ಬೆಳೆಹಾನಿಯಾಗಿದೆಯೇ? ಬೆಳೆ ವಿಮಾ ಕಂಪನಿಗೆ ದೂರು ಸಲ್ಲಿಸುವುದು ಹೇಗೆ? ಇಲ್ಲಿದೆ ಮಾಹಿತಿ

Written by Ramlinganna

Updated on:

ಬೆಳೆ ವಿಮೆ ಮಾಡಿಸಿದ ರೈತರು ತಮ್ಮ ಮೊಬೈಲ್ ಮೂಲಕವೇ ಈಗ ಬೆಳೆ ವಿಮಾ ಕಂಪನಿಗಳಿಗೆ ದೂರು ಸಲ್ಲಿಸಬಹುದು. ಹೌದು ದೂರು ಸಲ್ಲಿಸಿದ ನಂತರವೇ ನಿಮಗೆ ಬೆಳೆ ವಿಮೆ ಹಣ ಜಮೆಯಾಗಲಿದೆ. ಬೆಳೆ ವಿಮಾ ಕಂಪನಿಗೆ ದೂರು ನೀಡುವುದು ಹೇಗೆ? ದೂರು ನೀಡುವಾಗ ಯ್ಯಾವ್ಯಾವ ಮಾಹಿತಿ ನೀಡಬೇಕು? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ

ನೀವೂ ಯೂನಿವರ್ಸಲ್ ಸ್ಯಾಂಪೋ ವಿಮಾ ಕಂಪನಿಗೆ ಬೆಳೆ ವಿಮೆ ಮಾಡಿಸಿದ್ದರೆ ನೀವು 1800 200 5142 ನಂಬರಿಗೆ ಕರೆ ಮಾಡಬೇಕು. ಆಗ ವಿಮಾ ಕಂಪನಿಯೂ ನಿಮ್ಮ ಕರೆ ಸ್ವೀಕರಿಸುತ್ತದೆ. ಆಗ ಕನ್ನಡದಲ್ಲಿ ಮಾತನಾಡಲು ಒಂದನ್ನು ಒತ್ತಿ ಎಂಬ ವಾಣಿ ಕೇಳಿಸುತ್ತದೆ. ಆಗ ಒಂದನ್ನು ಒತ್ತಬೇಕು. ನಂತರ ನೀವು ಹೌದು ಇಲ್ಲ ಎಂಬ ಉತ್ತರ ಕೊಡಬೇಕಾಗುತ್ತದೆ.

ನಿಮ್ಮ ಅರ್ಜಿ ಸಂಖ್ಯೆ ತಿಳಿಸುತ್ತದೆ. ನಿಮ್ಮ ಅರ್ಜಿ ನಿಮಗೆ ನೆನಪಿಲ್ಲದಿದ್ದರೆ ಇಲ್ಲ ಎನ್ನಬೇಕು. ಆಗ ನಿಮ್ಮ ಬ್ಯಾಂಕಿನ ಅಕೌಂಟ್ ನಂಬರ್ ಹೇಳುತ್ತದೆ. ಆಗ ನಿಮ್ಮ ಅಕೌಂಟ್ ನಂಬರ್ ಸರಿಯಾಗಿದ್ದರೆ ಹೌದು ಎಂದು ಹೇಳಬೇಕು. ನಂತರ ನೀವು ವಿಮಾ ಹಣ ಎಲ್ಲಿ ಪಾವತಿಸಿದ್ದೀರಿ ಎಂದು ಹೇಳುತ್ತದೆ ಆಗ ಹೌದು ಎಂದು ಹೇಳಬೇಕು.

ಇದನ್ನೂ ಓದಿ Gruha jyothi status ಗೃಹ ಜ್ಯೋತಿ ಸ್ಟೇಟಸ್ ಮೊಬೈಲ್ ನಲ್ಲೇ ಚೆಕ್ ಮಾಡಿ

ನಿಮ್ಮ ಬೆಳೆ ಹೇಗೆ ಹಾನಿಯಾಗಿದೆ ಅಂದರೆ ಜಲಾವೃತವಾಗಿದೆಯೋ , ಪ್ರವಾಹದಿಂದ ಹಾಳಾಗಿದೆಯೋ? ಗುಡುಗು ಸಿಡಿಲಿನಿಂದ ಬೆಳೆ ಹಾಳಾಗಿದೆಯೋ ಹಾಗೂ ಕೀಟ ಬಾಧೆಗಳಿಂದ ಹಾಳಾಗಿದೆಯೋ ಎಂಬ ಮಾಹಿತಿ ಕೇಳಲಾಗುತ್ತದೆ. ಆಗ ನೀವು ಪ್ರವಾಹದಿಂದಾದರೆ ಪ್ರವಾಹ ಇಳ್ಲವೋ ಜಲಾವೃತವಾಗಿದ್ದರೆ ಜಲಾವೃತ ಆಯ್ಕೆಮಾಡಿಕೊಳ್ಳಬೇಕು. ನಂತರ ನಿಮ್ಮ ಮೊಬೈಲ್ ನಂಬರ್ ಹೇಳುತ್ತದೆ.

ಅದು ಸರಿಯಾಗಿದ್ದರೆ ಹೌದು ಎಂದು ಹೇಳಬೇಕು. ಇದಾದ ನಂತರ ನಿಮ್ಮ ಬೆಳೆ ಯಾವಾಗ ಹಾಳಾಗಿದೆ ಎಂಬ ಮಾಹಿತಿ ಕೇಳಲಾಗುತ್ತದೆ. ಆಗ ನೀವು ತಿಂಗಳು ದಿನಾಂಕ ಹಾಗೂ ವರ್ಷ ಹೇಳಬೇಕಾಗುತ್ತದೆ. ನಂತರ ನಿಮ್ಮ ದೂರು ಸ್ವೀಕರಿಸಲಾಗಿದೆ ಎಂಬ ಸಂದೇಶ ನಿಮ್ಮ ಮೊಬೈಲಿಗೆ ಕಳಿಸಲಾಗುತ್ತದೆ.

ನಿಮ್ಮ ಜಿಲ್ಲೆಗೆ ಯಾವ ವಿಮಾ ಕಂಪನಿ ನಿಯೋಜಿಸಲಾಗಿದೆ ಎಂಬುದನ್ನು ಮೊಬೈಲ್ ನಲ್ಲೇ ಚೆಕ್ ಮಾಡಿ

ನಿಮ್ಮ ಜಿಲ್ಲೆಗೆ ಯಾವಿ ಮಿಮಾ ಕಂಪನಿ ನಿಯೋಜಿಸಲಾಗಿದೆ ಎಂಬುದನ್ನು ಚೆಕ್ ಮಾಡಲು ಈ

https://samrakshane.karnataka.gov.in/publichome.aspx

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ನಂತರ know your insurance co ಮೇಲೆ ಕ್ಲಿಕ ಮಾಡಬೇಕು. ಆಗ ನಿಮ್ಮಜಿಲ್ಲೆ, ವಿಮಾ ಕಂಪನಿಯ ಪಟ್ಟಿ ಕಾಣಿಸುತ್ತದೆ. ನಿಮ್ಮ ವಿಮಾ ಕಂಪನಿ ತಿಳಿದುಕೊಂಡ ನಂತರ ನೀವು ನಿಮ್ಮ ವಿಮಾ ಕಂಪನಿಯ ಉಚಿತ ಸಹಾಯವಾಣಿ ನಂಬರಿಗೆ ಕರೆ ಮಾಡಿ ದೂರು ನೀಡಬೇಕು.ಇಲ್ಲಿ ವಿಮಾ ಕಂಪನಿಗಳ ಉಚಿತ ಸಹಾಯವಾಣಿ ನಂಬರ್ ನೀಡಲಾಗಿದೆ.

ಅಗ್ರೀಕಲ್ಚರ್ ಇನ್ಸುರೆನ್ಸ್ ಕಂಪನಿ 1800 425 0505, ಯೂನಿವರ್ಸಲ್ ಸ್ಯಾಂಪೋ ವಿಮಾ ಕಂಪನಿಯ ಉಚಿತ ಸಹಾಯವಾಣಿ 1800 200 5142 ಗೆ ಕರೆ ಮಾಡಬೇಕು. ಎಸ್.ಬಿಐ ವಿಮಾ ಕಂಪನಿಗೆ ವಿಮೆ ಮಾಡಿಸಿದ್ದರೆ 1800 180 1551 ಗೆ ಕೆರ ಮಾಡಬೇಕು. ಅದೇ ರೀತಿ ನೀವು ಹೆಚ್.ಡಿ.ಎಫ್.ಸಿ ವಿಮಾ ಕಂಪನಿಗೆ ಹಣ ಪಾವತಿಸಿದ್ದರೆ 1800 2660700 ಗೆ ಕರೆ ಮಾಡಬೇಕು.

ಅದೇ ರೀತಿ ಫ್ಯೂಟರ್ ಜನರಲ್  ಉಚಿತ ಸಹಾಯವಾಣಿ 1800 266 4141, ಐಸಿಐಸಿಐ ಲ್ಯಾಂಬಾರ್ಡ್ 1800 103 7712, ಬಜಾಜ್ ಅಲಾಯನ್ಸ್ ವಿಮಾ ಕಂಪನಿ1800 209 5959 ಗೆ ಕರೆ ಮಾಡಿ ದೂರು ನೀಡಬಹುದು.

ಬೆಳೆ ಹಾನಿಯಾದಾಗ 72 ಗಂಟೆಯೊಳಗೆ ವಿಮಾ ಕಂಪನಿಗೆ ತಿಳಿಸಬೇಕು. ಬೆಳೆ ಯಾವಾಗ ಹಾನಿಯಾಗಿದೆ ಎಂಬುದು ಪ್ರಶ್ನೆ ಕೇಳಿದಾಗ ದಯವಿಟ್ಟು ತಿಂಗಳು. ದಿನಾಂಕ ಹಾಗೂ ವರ್ಷ ನೀವು ಕರೆ ಮಾಡುವಾಗ 72 ಗಂಟೆಯೊಳಗಿರಬೇಕು.

ಹೆಚ್ಚಿ ನ ಮಾಹಿತಿಗೆ 1800 180 1551 ನಂಬರ್ ಅಥವಾ ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರ, ತೋಟಗಾರಿಕೆ, ಕೃಷಿ ಇಲಾಖೆಗೆ ಸಂಪರ್ಕಿಸಬಹುದು.

Leave a comment