ಜಮೀನುಗಳ ಸರ್ವೆ ನಂಬರ್, ಬಂಡಿದಾರಿಗಳ ಮ್ಯಾಪ್ ಇಲ್ಲಿದೆ

Written by By: janajagran

Updated on:

how to check village map in mobile ದೇಶದ ಹಾಗೂ ರಾಜ್ಯಗಳ ಮ್ಯಾಪ್ ನಂತೆ ಗ್ರಾಮದ ಮ್ಯಾಪ್ ಗಳನ್ನು ಸಹ ಪಡೆಯಬಹುದು. ಈ ಗ್ರಾಮಗಳ ಮ್ಯಾಪ್ ಪಡೆಯಲು ಯಾವ ಅಂಗಡಿ, ಸರ್ಕಾರಿ ಕಚೇರಿಗಳಿಗೆ ಹೋಗಬೇಕಿಲ್ಲ. ಮನೆಯಲ್ಲಿಯೇ ಕುಳಿತು ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಳ್ಳಬಹುದು.

ಹೌದು ಈ ಗ್ರಾಮದ ಮ್ಯಾಪ್ ಸಹಾಯದಿಂದ ಆ ಗ್ರಾಮಕ್ಕಿರುವ ಗಡಿರೇಖೆಗಳು, ಆ ಗ್ರಾಮದಲ್ಲಿರುವ ಹಳ್ಳಕೊಳ್ಳ, ನದಿಕೆರೆಗಳ ಮಾಹಿತಿಯೂ ಸಿಗುತ್ತದೆ. ಅಷ್ಟೇ ಅಲ್ಲ, ಆ ಊರಿನ ಜಮೀನುಗಳಿಗೆ ಹೋಗುವ ಕಾಲುದಾರಿ, ಬಂಡಿದಾರಿ, ರಸ್ತೆಗಳು ಮ್ಯಾಪ್ ನಲ್ಲಿರುತ್ತದೆ.  ಊರಿನ ಸುತ್ತಮುತ್ತಲಿರುವ ಸರ್ವೆನಂಬರ್ ಮಾಹಿತಿಯೂ ಇರುತ್ತದೆ.

ಹೌದು, ಕಂದಾಯ ಇಲಾಖೆಯು ಸಿದ್ದಪಡಿಸಿದ ಈ ಮ್ಯಾಪ್ ನ್ನು ಕರ್ನಾಟಕ ರಾಜ್ಯ ದೂರ ಸಂವೇದಿ ಅನ್ವಯಿತ ಕೇಂದ್ರ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆ ಕರ್ನಾಟಕ ಸರ್ಕಾರವು ಈ ಗಣಕೀಕೃತ ನಕ್ಷೆಯನ್ನುತಯಾರಿಸಿದೆ.

how to check village map in mobile ಗ್ರಾಮ ನಕ್ಷೆ ಮ್ಯಾಪ್ ನಲ್ಲಿ ಯಾವ ಯಾವ ಮಾಹಿತಿ ಸಿಗುತ್ತದೆ?

ಗ್ರಾಮದ ಗಡಿ ರೇಖೆ,  ಸರ್ವೆನಂಬರ್, ಹಿಸ್ಸಾ ನಂಬರ್,  ಕಾಲುದಾರಿ, ಬಂಡಿ ದಾರಿ, ಡಾಂಬರು ರಸ್ತೆ, ಹಳ್ಳ, ಬೆಟ್ಟ,  ಕಲ್ಲುಗಳು, ಮನೆ, ಕೆರೆ,  ನೀರು ಹರಿಯುವ ದಿಕ್ಕು, ಬಾವಿ, ದೇವಸ್ಥಾನ, ದೊಡ್ಡ ಮರಗಳು, ಈಚಲು ಮರಗಳಿರುವ ಸ್ಥಳಗಳನ್ನು ಮಾರ್ಕ್ ಮಾಡಲಾಗಿರುತ್ತದೆ.

ಗ್ರಾಮ ನಕ್ಷೆ ಡೌನ್ಲೋಡ್ ಮಾಡಿಕೊಳ್ಳುವುದು ಹೇಗೆ?

ಗ್ರಾಮದ ನಕ್ಷೆ ಮೊಬೈಲ್ ನಲ್ಲೇ ಡೌನ್ಲೋಡ್ ಮಾಡಿಕೊಳ್ಳಲು

https://mahitikanaja.karnataka.gov.in/Revenue/RevenueVillageMap?ServiceId=1023&Type=TABLE%20&DepartmentId=2066

ಈ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಸರ್ಕಾರವು ಸಾರ್ವಜನಿಕರಿಗೆ ಒದಗಿಸಿದ ಮಾಹಿತಿ ವ್ಯವಸ್ಥೆ ವೆಬ್ ಪೇಜ್ ಓಪನ್ ಆಗುತ್ತದೆ. ಅಲ್ಲಿ ಜಿಲ್ಲೆ ಆಯ್ಕೆ ಮಾಡಿಕೊಳ್ಳಬೇಕು. ನಂತರ, ತಾಲೂಕು, ಹೋಬಳಿ ಹಾಗೂ ಗ್ರಾಮ ಆಯ್ಕೆ ಮಾಡಿಕೊಳ್ಳಬೇಕು.

ಗ್ರಾಮ ಆಯ್ಕೆ ಮಾಡಿಕೊಂಡ ನಂತರ ಸಲ್ಲಿಸು ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ಓಪನ್ ಆಗುತ್ತದೆ. ಅಲ್ಲಿ ಮುಂದೆ ಕಾಣುವ ನಕ್ಷೆ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮ್ಮೂರಿನ ಮ್ಯಾಪ್ ಓಪನ್ ಆಗುತ್ತದೆ.

ಇದನ್ನೂ ಓದಿ : ಮೊಬೈಲ್ ನಲ್ಲೇ ಜಮೀನಿನ ಅಳತೆ ಮಾಡುವುದು ಹೇಗೆ? ಇಲ್ಲಿದೆ ರೈತರಿಗೆ ಸಂಪೂರ್ಣ ಮಾಹಿತಿ

ಈ ಮ್ಯಾಪ್ ನಲ್ಲಿ ಸರ್ವೆ, ನಂಬರ್, ಜಮೀನುಗಳಿಗೆ ಹೋಗುವ ಕಾಲುದಾರಿ, ಬಂಡಿದಾರಿ,  ನದಿ, ಹಳ್ಳಕೊಳ್ಳ, ಬೆಟ್ಟಗುಡ್ಡ, ನದಿ ಹರಿಯುವ ದಿಕ್ಕು ಸೇರಿದಂತೆ ಇನ್ನಿತರ ಮಾಹಿತಿ ಒಳಗೊಂಡಿರುತ್ತದೆ.

ಈ ಮ್ಯಾಪ್ ನ್ನು ದೊಡ್ಡ ಗಾತ್ರದಲ್ಲಿ ಪ್ರಿಂಟ್ ಮಾಡಿ ಊರಿನ ಶಾಲೆ, ದೇವಸ್ಥಾನಗಳಲ್ಲಿ ಅಂಟಿಸಬಹುದು. ಇದರಿಂದ ಊರಿನ ಜನರಿಗೆ ಹಾಗೂ ಶಾಲಾ ಮಕ್ಕಳಿಗೂ ಅನುಕೂಲವಾಗುತ್ತದೆ. ಇದು ರೈತರಿಗೆ ತಮ್ಮ ಜಮೀನಿನ ಸುತ್ತಮುತ್ತಲಿರುವ ಸರ್ವೆನಂಬರ್ ಗಳ ಮಾಹಿತಿ ಸಿಗುತ್ತದೆ.

ಇದರಿಂದ ತಮ್ಮ ಜಮೀನಿನಿಗೆ ಹೋಗಲು ಕಾಲ್ದುರಿ, ಬಂಡಿದಾರಿಯಿದೆಯೋ ಎಂಬ ಮಾಹಿತಿ ಗೊತ್ತಾಗುತ್ತದೆ. ಜಮೀನಿನ ಪಕ್ಕದಲ್ಲಿ ಕಾಲ್ದಾರಿ, ಬಂಡಿದಾರಿಯಿದ್ದರೆ ಆ ಜಮೀನು ಒತ್ತುವರಿಯಾಗಿದೆಯೇ ಎಂಬ ಮಾಹಿತಿ ರೈತರಿಗೆ ಸಿಗಲಿದೆ. ಹಳ್ಳಕೊಳ್ಳಗಳ ಜಮೀನು, ಒತ್ತುವರಿಯಾಗಿದ್ದರೂ ಸಹ ರೈತರಿಗೆ ಮಾಹಿತಿ ಸಿಗುತ್ತದೆ.

Leave a Comment