ಗೃಹಲಕ್ಷ್ಮೀ ಹಣ ಯಾರಿಗೆ ಜಮೆ? ಯಾರಿಗೆ ಜಮೆಯಾಗಲ್ಲ?

Written by Ramlinganna

Updated on:

Gruhalakshmi hana yarige jameyaguttade ರಾಜ್ಯ ಸರ್ಕಾರವು ಜಾರಿಗೆ ತಂದ ಮಹತ್ವದ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮೀ ಹಣ ಯಾರಿಗೆ ಜಮೆಯಾಗುತ್ತದೆ ಯಾರಿಗೆ ಜಮೆಯಾಗಲ್ಲ ಎಂಬ ಮಾಹಿತಿ ಮೊಬೈಲ್ ನಲ್ಲೇ ಚೆಕ್ ಮಾಡಬಹುದು.

ಹೌದು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯಾವುದೇ ಯೋಜನೆಗಳಾಗಲಿ ಈಗ ಫಲಾನುಭವಿಗಳ ಅದರ ಸೌಲಭ್ಯ ಸಿಗುತ್ತದೆಯೋ ಇಲ್ಲವೋ ಇದರೊಂದಿಗೆ ಯಾರ್ಯಾರೂ ಅರ್ಹರಾಗಿರುತ್ತಾರೆ ಎಂಬುದರ ಮಾಹಿತಿಯನ್ನು ಚೆಕ್ ಮಾಡಬಹುದು.

ಆಗಸ್ಟ್ ತಿಂಗಳ ಗೃಹಲಕ್ಷ್ಮೀ ಯೋಜನೆಯ ಹಣವನ್ನು ಈಗಾಗಲೇ ರಾಜ್ಯ ಸರ್ಕಾರವು ಆಗಸ್ಟ್ 30 ರಂದು ಬಿಡುಗಡೆ ಮಾಡಿದ್ದು, ತಮಗೆಲ್ಲಾ ಗೊತ್ತಿದ್ದ ಸಂಗತಿ. ಆದರೆ ಗೃಹಲಕ್ಷೀ ಯೋಜನೆಗೆ ನೋಂದಣಿ ಮಾಡಿದ ಕೆಲವರಿಗೆ ಜಮೆಯಾದರೆ ಕೆಲವರಿಗೆ ಜಮೆಯಾಗಿಲ್ಲ. ಗೃಹಲಕ್ಷ್ಮೀ ಯೋಜನೆಯ ಹಣ ಬಿಡುಗಡೆಯಾದರೂ ಹೆಸರು ನೋಂದಣಿ ಮಾಡಿಸಿದರೂ ಕೆಲವರಿಗೇಕೆ ಜಮೆಯಾಗಿಲ್ಲ ಎಂಬ ಸಂಶಯಕ್ಕೆ ಇಲ್ಲಿದೆ ಉತ್ತರ.

Gruhalakshmi hana yarige jameyaguttade ಗೃಹಲಕ್ಷ್ಮೀ ಯೋಜನೆಗೆ ಯಾರು ಯಾರು ಅರ್ಹರಿದ್ದಾರೆ?

ರಾಜ್ಯದ ಕಾಂಗ್ರೆಸ್ ಸರ್ಕಾರವು ಜಾರಿಗೆ ತಂದ ಕಾಂಗ್ರೆಸ್ ಗೃಹಲಕ್ಷ್ಮೀ ಯೋಜನೆಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ನೀಡಿರುವಂತಹ ಅಂತ್ಯೋದಯ, ಬಿಪಿಎಲ್ ಮತ್ತು ಎಪಿಎಲ್ ಪಡಿತರ ಚೀಟಿಗಳಲ್ಲಿ ಕುಟುಂಬದ ಯಜಮಾನಿ ಎಂದು ನಮೂದಿಸಿರುವ ಮಹಿಳೆಯರಿಗೆ ಮಾತ್ರ ಗೃಹಲಕ್ಷ್ಮೀ ಯೋಜನೆಯ ಹಣ ಜಮೆಯಾಗುತ್ತದೆ. ಒಂದು ವೇಳೆ ರೇಶನ್ ಕಾರ್ಡ್ ನಲ್ಲಿ ಕುಟುಂಬದ ಯಜಮಾನಿಎಂದು ನಮೂದಾಗಿಲ್ಲವಾದರೆ ಆ ಮಹಿಳೆ ಎಲ್ಲಾ ಅರ್ಹತೆ ಪಡೆದಿದ್ದರೂ ಸಹ ಅವರಿಗೆ ಜಮೆಯಾಗಲ್ಲ.

ಗೃಹಲಕ್ಷ್ಮೀ ಯೋಜನೆಗೆ ಯಾರು ಅನರ್ಹರಾಗಿದ್ದಾರೆ?

ಗೃಹಲಕ್ಷ್ಮೀ ಯೋಜನೆಗೆ  ಐದು ಎಕರೆಗಿಂತ ಹೆಚ್ಚು ಭೂಮಿ ಹೊಂದಿರುವವರು ಅರ್ಹರಾಗಿರುವುದಿಲ್ಲ ಎನ್ನಲಾಗುತ್ತಿದೆ. ಆದರೆ ಈ ಕುರಿತು ಸರ್ಕಾರ ಅದಿಸೂಚನೆಯಲ್ಲಿ ತಿಳಿಸಿಲ್ಲ. ಆದಾಯ ತೆರಿಗೆ ಪಾವತಿ ಮಾಡುವವರ ಕುಟುಂಬದವರಿಗೂ ಗೃಹಲಕ್ಷ್ಮೀ ಯೋಜನೆಯ ಹಣ ಸಿಗುವುದಿಲ್ಲ.  ಸರ್ಕಾರಿ ಉದ್ಯೋಗಿಗಳಿಗೆ, ಪೆನ್ಶನ್ ಪಡೆಯುವವರಿಗೆ ಯೋಜನೆಯ ಲಾಭ ಸಿಗುವುದಿಲ್ಲ.

ಇದನ್ನೂ ಓದಿ ನಿಮ್ಮ ಜಮೀನಿನ ಒರಿಜಿನಲ್ ಸರ್ವೆ ಟಿಪ್ಪಣಿ ಪುಸ್ತಕ ಒಂದೇ ನಿಮಿಷದಲ್ಲಿ ಮೊಬೈಲ್ ನಲ್ಲೇ ಚೆಕ್ ಮಾಡಿ

ಜಿಎಸ್.ಟಿ ಪಾವತಿ ಮಾಡುತ್ತಿರುವ ಮಹಿಳೆಯರಿಗೆ ಯೋಜನೆಯ ಲಾಭ ಸಿಗುವುದಿಲ್ಲ. ವೃತ್ತಿ ತೆರಿಗೆ ಪಾವತಿ ಮಾಡುವವರಿಗೂ ಗೃಹಲಕ್ಷ್ಮೀ ಯೋಜನೆಯ ಹಣ ಸಿಗುವುದಿಲ್ಲ.

ಪಡಿತರ ಚೀಟಿಯಲ್ಲಿ ಯಾರು ಮುಖ್ಯಸ್ಥರಿದ್ದಾರೆ? ಇಲ್ಲೇ ಚೆಕ್ ಮಾಡಿ

ಬಿಪಿಎಲ್, ಅಂತ್ಯೋದಯ ಹಾಗೂ ಎಪಿಎಲ್ ಕಾರ್ಡ್ ಹೊಂದಿರುವವರು ಕುಟುಂಬದ ಮುಖ್ಯಸ್ಥರು ಯಾರೆಂಬುದನ್ನು ಚೆಕ್ ಮಾಡಲು ಈ

https://ahara.kar.nic.in/Home/EServices

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.  ಆಗ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಪೇಜ್  ತೆರೆದುಕೊಳ್ಳುತ್ತದೆ. ಅಲ್ಲಿ ನೀವು ಇ ಪಡಿತ ಚೀಟಿ ಮೇಲೆ ಕ್ಲಿಕ್ ಮಾಡಬೇಕು. ನಂತರ ಅಲ್ಲಿ ಕಾಣುವ ಹಳ್ಳಿ ಪಟ್ಟಿ ಮೇಲೆ ಕ್ಲಿಕ್ ಮಾಡಿದ ನಂತರ ಇನ್ನೊಂದು ಪೇಜ್ ಓಪನ್ ಆಗುವುದು. ಅಲ್ಲಿ ನಿಮ್ಮ ಜಿಲ್ಲೆ, ತಾಲೂಕು, ಗ್ರಾಮ ಪಂಚಾಯತ್ ನಿಮ್ಮ ಊರು ಆಯ್ಕೆ ಮಾಡಿಕೊಂಡು ಗೋ ಮೇಲೆ ಕ್ಲಿಕ್ ಮಾಡಿ ಕುಟುಂಬದ ಮುಖ್ಯಸ್ಥರು ಯಾರೆಂಬುದನ್ನು ಚೆಕ್ ಮಾಡಬಹುದು.

ಪಡಿತರ ಚೀಟಿಯಲ್ಲಿ ತಿದ್ದುಪಡಿಗೆ ಅವಕಾಶ

ಪಡಿತರ ಚೀಟಿ ಹೊಂದಿರುವ ಅದರಲ್ಲಿ ಪುರುಷ ಮುಖ್ಯಸ್ಥರಾಗಿರುವ ಕಾರ್ಡ್ ದಾರರು ಮಹಿಳಾ ಮುಖ್ಯಸ್ಥರೆಂದು ತಿದ್ದುಪಡಿ ಮಾಡಲು ಅವಕಾಶ ನೀಡಲಾಗಿದೆ. ಏಕೆಂದರೆ ಗೃಹಲಕ್ಷ್ಮೀ ಯೋಜನೆಯ ಲಾಭ ಪುರುಷ ಮುಖ್ಯಸ್ಥ ಕುಟುಂಬ ಕಾರ್ಡ್ ಹೊಂದಿರುವವರಿಗೆ ಸಿಗುತ್ತಿಲ್ಲ ಈ ಕುಟುಂಬವು ಗೃಹಲಕ್ಷ್ಮೀ ಯೋಜನೆಯಿಂತ ವಂಚಿತರಾಗುತ್ತಿದ್ದಾರೆ. ಹಾಗಾಗಿ ಸರ್ಕಾರ ಮನೆ ಮುಖ್ಯಸ್ಥರ ಹೆಸರು ಬದಲಾವವಣೆಗೆ ಅವಕಾಶ ನೀಡಿದೆ.

ಪಡಿತರ ಚೀಟಿಯ ತಪ್ಪುಗಳನ್ನು ತಿದ್ದುಪಡಿ ಮಾಡಿಸಿಕೊಂಡು ಅರ್ಜಿಗಳನ್ನು ಸಲ್ಲಿಸಲು ಅವಕಾಶ ಒದಗಿಸಲಾಗಿದೆ. ಹೊಸ ಸದಸ್ಯರ ಸೇರ್ಪಡೆ, ರೇಶನ್ ಕಾರ್ಡ್ ನಲ್ಲಿ ಹೆಸರು ತಿದ್ದುಪಡಿ ಮಾಡುವುದು ಆಧಾರ್ ಕಾರ್ಡ್ ನಲ್ಲಿರುವಂತೆ ರೇಶನ್ ಕಾರ್ಡ್ ನಲ್ಲಿ ಹೆಸರು ತಿದ್ದುಪಡಿ, ಯಾರಾದರೂ ಮೃತಪಟ್ಟರೆ ಅಂಥಹವರ ಹೆಸರು ಡಿಲೀಟ್  ಸೇರಿದಂತೆ ಇತರ ಪರಿಷ್ಕರಣೆ ಹೀಗೆ ರೇಶನ್ ಕಾರ್ಡ್ ಹೊಂದಿದವರಿಗೆ ತಿದ್ದುಪಡಿ ಮಾಡಲು ಅವಕಾಶ ನೀಡಲಾಗಿದೆ.

Leave a Comment