ಹೈನುಗಾರಿಕೆ ಮಾಡಲಿಚ್ಚಿಸುವ ರೈತರಿಗಿಲ್ಲಿದೆ ಸಂತಸದ ಸುದ್ದಿ. ಹೈನುಗಾರಿಕೆಯಲ್ಲಿ ಆಸಕ್ತಿಯಿರುವ ರೈತರಿಗೆ ಹಾಗೂ ಹೈನುಗಾರಿಕೆ ಮಾಡಲಿಚ್ಚಿಸುವ ರೈತರಿಗೆ ಮಿಶ್ರತಳಿ ಹಾಲು ಕರೆಯುವ ಹಸು/ಒಂದು ಸುಧಾರಿತ ಎಮ್ಮೆ ಘಟಕ ಖರೀದಿಗೆ ಸಬ್ಸಿಡಿ ನೀಡಲಾಗುವುದು.
ಹೌದು, ಪಶುಪಾಲನೆ ಮಿಶ್ರತಳಿ ಹಾಲು ಕರೆಯುವ ಹಸು/ ಒಂದು ಸುಧಾರಿತ ಎಮ್ಮೆ ವಿತರಿಸಲಾಗುವುದು. ಘಟಕದ ಮೊತ್ತ 62,000 ರೂಪಾಯಿ ಆಗಿದ್ದು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ 20,665 ರೂಪಾಯಿ ಮತ್ತು ಸಾಮಾನ್ಯ ವರ್ಗದ ರೈತರಿಗೆ 15,500 ರೂಪಾಯಿ ಸಹಾಯಧನ ನೀಡಲಾಗುವುದು. ಸಹಾಯಧನ ಹೊರತುಪಡಿಸಿದಂತೆ ಉಳಿದ ಮೊತ್ತವನ್ನು ಫಲಾನುಭವಿಗಳು ವಂತಿಗೆ ಅಥವಾ ಸಾಲದ ರೂಪದಲ್ಲಿ ಬ್ಯಾಂಕಿನಿಂದ ಪಡೆಯಬಹುದು. ಈ ಯೋಜನೆಯಡಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರು ಶೇ. 33 ಹಾಗೂ ಸಾಮಾನ್ಯವರ್ಗದ ಫಲಾನುಭವಿಗಳಿಗೆ ಶೇ. 25 ರಷ್ಟು ಸಹಾಯಧನ ನೀಡಲಾಗುವುದು.
ಇದನ್ನೂ ಓದಿ : ಜಮೀನುಗಳ ಸರ್ವೆ ನಂಬರ್ ಸಹಿತ ಬಂಡಿದಾರಿ, ಹಳ್ಳಕೊಳ್ಳಗಳ ಮ್ಯಾಪ್ ಬೇಕೆ? ಇಲ್ಲಿದೆ ಮಾಹಿತಿ
ರೈತರಿಗೆ ಆದ್ಯತೆ ಮೇರೆಗೆ ಕೂಲಿ, ಕೃಷಿ ಕಾರ್ಮಿಕರು ಮತ್ತು ಪಶುಸಂಗೋಪನೆಯಲ್ಲಿ ತೊಡಗಿಸಿಕೊಂಡ ಆಸಕ್ತರನ್ನು ಫಲಾನುಭವಿಗಳನ್ನಾಗಿ ಆಯ್ಕೆ ಮಾಡಲಾಗುವುದು. ಸರ್ಕಾರದ ನಿಯಮಗಳಂತೆ ಮಹಿಳೆಯರಿಗೆ ಶೇ. 33.3, ಅಲ್ಪಸಂಖ್ಯಾತರಿಗೆ ಶೇ. 15 ಹಾಗೂ ಅಂಗವಿಕಲರಿಗೆ ಶೇ. 3 ರಷ್ಟು ಆದ್ಯತೆ ನೀಡಲಾಗುವುದು.
ಸೌಲಭ್ಯ ಪಡೆಯಲು ಬೇಕಾಗುವ ದಾಖಲೆಗಳು
ರೈತರು ತಮ್ಮ ಆಧಾರ್ ಕಾರ್ಡ್ ಹೊಂದಿರಬೇಕು. ಪಡಿತರ ಚೀಟಿ ಹೊಂದಿರಬೇಕು. ಇತ್ತೀಚಿನ ಫೋಟೊಗಳಿರಬೇಕು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಾಗಿದ್ದರೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಇರಬೇಕು. ಬ್ಯಾಂಕ್ ಪಾಸ್ ಬುಕ್ ಇರಬೇಕು. ಅರ್ಜಿದಾರರು ಫ್ರೂಟ್ಸ್ ತಂತ್ರಾಂಶದಲ್ಲಿ ನೋಂದಾಯಿಸಿರಬೇಕು.
ಅರ್ಜಿ ಎಲ್ಲಿ ನೀಡಬೇಕು?
ರೈತರು ಕೃಷಿಯೊಂದಿಗೆ ಉಪಕಸುಬು ಮಾಡಲು ಪಶುಭಾಗ್ಯ ಯೋಜನೆಯಂತೆ ಮುಖ್ಯಮಂತ್ರಿಗಳ ಅಮೃತ ಜೀವನ ಯೋಜನೆಯನ್ನು ಜಾರಿಗೆ ತರಲಾಗಿದೆ. ಈ ಯೋಜನೆಯಡಿ ರೈತರಿಗೆ ಸಹಾಯಧನದೊಂದಿಗೆ ಸಾಲಸೌಲಭ್ಯವೂ ಸಿಗುತ್ತದೆ. ಅರ್ಹ ರೈತರು ಆಯಾ ತಾಲೂಕಿನ ಪಶು ಆಸ್ಪತ್ರೆಯ ಮುಖ್ಯ ಪಶು ವೈದ್ಯಾಧಿಕಾರಿಗಳನ್ನು ಸಂಪರ್ಕಿಸಬಹುದು.
ಪಶುಪಾಲಕರಿಗೆ ಸಹಾಯವಾಣಿ
ರೈತರು ಮನೆಯಲ್ಲಿಯೇ ಕುಳಿತು ಪಶುಪಾಲನೆ ಹಾಗೂ ಮುಖ್ಯಮಂತ್ರಿಗಳ ಅಮೃತ ಜೀವನ ಯೋಜನೆಯ ಕುರಿತು ಮಾಹಿತಿ ಪಡೆಯಬಹುದು. ಇದಕ್ಕಾಗಿ ರೈತರು ಯಾವುದೇ ಶುಲ್ಕ ಪಾವತಿಸಬೇಕಿಲ್ಲ. ಎಲ್ಲವೂ ಉಚಿತವಾಗಿರುತ್ತದೆ. ರೈತರು 8277 8277100 200 ನಂಬರಿಗೆ ಕರೆ ಮಾಡಿದರೆ ಸಾಕು, ಅಗತ್ಯ ಮಾಹಿತಿಗಳನ್ನೆಲ್ಲಾ ಪಡೆಯಬಹುದು.
ಇದನ್ನೂ ಓದಿ : ಪಿಎಂ ಕಿಸಾನ್ ಸ್ಟೇಟಸ್ ಮೊಬೈಲ್ ನಲ್ಲೇ ಚೆಕ್ ಮಾಡಿ 11ನೇ ಕಂತು ಬರುತ್ತೋ ಇಲ್ಲವೋ ಚೆಕ್ ಮಾಡುವುದು ಹೇಗೆ?
ದಿನದ 24 ಗಂಟೆ ಈ ಉಚಿತ ಸಹಾಯವಾಣಿ ಕಾರ್ಯನಿರ್ವಹಿಸಲಿದೆ. ಪಶುಸಂಗೋಪನಾ ಚಟುವಟಿಕೆಯಲ್ಲಿ ನಿರತರಾಗಿರುವ ರೈತರು 24*7 ರವರೆಗೆ ಕರೆ ಮಾಡಿ ಸಹಾಯವಾಣಿಯಲ್ಲಿ ಕಾರ್ಯನಿರ್ವಹಿಸುವ ಪಶುವೈದ್ಯರು ಮತ್ತು ಇತರೆ ವಿಷಯ ತಜ್ಞರಿಂದ ಅಗತ್ಯ ಮಾಹಿತಿ ಪಡೆಯಬಹುದು.
ರೈತರಿಗೆ ಸಹಾಯವಾಣಿಯ ಮೂಲಕ ನೀಡಲಾಗುವ ಮಾಹಿತಿಗಳು
ಹೈನುಗಾರಿಕೆ, ಕುರಿ, ಮೇಕೆ, ಕೋಳಿ, ಮೊಲ ಸಾಕಾಣಿಕೆ ಹಾಗೂ ಹಂದಿ ಸಾಕಾಣಿಕೆ ಕುರಿತಂತೆ ಇಲಾಖೆಯ ತರಬೇತಿ ಕೇಂದ್ರಗಳಲ್ಲಿ ನಡೆಯುವ ತರಬೇತಿ ಕಾರ್ಯಕ್ರಮಗಳ ಮಾಹಿತಿ ನೀಡವರು. ಪಶುಸಂಗೋಪನಾ ಚಟುವಟಿಕೆಗಳಿಗೆ ವಿವಿಧ ಬ್ಯಾಂಕುಗಳಿಂದ ದೊರೆಯಬಹುದಾದ ಸಾಲ ಸೌಲಭ್ಯ ಕುರಿತ ಮಾಹಿತಿ ನೀಡಲಾಗುವುದು.
ತುರ್ತು ಪಶುವೈದ್ಯ ಸೇವೆಗಾಗಿ ಒಳಬರುವ ಕರೆಗಳನ್ನುಹತ್ತಿರದ ಇಲಾಖಾ ತಾಂತ್ರಿಕ ಸಿಬ್ಬಂದಿ/ಅಧಿಕಾರಿಗೆ ವರ್ಗಾಯಿಸಿ ರೈತರು ಕೇಳಿದ ಎಲ್ಲಾ ಮಾಹಿತಿಗಳನ್ನು ನೀಡುವಲ್ಲಿ ಸಹಕರಿಸುವರು. ಇನ್ನೇಕೆ ತಡ, ಪಶುಪಾಲನೆ ಕುರಿತು ಮಾಹಿತಿ ಕೇಳಬೇಕೆ? ಪಶುಪಾಲನಾ ಉಚಿತ ಸಹಾಯವಾಣಿ ನಂಬರಿಗೆ ಕರೆ ಮಾಡಿ ಮಾಹಿತಿ ಪಡೆಯಬಹುದು.