ಪಿಎಂ ಕಿಸಾನ್ ಗ್ರಾಮವಾರು ಪಟ್ಟಿಯಲ್ಲಿ ನಿಮ್ಮ ಹೆಸರು ಚೆಕ್ ಮಾಡಿ

Written by By: janajagran

Published on:

ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳು ಇನ್ನೂ ಮುಂದೆ ಮೊಬೈಲ್ ನಲ್ಲಿಯೇ ಗ್ರಾಮವಾರು ಪಟ್ಟಿಯಲ್ಲಿ ತಮ್ಮ ಹೆಸರಿರುವುದನ್ನು ಚೆಕ್ ಮಾಡಬಹುದು.

ಹೌದು, ಇದಕ್ಕಾಗಿ ರೈತರು ಯಾರ ಸಹಾಯವೂ ಇಲ್ಲದೆ ಸ್ಮಾರ್ಟ್ ಫೋನ್ ಇದ್ದರೆ ಸಾಕು, ಕ್ಷಣಾರ್ಧದಲ್ಲಿ ತಮ್ಮ ಮೊಬೈಲ್ ನಲ್ಲಿ ಪಿಎಂ ಕಿಸಾನ್ ಫಲಾನುಭವಿಗಳ ಗ್ರಾಮವಾರು ಪಟ್ಟಿಯಲ್ಲಿ ತಮ್ಮ ಹೆಸರು ಚೆಕ್ ಮಾಡಬಹುದು.

ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳಿಗೆ ಇಕೆವೈಸಿ ಕಡ್ಡಾಯಗೊಳಿಸಿದ್ದರಿಂದ  ಈಗಾಗಲೇ ಹಲವಾರು ರೈತರು ಇಕೆವೈಸಿ ಮಾಡಿಸಿದ್ದಾರೆ. ಕೆಲವು ರೈತರು ಮೊಬೈಲ್ ನಲ್ಲಿಯೇ ಇಕೆವೈಸಿ ಮಾಡಿದರೆ ಇನ್ನೂ ಕೆಲವು ರೈತರು ಸಿ.ಎಸ್.ಸಿ ಕೇಂದ್ರಗಳಲ್ಲಿ ಇಕೆವೈಸಿ ಮಾಡಿಸಿದ್ದಾರೆ.  ಕಳೆದೆರಡು ವಾರಗಳ ಹಿಂದೆ ಪಿಎಂ ಕಿಸಾನ್ ಯೋಜನೆಯ ವೆಬ್ ಪೇಜ್ ನಲ್ಲಿ  ಇಕೆವೈಸಿಯನ್ನು ಮೊಬೈಲ್ ನಲ್ಲೇ ಮಾಡುವ ವ್ಯವಸ್ಥೆಯನ್ನು ತೆಗೆದುಹಾಕಲಾಗಿತ್ತು. ಈಗ ಮತ್ತೆ ಮೊಬೈಲ್ ಮೂಲಕ ಇಕೆವೈಸಿ ಮಾಡುವ ಪ್ರಕ್ರಿಯೆನ್ನು ಆರಂಭಿಸಲಾಗಿದೆ. ಆದರೂ ರೈತರು ಸಿಎಸ್.ಸಿ  ಕೇಂದ್ರಗಳಲ್ಲಿ ಇಕೆವೈಸಿ ಮಾಡಿಸಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ : ಮಹಿಳೆಯರಿಗೆ ಗುಡ್ ನ್ಯೂಸ್- 5ನೇ ಕಂತಿನ ಹಣ ಬಿಡುಗಡೆ

ಇಕೆವೈಸಿ ಮಾಡಿಸದೆ ಇರುವ ರೈತರಿಗೆ ಇನ್ನೂ ಕಾಲಾವಕಾಶವಿದೆ.  ಪಿಎಂ ಕಿಸಾನ್ ಯೋಜನೆಯ 15ನೇ ಕಂತಿನ ಹಣ ಬಿಡುಗಡೆ ಸಂದರ್ಭದಲ್ಲಿ ಕೆಲವು ರೈತರಿಗೆ  ಕಂತಿನ ಹಣ ಜಮೆ ಮಾಡಿರಲಿಲ್ಲ. ಇದಕ್ಕೆ ಇದೇ ಕಾರಣದಿಂದ ಪಿಎಂ ಕಿಸಾನ್ ಯೋಜನೆಯ ಹಣ ತಡೆಹಿಡಿಯಲಾಗಿದೆ ಎಂಬ ಸಂದೇಶ ರೈತರಿಗೆ ಸಿಕ್ಕಿಲ್ಲ. ಪಿಎಂ ಕಿಸಾನ್ ಯೋಜನೆಯ ಮುಂದಿನ ಕಂತಿನ ಹಣ ಬರಬೇಕಾದರೆ ಇಕೆವೈಸಿ ಮಾಡಿಸುವುದು ಕಡ್ಡಾಯಗೊಳಿಸಲಾಗಿದೆ.

ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳ ಪಟ್ಟಿಯನ್ನು ಗ್ರಾಮವಾರು ಸಹ ಬಿಡುಗಡೆ ಮಾಡಲಾಗಿದೆ.  ರೈತರು ತಮ್ಮ ಹೆಸರು ಆ ಗ್ರಾಮದ ಪಟ್ಟಿಯಲ್ಲಿದೆಯೇ ಎಂಬುದನ್ನು ಮೊಬೈಲ್ ನಲ್ಲಿಯೇ ಚೆಕ್ ಮಾಡಬಹುದು.

ರೈತರು ಆಯಾ ಗ್ರಾಮದಲ್ಲಿ ತಮ್ಮ ಹೆಸರು ಇರುವುದನ್ನು ಚೆಕ್ ಮಾಡಲು ಈ
https://pmkisan.gov.in/Rpt_BeneficiaryStatus_pub.aspx

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಪಿಎಂ ಕಿಸಾನ್ ಯೋಜನೆಯ ಪೇಜ್ ಓಪನ್ ಆಗುತ್ತದೆ. ಅಲ್ಲಿ ರೈತರು ರಾಜ್ಯ, ಜಿಲ್ಲೆ, ಹೋಬಳಿ, ಗ್ರಾಮ ಆಯ್ಕೆ ಮಾಡಿಕೊಂಡು ಗೆಟ್ ರಿಪೋರ್ಟ್ ಮೇಲೆ ಕ್ಲಿಕ್ ಮಾಡಬೇಕು. ಆಗ ಆಯ್ಕೆಮಾಡಿದ ಗ್ರಾಮದ ಎಲ್ಲಾ ರೈತರ ಪಟ್ಟಿ ಕಾಣುತ್ತದೆ. ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳ ಪಟ್ಟಿಯೇ ಅಲ್ಲಿ ಕಾಣುತ್ತದೆ. ರೈತರು ತಮ್ಮ ಹೆಸರು ಯಾವ ಅಕ್ಷರದಿಂದ ಆರಂಭವಾಗುತ್ತದೆ ಎಂಬುದನ್ನು ನೋಡಿಕೊಂಡು ಅಲ್ಲಿ ಕಾಣುವ ಸಿರಿಯಲ್ ನಂಬರ್ ಪ್ರಕಾರ ನೋಡಿಕೊಳ್ಳಬಹುದು.

ಪಿಎಂ ಕಿಸಾನ್ ಯೋಜನೆಯ ಫಲಾನುಭವಿಯಾಗಲು ಒಂದು ಕುಟುಂಬದ ಒಬ್ಬ ಸದಸ್ಯರಿಗೆ ಮಾತ್ರ ಪಿಎಂ ಕಿಸಾನ್ ಹಣ ಜಮೆ ಮಾಡಲಾಗುವುದು. ಆದರೆ ಈಗಾಗಲೇ ಒಂದು ಕುಟುಂಬದ ಇತರ ಸದಸ್ಯರೂ ಹೆಸರು ನೋಂದಣಿ ಮಾಡಿಸಿಕೊಂಡು ಇಲ್ಲಿಯವರೆಗೆ ಪಿಎಂ ಕಿಸಾನ್ ಲಾಭ ಪಡೆದುಕೊಳ್ಳುತ್ತಿದ್ದಾರೆ. ಇಂತಹ ರೈತರಿಗೆ ಈಗ 16ನೇ ಕಂತಿನ ಹಣ ಜಮೆ ಮಾಡುತ್ತೋ ಇಲ್ಲವೋ ಎಂಬುದು 16ನೇ ಕಂತಿನ ಹಣ ಬಿಡುಗಡೆಯಾಗುವ ದಿನ ಗೊತ್ತಾಗುತ್ತದೆ. ಈಗ ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳಿಗೆ ಇಕೆವೈಸಿ ಮಾಡಿಸುವುದು ಕಡ್ಡಾಯಗೊಳಿಸಿದ್ದರಿಂದ ಯಾವ ದಿನಾಂಕದಂದು ಪಿಎಂ ಕಿಸಾನ್ ಹಣ ಬಿಡುಗಡೆಯಾಗುತ್ತದೆಯೋ ಆ ದಿನ ಗೊತ್ತಾಗಲಿದೆ. ನಾಳೆಯೇ ರೈತರಿಗೆ ಗೊತ್ತಾಗಲಿದೆ.  ಪಿಎಂ ಕಿಸಾನ್ ಯೋಜನೆಯ ಹಣ ನಾಳೆ ದೇಶದ ಎಲ್ಲಾ ರೈತರ ಖಾತೆಗೆ ಬಿಡುಗಡೆಯಾಗಲಿದೆ.  ಫಲಾನುಭಿಗಳ ಖಾತೆಗೆ ಹಣ ಜಮೆಯಾಗಲಿದೆ.

Leave a Comment