Bara parihara status ಚೆಕ್ ಮಾಡುವ ಹೊಸ ಲಿಂಕ್ ಇಲ್ಲಿದೆ

Written by Ramlinganna

Updated on:

Bara parihara status ಚೆಕ್ ಮಾಡುವ ಹೊಸ ಲಿಂಕ್ ಆರಂಭವಾಗಿದೆ. ಹೌದು, ರೈತರು ಈ ಲಿಂಕ್ ದಿಂದ ತಮಗೆ ಬರ ಪರಿಹಾರ ಜಮೆಯಾಗಿದೆಯೋ ಇಲ್ಲವೋ ಚೆಕ್ ಮಾಡಬಹುದು.

ಮುಂಗಾರು ಹಾಗೂ ಹಿಂಗಾರು ಹಂಗಾಮಿನಲ್ಲಿ ಬೆಳೆ ಹಾನಿಯಾಗಿರುವ ರೈತರಿಗೆ ತಮಗೆಷ್ಟು ಬೆಳೆ ಹಾನಿ ಪರಿಹಾರ ಹಣ ಜಮೆಯಾಗಿದೆ ಎಂಬುದನ್ನು ರೈತರು ಈಗ ಮೊಬೈಲ್ ನಲ್ಲೇ ಚೆಕ್ ಮಾಡಬಹುದು. ಅದು ಹೇಗೆ ಅಂದುಕೊಂಡಿದ್ದೀರಾ? ರೈತರು ಕೇವಲ ಒಂದೇ ನಿಮಿಷದಲ್ಲಿ ತಮ್ಮ ಆಧಾರ್ ಕಾರ್ಡ್ ನಂಬರ್ ಹಾಕಿ ಬೆಳೆ ಹಾನಿ ಪರಿಹಾರ ಜಮೆಯಾಗಿರುವದನ್ನು ಚೆಕ್ ಮಾಡಬಹುದು.

Bara parihara status ಚೆಕ್ ಮಾಡುವುದು ಹೇಗೆ?

ಮುಂಗಾರು ಹಿಂಗಾರು ಹಂಗಾಮಿನಲ್ಲಿ ರೈತರಿಗೆ ಆದ ಬೆಳೆ ಹಾನಿ ಪರಿಹಾರ ಜಮೆಯನ್ನು ಚೆಕ್ ಮಾಡುು ಹೊಸ ಲಿಂಕ್ ಆರಂಭವಾಗಿದೆ. ಹೌದು, ಈ ಲಿಂಕ್ ಸಹಾಯದಿಂಿಂ ರೈತರು ಸ್ಟೇಟಸ್ ಚೆಕ್ ಮಾಡಬಹುದು.

https://parihara.karnataka.gov.in/service92/

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ತೆರೆದುಕೊಳ್ಳುವ ಪೇಜ್ ನಲ್ಲಿ

ಸೆಲೆಕ್ಟ್ ಇಯರ್ ನಲ್ಲಿ 2023 – 24 ಆಯ್ಕೆ ಮಾಡಿಕೊಳ್ಳಬೇಕು. ನಂತರ ಋತು ಆಯ್ಕೆ ಮಾಡಿಯಲ್ಲಿ ಮಂಗಾರು ಆಯ್ಕೆ ಮಾಡಿಕೊಳ್ಳಬೇಕು. ವಿಪತ್ತು ಆಯ್ಕೆ ಮಾಡಿಯಲ್ಲಿ Drought  ಬರ ಆಯ್ಕೆ ಮಾಡಿಕೊಳ್ಳಬೇಕು. ನಂತರ ಹುಡುಕು ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ನಿಮಗೆಆಧಾರ್ ಸಂಖ್ಯೆ, ರೈತರ ಗುರುತಿನ ಸಂಖ್ಯೆ, ಮೊಬೈಲ್ ಸಂಖ್ಯೆ ಹಾಗೂ ಸರ್ವೆ ನಂಬರ್ ಹೀಗೆ ನಾಲ್ಕು ಆಯ್ಕೆಗಳು ಕಾಣಿಸುತ್ತವೆ. ಅದರಲ್ಲಿ ಆಧಾರ್ ನಂಬರ್ ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ ಆಧಾರ್ ಸಂಖ್ಯೆ ನಮೂದಿಸಿ Fetch ವಿವರ ಪಡೆಯಿರಿ ಮೇಲೆ ಕ್ಲಿಕ್ ಮಾಡಿ ಸ್ಟೇಟಸ್ಚೆಕ್ ಮಾಡಬಹುದು.

ಯಾವ ಬೆಳೆಗೆ ಎಷ್ಟು ಪರಿಹಾರ ಹಣ ರೈತರಿಗೆ ಜಮೆಯಾಗಲಿದೆ?

ಕೇಂದ್ರ ಸರ್ಕಾರದ ರಾಷ್ಟ್ರೀಯ ಪ್ರಕೃತಿ ವಿಕೋಪ ಪರಿಹಾರ ನಿಧಿ (ಎನ್.ಡಿ.ಆರ್.ಎಫ್) ಮಾರ್ಗಸೂಚಿ ಪ್ರಕಾರ ಮಳೆಯಾಶ್ರಿತ ಬೆಳೆಗೆ ಪ್ರತಿ ಹೆಕ್ಟೇರಿಗೆ 8500 ರೂಪಾಯಿ ನೀಡಲಾಗುವುದು. ನೀರಾವರಿ ಬೆಳೆಗೆ 17000 ರೂಪಾಯಿ ಪರಿಹಾರ ನೀಡಲಾಗುವುದು. ಅದೇ ರೀತಿ ಬಹುವಾರ್ಷಿಕ ಬೆಳೆಗೆ 22500 ರೂಪಾಯಿ ಪರಿಹಾರ ನೀಡಲು ನಿಗದಿ ಮಾಡಲಾಗಿದೆ.

ಇದನ್ನೂ ಓದಿ Ration card ನಂಬರ್ ಹಾಕಿ ಗೃಹಲಕ್ಷ್ಮೀ ಹಣ ಜಮೆ ಸ್ಟೇಟಸ್ ಚೆಕ್ ಮಾಡಿ

ಪ್ರಸಕ್ತ ಸಾಲಿನಲ್ಲಿ ಅಂದರೆ 2023-24ನೇ ಸಾಲಿನಲ್ಲಿ ರಾಜ್ಯದಲ್ಲಿ ಬರಗಾಲ ಘೋಷಣೆಯಾಗಿದೆ. ಸದ್ಯ ತಾತ್ಕಾಲಿಕವಾಗಿ 2 ಸಾವಿರ ರೂಪಾಯಿ ಬರಗಾಲ ಪೀಡಿತ ತಾಲೂಕಿನ ರೈತರಿಗೆ ನೀಡಲು 105 ಕೋಟಿ ರೂಪಾಯಿ ಬರ ಪರಿಹಾರ ಹಣ ಬಿಡುಗಡೆ ಮಾಡಲಾಗಿದೆ. ನಂತರ ಕೇಂದ್ರ ಸರ್ಕಾರದಿಂದ ಬರ ಪರಿಹಾರ ಹಣ ಬಿಡುಗಡೆಯಾಗುತ್ತಿದ್ದಂತೆ ರೈತರ ಖಾತೆಗೆ ಜಮೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಳೆದ ವಾರದಲ್ಲಿ ತಿಳಿಸಿದ್ದಾರೆ. ಹಾಗಾಗಿ ಈ ವಾರದೊಳಗೆ ರಾಜ್ಯದ ಬಹುತೇಕ ರೈತರ ಖಾತೆಗೆ 2 ಸಾವಿರ ರೂಪಾಯಿ ತಾತ್ಕಾಲಿಕ ಬರಗಾಲ ಪರಿಹಾರ ಹಣ ಜಮೆಯಾಗುವ ಸಾಧ್ಯತೆಯಿದೆ.

ಈಗಾಗಲೇ ರಾಜ್ಯದ ಎಲ್ಲಾ ಜಿಲ್ಲೆಗಳ ರೈತರ ಖಾತೆಗೆ ಬರ ಪರಿಹಾರ ಹಣ ಜಮೆ ಮಾಡಲಾಗುತ್ತಿದೆ. ನಿಮಗೆ ಇನ್ನೂ ಬರ ಪರಿಹಾರ ಹಣ ಜಮೆಯಾಗದಿದ್ದರೆ ಕೂಡಲೇ ಮೇಲಿನ ಲಿಂಕ್ ಬಳಸಿ ಚೆಕ್ ಮಾಡಬಹುದು. ಇದಕ್ಕಾಗಿ ರೈತರ ಬಳಿ ಸ್ಮಾರ್ಟ್ ಫೋನ್ ಇದ್ದರೆ ಸಾಕು, ಯಾರ ಸಹಾಯವೂ ಬೇಕಿಲ್ಲ.  ಅತೀ ಸುಲಭವಾಗಿ ಮೇಲೆ ತಿಳಿಸಿದ ಪ್ರಕಾರ ನೀವೇ ಸ್ಟೇಟಸ್ ಚೆಕ್ ಮಾಡಬಹುದು.

Leave a Comment