡೆದುಕೊಳ್ಳುವಂತೆ ಕೃಷಿ ಇಲಾಖೆ ತಿಳಿಸಿದೆ.
18690 ಕೋಟಿಗೂ ಹೆಚ್ಚು ಹಣ ವಿತರಣೆ
ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್ ರಾಜ್ಯದ ಬಸಸ್ಯಾಂತ ಜಿಲ್ಲೆಯಲ್ಲಿ ನಡೆಯಲಿರುವ ಬೃಹತ್ ರಾಷ್ಟ್ರೀರಯ ಕಾರ್ಯಕ್ರಮ ಪಿಎಂ ಕಿಸಾನ್ ಉತ್ಸವ ದಿವ್ ವೇದಿಕೆಯಿಂದ ಒಂದೇ ಕ್ಲಿಕ್ (ಡಿಬಿಟಿ) ಮೂಲಕ ಈ ಹಣವನ್ನು ವರ್ಗಾಯಿಸಲಿದ್ದಾರೆ. ಈ ಬಾರಿ ಕೇಂದ್ರ ಸರ್ಕಾರವು 18690 ಕೋಟಿಗೂ ಹೆಚ್ಚು ಮೊತ್ತವನ್ನು ನೇರವಾಗಿ 9.34 ಕೋಟಿಗೂ ಹೆಚ್ಚು ರೈತರ ಖಾತೆಗಳಿಗೆ ವರ್ಗಾಯಿಸಲಿದೆ.
ಪ್ರತಿ ನಾಲ್ಕು ತಿಂಗಳಿಗೊಮ್ಮೆ ಪಿಎಂ ಕಿಸಾನ್ ಹಣ ಜಮೆ
ಪಿಎಂ ಕಿಸಾನ್ ಫಲಾನುಭವಿಗಳ ಖಾತೆಗೆ ಪ್ರತಿ ನಾಲ್ಕು ತಿಂಗಳಿಗೊಮ್ಮೆ 2 ಸಾವಿರ ರೂಪಾಯಿಯಂತೆ ವಾರ್ಷಿಕ 6 ಸಾವಿರ ರೂಪಾಯಿ ಹಣ ರೈತರ ಖಾತೆಗೆ ಜಮೆಯಾಗುತ್ತದೆ. ಇಲ್ಲಿಯವರೆಗೆ 23 ಕಂತುಗಳು ಅಂದರೆ 46 ಸಾವಿರ ರೂಪಾಯಿ ರೈತರ ಖಾತೆಗೆ ಜಮೆಯಾಗಿದೆ. ಕಳೆದ 23ನೇ ಕಂತು ಜೂನ್ ತಿಂಗಳಲ್ಲಿ ರೈತರ ಖಾತೆಗೆ ಜಮೆಯಾಗಿತ್ತು. ಈಗ 24 ನೇ ಕಂತು ಅಕ್ಟೋಬರ್ ತಿಂಗಳಲ್ಲಿ ಜಮೆಯಾಗುತ್ತಿದೆ. ಮುಂದಿನ 25ನೇ ಕಂತು ಫ್ರೆಬ್ರವರಿ ತಿಂಗಳಲ್ಲಿ ಜಮೆಯಾಗಲಿದೆ.





