ರೈತರು ಕೇವಲ ತಮ್ಮ ಸರ್ವೆ ನಂಬರ್ ಹಾಕಿದರೆ ಸಾಕು, ನಿಮ್ಮ ಜಮೀನು ಹಾಗೂ ನಿಮ್ಮ ಸುತ್ತಮುತ್ತಲಿನ ಜಮೀನು ಯಾರ ಹೆಸರಿಗಿದೆ? ಜಮೀನಿನ ಮೇಲೆ ಸಾಲವೆಷ್ಟಿದೆ ಎಂಬುದನ್ನು ಚೆಕ್ ಮಾಡಬಹುದು.
ಹೌದು, ರೈತರ ಬಳಿ ಫೋನ್ ಇದ್ದರೆ ಸಾಕು, ಯಾರ ಸಹಾಯವೂ ಇಲ್ಲದೆ ದೇಶದ ಯಾವುದೇ ಮೂಲೆಯಲ್ಲಿ ಕುಳಿತು ತಮ್ಮ ಜಮೀನಿನ ಸುತ್ತಮುತ್ತಲಿನ ಜಮೀನು ಯಾರ ಹೆಸರಿಗೆ ಯಾವಾಗ ವರ್ಗಾವಣೆಯಾಗಿದೆ? ಹಾಗೂ ಆ ಜಮೀನಿನ ಮೇಲೆ ಸಾಲವೆಷ್ಟಿದೆ ಎಂಬುದನ್ನು ಒಂದೇ ನಿಮಿಷದಲ್ಲಿ ಚೆಕ್ ಮಾಡಬಹುದು ಅದು ಹೇಗೆ ಅಂದುಕೊಂಡಿದ್ದೀರಾ? ಇಲ್ಲಿದೆ ನೋಡಿ ಮಾಹಿತಿ.
ರೈತರ ಜಮೀನಿನ ಸುತ್ತಮುತ್ತಲಿನ ಜಮೀನಿನ ಇತಿಹಾಸ ತಿಳಿಯುವುದು ಹೇಗೆ?
ರೈತರು ತಮ್ಮಲ್ಲಿರುವ ಮೊಬೈಲ್ ನಲ್ಲಿ ತಮ್ಮ ಬಳಿಯಿರುವ ಜಮೀನಿನ ಸುತ್ತಮುತ್ತಲಿನ ಜಮೀನಿನ ಇತಿಹಾಸ ತಿಳಿಯಲು ಈ
https://landrecords.karnataka.gov.in/service53/
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮಗೆ ಜಮೀನಿನ ದಾಖೆಲಗಳ್ನು ಮೂರು ಪ್ರಕಾರವಾಗಿ ಚೆಕ್ ಮಾಡುವ ಆಯ್ಕೆಗಳು ಕಾಣಿಸುತ್ತವೆ. Survey No Wise ಹಾಗೂ Owner Wise ಮತ್ತು Registration Number Date ಆಯ್ಕೆಗಳು ಕಾಣಿಸುತ್ತವೆ. ಅಲ್ಲಿ ನೀವು ಸರ್ವೆ ನಂಬರ್ ವೈಸ್ ಆಯ್ಕೆ ಮಾಡಿಕೊಳ್ಳಬೇಕು.
ಅಲ್ಲಿ ಕೆಳಗಡೆ ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿಕೊಳ್ಳಬೇಕು. ನಿಮ್ಮ ತಾಲೂಕು ಆಯ್ಕೆ ಮಾಡಿಕೊಳ್ಳಬೇಕು. ನಿಮ್ಮ ಹೋಬಳಿ ಆಯ್ಕೆ ಮಾಡಿಕೊಳ್ಳಬೇಕು ಹಾಗೂ ನಿಮ್ಮ ಊರು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ನಂತರ ನೀವು ಯಾವ ಜಮೀನಿನ ಸುತ್ತಮುತ್ತಲಿನ ಜಮೀನಿನ ಇತಿಹಾಸ ಚೆಕ್ ಮಾಡಬೇಕೆಂದುಕೊಂಡಿದ್ದೀರೋ ಆ ಸರ್ವೆ ನಂಬರ್ ಹಾಕಬೇಕು. ನಂತರ ಸರ್ನೋಕ್ ನಲ್ಲಿ ಹಾಗೂ ಹಿಸ್ಸಾ ನಂಬರ್ ನಲ್ಲಿ ಸ್ಟಾರ್ ಆಯ್ಕೆ ಮಾಡಿಕೊಳ್ಳಬೇಕು. ಆಗ ನಿಮಗೆ ಮತ್ತೆ ಕೆಳಗಡೆ ಮೂರು ಆಯ್ಕೆಗಳು ಕಾಣಿಸುತ್ತವೆ. ಅದರಲ್ಲಿ ನೀವು View Mutation Data ಮೇಲೆ ಕ್ಲಿಕ್ ಮಾಡಬೇಕು.
ಇದನ್ನು ಓದಿ : ಬೆಳೆಹಾನಿಯಾಗಿದೆಯೇ? ಬೆಳೆ ವಿಮಾ ಕಂಪನಿಗೆ ದೂರು ಸಲ್ಲಿಸುವುದು ಹೇಗೆ? ಇಲ್ಲಿದೆ ಮಾಹಿತಿ
ಆಗ ಇನ್ನೊಂದು ಪೇಜ್ ಓಪನ್ ಆಗುತ್ತದೆ. ಅಲ್ಲಿ ನಿಮ್ಮ ಸರ್ವೆ ನಂಬರ್ ಅಡಿಯಲ್ಲಿ ಬರುವ ಹಿಸ್ಸಾ ನಂಬರ್ ಗಳಲ್ಲಿ ಏನೇನು ಬದಲಾವಣೆಯಾಗಿದೆ ಹಾಗೂ ಯಾವಾಗ ಬದಲಾವಣೆ ಯಾಗಿದೆ ಎಂಬುದರ ಬಗ್ಗೆ ಮಾಹಿತಿ ಕಾಣಿಸುತ್ತದೆ. ಅಂದರೆ ಜಮೀನು ಯಾವಾಗ ಮಾರಾಟವಾಗಿದೆ? ಜಮೀನು ಯಾವಾಗ ಪೋಡಿಯಾಗಿದೆ? ಎಂಬ ಮಾಹಿತಿ ಕಾಣಿಸುತ್ತದೆ.
ಅದರ ಕೆಳಗಡೆ ನಿಮ್ಮ ಸರ್ವೆ ನಂಬರ್ ಅಕ್ಕಪಕ್ಕದಲ್ಲಿ ಯಾವ ಜಮೀನು ಮಾಲಿಕರು ಯಾವ ಬ್ಯಾಂಕಿನಲ್ಲಿ ಎಷ್ಟು ಸಾಲ ಪಡೆದಿದ್ದಾರೆ? ಎಂಬ ಮಾಹಿತಿ ಕಾಣಿಸುತ್ತದೆ.
ನೀವು ನಮೂದಿಸಿದ ಜಮೀನಿನ ಸರ್ವೆ ನಂಬರ್ ಅಡಿಯಲ್ಲಿ ಯಾವ ಯಾವ ಜಮೀನಿನ ಮಾಲಿಕರು ಬರುತ್ತಾರೆ. ಅವರ ಹೆಸರು ತಂದೆಯ ಹೆಸರು ಹಾಗೂ ಅವರ ಹೆಸರಿಗೆ ಎಷ್ಟು ಎಕರೆ ಜಮೀನಿದೆ? ಎಂಬಿತ್ಯಾದಿ ಮಾಹಿತಿಗಳನ್ನು ನೀವು ನೋಡಬಹುದು. ಇದರ ಕೆಳಗಡೆ ನಿಮ್ಮ ಜಮೀನಿನ ಮಾಹಿತಿಯೊಂದಿಗೆ ಅಕ್ಕಪಕ್ಕದ ಜಮೀನು ಯಾರ ಯಾರ ಹೆಸರಿನಲ್ಲಿದೆ? ಜಮೀನು ಜಂಟಿಯಾಗಿದೆಯೇ? ಜಂಟಿಯಾಗಿದ್ದರೆ ಎಷ್ಟು ಎಕರೆ ಜಮೀನು ಜಂಟಿಯಾಗಿದೆ ಎಂಬ ಮಾಹಿತಿ ಇರುತ್ತದೆ.
ಜಮೀನನ್ನು ಯಾರು ಮಾರಿದ್ದಾರೆ? ಯಾರಿಗೆಮಾರಿದ್ದಾರೆ? ಜಮೀನು ಖರೀದಿಸಿದವರು ಮಾರಾಟ ಮಾಡಿದವರಿಗೆ ಯಾವ ಸಂಬಂಧ ಹೊಂದಿದ್ದಾರೆ? ಜಮೀನು ಜಂಟಿಯಾಗಿದ್ದರೆ ಎಷ್ಟು ಎಕರೆ ಜಂಟಿಯಾಗಿದೆ ಎಂಬುದರ ಮಾಹಿತಿಯನ್ನು ಚೆಕ್ ಮಾಡಬಹುದು. ರೈತರು ಈ ಮಾಹಿತಿಗಳನ್ನು ತಮ್ಮ ಮೊಬೈಲ್ ನಲ್ಲೇ ಚೆಕ್ ಮಾಡಬಹುದು. ಇದಕ್ಕಾಗಿ ಯಾರ ಸಹಾಯವೂ ಕೇಳಬೇಕಿಲ್ಲ. ಒಂದೇ ನಿಮಿಷದಲ್ಲಿ ರೈತರು ತಮ್ಮ ಎಲ್ಲಾ ಸರ್ವೆ ನಂಬರ್ ಗಳ ಮಾಹಿತಿಯನ್ನು ಚೆಕ್ ಮಾಡಬಹುದು.