ಈ ರೈತರ ಖಾತೆಗೆ ಬರ ಪರಿಹಾರ 2500 ಬಿಡುಗಡೆ ಇಲ್ಲೇ ಚೆಕ್ ಮಾಡಿ

Written by Ramlinganna

Published on:

Drought payment release today : ಬರಗಾಲದಿಂದ ತತ್ತರಿಸಿದ ರೈತರಿಗೆ ರಾಜ್ಯ ಸರ್ಕಾರ ಸಂತಸದ ಸುದ್ದಿ ನೀಡಿದೆ. ಹೌದು, ಮುಂಗಾರು ಮಳೆ ಕೊರತೆಯಿಂದಾಗಿ ಕಂಗೆಟ್ಟಿರುವ ರೈತರಿಗೆ ಬೆಳೆಹಾನಿ ಪರಿಹಾರವಾಗಿ ಗರಿಷ್ಠ 2500 ರೂಪಾಯಿ ಹಣವನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಬಿಡುಗಡೆ ಮಾಡಲು ಸರ್ಕಾರ ಆದೇಶಿಸಿದೆ.

ಕೇಂದ್ರ ಸರ್ಕಾರದ ಅನುದಾನ ಬರುವ ಮೊದಲು ರಾಜ್ಯ ವಿಪತ್ತು ಪರಿಹಾರ ನಿಧಿಯಿಂದ ರಾಜ್ಯ ಸರ್ಕಾರವು ಈ ಹಣವನ್ನು ಬಿಡುಗಡೆ ಮಾಡಲು ಆದೇಶ ನೀಡಿದೆ.

Drought payment release today ಕೇಂದ್ರ ಸರ್ಕಾರದ ಎಸ್.ಡಿ.ಆರ್.ಎಫ್ ನಿಯಮದಂತೆ ಎಷ್ಟು ಪರಿಹಾರ ಸಿಗಬೇಕು

ಕೇಂದ್ರ ಸರ್ಕಾರದ ಎಸ್.ಡಿ.ಆರ್.ಎಫ್ ನಿಯಮದಂತೆ ಬಳೆ ಹಾನಿಯಾದ ಗರಿಷ್ಠ 2 ಹೆಕ್ಟೇರಿಗೆ ಪರಿಹಾರ ಹಣ ನೀಡಬೇಕು. ಮಳೆ ಆಶ್ರಿತ ಬೆಳೆಗೆ 8500 ರೂಪಾಯಿಯಿಂದ 17 ಸಾವಿರ ರೂಪಾಯಿಯವರೆಗೆ ಹಣ ಜಮೆ ಮಾಡಬೇಕು. ನೀರಾವರಿ ಬೆಳೆಗೆ ಪ್ರತಿ ಹೆಕ್ಟೇರಿಗೆ 17 ಸಾವಿರ ರೂಪಾಯಿಯಂದ 34 ಸಾವಿರ ರೂಪಾಯಿವರೆಗೆ ಹಣ ಜಮೆ ಮಾಡಬೇಕು. ಅದೇ ರೀತಿ ಬಹುವಾರ್ಷಿಕ ತೋಟಗಾರಿಕೆ ಬೆಳೆಗಳಿಗೆ 22500 ರೂಪಾಯಿಯಿಂದ 45 ಸಾವಿರ ರೂಪಾಯಿಯವರೆಗೆ ಜಮೆಯಾಗಬೇಕು.

ಕೇಂದ್ರ ಸರ್ಕಾರದ ಎನ್.ಡಿ.ಆರ್.ಎಫ್ ಅನುದಾನ ಬಿಡುಗಡೆಯಾಗುವು ತಡವಾಗುತ್ತಿರುವುದರಿಂದ ಸಂಕಷ್ಟದಲ್ಲಿರುವ ರೈತರಿಗೆ ಮೊದಲ ಕಂತಾಗಿ ಗರಿಷ್ಠ 2500 ರೂಪಾಯಿ ಬಿಡುಗಡೆ ಮಾಡಲು ಆದೇಶಿಸಲಾಗಿದೆ. ಕೇಂದ್ರ ಸರ್ಕಾರದಿಂದ ಪೂರ್ಣ ಹಣ ಬಂದ ನಂತರ ಉಳಿದ ಹೆಚ್ಚುವರಿ ಹಣವನ್ನು ರೈತರ ಖಾತೆಗೆ ಜಮೆ ಮಾಡಲಾಗುವುದು.

ರೈತರು ಯಾವುದೇ ಕಚೇರಿಗೆ ಅಲೆದಾಡಬೇಕಿಲ್ಲ. ಫ್ರೂಟ್ಸ್ ತಂತ್ರಾಂಶದಲ್ಲಿ ನೋಂದಣಿಯಾಗೆ ಆಧಾರ್ ಜೋಡಣೆಯಾಗಿರುವ ರೈತರ ಖಾತೆಗೆ ನೇರವಾಗಿ ಡಿಬಿಟಿ ಮೂಲಕ ಹಣ ಜಮೆಯಾಗಲಿದೆ.

ಬೆಳೆ ಹಾನಿ ಪರಿಹಾರ ಯಾರು ಯಾರಿಗೆ ಜಮೆಯಾಗಿದೆ

ಬೆಳೆ ಹಾನಿ ಪರಿಹಾರ ಹಣ ಯಾವ ಯಾವ ರೈತರ ಖಾತೆಗೆ ಜಮೆಯಾಗಿದೆ ಎಂಬುದನ್ನು ಇಲ್ಲೇ ಚೆಕ್ ಮಾಡಬಹುದು. ಹೌದು, ಇಲ್ಲಿರುವ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ನಂತರ ಪರಿಹಾರ ಪೇಜ್ ತೆರೆದುಕೊಳ್ಳುತ್ತದೆ.

https://parihara.karnataka.gov.in/BatchWisePayment/

ಅಲ್ಲಿ ನೀವು ಜಿಲ್ಲಾವಾರು ವರದಿ ಯಾವ ಜಿಲ್ಲೆಯ ಎಷ್ಟು ರೈತರಿಗೆ ಬೆಳೆ ಹಾನಿ ಪರಿಹಾರ ಮಂಜೂರಾಗಿದೆ. ಎಷ್ಟು ರೈತರು ಹಾಗೂ ಎಷ್ಟು ಜಮೆಯಾಗಿದೆ. ಒಠ್ಟು ಫಲಾನುಭವಿಗಳು ಹಾಗೂ ಹಣ ಸಂದಾಯ ಸೇರಿದಂತೆ ಇನ್ನಿತರ ಮಾಹಿತಿ ಅಲ್ಲಿ ಕಾಣಿಸುತ್ತದೆ.

ಹಣ ಜಮೆಯಾಗಲು ಯಾವ ಷರತ್ತು ಇದೆ

ರೈತರು ಪರಿಹಾರಕ್ಕಾಗಿ ಯಾವುದೇ ಅರ್ಜಿ ಸಲ್ಲಿಸಬೇಕಿಲ್ಲ. ಕಂದಾಯ ಇಲಾಖೆಯ ಪರಿಹಾರ ತಂತ್ರಾಂಶದಲ್ಲಿ ಫ್ರೂಟ್ಸ್ ಪೋರ್ಟಲ್ ಹಾಗೂ ಮುಂಗಾರು ಬೆಳೆ ಸಮೀಕ್ಷೆಯ ಅಧಿಕೃತ ದತ್ತಾಂಶದ ಆಧಾರದ ಮೇಲೆ ನೇರವಾಗಿ ಅರ್ಹರರನ್ನು ಗುರುತಿಸಲಾಗುತ್ತದೆ.

ಇದನ್ನು ಓದಿ ಮಹಿಳೆಯರಿಗೆ ಸ್ವಂತ ಉದ್ಯೋಗ ಮಾಡಲು 2 ಲಕ್ಷ ರೂಪಾಯಿಯವರೆಗೆ ಸಬ್ಸಿಡಿ ಸಿಗಲಿದೆ

ಪರಿಹಾರ ನೀಡುವಾಗ ತಾಲೂಕಿನಲ್ಲಿ ಅತೀ ಕಡಿಮೆ ಜಮೀನು ಹೊಂದಿರುವ ಸಣ್ಣ ರೈತರಿಂದ ಆರಂಭಿಸಿ ಹೆಚ್ಚು ಜಮೀನು ಹೊಂದಿರುವ ರೈತರಿಗೆ ಏರಿಕೆ ಕ್ರಮದಲ್ಲಿ ಹಣ ಪಾವತಿಸಲಾಗುತ್ತದೆ. ಬೆಳೆಗಳಲ್ಲೂ ಮೊದಲು ಮಳೆಯಾಶ್ರಿತ ನಂತರ ನೀರಾವರಿ ಹಾಗೂ ಕೊನೆಯದಾಗಿ ಬಹುವಾರ್ಷಿಕ ಬೆಳೆಗೆ ಆದ್ಯತೆ ನೀಡಲಾಗುತ್ತದೆ. ಫಲಾನುಭವಿ ರೈತರ ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆಯಾಗಿರಬೇಕು. ಡಿಬಿಟಿ ಮೂಲಕವೇ ಹಣ ವರ್ಗಾವಣೆಯಾಗಲಿದೆ.

ಗರಿಷ್ಟ ಮಿತಿ 2 ಹೆಕ್ಟೇರ್

ಒಬ್ಬ ರೈತ ಒಂದಕ್ಕಿಂತ ಹೆಚ್ಚು ತಾಲೂಕುಗಳಲ್ಲಿ ಜಮೀನು ಹೊಂದಿದ್ದರೂ ಆತನಿಗೆ ಗರಿಷ್ಠ 2 ಹೆಕ್ಟೇರ್ ಗೆ ಮಾತ್ರ ಪರಿಹಾರ ಸೀಮಿತವಾಗಿದೆ.

ಫ್ರೂಟ್ಸ್ ಆಧಾರದಲ್ಲಿ ಡಿಬಿಟಿ ಪಾವತಿ

ಪರಿಹಾರ ವಿತರಣೆಯಲ್ಲಿ ಮಧ್ಯವರ್ತಿಗಳ ಹಾವಳಿ ತಡೆದು ಪಾರದರ್ಶಕತೆ ತರಲು ರೈತರಿಂದ ಯಾವುದೇ ಪ್ರತ್ಯೇಕ ಅರ್ಜಿಗಳನ್ನ ಪಡೆಯದಿರಲು ತೀರ್ಮಾನಿಸಿದೆ. ಇ ಆಡಳಿತ ಇಲಾಖೆಯ ಪ್ರೂಟ್ಸ್ ತಂತ್ರಾಂಶದಲ್ಲಿ ನೋಂದಣಿಯಾಗಿ ಫಾರ್ಮರ್ ಐಡಿ ಹೊಂದಿರುವ ಹಾಗೂ ಆಧಾರ್ ಜೋಡಣೆಯಾಗಿರುವ ಬ್ಯಾಂಕ್ ಖಾತೆಗಳಿಗೆ ನೇರ ನಗದು ವರ್ಗಾವಣೆ ಮೂಲಕ ಪರಿಹಾರ ಪಾವತಿಯಾಗಲಿದೆ

 

Leave a Comment