ಸಾಲಮನ್ನಾ ಆಗದೆ ಉಳಿದಿರುವ ರೈತರಿಗಿಲ್ಲದೆ ಸಂತಸದ ಸುದ್ದಿ.  ರಾಜ್ಯದ ಸಹಕಾರ ಬ್ಯಾಂಕುಗಳಲ್ಲಿ ಒಂದು ಲಕ್ಷ ರೂಪಾಯಿಯವರೆಗೆ ಸಾಲಮನ್ನಾಕ್ಕಾಗಿ ಅರ್ಜಿ ಸಲ್ಲಿಸಿದ ರೈತರ ಪೈಕಿ ಬೇರೆ ಬೇರೆ ಕಾರಣಗಳಿಂದ 13500 ರೈತರಿಗೆ ಸಾಲಮನ್ನಾ ಆಗಿಲ್ಲ. ಸಾಲಮನ್ನಾ ಆಗದೆ ಉಳಿದಿರುವ ರೈತರಿಗೆ ಮತ್ತೊಂದು ಸಲ ಅವಕಾಶ ನೀಡಲಾಗುವುದು ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ ತಿಳಿಸಿದ್ದಾರೆ.

ಸೋಮವಾರ ಇಲಾಖಾವಾರು ಅನುದಾನ ಬೇಡಿಕೆಗಳ ಮೇಲಿನ  ಚರ್ಚೆಗೆ ಉತ್ತರ ನೀಡಿದ ಅವರು, ಸಹಕಾರ ಬ್ಯಾಂಕುಗಳಲ್ಲಿ ರೈತರ ಒಂದು ಲಕ್ಷ ರೂಪಾಯಿ ಸಾಲಮನ್ನಾಗೆ ಹಲವು ಷರತ್ತುಗಳನ್ನು ವಿಧಿಸಲಾಗಿತ್ತು. ಎಪಿಎಲ್ ಅಥವಾ ಬಿಪಿಎಲ್ ಪಡಿತರ ಚೀಟಿ ಹೊಂದಿರಬೇಕು.

ಆದಾಯ ತೆರಿಗೆ ವ್ಯಾಪ್ತಿಗೆ ಒಳಪಡಬಾರದು. ಪಿಂಚಣಿದಾರು ಆಗಿರಬಾರದು ಸೇರಿದಂತೆ ಇನ್ನಿತರ ಷರತ್ತುಗಳನ್ನು ವಿಧಿಸಲಾಗಿತ್ತು.  ರಾಜ್ಯದ ಅನೇಕ ರೈತರ ಸಾಲಮನ್ನಾ ಆಗಿದೆ. ಆದರೆ ಇನ್ನೂ 13500 ರೈತರ ಸಾಲಮನ್ನಾ ಅರ್ಜಿ ಬಾಕಿಯಿದೆ. ಈ ರೈತರಿಗೆ ಸಾಲಮನ್ನಾ ಮಾಡಲು ಮತ್ತೊಂದು ಅವಕಾಶ ನೀಡಲು ತೀರ್ಮಾನಿಸಲಾಗಿದೆ ಎಂದು ಅವರು ಹೇಳಿದರು.

ರಾಜ್ಯದ ವಿವಿಧ ಬೇರೆ ಬೇರೆ ಸಹಕಾರ ಬ್ಯಾಂಕುಗಳಲ್ಲಿ ಸಾಲ ಪಡೆದಿದ್ದಾರೆಂದು ಕೆಲವು ರೈತರ ಹೆಸರನ್ನು ಸಾಲಮನ್ನಾ ಪಟ್ಟಿಯಿಂದ ಕೈಬಿಡಲಾಗಿತ್ತು.  2018ರ ಜುಲೈ10 ರೊಳಗೆ ಪಡಿತರ ಚೀಟಿ ಇರಬೇಕೆಂಬ ಷರತ್ತು ವಿಧಿಸಲಾಗಿತ್ತು. ಇದಷ್ಟೇ ಅಲ್ಲ, ಇನ್ನೂ ಬೇರೆ ಬೇರೆ ಕಾರಣಗಳಿಂದ ಕೆಲವು  ರೈತರನ್ನು ಸಾಲಮನ್ನಾ ಪಟ್ಟಿಯಿಂದ ಕೈಬಿಡಲಾಗಿತ್ತು. ಇಂತಹ ರೈತರಿಗೆ ಈಗ ಮತ್ತೊಂದು ಅವಕಾಶವಿದೆ.

ಆದರೆ ಬಹುತೇಕ ರೈತರಿಗೆ ಯಾವ ಕಾರಣಕ್ಕಾಗಿ ತಮ್ಮ ಸಾಲಮನ್ನಾ ಮಾಡಿಲ್ಲವೆಂಬುದು ಗೊತ್ತಿಲ್ಲ. ಅಂತಹ ರೈತರು ತಮ್ಮ ಸಾಲಮನ್ನಾ ಏಕಾಗಿಲ್ಲ, ಸಾಲಮನ್ನಾ ಆಗದೆ ಇರುವು ಕಾರಣವೇನೆಂಬುದನ್ನು ಮೊಬೈಲ್ ನಲ್ಲೇ ಚೆಕ್ ಮಾಡಬಹುದು.

ಸಾಲಮನ್ನಾಪಟ್ಟಿಯಲ್ಲಿ ನಿಮ್ಮ ಹೆಸರು ಮೊಬೈಲ್ ನಲ್ಲೇ ಚೆಕ್ ಮಾಡುವುದು ಹೇಗೆ?

ರೈತರು ಮನೆಯಲ್ಲಿಯೇ ಕುಳಿತು ಸಾಲಮನ್ನಾ ಪಟ್ಟಿಯಲ್ಲಿ ತಮ್ಮ ಹೆಸರು ಇದ್ದರೂ ಯಾವ ಕಾರಣಕ್ಕಾಗಿ ಸಾಲಮನ್ನಾ ಆಗಿಲ್ಲವೆಂಬುದನ್ನು ಚೆಕ್ ಮಾಡಲು ಈ

 https://clws.karnataka.gov.in/clws/bank/fsd_report/BANK_IFR.aspx/

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಬೆಳೆ ಸಾಲಮನ್ನಾ ಪೇಜ್ ಓಪನ್ ಆಗುತ್ತದೆ. ಅಲ್ಲಿ ರೈತರು ತಾವು ಯಾವ ಜಿಲ್ಲೆಗೆ ಸೇರಿದವರಿದ್ದೀರೆಂಬುದನ್ನು ಆಯ್ಕೆ ಮಾಡಿಕೊಳ್ಳಬೇಕು. ಜಿಲ್ಲೆ, ಬ್ಯಾಂಕ್ ಹಾಗೂ ಬ್ಯಾಂಕಿನ ಬ್ರ್ಯಾಂಚ್ ಆಯ್ಕೆ ಮಾಡಿಕೊಳ್ಳಬೇಕು. ಬೇಕು. ಆಗ ಬ್ಯಾಂಕಿನ ಐಎಫ್ಎಸ್ಸಿ ಕೋಡ್ ಆಯ್ಕೆ ಮಾಡಿಕೊಳ್ಳಬೇಕಾಗಿಲ್ಲ. ನಂತರ Fetch Details ಮೇಲೆ ಕ್ಲಿಕ್ ಮಾಡಬೇಕು.  ಆಗ ರೈತರು ಯಾವ ಬ್ಯಾಂಕಿನಲ್ಲಿ ಎಷ್ಟು ಸಾಲ ಪಡೆದಿದ್ದಾರೆ ಎಂಬುದು ಕಾಣುತ್ತದೆ.

ರೈತರ ಸಾಲಮನ್ನಾ ಪಟ್ಟಿಯಲ್ಲಿ ರೈತರ ಬ್ಯಾಂಕ್ ಅಕೌಂಟ್, ಯಾವ ಪ್ರಕಾರದ ಸಾಲವಿದೆ, ಸಾಲ ಪಡೆದ ದಿನಾಂಕ, ಸಾಲಮನ್ನಾಗೆ ಅಪ್ರೂವಲ್ ಸಿಕ್ಕಿದೆಯೋ ಇಲ್ಲವೋ ಎಂಬುದನ್ನು ಚೆಕ್ಮಾಡಬಹುದು.  ನಿಮ್ಮ ಆಧಾರ್ ಕಾರ್ಡ್, ಪಡಿತರ ಚೀಟಿ ವೆರಿಫೈ ಆಗಿದೆಯೇ ಇಲ್ಲವೋ, ನೀವು ಗ್ರೀನ್ ಪಟ್ಟಿಯಲ್ಲಿದ್ದೀರೋ ಇಲ್ಲವೋ ಚೆಕ್ ಮಾಡಬಹುದು.

ಇದನ್ನೂ ಓದಿ: ಜಮೀನುಗಳ ಸರ್ವೆ ನಂಬರ್ ಸಹಿತ ಬಂಡಿದಾರಿ, ಹಳ್ಳಕೊಳ್ಳಗಳ ಮ್ಯಾಪ್ ಬೇಕೆ? ಇಲ್ಲಿದೆ ಮಾಹಿತಿ

ಸಾಲಮನ್ನಾ ಹಣವನ್ನು ಸರ್ಕಾರವು ಎರಡು ಕಂತಿನಿಲ್ಲಿ ಬಿಡುಗಡೆ ಮಾಡಿತ್ತು. ಒಂದು ಲಕ್ಷ ರೂಪಾಯಿಯವರೆಗೆ ಸಾಲವಿದ್ದರೆ ಎರಡು ಕಂತಿನಲ್ಲಿ ಕಡಿಮೆ ಸಾಲವಿದ್ದರೆ ಒಂದೇ ಕಂತಿನಲ್ಲಿ ಮನ್ನಾ ಮಾಡಲಾಗಿತ್ತು.

ಒಂದು ವೇಳೆ ನಿಮ್ಮದು ಒಂದು ಲಕ್ಷ ರೂಪಾಯಿಯವರೆಗೆ ಸಾಲವಿದ್ದರೆ ಅದನ್ನು ಎಷ್ಟು ಕಂತಿನಲ್ಲಿ ಬಿಡುಗಡೆ ಮಾಡಲಾಗಿದೆ. ಎಷ್ಟು ಹಣ ಬಿಡುಗಡೆ ಮಾಡಲಾಗಿದೆ ಸೇರಿದಂತೆ ಇನ್ನಿತರ ಮಾಹಿತಿಗಳನ್ನು ರೈತರು ಮೊಬೈಲ್ ನಲ್ಲೇ ಚೆಕ್ ಮಾಡಬಹುದು.

ಒಂದು ವೇಳೆ ಬೇರೆಬೇರೆ ಕಾರಣಗಳಿಂದ ಬೆಳೆ ಸಾಲಮನ್ನಾ ಆಗದೆ ಉಳಿದಿರುವ ರೈತರಿಗೆ ಈಗ ಮತ್ತೊಂದು ಅವಕಾಶ ನೀಡಲಾಗಿದೆ. ಸಾಲಮನ್ನಾ ಆಗದೆ ಉಳಿದಿರುವ ರೈತರದ್ದು ಅತೀ ಶೀಘ್ರದಲ್ಲಿ ಸಾಲಮನ್ನಾ ಆಗಲಿದೆ.

Leave a Reply

Your email address will not be published. Required fields are marked *