PM kisan ಅರ್ಹ ಮತ್ತು ಅನರ್ಹ ರೈತರ ಪಟ್ಟಿ ಬಿಡುಗಡೆ

Written by Ramlinganna

Published on:

PMkisan eligible and ineligible list ಪಿಎಂ ಕಿಸಾನ್ ಯೋಜನೆಯ 13ನೇ ಕಂತಿನ ಹಣ ಯಾವಾಗ ಜಮೆಯಾಗುತ್ತದೆ ಎಂದು ಕಾಯುತ್ತಿರುವ ರೈತರಿಗೆ ಇಲ್ಲಿದೆ ಸುದ್ದಿ. 13ನೇ ಕಂತು ಯಾವ ರೈತರಿಗೆ ಜಮೆಯಾಗುತ್ತದೆ? ಯಾವ ರೈತರಿಗೆ ಜಮೆಯಾಗುವುದಿಲ್ಲ ಎಂಬಪಿಎಂ ಕಿಸಾಾನ್ ಯೋಜನೆಯ  ಅರ್ಹ ಮತ್ತು ಅನರ್ಹ ರೈತರ ಪಟ್ಟಿ ಬಿಡುಗಡೆಯಾಗಿದೆ. ಯಾವ ಪಟ್ಟಿಯಲ್ಲಿ ನಿಮ್ಮ ಹೆಸರಿದೆ ಎಂಬುದನ್ನು ರೈತರು ಈಗ ಮೊಬೈಲ್ ನಲ್ಲೇ ಚೆಕ್ ಮಾಡಬಹುದು.

ಹೌದು, ರೈತರು ತಮ್ಮ ಬಳಿಯಿರುವ ಮೊಬೈಲ್ ನಲ್ಲಿ ಮನೆಯಲ್ಲಿಯೇ ಕುಳಿತು ಅರ್ಹ ಮತ್ತು ಅನರ್ಹ ರೈತರ ಪಟ್ಟಿಯಲ್ಲಿ ತಮ್ಮ ಹೆಸರನ್ನು ಚೆಕ್ ಮಾಡಬಹುದು.

PMkisan eligible and ineligible list ಅರ್ಹ ಮತ್ತು ಅನರ್ಹ ರೈತರ ಪಟ್ಟಿಯಲ್ಲಿ ಹೆಸರು ಚೆಕ್ ಮಾಡುವುದು ಹೇಗೆ?

ರೈತರು ತಮ್ಮಲ್ಲಿರುವ ಮೊಬೈಲ್ ನಲ್ಲಿ ತಮ್ಮ ಹೆಸರು ಯಾವ ಪಟ್ಟಿಯಲ್ಲಿದೆ ಎಂಬುದನ್ನು ಚೆಕ್ ಮಾಡಲು ಈ

https://pmkisan.gov.in/VillageDashboard_Portal.aspx

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ವಿಲೇಜ್ ಡ್ಯಾಶಬೋರ್ಡ್ ತೆರೆದುಕೊಳ್ಳುತ್ತದೆ. ಅಲ್ಲಿ ರೈತರು ರಾಜ್ಯ ಆಯ್ಕೆ ಮಾಡಿಕೊಳ್ಳಬೇಕು. ಇದಾದ ಮೇಲೆ ಯಾವ ಜಿಲ್ಲೆಯವರಾಗಿದ್ದಾರೋ ಆ ಜಿಲ್ಲೆ ಆಯ್ಕೆ ಮಾಡಿಕೊಳ್ಳಬೇಕು. ನಂತರ ತಾಲೂಕು ಆಯ್ಕೆ ಮಾಡಿ ಗ್ರಾಮ ಆಯ್ಕೆ ಮಾಡಿಕೊಂಡು ಸಬ್ಮಿಟ್ ಮೇಲೆ ಕ್ಲಿಕ್ ಮಾಡಬೇಕು.  ಆಗ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ಪಿಎಂ ಕಿಸಾನ್ ಯೋಜನೆಯ ಸೌಲಭ್ಯ ಪಡೆಯಲು ದೃಢೀಕರಣಕ್ಕಾಗಿ ಕಳಿಸಿರುವ ಪಟ್ಟಿ ಅದರ ಪಕ್ಕದಲ್ಲಿ Successfully Authenticated ಅಂದರೆ ಯಾವ ರೈತರಿಗೆ ಪಿಎಂ ಕಿಸಾನ್ ಹಣ ಜಮೆಯಾಗುತ್ತದೆ ಅಂದರೆ ಪಿಎಂ ಕಿಸಾನ್ ಯೋಜನೆಗ ಅರ್ಹ ರೈತರ ಪಟ್ಟಿ ಕಾಣುತ್ತದೆ.

ಅದರಲ್ಲಿ ನಿಮ್ಮ ಹೆಸರು ಇದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಿಕೊಳ್ಳಬಹುದು.ಇದಾದ ಮೇಲೆ Total ineligible  ಅಂದರೆ ಅನರ್ಹ ರೈತರ ಪಟ್ಟಿ  ಕಾಣಿಸುತ್ತದೆ. ಅಲ್ಲಿ ನಿಮ್ಮ ಹೆಸರು ಇದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಬಹುದು. ಒಂದು ವೇಳೆ ಅನರ್ಹ ರೈತರ ಪಟ್ಟಿಯಲ್ಲಿ ನಿಮ್ಮೆಸರು ಇದ್ದರು 13ನೇ ಕಂತಿನ ಹಣ ನಿಮಗೆ ಜಮೆಯಾಗುವ ಸಾಧ್ಯತೆ ಕಡಿಮೆಯಿದೆ.

ಪಿಎಂ ಕಿಸಾನ್ ಯೋಜನೆಯ ಹಣ ಏಕಾಏಕಿ ಜಮೆ ಮಾಡಲು  ಏಕೆ ನಿಲ್ಲಿಸಲಾಯಿತು?

ಪಿಎಂ ಕಿಸಾನ್ ಯೋಜನೆಗೆ ಅರ್ಹ ರೈತರೆಲ್ಲರೂ ತಮ್ಮ ಹೆಸರು ನೋಂದಾಯಿಸಿಕೊಂಡಿದ್ದರು. ಅಂದರೆ ಪಿಎಂ ಕಿಸಾನ್ ಯೋಜನೆಗೆ ನೋಂದಣಿ ಮಾಡಿಸುವಾಗ ರೈತರು ಅರ್ಹರಿದ್ದರು. ನಂತರ ರೈತರ ಕುಟುಂಬದ ಸದಸ್ಯರಲ್ಲಿ ಯಾರಿಗಾದರೂ ಸರ್ಕಾರಿ ನೌಕರಿ, ಅಥವಾ ತೆರಿಗೆ ಪಾವತಿಸುವವರಾಗಿದ್ದರೆ ಅಂತಹ ಕುಟುಂಬದ ರೈತರಿಗೆ ಪಿಎಂ ಕಿಸಾನ್ ಯೋಜನೆಯ ಹಣ ಜಮೆಯಾಗುವುದನ್ನು ನಿಲ್ಲಿಸಲಾಗಿದೆ.

ಇದನ್ನೂ ಓದಿ : ಸರ್ವೆ ನಂಬರ್ ಹಾಕಿ ನಿಮ್ಮ ಜಮೀನಿನ ಮೇಲೆ ಎಷ್ಟು ಸಾಲವಿದೆ? ಮೊಬೈಲ್ ನಲ್ಲೇ ಚೆಕ್ ಮಾಡಿ

ಇದಲ್ಲದೆ ಇಕೆವೈಸಿ ಮಾಡಿಸಲು ಮರೆತರೆ ಅಂತಹ ರೈತರಿಗೂ ಜಮೆ ಮಾಡುವುದನ್ನು ನಿಲ್ಲಿಸಲಾಗಿದೆ.

ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳು ಇಕೆವೈಸಿ ಏಕೆ ಮಾಡಿಸಬೇಕು?

ನೀವು ಪಿಎಂ ಕಿಸಾನ್ ಯೋಜನೆಯ ಎಲ್ಲಾ ಅರ್ಹತೆ ಪಡೆದಿದ್ದರೂ ಇಕೆವೈಸಿ ಮಾಡಿಸಿಲ್ಲವೆಂದರೆ ಹಣ ಜಮೆಯಾಗಲ್ಲ. ಹಾಗಾಗಿ ರೈತರು ಕೂಡಲೇ ತಮ್ಮ ಹತ್ತಿರದ ಸಿಎಸ್.ಸಿ, ಕೇಂದ್ರಗಳು ಅಥವಾ  ಗ್ರಾಮಒನ್ ಕೇಂದ್ರಗಳಲ್ಲಿ ಬಯೋಮೆಟ್ರಿಕ್ ಆಧಾರಿತ ಇಕೆವೈಸಿ ಮಾಡಿಸಿಕೊಳ್ಳಬಹುದು. ಜಮೀನಿನ ಪಹಣಿ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ಪ್ರತಿಯೊಂದಿಗೆ ಕೂಡಲೇ ಇಕೆವೈಸಿ ಮಾಡಿಸಿಕೊಂಡು ಪಿಎಂ ಕಿಸಾನ್ ಯೋಜನೆಯ ಸೌಲಭ್ಯ ಪಡೆದುಕೊಳ್ಳಬಹುದು. ಇಕೆವೈಸಿ ಮಾಡಿಸದಿದ್ದರೆಇನ್ನೂಮುಂದೆ ಅಂದರೆ13ನೇ ಕಂತಿನ ಹಣ ನಿಮ್ಮ ಖಾತೆಗೆ ಜಮೆಯಾಗುವದಿಲ್ಲ.

Leave a Comment