ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳಿಗಿಲ್ಲಿದೆ ಸಂತಸದ ಸುದ್ದಿ. ಪಿಎಂ ಕಿಸಾನ್ ಯೋಜನೆಯ 11ನೇ ಕಂತು ಜಮಾವಣೆಗೆ ಕ್ಷಣಗಣನೆ ಶುರುವಾಗಿದೆ. ಈಗಾಗಲೇ ಫಲಾನುಭವಿಗಳ ಪಟ್ಟಿಯೂ ಬಿಡುಗಡೆಯಾಗಿದೆ. ಹಾಗಾಗಿ ಇದೇ ತಿಂಗಳಲ್ಲಿ ರೈತರ ಖಾತೆಗೆ ಪಿಎಂ ಕಿಸಾನ್ ಯೋಜನೆಯ 11ನೇ ಕಂತಿನ ಹಣ ಜಮೆಯಾಗುವ ಎಲ್ಲಾ ಸಾಧ್ಯತೆಯಿದೆ.
ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳಿಗೆ ಇಕೆವೈಸಿ ಮಾಡಿಸುವುದು ಕಡ್ಡಾಯಗೊಳಿಸಲಾಗಿತ್ತು. ಇದಕ್ಕೆ ರೈತರು ಮೊಬೈಲ್ ನಲ್ಲಿಯೇ ಆಧಾರ್ ಕಾರ್ಡ್ ನಂಬರ್ ನಮೂದಿಸಿ ಓಟಿಪಿ ಪಡೆದು ಮಾಡಿಸುವ ಅವಕಾಶವನ್ನೂ ನೀಡಲಾಗಿತ್ತು. ಆದರೆ ಇತ್ತೀಚೆಗೆ ಮೊಬೈಲ್ ನಲ್ಲೇ ಇಕೆವೈಸಿ ಮಾಡಿಸುವ ಪ್ರಕ್ರಿಯೆಯನ್ನು ತೆಗೆದುಹಾಕಲಾಗಿದೆ. ಇಕೆವೈಸಿ ಮಾಡಿಸುವ ಪ್ರಕ್ರಿಯೆಯನ್ನು ಮೇ 31ರವರೆಗೆ ವಿಸ್ತರಿಸಲಾಗಿದೆ.
ಪಿಎಂ ಕಿಸಾನ್ ಸ್ಟೇಟಸ್ ಚೆಕ್ ಮಾಡುವುದು ಹೇಗೆ?
ರೈತರು ಪಿಎಂ ಕಿಸಾನ್ ಯೋಜನೆಯ ಸ್ಟೇಟಸ್ ನ್ನುಮೊಬೈಲ್ ನಲ್ಲೇ ಚೆಕ್ ಮಾಡಬಹುದು. ಇದಕ್ಕಾಗಿ ಯಾರ ಸಹಾಯವೂ ಬೇಕಾಗಿಲ್ಲ. ಅತ್ಯಂತ ಸರಳ ವಿಧಾನದಲ್ಲಿ ಸ್ಟೇಟಸ್ ಚೆಕ್ ಮಾ್ಡಬಹುದು. ಅದು ಹೇಗೆ ಅಂದುಕೊಂಡಿದ್ದೀರಾ… ಇಲ್ಲಿದೆ ಮಾಹಿತಿ.
ರೈತರು ಪಿಎಂ ಕಿಸಾನ್ ಯೋಜನೆಯ ಸ್ಟೇಟಸ್ ಚೆಕ್ ಮಾಡಲು ಈ
https://pmkisan.gov.in/BeneficiaryStatus.aspx
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಪಿಎಂ ಕಿಸಾನ್ ಯೋಜನೆಯ ಪೇಜ್ ಓಪನ್ ಆಗುತ್ತದೆ. ಅಲ್ಲಿ ರೈತರು ಆಧಾರ್ ನಂಬರ್ ಅಥವಾ ಅಕ್ಟೌಂಟ್ ನಂಬರ್ ಈ ಎರಡರಲ್ಲ್ಲಿ ಯಾವುದಾದರೊಂದನ್ನು ನಮೂದಿಸಿ ಸ್ಟೇಟಸ್ ಚೆಕ್ ಮಾಡಬಹುದು.
ರೈತರು ತಮ್ಮ ಆಧಾರ್ ನಂಬರ್ ನಮೂದಿಸಿ ಗೆಟ್ ಡಾಟಾ ಮೇಲೆ ಕ್ಲಿಕ್ ಮಾಡಬೇಕು. ಆಗ ಪಿಎಂ ಕಿಸಾನ್ ಯೋಜನೆಯಡಿಯಲ್ಲಿ ಇಲ್ಲಿಯವರೆಗೆ ರೈತರು ಪಡೆದ ಎಲ್ಲಾ ಕಂತಿನ ಮಾಹಿತಿ ಸಿಗುತ್ತದೆ. ಅಲ್ಲಿ ರೈತರು ಎಷ್ಟು ಕಂತುಗಳ ಹಣವನ್ನು ಪಡೆದಿದ್ದಾರೆ ಮತ್ತು ಯಾವ ಬ್ಯಾಂಕಿಗೆ ಹಣ ಜಮೆಯಾಗಿದೆ ಎಂಬುದನ್ನು ನೋಡಬಹುದು.
ಈ ಕಂತಿನ ಅಂದರೆ ಸರ್ಕಾರದ 11ನೇ ಕಂತಿನ ಹಣ ಜಮೆಯಾಗಲು ರಾಜ್ಯ ಸರ್ಕಾರದಿಂದ ಅಪ್ರೂವಲ್ ಆಗಿದೆಯೋ ಇಲ್ಲವೋ ಎಂಬುದು ಗೊತ್ತಾಗುತ್ತದೆ. ಅಂದರೆ ಸ್ಟೇಟಸ್ ನಲ್ಲಿ Rft signed by state for 11th installment ಎಂಬುದು ಕಂಡರೆ ಅಂತಹ ರೈತರಿಗೆ ಇದೇ ತಿಂಗಳು ಪಿಎಂ ಕಿಸಾನ್ ಯೋಜನೆಯ11ನೇ ಕಂತಿನ ಹಣ ಜಮೆಯಾಗುತ್ತದೆ. ರೈತರಿಗೆ11ನೇ ಕಂತಿನ ಹಣದಲ್ಲಿ ಸ್ವಲ್ಪ ಅನುಮಾನವಿರುತ್ತದೆ.
ಕೆಲವು ರೈತರಿಗೆ 10ನೇ ಕಂತಿನ ಇನ್ನೂ ಕೆಲವರಿಗೆ 8 ಅಥವಾ 9ನೇ ಕಂತಿನ ಹಣ ಜಮೆಯಾಗುತ್ತಿರುತ್ತದೆ. ಏಕೆಂದರೆ ಕೆಲವು ರೈತರು ತಡವಾಗಿ ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳಾಗಿರುತ್ತಾರೆ. ಹಾಗಾಗಿ ಅಂತಹ ರೈತರಿಗೆ 8, 9 ಅಥವಾ 10ನೇ ಕಂತಿನ ಹಣ ಅವರ ಖಾತೆಗೆ ಜಮೆಯಾಗುತ್ತದೆ. ಆದರೆ ಕೇಂದ್ರ ಸರ್ಕಾರವು ಇದೇ ತಿಂಗಳು 11ನೇ ಕಂತಿನ ಹಣ ಬಿಡುಗಡೆ ಮಾಡಲಿದೆ.
ಇದನ್ನೂ ಓದಿ: ಸಾಲಮನ್ನಾ ಮಾಡಲು ಮತ್ತೊಮ್ಮೆ ಅವಕಾಶ- ಸಾಲಮನ್ನಾ ಪಟ್ಟಿಯಲ್ಲಿ ನಿಮ್ಮೆ ಹೆಸರು ಮೊಬೈಲ್ ನಲ್ಲೇ ಚೆಕ್ ಮಾಡಿ
ಪಿಎಂ ಕಿಸಾನ್ ಯೋಜನೆಯಲ್ಲಿ ಇತ್ತೀಚೆಗೆ ಸಾಕಷ್ಟು ಬದಲಾವಣೆಯಾಗುತ್ತಿದೆ. ಕಳೆದ 10ನೇ ಕಂತಿನ ಹಣ ಬಹಳಷ್ಟು ರೈತರ ಖಾತೆಗೆ ಜಮೆಯಾಗಿಲ್ಲ.ಹೀಗಾಗಿ ಈ 11ನೇ ಕಂತಿನಹಣ ಜಮೆಯಾಗುತ್ತೋ ಇಲ್ಲವೋ ಎಂಬ ಸಂಶಯದಲ್ಲಿದ್ದಾರೆ.
ಇಕೆವೈಸಿ ಮಾಡಿಸಿದ ಎಲ್ಲಾ ರೈತರಿಗೆ ಹಣ ಜಮೆಯಾಗುತ್ತೋ ಅಥವಾ ಇಕೆವೈಸಿ ಮಾಡಿಸದ ರೈತರಿಗೂ ಜಮೆಯಾಗುತ್ತೋ ಎಂಬುದು ಸರ್ಕಾರ ಬಿಡುಗಡೆ ಮಾಡಿದ ದಿನವೇ ಗೊತ್ತಾಗುತ್ತದೆ. ಏನೇ ಇರಲಿ ಎಲ್ಲಾ ರೈತರ ಖಾತೆಗೆ ಪಿಎಂ ಕಿಸಾನ್ ಯೋಜನೆಯ11 ನೇ ಕಂತಿನ ಹಣ ಜಮೆಯಾದರೆ ಎಲ್ಲಾ ರೈತರಿಗೆ ಸಂತಸದ ಸುದ್ದಿಯಿರುತ್ತದೆ.